ವಿಶ್ವನಾಥ್ ಜಾಗಕ್ಕೆ ರಾತ್ರೋ ರಾತ್ರಿ ವರುಣ್ ಆಯ್ಕೆ ಆಗಿದ್ದೇಗೆ? ಹಳೇ ಹೀರೋ ನೆನೆದು ಕಣ್ಣೀರಿಟ್ಟಿದ್ದ ಅಮೂಲ್ಯ!

By ಎಸ್ ಸುಮಂತ್

ಕಲರ್ಸ್ ಕನ್ನಡದಲ್ಲಿ ಬರುತ್ತಿರುವ 'ಬೃಂದಾವನ' ಧಾರಾವಾಹಿ ತುಂಬು ಕುಟುಂಬದ ಧಾರಾವಾಹಿ. ಅದರಲ್ಲಿ ದೊಡ್ಡ ದೊಡ್ಡ ಕಲಾವಿದರೇ ಇದ್ದಾರೆ. ಆರಂಭದಲ್ಲಿ ಆಕಾಶ್ ಎಂಬ ಪಾತ್ರವನ್ನು ವಿಶ್ವನಾಥ್ ನಿಭಾಯಿಸುತ್ತಿದ್ದರು. ಆಗಿನ್ನು ಡಿಗ್ರಿ ಓದುತ್ತಿರುವ ಹುಡುಗ. ಸಣ್ಣಗೆ ಕಾಣಿಸುತ್ತಿದ್ದರು. ಮದುವೆ ಮಾಡಬೇಕು ಎಂದು ಬಂದಾಗ ಆ ಪಾತ್ರಕ್ಕೆ ಕೊಂಚ ದೊಡ್ಡವರು ಬೇಕಲ್ವಾ ಎಂಬೆಲ್ಲಾ ಕಮೆಂಟ್ಸ್‌ ಬರತೊಡಗಿದವು. ಹೀಗಾಗಿ ಕಲರ್ಸ್ ಕನ್ನಡ ನಾಯಕನನ್ನೇ ಬದಲಾವಣೆ ಮಾಡಿತ್ತು.

ಸೋಷಿಯಲ್ ಮೀಡಿಯಾದಲ್ಲಿ ಬ್ರೇಕಪ್ ವಿಚಾರಕ್ಕೆ ಸಾಕಷ್ಟು ನೆಗೆಟಿವ್ ಆಗಿ ಗುರುತಿಸಿಕೊಂಡಿದ್ದ ವರುಣ್ ಆರಾಧ್ಯ ಅವರನ್ನೇ ನಾಯಕ ನಟನಾಗಿ ತಂದರು. ಅದು ದಿಢೀರ್ ಬದಲಾವಣೆ. ಎಲ್ಲರೂ ಆಡಿಷನ್ ಆಗಿಲ್ಲ ಅಂತಾನೇ ಅಂದುಕೊಂಡಿದ್ದರು. ಸೋಷಿಯಲ್ ಮೀಡಿಯಾ ನೇಮ್ ಅಂಡ್ ಫೇಮ್ ನೋಡಿ ತೆಗೆದುಕೊಂಡಿದ್ದಾರೆ ಎಂದುಕೊಂಡರು. ಆದರೆ ರಾತ್ರೋರಾತ್ರಿ ಈ ಧಾರಾವಾಹಿಗೆ ಆಡಿಷನ್ ನಡೆದಿದೆ. ಆ ಬಗ್ಗೆ ರಾಮ್‌ಜೀ ಟಾಕೀಸ್ ಸಂದರ್ಶನದಲ್ಲಿ ವರುಣ್ ಆರಾಧ್ಯ ಮಾತನಾಡಿದ್ದಾರೆ.

How Varun aradhya replaced vishvanath in Brundavana serial

ವಿಶ್ವನಾಥ್ ಜಾಗಕ್ಕೆ ವರುಣ್ ಬಂದಿದ್ದೇಗೆ?

'ದಾಸ ಪುರಂದರ' ಶೂಟ್ ಕೂಡ ನಡೀತಾ ಇತ್ತು. ಆ ಶೂಟ್‌ನಲ್ಲೇ ಪುಷ್ಪಾ ಅವರನ್ನು ನೋಡಿದ್ದೆ. ಎಷ್ಟು ಚಿಕ್ಕ ಹುಡುಗಿ ಅಲ್ವಾ ಎಂದುಕೊಂಡಿದ್ದೆ. ನಾನು ಬೃಂದಾವನಕ್ಕೆ ಆಡಿಷನ್ ಕೊಟ್ಟು ಮನೆಗೆ ಹೋದೆ. ಅಂದು ಮಧ್ಯರಾತ್ರಿ 12.30 ಗಂಟೆಗೆ ಫೋನ್ ಬಂತು. ಒಂದು ಸೀರಿಯಲ್ ಇದೆ ಮಾಡ್ತೀಯಾ ಅಂತ ಕೇಳಿದ್ರು. ಹೌದು ಮಾಡ್ತೀನಿ ಎಂದೆ. ಈಗ ಬಾರಪ್ಪ ಒಂದು ಲುಕ್ ಟೆಸ್ಟ್ ಇದೆ ಅಂದ್ರು. ಮಧ್ಯರಾತ್ರಿಯಲ್ಲಿ ಲುಕ್ ಟೆಸ್ಟ್‌ಗೆ ಬಾ ಅಂದ್ರೆ ನಿವಾದ್ರೂ ಹೋಗ್ತೀರಾ. ಇಲ್ಲ ಅಲ್ವಾ. ಆಗ ನಂಗು ಮೀಟರ್ ಆಫ್ ಆಗಿತ್ತು. ಯೋಚನೆ‌ ಮಾಡಿದೆ. ಮನೆಯಲ್ಲಿ ಕೇಳಿ ಫ್ರೆಂಡ್ ಜೊತೆ ಬಂದು, ಮಧ್ಯರಾತ್ರಿಯೇ ಆಡಿಷನ್ ಕೊಟ್ಟೆ. ಮಧ್ಯರಾತ್ರಿ ಆಯ್ಕೆಯಾದೆ" ಎಂದು ವರುಣ್ ಹೇಳಿದ್ದಾರೆ.

2 ಗಂಟೆಯಲ್ಲೇ ಆಯ್ಕೆ

ರಾತ್ರಿ 2 ಗಂಟೆಗೆ ನನ್ನನ್ನು ಆ ಪಾತ್ರಕ್ಕೆ ಆಯ್ಕೆ ಮಾಡಿದರು. ನಾಳೆ ಬೆಳಗ್ಗೆಯಿಂದ ಬಂದು ಬಿಡಪ್ಪ ಅಂದ್ರು. ಬೆಳಗ್ಗೆ ಆರು ಗಂಟೆಗೆ ಹೋದೆ ಕಟಿಂಗ್ ಎಲ್ಲಾ ಮಾಡಿಸಿಕೊಂಡೆ. ಬೆಳಗ್ಗೆ ಎಂಟು ಗಂಟೆಗೆ ಸೀನ್ ಚಿತ್ರೀಕರಣಕ್ಕೆ ಬಂದೆ, ಮಾಡಿದೆ. ಅದು ಮದುವೆ ಸೀನ್ ಅಲ್ವಾ 200ಕ್ಕಿಂತ ಹೆಚ್ಚು ಜನ ಇದ್ದರು' ಎಂದಿದ್ದಾರೆ.

ವರುಣ್ ನೋಡಿ ಕಣ್ಣೀರಿಟ್ಟಿದ್ದ ಅಮೂಲ್ಯ

'ವರುಣ್ ಫಸ್ಟ್ ಡೇ ಸೆಟ್‌ಗೆ ಬಂದಾಗ ನಾನು ಅಳುತ್ತಾ ಇದ್ದೆ. ಆ ಜಾಗದಲ್ಲಿ ಹೊಸಬರು ಬಂದ್ರು ಅಂತ ಬೇಜಾರು ಆಗಿತ್ತು. ಒಂದು ಆರ್ಟಿಸ್ಟ್ ಜೊತೆಗೆ ಬಾಂಡಿಂಗ್ ಇರುತ್ತೆ. ಅವರಿರುವುದಿಲ್ಲ, ಆ ಜಾಗಕ್ಕೆ ಇನ್ಯಾರೋ ಬರ್ತಾರೆ ಅಂದಾಗ ಅಳು ಬರುತ್ತೆ. ಅದನ್ನು ರಿಸೀವ್ ಮಾಡಿಕೊಳ್ಳುವುದಕ್ಕೆ ಕಷ್ಟ ಆಗುತ್ತೆ. ಕೆಮಿಸ್ಟ್ರಿ ಹೇಗೆ ವರ್ಕೌಟ್ ಆಗುತ್ತೆ ಅಂತ. ಫಸ್ಟ್ ಟೈಮ್ ನಂದು ಇವರದ್ದು ಡ್ಯಾನ್ಸ್ ಇತ್ತು. ಆಗಿನ್ನು ರ್ಯಾಪೋ ಬಂದಿರಲಿಲ್ಲ. ಆಗ ಇವರು ನಾಚಿಕೆ ಪಟ್ಟು ಕೊಳ್ಳುತ್ತಾ ಇದ್ದರು' ಎಂದಿದ್ದಾರೆ.

ವರುಣ್ ಮಾತಿಗೆ ಅಮೂಲ್ಯ ಶಾಕ್

'ಆ ರೊಮ್ಯಾಂಟಿಕ್ ಡ್ಯಾನ್ಸ್‌ಗೆ ಇವರದ್ದೇ ಕೊರಿಯೋಗ್ರಫಿ. ಅದೊಂಥರ ಸ್ಟೆಪ್ ಇತ್ತು. ಹಿಂಗೆ ಹಿಂಗೆ ಕೈ ಹಿಡಿದು ಡ್ಯಾನ್ಸ್ ಮಾಡಬೇಕಿತ್ತು. ನಂಗೆ ಮೈ ನಡುಕ ಬಂದಿತ್ತು. ಆಗ ಇವರೇ ಕೈ ಹಿಡಿದು ಡ್ಯಾನ್ಸ್ ಮಾಡಿಸಿದ್ರು. ಆಗ ನಮ್ಮಿಬ್ಬರ ರ್ಯಾಪೋ ಬಿಲ್ಡ್ ಆಯ್ತು. ಕಣ್ಣಲ್ಲಿ ಕಣ್ಣಿಟ್ಟು ಕೂಡ ನೋಡುವುದಕ್ಕೆ ನಂಗೆ ಭಯ ಆಗ್ತಾ ಇತ್ತು. ಯಾಕಂದ್ರೆ ಆ ರೀತಿ ನಾನು ಯಾವತ್ತು ಮಾಡಿಲ್ಲ' ಎಂದಿದ್ದಾರೆ. ಆ ಮಾತು ಕೇಳಿ ಅಮೂಲ್ಯ ಶಾಕ್ ಆಗಿದ್ದಾರೆ. ಯಾಕಂದರೆ ವರುಣ್ ಆರಾಧ್ಯ ಡ್ಯಾನ್ಸ್ ಮೂಲಕವೇ ಸೋಷಿಯಲ್ ಮೀಡಿಯಾದಲ್ಲಿ ಕ್ರೇಜ್ ಹುಟ್ಟಿಸಿದ್ದವರು.

How Varun aradhya replaced vishvanath in Brundavana serial

ಗಾಸಿಪ್ ಬಗ್ಗೆ ಏನಂದ್ರು ವರುಣ್?

'ಇಲ್ಲಿ ನಮ್ಮ ಕೆಲಸ ಏನು ಆಕ್ಟ್ ಮಾಡುವುದು. ಅವರು ನೋಡ್ತಾರೆ ಬೆಳೆಸ್ತಾರೆ. ಮೂರು ನಾಲ್ಕು ವರ್ಷದಿಂದ ಬೆಳೆಸಿಕೊಂಡು ಬರ್ತಾ ಇದ್ದಾರೆ. ಅವರಿಗೆ ನಮ್ಮ ಪರ್ಸನಲ್ ಲೈಫ್ ಬೇಡ. ಸ್ವಲ್ಪ ಜನ ಇದಾರೆ ಅವ್ರು ನಮ್ಮ ನೆಗೆಟಿವ್‌ಗಿಂತ ಪಾಸಿಟಿವ್ ಆಗಿನೇ ಹೆಚ್ಚು ಮಾತನಾಡ್ತಾರೆ. ಇನ್ನು ಸ್ವಲ್ಪ ಜನ ನೆಗೆಟಿವ್ ಆಗಿನೇ ಮಾತಾಡ್ತಾರೆ. ನಾವೂ ಪರ್ಸನಲ್ ಲೈಫ್‌ನಲ್ಲಿ ಎಷ್ಟು ಸ್ಟ್ರಗಲ್ ಮಾಡಿದ್ದೀವಿ ಅನ್ನೋದು ಫ್ಯಾಮಿಲಿ ಅಂಡ್ ಫ್ರೆಂಡ್ಸ್‌ಗೆ ಮಾತ್ರ ಗೊತ್ತು. ದುಡ್ಡು ಕೊಟ್ಟು ಸೆಲೆಕ್ಟ್ ಆಗಿದ್ದೀನಿ ಅಂತಾರೆ. ಇಲ್ಲ ಅದರಲ್ಲೂ ಸ್ಟ್ರಗಲ್ ಪಟ್ಟಿದ್ದೀನಿ. ನಾನೊಬ್ಬ ಆಟೋ ಡ್ರೈವರ್ ಮಗ ಅಷ್ಟೆ' ಎಂದು ಸ್ಪಷ್ಟನೆ ನೀಡಿದ್ದಾರೆ.

More from Filmibeat

English summary
Kannada Brundavana serial; Here is the details about Varun told about being selected for the serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X