ಮೋಹಕತಾರೆ ರಮ್ಯಾಗೆ ಕಂಠದಾನ ಮಾಡುತ್ತಿದ್ದ ಈ ನಟಿಯ ಬಗ್ಗೆ ನಿಮಗೆಷ್ಟು ಗೊತ್ತು? ಇವರ ಜರ್ನಿ ಎಷ್ಟು ಇಂಟ್ರೆಸ್ಟಿಂಗ್ ಗೊತ್ತೆ?
ನಟಿ ದೀಪಾ ಭಾಸ್ಕರ್ ಎನ್ನುವ ಬದಲು 'ಸುಬ್ಬಲಕ್ಷ್ಮಿ ಸಂಸಾರ'ದ ಸುಬ್ಬಲಕ್ಷ್ಮಿ ಎಂದರೆ ಕಿರುತೆರೆ ಪ್ರೇಕ್ಷಕರಿಗೆ ಬಹುಬೇಗ ಪರಿಚಯವಾಗಬಹುದು. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸುಬ್ಬಲಕ್ಷ್ಮಿ ಸಂಸಾರ' ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದವರೇ ನಟಿ ದೀಪಾ ಭಾಸ್ಕರ್. ಕೆಲವು ವರ್ಷಗಳ ಹಿಂದೆ ಪ್ರಸಾರವಾದ ಈ ಧಾರಾವಾಹಿ ಬಹಳ ಪಾಪ್ಯುಲಾರಿಟಿಯನ್ನು ಪಡೆದಿತ್ತು.
ಇಂತಹ ಬ್ಲಾಕ್‌ಬಸ್ಟರ್ ಧಾರಾವಾಹಿಯನ್ನು ನೀಡಿದ ನಂತರ ಬಹುದೊಡ್ಡ ಬ್ರೇಕ್ ತೆಗೆದುಕೊಂಡು ಮತ್ತೆ 'ಯುಗಾಂತರ' ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟಿದ್ದರು ನಟಿ ದೀಪ ಭಾಸ್ಕರ್. ಇದಾದ ಮೇಲೆ ಹೆಚ್ಚು ಕಮ್ಮಿ ಒಂದು ವರ್ಷವಾದರೂ ಬೇರೆ ಯಾವುದೇ ಧಾರಾವಾಹಿಗಳಲ್ಲಿ ಈಕೆ ಕಾಣಿಸಿಕೊಂಡಿಲ್ಲ.

ಅಂದ ಹಾಗೆ ನಟಿ ದೀಪಾ ಭಾಸ್ಕರ್ ಅವರ ನಟನಾ ಪಯಣ ಚಿಕ್ಕದೇನಲ್ಲ. ಬಹಳ ಚಿಕ್ಕ ವಯಸ್ಸಿನಿಂದಲೂ ಚಿತ್ರರಂಗದಲ್ಲಿ ಇರುವ ನಟಿ ದೀಪಾ ಭಾಸ್ಕರ್ 'ಯಾರೆ ನೀ ಅಭಿಮಾನಿ', 'ಶ್ರೀರಸ್ತು ಶುಭಮಸ್ತು', 'ದೀಪಾವಳಿ', 'ಮಹೇಂದ್ರವರ್ಮ' ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದರು. ಅಷ್ಟೇ ಅಲ್ಲದೆ ಅತ್ಯುತ್ತಮ ಬಾಲ ನಟಿ ಪ್ರಶಸ್ತಿಯನ್ನು ಪಡೆದಿದ್ದರು.
ನಂತರ 'ನಂಬರ್ 73 ಶಾಂತಿನಿವಾಸ', 'ಮೈ ಆಟೋಗ್ರಾಫ್' ಚಿತ್ರಗಳಲ್ಲಿಯೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಈ ನಟಿ. ಕಿರುತೆರೆಯಲ್ಲಿಯೂ ಹಲವಾರು ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿ ದೀಪಾ ಭಾಸ್ಕರ್ ತಮ್ಮ ಅತ್ಯುತ್ತಮ ಅಭಿನಯದ ಮೂಲಕ ಬಹುದೊಡ್ಡ ಪ್ರೇಕ್ಷಕ ವರ್ಗದ ಗಮನ ಸೆಳೆದಿದ್ದಾರೆ.
ಹಿರಿಯ ನಟ ಅನಂತನಾಗ್ ಅವರ ಮುಖ್ಯ ಭೂಮಿಕೆಯಲ್ಲಿ ಪ್ರಸಾರವಾಗುತ್ತಿದ್ದ 'ಪ್ರೀತಿ ಇಲ್ಲದ ಮೇಲೆ' ಧಾರಾವಾಹಿಯಲ್ಲಿ ನಿಮ್ಮಿ ಪಾತ್ರವನ್ನು ನಿಭಾಯಿಸಿ ಜನಮನ ಗೆದ್ದಿದ್ದರು ನಟಿ ದೀಪಾ ಭಾಸ್ಕರ್. ಇಂದಿಗೂ ನಿಮ್ಮಿಯಾಗಿಯೇ ಗುರುತಿಸಲ್ಪಡುವ ದೀಪಾ ಭಾಸ್ಕರ್ ನಂತರ 'ಸಾಕ್ಷಿ' ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ಒಂದರಲ್ಲಿ ಕಾಣಿಸಿಕೊಂಡಿದ್ದರು. ಅದಾದ ಮೇಲೆ ತುಸು ವರ್ಷ ನಟನೆಯಿಂದ ದೂರವೇ ಉಳಿದಿದ್ದರು.

ನಿರ್ದೇಶಕ, ಬರಹಗಾರ ಸೇತುರಾಮ್ ಅವರ ಎಲ್ಲಾ ಪ್ರಮುಖ ಧಾರಾವಾಹಿಗಳಲ್ಲೂ ಪಾತ್ರಗಳನ್ನು ಮಾಡಿರುವ ನಟಿ ದೀಪಾ ಭಾಸ್ಕರ್ ಇತ್ತೀಚೆಗೆ ಸೇತುರಾಮ್ ಅವರದ್ದೇ ನಿರ್ದೇಶನದ 'ಯುಗಾಂತರ' ಧಾರಾವಾಹಿಯಲ್ಲಿಯೂ ದೀಪ ಅಗರ್ವಾಲ್ ಎಂಬ ಖಡಕ್ ರೋಲ್ ಮೂಲಕ ಮತ್ತೊಮ್ಮೆ ಸೀರಿಯಲ್ ವೀಕ್ಷಕರ ಮನ ಸೆಳೆದಿದ್ದರು.
ಕಿರುತೆರೆ ನಟನೆ ಅಷ್ಟೇ ಅಲ್ಲದೆ ರಂಗಭೂಮಿ ಕಲಾವಿದಯೂ ಆಗಿರುವ ನಟಿ ದೀಪಾ ಭಾಸ್ಕರ್ ಅವರು ಹಲವಾರು ನಾಟಕಗಳಲ್ಲಿ ವಿಭಿನ್ನ ಪಾತ್ರಗಳ ಮಿಂಚಿದ್ದಾರೆ. ಇನ್ನು ಕಂಠದಾನ ಕಲಾವಿದೆಯೂ ಆಗಿರುವ ಇವರು ನಟಿ ರಮ್ಯಾ ಅವರ 'ಎಕ್ಸ್ಕ್ಯೂಸ್ ಮಿ', 'ರಂಗ ಎಸ್‌ಎಸ್‌ಎಲ್‌ಸಿ', 'ಕಂಠಿ' ಸೇರಿದಂತೆ ಹೆಚ್ಚಿನ ಎಲ್ಲಾ ಸಿನಿಮಾಗಳಿಗೂ ಕಂಠದಾನ ಮಾಡಿದ್ದಾರೆ. ಮೋಹಕತಾರೆ ರಮ್ಯಾ ಹೊರತಾಗಿ ಸ್ಯಾಂಡಲ್‌ವುಡ್‌ನ ಇನ್ನೂ ಹಲವಾರು ನಟರಿಗೆ ಕಂಠದಾನ ಮಾಡಿರುವ ಹೆಗ್ಗಳಿಕೆ ನಟಿ ದೀಪಾ ಭಾಸ್ಕರ್ ಅವರಿಗಿದೆ.
ಇದರ ಜೊತೆಗೆ ಕಥಕ್ ಡ್ಯಾನ್ಸ್ ಕಲಾವಿದೆ ಕೂಡ ಆಗಿರುವ ಇವರು, ಹಲವಾರು ಡಾನ್ಸ್ ಪರ್ಫಾರ್ಮೆನ್ಸ್ ಅನ್ನು ನೀಡಿರುವುದಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ರಾಜೇಂದ್ರ ಹಾಗೂ ನಿರುಪಮಾ ರಾಜೇಂದ್ರ ಅವರ ಬಳಿ ಹತ್ತಕ್ಕೂ ಹೆಚ್ಚು ವರ್ಷಗಳ ಕಾಲ ಕತಕ ನೃತ್ಯ ತರಬೇತಿ ಪಡೆದ್ದಿದ್ದಾರೆ.
'ಹೋಗ್ಲಿ ಬಿಡಿ ಸಾರ್', 'ಪಾಪ ಪಾಂಡು', 'ಸಿಲ್ಲಿ ಲಲ್ಲಿ', 'ತಕಧಿಮಿತ', 'ಪ್ರೀತಿ ಇಲ್ಲದ ಮೇಲೆ', 'ಕಲ್ಯಾಣ ರೇಖೆ', 'ದಿಬ್ಬಣ', 'ಪಾರಿಜಾತ', 'ನಮ್ಮಮ್ಮ ಶಾರದೆ', 'ಅನಾವರಣ', 'ಚಕ್ರವಾಕ', 'ಮದರಂಗಿ' ಹೀಗೆ ದೀಪಾ ಭಾಸ್ಕರ್ ಅವರ ನಟಿಸಿದ ಧಾರಾವಾಹಿಗಳು ಸಾಲು ಸಾಲಲ್ಲಿದೆ. ಅಷ್ಟಾಗಿ ಇತ್ತೀಚಿಗೆ ಮಾತ್ರ ಕಿರುತೆರೆಯಲ್ಲಿ ಕಾಣಿಸಿಕೊಳ್ಳದ ಈ ನಟಿಯ ಬಗ್ಗೆ ಅಭಿಮಾನಿಗಳು ಕುತೂಹಲ ಹಾಗೂ ಬೇಸರ ವ್ಯಕ್ತಪಡಿಸಿದ್ದಾರೆ. ಸದ್ಯಕ್ಕೆ ಈಕೆ ಯಾವುದಾದರೂ ಧಾರಾವಾಹಿ ಅಥವಾ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಾರೋ, ಅಥವಾ ನಟನೆಯಿಂದ ಬ್ರೇಕ್ ತೆಗೆದುಕೊಂಡಿದ್ದಾರೋ ಎಂಬ ಪ್ರಶ್ನೆ ಪ್ರೇಕ್ಷಕರಲ್ಲಿ ಮೂಡಿದೆ.


Click it and Unblock the Notifications










