ನಟನೆಯ ಮೂಲಕ ಮೋಡಿ ಮಾಡಿದ ಸುನೇತ್ರಾ ಪಂಡಿತ್ ಡಬ್ಬಿಂಗ್ ಕಲಾವಿದೆಯೂ ಹೌದು
ಕಾಮಿಡಿ ಧಾರಾವಾಹಿ ಎಂದ ಕೂಡಲೇ ಕಿರುತೆರೆ ಪ್ರೇಕ್ಷಕರಿಗೆ ತಕ್ಷಣ ನೆನಪಾಗುವುದು 'ಸಿಲ್ಲಿ ಲಲ್ಲಿ' ಧಾರಾವಾಹಿ. ಈ ಧಾರಾವಾಹಿಯಲ್ಲಿ ನಾನಾ ನಟರು ಬೇರೆ ಬೇರೆ ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿ ಜನಮನ ಗೆದ್ದಿದ್ದರು. ಅದರಲ್ಲಿ ನಾಯಕಿ ಲಲಿತಾಂಬಳ ಪರ್ಸನಲ್ ಅಸಿಸ್ಟೆಂಟ್ ವಿಶಾಲೂ ಆಗಿ ವೀಕ್ಷಕರ ಮನ ಸೆಳೆದ ನಟಿಯ ಹೆಸರು ಸುನೇತ್ರಾ ಪಂಡಿತ್.
ಅಂದ ಹಾಗೇ ವಿಶಾಲೂ ಪಾತ್ರಕ್ಕೆ ಫಿದಾ ಆಗದವರಿಲ್ಲ . ತನ್ನದೇ ಆದ ರೀತಿಯಲ್ಲಿ ಕಾಮಿಡಿ ಡೈಲಾಗ್ ಹೊಡೆಯುತ್ತಾ ಜನರ ಮನರಂಜಿಸಿದ್ದ ಪಾತ್ರವದು ಎಂದರೆ ಹೇಳಿದರೆ ತಪ್ಪಾಗಲಾರದು.

ವಿಶಾಲೂ ಪಾತ್ರದಲ್ಲಿ ನಟಿಸಿ ಬಹಳಷ್ಟು ಪಾಪ್ಯುಲಾರಿಟಿ ಪಡೆದ ನಟಿ ಸುನೇತ್ರಾ ಪಂಡಿತ್ ಹಲವಾರು ಧಾರಾವಾಹಿಗಳಲ್ಲಿ ವಿಭಿನ್ನ ರೂಪಗಳಲ್ಲಿ ನಟಿಸಿದ್ದಾರೆ. ಪ್ರಸ್ತುತ 'ಭಾಗ್ಯಲಕ್ಷ್ಮಿ' ಧಾರಾವಾಹಿಯಲ್ಲಿ ಸುಂದರಿ ಪಾತ್ರದಲ್ಲಿ ಈಕೆ ನಟಿಸುತ್ತಿದ್ದಾರೆ.
ಧಾರಾವಾಹಿಗಳಷ್ಟೇ ಅಲ್ಲದೆ ಒಂದಷ್ಟು ಸಿನಿಮಾಗಳಲ್ಲಿ ಈಕೆ ಅಭಿನಯಿಸಿದ್ದಾರೆ. 'ಉಲ್ಟಾ ಪಲ್ಟ', 'ನಿನಗೋಸ್ಕರ', 'ಯಾರೇ ನೀನು ಚೆಲುವೆ' ಮುಂತಾದ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಲೈಮ್ ಲೈಟ್ ಅಕಾಡೆಮಿ ಎಂಬ ನಾಟಕ ಅಕಾಡೆಮಿಯನ್ನು ತಮ್ಮ 'ಸಿಲ್ಲಿ ಲಲ್ಲಿ' ನಟರೊಂದಿಗೆ ಸೇರಿ ಸ್ಥಾಪಿಸಿದ್ದಾರೆ.
ಕಿರುತೆರೆ ಹಿರಿತರೆ ನಟನೆ ಅಷ್ಟೇ ಇಲ್ಲದೆ ಡಬ್ಬಿಂಗ್ ಆರ್ಟಿಸ್ಟ್ ಕೂಡ ಆಗಿರುವ ನಟಿ ಸುನೇತ್ರಾ ಪಂಡಿತ್ ಹಲವು ಪ್ರಮುಖ ನಟಿಯರಿಗೆ ಕಂಠ ದಾನ ಮಾಡಿದ್ದಾರೆ. ಕನ್ನಡದ ಪ್ರಮುಖ ನಟಿಯರಾದ ಪ್ರೇಮಾ, ಶ್ವೇತಾ, ರಮ್ಯಾ ಕೃಷ್ಣ ರಂಭಾ, ಚಾರುಲತಾ, ಅವರ ಸಿನಿಮಾಗಳಿಗೆ ಧ್ವನಿದಾನ ಮಾಡಿರುವ ಹೆಗ್ಗಳಿಕೆ ಇವರಿಗೆ ಇದೆ.
ಇವರ ಪತಿ ಕೂಡ ಕಲಾವಿದರಾಗಿದ್ದು ಹಲವು ಕನ್ನಡ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ನಟ ರಮೇಶ್ ಪಂಡಿತ್ ಹಲವಾರು ಕನ್ನಡ ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿದ್ದಾರೆ ಮೂಲತಃ ಇವರು ತಬಲ ಕಲಾವಿದರು. ರಂಗಭೂಮಿಯಲ್ಲಿ ಹಲವಾರು ವರ್ಷಗಳ ಕಾಲ ಸಕ್ರಿಯವಾಗಿದ್ದು ನಂತರ ಕಿರುತೆರೆ ನಟನೆಗೆ ಕಾಲಿಟ್ಟರು.
'ಜ್ಯೋತಿ', 'ವಾರಸದಾರ', 'ಅರುಂಧತಿ', 'ನಂದಿನಿ' ಮುಂತಾದ ಧಾರಾವಾಹಿಗಳಲ್ಲಿ ನಟಿಸಿರುವ ರಮೇಶ್ ಪಂಡಿತ್ ಪ್ರಸ್ತುತ , ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಧಾರಾವಾಹಿಗಳಷ್ಟೇ ಅಲ್ಲದೆ ಸಿನಿಮಾಗಳಾದ ಬಾನಾಡಿ, ಗಿರಿಗಿಟ್ಲೆ, ಕಿಲಾಡಿ ಪೊಲೀಸ್, ಸಿಲಿಕಾನ್ ಸಿಟಿ, ಜೂಗಾರಿ, ಲವ ಕುಶ, ಬದ್ಮಾಶ್, ಶರಣ ಶಕ್ತಿ, ಕಾಕ್ಟೇಲ್, ಪರಿಶುದ್ಧ, ಸಾರ್ವಜನಿಕರಲ್ಲಿ ವಿನಂತಿ, ಕವಲುದಾರಿ, ಸರ್ಕಾರ, ಗರುಡ, ರಾಮಧಾನ್ಯ, ಶಿವಗಾಮಿ, ಅಲೆಮಾರಿ, ಕಲಿವೀರ ಮೂಖಜೀವ,ಕಾಲೇಜು ಕುಮಾರ್, ಕಲಾಸಿಪಾಳ್ಯ, ಸುಂಟರಗಾಳಿ, ನಮ್ಮ ಪ್ರೀತಿಯ ರಾಮು, ನಾನಿ, ಡಿಟೇಕ್ಟಿವ್ ಶಿವಾಜಿ, ತಲೆದಂಡ, ಭಾವಪೂರ್ಣ ಮುಂತಾದ ಚಿತ್ರಗಳಲ್ಲಿ ನಾನಾ ಪಾತ್ರಗಳಲ್ಲಿ ನಟಿಸಿದ್ದಾರೆ.
ರಂಗಭೂಮಿಯಲ್ಲಿಯೂ ಹಲವು ನಾಟಕಗಳಲ್ಲಿ ನಟಿಸುತ್ತ ಸಕ್ರಿಯರಾಗಿರುವ ಇವರು ಹೆಚ್ಚಾಗಿ ಖಳನಾಯಕ ಪಾತ್ರಗಳಲ್ಲೇ ನಟಿಸಿದ್ದಾರೆ. ಕಿರುತೆರೆ ಬೆಳ್ಳಿತೆರೆ ಅಭಿನಯ ಹಾಗೂ ರಂಗ ಭೂಮಿಯನ್ನೇ ತಮ್ಮ ವೃತ್ತಿಯಾಗಿಸಿಕೊಂಡಿರುವ ಈ ದಂಪತಿ ಯೂಟ್ಯೂಬ್‌ನಲ್ಲಿಯೂ ಹಲವು ಶಾರ್ಟ್ ಫಿಲಂಗಳಲ್ಲಿ ನಟಿಸಿದ್ದಾರೆ.


Click it and Unblock the Notifications











