BBK 11; ಈಗಿನ ಬಿಗ್ ಬಾಸ್ ಸ್ಪರ್ಧಿಗಳನ್ನ ನೋಡಿದ್ರೆ ಪಾಪ ಅನ್ನಿಸುತ್ತೆ; ಕಿಚ್ಚ ಹೀಗಂದಿದ್ಯಾಕೆ?

By ಎಸ್ ಸುಮಂತ್

ಬಿಗ್ ಬಾಸ್ ಸೀಸನ್ 11 ಕೊನೆ ಹಂತ ತಲುಪಿದೆ. ಈಗಾಗಲೇ ಕಿಚ್ಚ 10 ಸೀಸನ್ ಕಂಪ್ಲೀಟ್ ಮಾಡಿದ್ದಾರೆ. ಹತ್ತು ಸೀಸನ್‌ ಬಬ್ಬರೇ ನಡೆಸಿಕೊಂಡು ಬರುವುದು ಅಷ್ಟು ಸುಲಭದ ಮಾತಲ್ಲ. ಸೀಸನ್ 11 ಕೂಡ ಯಶಸ್ವಿಯಾಗಿ ಮುಗಿಸುತ್ತಾ ಇದ್ದಾರೆ. ಸುದೀಪ್ ಅವರ ನಿರೂಪಣೆಯ ಶೈಲಿ, ತಪ್ಪು ಮಾಡಿದಾಗ ಸ್ಪರ್ಧಿಗಳಿಗೆ ಬುದ್ದಿ ಹೇಳುವ ರೀತಿ ನೋಡಿದರೆ ಅದು ಸುದೀಪ್ ಅವರಿಗೆ ಸುದೀಪ್ ಅವರೇ ಸಾಟಿ.

ಈ ಹತ್ತು ಸೀಸನ್ನಲ್ಲಿ ಜನ ಸಾಮಾನ್ಯರಿಗೆ ಇದ್ದಂತೆ ಅವರಿಗೂ ಒಂದಷ್ಟು ವ್ಯತ್ಯಾಸಗಳು ಕಂಡಿವೆ. ಫೇವರಿಟ್ ಸೀಸನ್ ಅಂತಾನೂ ಇರುತ್ತೆ‌. ಆಂಕರ್ ಅನುಶ್ರೀ ಅವರು ಕೂಡ ಬಿಗ್ ಬಾಸ್ ಮನೆಗೆ ಹೋಗಿದ್ದರು. ಇವರೇ ಮೊದಲ ಸ್ಪರ್ಧಿಗಳಾಗಿದ್ದರು. ಇದೀಗ ಮೊದಲ ಸೀಸನ್ ಗೂ ಈಗಿನ ಹನ್ನೊಂದನೇ ಸೀಸನ್ ಗೂ ಇರುವ ವ್ಯತ್ಯಾಸದ ಬಗ್ಗೆ ಕಿಚ್ಚನ ಜೊತೆಗೆ ಮಾತಾಡಿದ್ದಾರೆ.

Host Sudeep shares his disappointment over Bigg Boss contestants in anushree interview

ಸೀಸನ್ ಮಧ್ಯೆ ವ್ಯತ್ಯಾಸ..?

ಕಿಚ್ಚ ಸುದೀಪ್ ಅಭಿನಯದ 'ಮ್ಯಾಕ್ಸ್' ಸಿನಿಮಾ ರಿಲೀಸ್ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ರಿಲೀಸ್‌ಗೂ ಪ್ರಚಾರದ ಭಾಗವಾಗಿ ಚಾನೆಲ್, ಒಂದಷ್ಟು ಯೂಟ್ಯೂಬ್‌ಗಳಿಗೆ ಸಂದರ್ಶನ ನೀಡಿದ್ದಾರೆ. ಈ ಸಂದರ್ಶನದ ಸಮಯದಲ್ಲಿ ಆಲ್ಮೋಸ್ಟ್ ಬಿಗ್ ಬಾಸ್ ಬಗ್ಗೆ ಪ್ರಶ್ನೆಗಳು ಬಂದಿವೆ. ಇದೀಗ ಅನುಶ್ರೀ ಅವರು ಕೂಡ ಇಂಟರ್‌ವ್ಯೂ ಸಂದರ್ಭದಲ್ಲಿ ಬಿಗ್ ಬಾಸ್ ಮೊದಲ ಸೀಸನ್‌ನಲ್ಲಿ ನಾನು ಕೂಡ ಇದ್ದೆ. ಅಂದಿನ ಸೀಸನ್‌ಗೂ ಈಗ ಸೀಸನ್ 11ಗೂ ಇರುವ ವ್ಯತ್ಯಾಸವೇನು ಸರ್ ಎಂದು ಕೇಳಿದ್ದಾರೆ.

ಅರುಣ್ ಸಾಗರ್ ಉದಾಹರಣೆ

ಕಿಚ್ಚ ಸುದೀಪ್ ಅದಕ್ಕೆ ಒಂದು ಪದದಲ್ಲಿಯೇ ಉತ್ತರ ಕೊಟ್ಟಿದ್ದಾರೆ. 'ಆನೆಸ್ಟ್' (ಪ್ರಾಮಾಣಿಕತೆ) ಎಂದಿದ್ದಾರೆ. ನಿಮ್ಮ ಸೀಸನ್‌ನಲ್ಲಿ ಆನೆಸ್ಟಿಯಾಗಿಯೇ ಎಲ್ಲರೂ ಇದ್ರಿ. ಯಾಕಂದ್ರೆ ನಿಮಗೆ ಬಿಗ್ ಬಾಸ್ ಅಂದ್ರೆ ಏನು ಅಂತಾನೇ ಗೊತ್ತಿರಲಿಲ್ಲ. ಬಂದ್ರಿ ಆಡಿದ್ರಿ ಅಷ್ಟೆ. ನಿಮ್ಮನ್ನ ನೋಡಿ ಸೆಕೆಂಡ್ ಸೀಸನ್ ಬೇರೆ ರೀತಿಯೇ ಇತ್ತು. ಅರುಣ್ ಸಾಗರ್‌ನ ನೋಡಿ, ಅರುಣ್ ಬೈ ನೇಚರ್ ಬಂದಿರೋದು. ಅವನ ಕೆಲಸವೇ ತರಲೆ ಮಾಡೋದು ಎಂದು ಅರುಣ್ ಸಾಗರ್ ಬಗ್ಗೆ ಹೊಗಳಿದ್ದಾರೆ.

ಕಿಚ್ಚ ಹಿಂಗೇಳಿದ್ಯಾಕೆ..?

'ಈಗ ಬರುವವರು ವೇದಿಕೆ ಮೇಲೆ ನಿಂತು ಹೇಳ್ತಾರೆ ಅಷ್ಟೇ ನಾನು ನಾನಾಗಿರ್ತೀನಿ ಅಂತ. ಆದರೆ ಒಳಗೆ ಹೋದ ಮೇಲೆ ಯಾರೋ ಒಬ್ಬ ಜಗಳ ಮಾಡಿ, ಗಲಾಟೆ ಮಾಡಿ ಗೆದ್ದಿರುವ ಸ್ಪರ್ಧಿಯನ್ನ ಕಾಪಿ ಮಾಡ್ತಾರೆ. ಇನ್ನ್ಯಾರೋ ಇದೇ ರೀತಿ ಇದ್ರೆನೆ ನಾವೂ ಗೆಲ್ಲೋಕೆ ಆಗೋದು ಅಂದುಕೊಂಡು ಬಿಡುತ್ತಾರೆ. ಒಳಗಡೆ ಹೋಗಿ ಒಂದು ಬೇರು ಉಳಿಸಿಯೇ ಬದುಕುವುದಕ್ಕೆ ಆಗೋದು. ಒಂದೇ ಥರದ ವ್ಯಕ್ತಿತ್ವ ಬಿಗ್ ಬಾಸ್‌ನಲ್ಲಿ ಗೆದ್ದಿಲ್ಲ. ಅದನ್ನ ಜನರಲೈಸ್ ಮಾಡೋಕೆ ಆಗಲ್ಲ. ಆದರೆ ಇವರು ಕೂತ್ಕೊಂಡು ಅದನ್ನ ಮಾಡ್ತಾ ಇದಾರೆ. ಈಗಿನ ಸ್ಪರ್ಧಿಗಳನ್ನ ನೋಡಿದರೆ ಪಾಪ ಅನ್ಸುತ್ತೆ'

ಕಿಚ್ಚನ ಕಡೆಯ ಸೀಸನ್

ಇನ್ನು ಕಿಚ್ಚ ಸುದೀಪ್ ಅವರು ಈ ಸೀಸನ್ ಲಾಸ್ಟ್ ಮತ್ತೆ ಬಿಗ್ ಬಾಸ್ ನಿರೂಪಣೆ ಮಾಡಲ್ಲ ಎಂದು ಹೇಳಿದ್ದಾರೆ. ಈ ಸೀಸನ್‌ನಿಂದಾನೇ ದೂರ ಉಳಿದಿದ್ದರು. ಆದರೆ ತಂಡದ ಮನವಿ ಮೇರೆಗೆ ಬಿಗ್ ಬಾಸ್ ನಡೆಸಿಕೊಡಲು ಒಪ್ಪಿದ್ದಾರೆ. ಆದರೆ ವೀಕ್ಷಕರಿಗೆ ಇರುವ ಪ್ರಶ್ನೆ ಕಿಚ್ಚ ಆದ್ಮೇಲೆ ಯಾರು ನಿರೂಪಣೆಗೆ ಬರ್ತಾರೆ ಎಂಬುದು. ಈಗಾಗಲೇ ಹಲವು ಹೆಸರುಗಳು ಓಡಾಡುತ್ತಿವೆ. ಮುಂದಿನ ದಿನಗಳಲ್ಲಿ ತಿಳಿಯಲಿದೆ.

More from Filmibeat

English summary
Sudeep interesting comments on bigg Boss kannada recent contestants;
Read more about: sumanth sudeep bigg boss
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X