twitter
    For Quick Alerts
    ALLOW NOTIFICATIONS  
    For Daily Alerts

    ನೀವು 'ಕೋಟ್ಯಾಧಿಪತಿ'ಯ ಹಾಟ್ ಸೀಟ್ ಮೇಲೆ ಕೂರಬೇಕು ಅಂದ್ರೆ ಹೀಗೆ ಮಾಡ್ಬೇಕು

    By Naveen
    |

    Recommended Video

    ಕನ್ನಡದ ಕೋಟ್ಯಾಧಿಪತಿಯ ಹಾಟ್ ಸೀಟ್ ಮೇಲೆ ನೀವ್ ಕೂರಬೇಕಾ ? | Filmibeat Kannada

    ಆರು ವರ್ಷದ ನಂತರ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮತ್ತೆ 'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮ ಪ್ರಾರಂಭ ಆಗುತ್ತಿದೆ. ಕನ್ನಡದ ಜನರಿಗೆ ಮತ್ತೆ ಕೋಟಿ ಗೆಲ್ಲುವ ಬಂಪರ್ ಅವಕಾಶ ಕಾದು ನಿಂತಿದೆ.

    ದಿನ ಟಿವಿಯಲ್ಲಿ ಈ ಕಾರ್ಯಕ್ರಮ ನೋಡುವವರಿಗೆ ನಾವು ಕೂಡ ಹಾಟ್ ಸೀಟ್ ಮೇಲೆ ಕೂತು ಹಣ ಗೆಲ್ಲಬೇಕು ಅಂತ ಆಸೆ ಇಟ್ಟುಕೊಂಡಿರುತ್ತಾರೆ. ಆದರೆ ಅದು ಹೇಗೆ? ಎನ್ನುವುದು ಅನೇಕರಿಗೆ ತಿಳಿದಿರುವುದಿಲ್ಲ. ಕೋಟ್ಯಾಧಿಪತಿಯ ಹಾಟ್ ಸೀಟ್ ಮೇಲೆ ಕೂರುವುದು ಅಷ್ಟು ಸುಲಭವಲ್ಲ. ಅದಕ್ಕೆ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಹಾಗಂತ ಅದು ಅಷ್ಟೊಂದು ಕಷ್ಟ ಕೂ ಅಲ್ಲ.

    ರಮೇಶ್ ಸಾರಥ್ಯದ 'ಕನ್ನಡದ ಕೋಟ್ಯಾಧಿಪತಿ 3'ಗೆ ಮೊದಲ ಸ್ಪರ್ಧಿ ಪುನೀತ್ ? ರಮೇಶ್ ಸಾರಥ್ಯದ 'ಕನ್ನಡದ ಕೋಟ್ಯಾಧಿಪತಿ 3'ಗೆ ಮೊದಲ ಸ್ಪರ್ಧಿ ಪುನೀತ್ ?

    ಅಂದಹಾಗೆ, 'ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ನೀವು ಕೂಡ ಭಾಗವಹಿಸಬೇಕು ಅಂದರೆ ಏನ್ ಏನ್ ಮಾಡಬೇಕು ಎಂಬುದು ಮುಂದಿದೆ ಓದಿ...

    ವಿದ್ಯಾಭ್ಯಾಸ ಇರಲೇಬೇಕಿಲ್ಲ

    ವಿದ್ಯಾಭ್ಯಾಸ ಇರಲೇಬೇಕಿಲ್ಲ

    'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮಕ್ಕೆ ಯಾರು ಬೇಕಾದರೂ ಹೋಗಬಹುದು. ಇಲ್ಲಿ ಭಾಗವಹಿಸುವುದಕ್ಕೆ ಇಷ್ಟೆ ಓದಿರಬೇಕು, ಹೆಚ್ಚು ವಿದ್ಯಾಭ್ಯಾಸ ಹೊಂದಿರಬೇಕು ಎಂಬ ನಿಯಮ ಇಲ್ಲ . ಶಾಲೆಯ ಮೆಟ್ಟಿಲು ಏರಿದವರು ಕೂಡ ಕಾರ್ಯಕ್ರಮದಲ್ಲಿ ಕೇಳುವ ಪ್ರಶ್ನೆಗೆ ಸರಿ ಉತ್ತರ ನೀಡಿದರೆ ಒಂದೇ ದಿನದಲ್ಲಿ ಕೋಟ್ಯಾಧಿಪತಿ ಆಗಬಹುದು.

    18 ವರ್ಷ ಆಗಿರಬೇಕು

    18 ವರ್ಷ ಆಗಿರಬೇಕು

    'ಕನ್ನಡದ ಕೋಟ್ಯಾಧಿಪತಿ' ಶೋ ಗೆ ಕಾಲಿಡುವವರಿಗೆ 18 ವರ್ಷ ತುಂಬಿರಬೇಕು. ಇದರ ಜೊತೆಗೆ ಅವರ ಹೆಸರಿನಲ್ಲಿ ಯಾವುದೇ ಕಾನೂನುಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಆರೋಪ ಇರಬಾರದು. ಈ ಎರಡು ಅಂಶಗಳು ಸ್ಪರ್ಧಿಗಳಿಗೆ ಇರಬೇಕಾದ ಪ್ರಮುಖ ಅರ್ಹತೆಗಳು.

    'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮವನ್ನು ರಮೇಶ್ ಮೊದಲೇ ಮಾಡಬೇಕಿತ್ತು 'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮವನ್ನು ರಮೇಶ್ ಮೊದಲೇ ಮಾಡಬೇಕಿತ್ತು

    ಮೊದಲು ಹತ್ತು ಪ್ರಶ್ನೆಗೆ ಉತ್ತರಿಸಿ

    ಮೊದಲು ಹತ್ತು ಪ್ರಶ್ನೆಗೆ ಉತ್ತರಿಸಿ

    ಕಾರ್ಯಕ್ರಮದ ಆಯ್ಕೆ ಪ್ರಕ್ರಿಯೆ ಮೇ 7 ರಿಂದ ಶುರು ಆಗಲಿದೆ. ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಕೇಳಲಾಗುವ ಪ್ರಶ್ನೆಗಳಿಗೆ ನೋಡುಗರು ಎಸ್ ಎಂ ಎಸ್ ಅಥವಾ ಕರೆ ಮಾಡಿ ಉತ್ತರಿಸಬಹುದಾಗಿದೆ. ಹತ್ತು ದಿನಗಳ ಕಾಲ ಕೇಳಲಾಗುವ ಹತ್ತು ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದರೆ ನೀವು ಮೊದಲ ಹಂತವನ್ನು ಪೂರ್ಣ ಮಾಡಿದಂತೆ.

    ಆಡಿಷನ್ ಗೆ ಕರೆ ಬರುತ್ತದೆ

    ಆಡಿಷನ್ ಗೆ ಕರೆ ಬರುತ್ತದೆ

    ಹತ್ತು ದಿನವೂ ಸರಿಯಾಗಿ ಉತ್ತರ ನೀಡಿದ ಸ್ಪರ್ಧಿಗಳಲ್ಲಿ ಕೆಲವು ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗುತ್ತದೆ. ನಂತರ ಅವರಿಗೆ ಆಡಿಷನ್ ಕರೆಯಲಾಗುತ್ತದೆ. ಅಲ್ಲಿ ಮೂರರಿಂದ ನಾಲ್ಕು ಸುತ್ತು ಇರುತ್ತದೆ. ಇದರಲ್ಲಿ ಪರೀಕ್ಷೆ ಬರೆಯುವುದು ಮತ್ತು ಪರ್ಸನಲ್ ಇಂಟರ್ ವ್ಯೂ ಸಹ ಇರುತ್ತದೆ. ಈ ಬಾರಿ ಎರಡು ಆಡಿಷನ್ ಗಳು ನಡೆಯಲಿದ್ದು, ಒಂದು ಬೆಂಗಳೂರಿನಲ್ಲಿ ಮತ್ತೊಂದು ಉತ್ತರ ಕರ್ನಾಟಕದಲ್ಲಿ ನಡೆಯುವ ಸಾಧ್ಯತೆ ಇದೆ.

    ಟಾಪ್ 10 ಸ್ಪರ್ಧಿಗಳು

    ಟಾಪ್ 10 ಸ್ಪರ್ಧಿಗಳು

    ಮೂರ್ನಾಲ್ಕು ಸುತ್ತುಗಳನ್ನು ಮುಗಿಸಿದ ಸ್ಪರ್ಧಿಗಳಲ್ಲಿ ನಿಜಕ್ಕೂ ಯಾರಿಗೆ ಹಾಟ್ ಸೀಟ್ ಮೇಲೆ ಕೂರುವ ಅರ್ಹತೆ ಇದೆ ಎನ್ನುವುದನ್ನು ನೋಡಲಾಗುತ್ತದೆ. ಅವರ ಜೊತೆಗೆ ಮಾತನಾಡಿ, ಅವರ ಹಿನ್ನಲೆ ಎಲ್ಲವನ್ನು ತಿಳಿದು ಅರ್ಹತೆ ಇದ್ದರೆ ಅಂತಹ ಸ್ಪರ್ಧಿಗಳು ಟಾಪ್ 10 ಸ್ಪರ್ಧಿಗಳಾಗಿ ಇರಲಿದ್ದಾರೆ. ಇನ್ನುಳಿದಂತೆ ಟಿವಿಯಲ್ಲಿ ತೋರಿಸುವ ಹಾಗೆಯೇ 10 ಸ್ಪರ್ಧಿಗಳಲ್ಲಿ ಯಾರು ಅತಿ ಬೇಗ ಉತ್ತರ ನೀಡುತ್ತಾರೆ ಅವರು ನೇರವಾಗಿ ಹಾಟ್ ಸೀಟ್ ಮೇಲೆ ಕೂತು ಆಟ ಶುರು ಮಾಡಬಹುದು.

    ವಾಹಿನಿಯ ಉದ್ದೇಶ

    ವಾಹಿನಿಯ ಉದ್ದೇಶ

    ''ಒಬ್ಬ ಸರಿಯಾದ ವ್ಯಕ್ತಿಗೆ ಅವಕಾಶ ಸಿಗಲೇಬೇಕು, ತಪ್ಪಾದ ವ್ಯಕ್ತಿ ಹಾಟ್ ಸೀಟ್ ಮೇಲೆ ಕೂರಲೇ ಬಾರದು '' ಎನ್ನುವುದು ಕಾರ್ಯಕ್ರಮದ ಆಯೋಜಕರ ಮುಖ್ಯ ಉದ್ದೇಶವಾಗಿದೆಯಂತೆ. ಇದೇ ಕಾರಣಕ್ಕೆ ಲಕ್ಷಾಂತರ ಜನರಲ್ಲಿ ಅರ್ಹತೆ ಇರುವ ವ್ಯಕ್ತಿಯನ್ನು ಆಯ್ಕೆ ಮಾಡಲಾಗುತ್ತದೆಯಂತೆ.

    13 ವಾರ ಪ್ರಸಾರ

    13 ವಾರ ಪ್ರಸಾರ

    ಈ ಬಾರಿಯ 'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮ 13 ವಾರಗಳ ಕಾಲ ಪ್ರಸಾರ ಆಗಲಿದೆ. ವಾರದಲ್ಲಿ ಐದು ದಿನ ಅಂದರೆ ಸೋಮವಾರ ದಿಂದ ಶುಕ್ರವಾರದವರೆಗೆ ಶೋ ಬರುತ್ತದೆ. 65 ಎಪಿಸೋಡ್ ಗಳನ್ನು ಪ್ಲಾನ್ ಮಾಡಲಾಗಿದೆ. ಕಾರ್ಯಕ್ರಮ ಪ್ರಸಾರ ದಿನಾಂಕ ಮತ್ತು ಸಮಯದ ಸದ್ಯಕ್ಕೆ ನಿರ್ಧಾರ ಆಗಿಲ್ಲ.

    English summary
    How to participate in Star Suvarna Channel popular show 'Kannadada Kotyadhipathi' show. Kannada actor Ramesh Aravind will host 'Kannadada Kotyadhipathi 3'
    Monday, April 30, 2018, 16:16
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X