'ಯಜಮಾನ' ಧಾರಾವಾಹಿ ನಟಿ ವರ್ಷಿತಾ 10ನೇ ತರಗತಿಯಲ್ಲಿ ಪಡೆದಿದ್ದ ಅಂಕಗಳು ಎಷ್ಟು?
SSLC ಫಲಿತಾಂಶ ಹೊರಬಿದ್ದಿದೆ. ಈ ಬಾರಿ ಕೂಡ ವಿದ್ಯಾರ್ಥಿನಿಯರು ಮೇಲುಗೈ ಸಾಧಿಸಿದ್ದಾರೆ. ವರ್ಷ ಪೂರ್ತಿ ಕಷ್ಟಪಟ್ಟು ಓದಿದ ಮಕ್ಕಳು ತಮ್ಮ ಫಲಿತಾಂಶವನ್ನು ತಿಳಿದುಕೊಂಡಿದ್ದಾರೆ. ಇನ್ನು ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ 'ಯಜಮಾನ' ಧಾರಾವಾಹಿಯಲ್ಲಿ ಅನಿತಾ ಪಾತ್ರಕ್ಕೆ ಬಣ್ಣ ಹಚ್ಚಿರುವ ನಟಿ ವರ್ಷಿತಾ ರಾಮ್ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪಡೆದ ಅಂಕ ಎಷ್ಟು ಎಂದು ತಿಳಿದರೆ ನೀವೆಲ್ಲಾ ಶಾಕ್ ಆಗುವುದು ಗ್ಯಾರೆಂಟಿ.
ನಟಿ ವರ್ಷಿತಾ ರಾಮ್ ಅವರು sslc ಪರೀಕ್ಷೆಯಲ್ಲಿ ಬರೋಬ್ಬರಿ 94.4% ಅನ್ನು ಗಳಿಸಿ ಉತ್ತೀರ್ಣರಾಗಿದ್ದರು. ಧಾರಾವಾಹಿಯಲ್ಲಿ ನಟಿ ವರ್ಷಿತಾ ಅಂಗವಿಕಲೆಯಾಗಿ ನಟಿಸುವ ಮೂಲಕ ವೀಕ್ಷಕರ ಮನವನ್ನು ಗೆದ್ದಿದ್ದಾರೆ. ಅದರಂತೆಯೇ ಪರೀಕ್ಷೆಯಲ್ಲೂ ಉತ್ತಮ ಅಂಕಗಳನ್ನು ಗಳಿಸಿದ್ದಾರೆ.

SSLCಯಲ್ಲಿ ಡಿಸ್ಟಿಂಕ್ಷನ್
ಏನು..? ನಟಿ ವರ್ಷಿತಾ ಜಸ್ಟ್ SSLC ಪಾಸ್ ಆಗಿರುವ ಹುಡುಗಿ, ಇನ್ನೂ ಬಾಲನಟಿ ಅಂದುಕೊಳ್ತಿದ್ದೀರಾ.? ನೋ ಚಾನ್ಸ್.. ನಟಿ ವರ್ಷಿತಾ ರಾಮ್ ಅವರು 2015ರಲ್ಲಿ SSLC ಪರೀಕ್ಷೆಯನ್ನು ಬರೆದಿದ್ದರು. ಆಗ ನಟಿ ವರ್ಷಿತಾ ಅವರು 625 ಅಂಕಗಳಿಗೆ 590 ಅಂಕಗಳನ್ನು ಪಡೆದಿದ್ದರು, ಕನ್ನಡದಲ್ಲಿ 100ಕ್ಕೆ 97 ಅಂಕಗಳನ್ನು ಗಳಿಸಿದ್ದರು. ಬಳಿಕ ವಿದ್ಯಾ ಮಂದಿರ ಕಾಲೇಜಿನಲ್ಲಿ ಪಿಯುಸಿ ಮುಗಿಸಿ, ರಾಮಯ್ಯ ಕಾಲೇಜಿನಲ್ಲಿ ಎಂಜಿನಿಯರಿಂಗ್ ಮಾಡಿದ್ದಾರೆ.
'ಯಜಮಾನ' ಮೊದಲ ಪ್ರಾಜೆಕ್ಟ್
ನಟನೆ ಮೇಲೆ ಒಲವಿದ್ದ ಕಾರಣ ಬಣ್ಣದ ಲೋಕಕ್ಕೆ ಆಗಮಿಸಿದ್ದು, ವರ್ಷಿತಾ ರಾಮ್ ಅವರು ಮೂಲತಃ ಹಾಸನದ ಹುಡುಗಿ. ಓದಿ ಬೆಳೆದಿದ್ದೆಲ್ಲಾ ಬೆಂಗಳೂರಿನಲ್ಲೇ. ಮೂರು ವರ್ಷಗಳ ಹಿಂದೆ ಅಂದರೆ 2022ರಲ್ಲಿ ಟೆಲಿವಿಷನ್ ಪ್ರೀಮಿಯರ್ ಲೀಗ್ ನ ರಾಯಭಾರಿಯಾಗಿದ್ದರು. ಶಿವನ ಪಾದ ಎಂಬ ಚಿತ್ರದಲ್ಲಿ ನಟಿಸಿದ್ದರು. ಸದ್ಯ ಯಜಮಾನ ಧಾರಾವಾಹಿಯಲ್ಲಿ ವರ್ಷಿತಾ ಅವರು ವಿಶೇಷ ಚೇತನ ಅನಿತಾ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಟಿ ವರ್ಷಿತಾ ರಾಮ್ ಅವರ ನಟನೆಯನ್ನು ಮೆಚ್ಚಿಕೊಂಡಿರುವ ವೀಕ್ಷಕರು ನೀವೇ ಸೀರಿಯಲ್ ಹೀರೋಯಿನ್ ಆಗಬೇಕು ಎಂದು ಪದೇ ಪದೇ ಹೇಳಿದ್ದಾರೆ.
ಮಾಡೆಲಿಂಗ್ ಮಾಡಿರುವ ನಟಿ
ನಟಿ ವರ್ಷಿತಾ ರಾಮ್ ಅವರು ತಂದೆ-ತಾಯಿ ಹಾಗೂ ಸಹೋದರಿಯ ಜೊತೆಗೆ ವಾಸವಿದ್ದಾರೆ. ನಟನೆಗೆ ಬರುವ ಮುನ್ನ ಮಾಡೆಲಿಂಗ್ ಕೂಡ ಮಾಡಿರುವ ವರ್ಷಿತಾ ಅವರು ತಾವೇ ಡ್ಯಾನ್ಸ್ ಅನ್ನು ಕೂಡ ಕಲಿತಿದ್ದಾರೆ. ಇನ್ನು ನಟಿ ವರ್ಷಿತಾ ಅವರು ಬೋಲ್ಡ್ ಲುಕ್ ನಲ್ಲಿ ಎಷ್ಟು ಹಾಟ್ ಆಗಿ ಕಾಣಿಸುತ್ತಾರೋ ಟ್ರೆಡಿಷನಲ್ ವೇರ್‌ನಲ್ಲಿ ಅಷ್ಟೇ ಕ್ಯೂಟ್ ಆಗಿ ಕಾಣುತ್ತಾರೆ. 'ಯಜಮಾನ' ಧಾರಾವಾಹಿ ವರ್ಷಿತಾ ಅವರ ಮೊದಲ ಪ್ರಾಜೆಕ್ಟ್. ಹಾಗಿದ್ದರೂ ಕೂಡ ಈಗಾಗಲೇ ಸಾಕಷ್ಟು ಬಾರಿ ನಟಿಸಿ ಅಭ್ಯಾಸವಿರುವಂತೆ ಅಭಿನಯಿಸುವ ವರ್ಷಿತಾ ಅವರು ಅನಿತಾ ಪಾತ್ರವನ್ನು ತುಂಬಾ ಚೆನ್ನಾಗಿ ನಿಭಾಯಿಸಿದ್ದಾರೆ.
ಸಿಂಗಾಪೂರದಲ್ಲಿ ನಟಿ ವರ್ಷಿತಾ
ನಟಿ ವರ್ಷಿತಾ ರಾಮ್ ತಮ್ಮ ಇನ್ ಸ್ಟಾ ಗ್ರಾಂ ಪೇಜ್ ಅನ್ನು ಹೆಚ್ಚು ಬಳಸುವುದಿಲ್ಲ. ತೀರಾ ಅವಶ್ಯಕತೆ ಎಂದ ಫೋಟೋಸ್ ಹಾಗೂ ವೀಡಿಯೋಗಳನ್ನು ಅಪ್ ಲೋಡ್ ಮಾಡುತ್ತಾರೆ. ಹೆಚ್ಚು ರೀಲ್ಸ್ ಮಾಡದ ವರ್ಷಿತಾ ಅವರು ಆಗಾಗ ಕೊಲಾಬ್ರೆಷನ್ ಕೂಡ ಮಾಡುತ್ತಾರೆ. ಇನ್ನು ನಟಿ ವರ್ಷಿತಾ ರಾಮ್ ಅವರು ಈಗಾಗಲೇ ಸಿಂಗಾಪೂರ್‌ಗೆ ಪ್ರವಾಸ ಮಾಡಿದ್ದಾರೆ. ಇದರ ಫೋಟೋಸ್‌ಗಳನ್ನು ಕೂಡ ಹಂಚಿಕೊಂಡಿದ್ದು, ಶಿಮ್ಲಾ-ಮನಾಲಿಗೂ ಪ್ರವಾಸ ಮಾಡಿದ್ದಾರೆ.


Click it and Unblock the Notifications











