'ಬಿಗ್ ಬಾಸ್'ನಲ್ಲಿ ನೀವೂ ಸ್ಪರ್ಧಿಸಬೇಕಾ.? ಹಾಗಿದ್ರೆ, ಕೂಡಲೆ ಈ ಕೆಲಸ ಮಾಡಿ..
Recommended Video

'ಬಿಗ್ ಬಾಸ್' ಅಂದ್ರೆ ಸೆಲೆಬ್ರಿಟಿಗಳಿಗೆ ಮಾತ್ರ ಎನ್ನುವ ಕಾಲವೊಂದಿತ್ತು. ಆದ್ರೀಗ ಹಾಗಿಲ್ಲ. ಜನ ಸಾಮಾನ್ಯರಿಗೂ ಸೆಲೆಬ್ರಿಟಿ ಆಗುವ ಅವಕಾಶವನ್ನು 'ಬಿಗ್ ಬಾಸ್' ಕಲ್ಪಿಸುತ್ತಿದೆ.
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಕಾಮನ್ ಮ್ಯಾನ್ ಕೂಡ 'ಬಿಗ್ ಬಾಸ್' ಮನೆಯೊಳಗೆ ಲಾಕ್ ಆಗಿ ಸೆಲೆಬ್ರಿಟಿಗಳ ಜೊತೆ ಸೆಣಸಾಡಿದ್ದರು. 106 ದಿನಗಳ ಕಾಲ ನಡೆದ 'ಬಿಗ್ ಬಾಸ್ ಕನ್ನಡ-5' ರಿಯಾಲಿಟಿ ಶೋನಲ್ಲಿ ಆರು ಮಂದಿ ಜನ ಸಾಮಾನ್ಯರು ಸ್ಪರ್ಧಿಸಿದ್ದರು. ಈ ಆರು ಮಂದಿ ಪೈಕಿ ಇಬ್ಬರು ಫೈನಲ್ ಫೈವ್ ಹಂತ ತಲುಪಿದ್ದರು. ಸೇಲ್ ಮ್ಯಾನ್ ಆಗಿದ್ದ ದಿವಾಕರ್ 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ರನ್ನರ್ ಅಪ್ ಆಗಿದ್ದು ನಿಮಗೆಲ್ಲಾ ಗೊತ್ತು ತಾನೇ.?
ಇದೀಗ 'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮಕ್ಕೆ ತಯಾರಿ ಆರಂಭ ಆಗಿದೆ. 'ಬಿಗ್ ಬಾಸ್ ಕನ್ನಡ-6'ನಲ್ಲಿ ಸ್ಪರ್ಧಿಸುವ ಇಚ್ಛೆ ನಿಮಗೂ ಇದ್ಯಾ.? ಕಾಮನ್ ಮ್ಯಾನ್ ಆಗಿ 'ಬಿಗ್ ಬಾಸ್' ಮನೆಯೊಳಗೆ ಹೋಗಿ, ರಾತ್ರೋ ರಾತ್ರಿ ಸೆಲೆಬ್ರಿಟಿ ಆಗಿ 'ಬಿಗ್ ಬಾಸ್' ವಿಜೇತರಾಗುವ ಕನಸು ಕಾಣ್ತಿದ್ದೀರಾ.?
ಹಾಗೊಂದು ವೇಳೆ 'ಬಿಗ್ ಬಾಸ್'ನಲ್ಲಿ ಸ್ಪರ್ಧಿಸುವ ಬಯಕೆ ನಿಮಗೆ ಇದ್ದರೆ, ಕೂಡಲೆ ಈ ಕೆಲಸ ಮಾಡಿ...

ಕೂಡಲೆ ಅರ್ಜಿ ಹಾಕಿ
'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮಕ್ಕಾಗಿ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ಶುರುವಾಗಿದೆ. ನೀವು 'ಬಿಗ್ ಬಾಸ್' ಮನೆಯೊಳಗೆ ಕಾಲಿಡಬೇಕು ಅಂದ್ರೆ ಈಗಲೇ 'ವೂಟ್'ನಲ್ಲಿ ಅರ್ಜಿ ಭರ್ತಿ ಮಾಡಿ..

ಸಂಪೂರ್ಣ ಮಾಹಿತಿ ಅತ್ಯಗತ್ಯ
ವೂಟ್ ವೆಬ್ ತಾಣ/ಆಪ್ ನಲ್ಲಿ ನಿಮಗೆ 'ಬಿಗ್ ಬಾಸ್ ಕನ್ನಡ-6' ಅರ್ಜಿ ಲಭಿಸುತ್ತದೆ. ಅದರಲ್ಲಿ ನಿಮ್ಮ ಹೆಸರು, ವಿಳಾಸ, ಭಾವ ಚಿತ್ರ, ವಯಸ್ಸು ಸೇರಿದಂತೆ ಫೇಸ್ ಬುಕ್, ಟ್ವಿಟ್ಟರ್ ಹಾಗೂ ಇನ್ಸ್ಟಾಗ್ರಾಮ್ ಹ್ಯಾಂಡಲ್ ಕೂಡ ಒದಗಿಸಬೇಕು. ಸಾಲದಕ್ಕೆ ನಿಮ್ಮ ಪರಿಚಯ ಸಾರುವ ವಿಡಿಯೋವನ್ನೂ ಅಪ್ ಲೋಡ್ ಮಾಡಬೇಕು.

ನಿಮ್ಮ ಅರ್ಜಿ ಗಮನ ಸೆಳೆಯಬೇಕು
ಕಳೆದ ಬಾರಿ ಕೂಡ ಜನಸಾಮಾನ್ಯರನ್ನ ಇದೇ ರೀತಿ ಅರ್ಜಿಗಳ ಮೂಲಕ ಆಯ್ಕೆ ಮಾಡಲಾಗಿತ್ತು. ಸರಿಯಾದ ಮಾಹಿತಿಯೊಂದಿಗೆ ನಿಮ್ಮ ಇಂಟ್ರೆಸ್ಟಿಂಗ್ ವಿಡಿಯೋವನ್ನ ಲಗತ್ತಿಸಿದರೆ ನೀವು ಕಲರ್ಸ್ ಕನ್ನಡ ವಾಹಿನಿಯವರ ಗಮನ ಸೆಳೆಯಬಹುದು.

ಹೊಸ ಮನೆ ರೆಡಿಯಾಗುತ್ತಿದೆ
ಅಂದ್ಹಾಗೆ, 'ಬಿಗ್ ಬಾಸ್ ಕನ್ನಡ-6'ಗಾಗಿ ಬಿಡದಿ ಬಳಿಯ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಹೊಸ ಮನೆ ತಲೆಯೆತ್ತುತ್ತಿದೆ. ಈ ಬಾರಿಯೂ ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಕಾರ್ಯಕ್ರಮ ಮೂಡಿಬರಲಿದೆ. ಸೆಪ್ಟೆಂಬರ್-ಅಕ್ಟೋಬರ್ ಹೊತ್ತಿಗೆ 'ಬಿಗ್ ಬಾಸ್ ಕನ್ನಡ-6' ಶುರುವಾಗುವ ಸಾಧ್ಯತೆ ಇದೆ.


Click it and Unblock the Notifications











