twitter
    For Quick Alerts
    ALLOW NOTIFICATIONS  
    For Daily Alerts

    ಬಾಹುಬಲಿ ಪ್ರತಿಮೆ 40 ಕಿಮೀ ಸಾಗಿಸಿದ ಹಾದಿಯಲ್ಲಿ ಎದುರಿಸಿದ ಸವಾಲುಗಳೇನು?

    |

    Recommended Video

    Mahamastakabhisheka 2019 : 4ನೇ ಮಹಾಮಸ್ತಕಾಭಿಷೇಕಕ್ಕೆ ಸಾಕ್ಷಿಯಾಗುತ್ತಿದೆ ಧರ್ಮಸ್ಥಳ | Oneindia Kannada

    ಧರ್ಮಸ್ಥಳಕ್ಕೆ ಭೇಟಿ ನೀಡಿದಾಗ ಅಲ್ಲೇ ಬೆಟ್ಟದಲ್ಲಿ ಪ್ರತಿಷ್ಠಾಪನೆಯಾಗಿರುವ ಬಾಹುಬಲಿ ಮೂರ್ತಿ ಗಮನ ಸೆಳೆಯುತ್ತೆ. ಈ ಭವ್ಯ ಮೂರ್ತಿಯನ್ನ ನೋಡುತ್ತಾ ಅಬ್ಬಾ ಇಷ್ಟು ದೊಡ್ಡ ವಿಗ್ರಹ ಯಾರು ಕೆತ್ತನೆ ಮಾಡಿದ್ದು, ಯಾವಾಗ ಪ್ರತಿಷ್ಠಾಪನೆ ಮಾಡಿದ್ರು, ಎಲ್ಲಿ ಕೆತ್ತನೆ ಮಾಡಿದ್ದರು, ಅಲ್ಲಿಂದ ಇಲ್ಲಿಗೆ ಹೇಗೆ ಸಾಗಿಸಿದರು ಎಂಬ ಪ್ರಶ್ನೆಗಳನ್ನ ಮನಸ್ಸಿನಲ್ಲೇ ಮೂಡುತ್ತೆ.

    ಈ ಪ್ರಶ್ನೆಗಳಿಗೆ ಅಲ್ಲಿರುವ ಗೈಡ್ ಗಳು ಒಂದಿಷ್ಟು ಉತ್ತರ ಕೊಟ್ಟಿರಬಹುದು. ಆದ್ರೆ, ಅದನ್ನ ಸಂಪೂರ್ಣವಾಗಿ ನಂಬಲು ಅರ್ಹವಾಗಿರಲ್ಲ. ಈ ಬಗ್ಗೆ ಸ್ವತಃ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರೇ ಹೇಳಿದಾಗ ಅದಕ್ಕೊಂದು ಅರ್ಥವಿರುತ್ತೆ.

    ವಿರೇಂದ್ರ ಹೆಗಡೆಯವರು ಹುಟ್ಟಿದ ದಿನವೇ ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ ವಿರೇಂದ್ರ ಹೆಗಡೆಯವರು ಹುಟ್ಟಿದ ದಿನವೇ ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ

    ಹೌದು, 120 ಟನ್ ತೂಕದ ಬೃಹತ್ ಬಾಹುಬಲಿ ಮೂರ್ತಿಯ ಪ್ರತಿಷ್ಠಾಪನೆ ಹಿಂದಿರುವ ರೋಚಕ ಕಥೆಯನ್ನ ಧರ್ಮಾಧಿಕಾರಿಗಳು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ. ಅಂದು ಆ ಬಾಹುಬಲಿ ಮೂರ್ತಿಯನ್ನ ಸಾಗಿಸಲು ಎಷ್ಟು ಸಾಹಸ ಮಾಡಬೇಕಾಯಿತು ಎಂದು ತಿಳಿಸಿದ್ದಾರೆ. ಆ ಸಮಾನ್ಯ ಕಥೆ ಇಲ್ಲಿದೆ ಓದಿ.....

    ವಿಜಯದಶಮಿ ದಿನದ ಮುಹೂರ್ತ

    ವಿಜಯದಶಮಿ ದಿನದ ಮುಹೂರ್ತ

    1955ರಲ್ಲಿ ವೀರೇಂದ್ರ ಹೆಗ್ಗಡೆ ಅವರ ತಂದೆ ಅವರಿಗೆ ಧರ್ಮಸ್ಥಳದ ಧರ್ಮಾಧಿಕಾರಿಯಾಗಿ ಪಟ್ಟಾಭಿಷೇಕ ಆಯ್ತು. ಆ ನಂತರ ಶ್ರವಣಬೆಳಗೊಳ, ಕಾರ್ಕಳದಲ್ಲಿ ಬಾಹುಬಲಿ ಮಸ್ತಾಭಿಷೇಕ ನೋಡಿದ್ರು. ಇದು ಅವರಿಗೆ ಪ್ರೇರಣೆ ಆಯ್ತು. ತದ ನಂತರ ಧರ್ಮಸ್ಥಳದಲ್ಲಿ ಇಂತಹ ಮೂರ್ತಿ ಪ್ರತಿ‍ಷ್ಠಾಪನೆ ಮಾಡಬೇಕೆಂದು ನಿರ್ಧರಿಸಿ ವಿಜಯದಶಮಿ ದಿನದ ಮುಹೂರ್ತ ಮಾಡಿದರು.

    ಕೆತ್ತನೆಗೆ ಬೇಕಾಯ್ತು 3 ವರ್ಷ

    ಕೆತ್ತನೆಗೆ ಬೇಕಾಯ್ತು 3 ವರ್ಷ

    39 ಅಡಿಯ ಮೂರ್ತಿ, 13 ಅಡಿ ಪೀಠ....ಒಟ್ಟು 52 ಅಡಿ ಎತ್ತರ ಹಾಗೂ 120 (1.88 ಲಕ್ಷ ಕೆಜಿ) ಟನ್ ತೂಕ ಹೊಂದಿರುವ ವಿಗ್ರಹ ಇದು. ಇಂತಹ ಬೃಹತ್ ಮೂರ್ತಿಯನ್ನ ಕೆತ್ತನೆ ಮಾಡಲು ಬರೋಬ್ಬರಿ ಮೂರು ವರ್ಷ ಬೇಕಾಯ್ತು. ನೂರಾರು ಶಿಲ್ಪಿಗಳು ಇದಕ್ಕಾಗಿ ಕೆಲಸ ಮಾಡಿದ್ದಾರೆ.

    ಸಾಗಿಸುವುದು ಬಹುದೊಡ್ಡ ಸವಾಲು ಆಯ್ತು

    ಸಾಗಿಸುವುದು ಬಹುದೊಡ್ಡ ಸವಾಲು ಆಯ್ತು

    ಕಾರ್ಕಳದಲ್ಲಿ ಬಾಹುಬಲಿ ವಿಗ್ರಹ ಕೆತ್ತನೆಯಾಗಿತ್ತು. ಅಂದುಕೊಂಡಂತೆ ಎಲ್ಲವೂ ಸುಗಮವಾಗಿ ಮುಗಿದಿತ್ತು. ತದನಂತರ ಅದನ್ನ ಸಾಗಿಸುವುದು ಹೇಗೆ ಎಂಬುದೇ ಬಹುದೊಡ್ಡ ಸವಾಲು ಆಯ್ತು. 40 ಕಿಮೀ ದೂರ ಈ ವಿಗ್ರಹವನ್ನ ಸಾಗಿಸಬೇಕಿತ್ತು.ಅದಕ್ಕಾಗಿ ಯೋಚನೆ ಮಾಡಿದ್ದ ಮೊದಲ ಮಾರ್ಗ ವಿಫಲವಾಗಿತ್ತು.

    ಬ್ರಿಟಿಷ್ ಅಧಿಕಾರಿ ಒಪ್ಪಲಿಲ್ಲ

    ಬ್ರಿಟಿಷ್ ಅಧಿಕಾರಿ ಒಪ್ಪಲಿಲ್ಲ

    ಬಾಹುಬಲಿ ಮೂರ್ತಿಯನ್ನ ಕಾರ್ಕಳದಿಂದ ಧರ್ಮಸ್ಥಳಕ್ಕೆ ಸಾಗಿಸುವುದಕ್ಕಾಗಿ ಮದ್ರಾಸಿನಲ್ಲಿ ಬ್ರಿಟಿಷ್ ಅಧಿಕಾರಿಯೊಬ್ಬರನ್ನ ವೀರೇಂದ್ರ ಹೆಗ್ಗಡೆ ಅವರು ಭೇಟಿ ಮಾಡಿದರು. ಆದ್ರೆ, ಆ ಅಧಿಕಾರಿ 12 ಲಕ್ಷ ಹಣ ಕೇಳಿದರು. ಮೂರ್ತಿಗೆ ಖರ್ಚು ಆಗಿದ್ದೇ 3 ಲಕ್ಷ, ನಿಮಗೆ 12 ಲಕ್ಷ ಹಣ ಕೊಡಲಿ ಎಂದು ಹೇಳಿ ವಾಪಸ್ ಬಂದರು. 'ನೀವು ಹೇಗೆ ಸಾಗಿಸ್ತಿಯಾ' ಅಂತ ಆ ಬ್ರಿಟಿಷ್ ಅಧಿಕಾರಿ ಬೇರೆ ಹೇಳಿದ್ದರು.

    64 ಚಕ್ರಗಳ ವಾಹನದಲ್ಲಿ ಸಾಗಿಸಿದರು

    64 ಚಕ್ರಗಳ ವಾಹನದಲ್ಲಿ ಸಾಗಿಸಿದರು

    ನಂತರ ಮುಂಬೈಗೆ ಹೋದ ವೀರೇಂದ್ರ ಹೆಗ್ಗಡೆ ಅವರು, ತಮ್ಮ ಸ್ನೇಹಿತರ ಸಹಾಯದಿಂದ 64 ಚಕ್ರಗಳ ವಾಹನವನ್ನ ಟ್ರಾಲಿ ಮಾಡಿ ಧರ್ಮಸ್ಥಳಕ್ಕೆ ಕರೆತಂದರು. ಇಷ್ಟು ದೊಡ್ಡ ವಾಹನದಲ್ಲಿ ಬಾಹುಬಲಿ ಮೂರ್ತಿಯನ್ನ ಸಾಗಿಸಿದ್ದೂ ನಿಜಕ್ಕೂ ಅದ್ಭುತ. ಅಂದಿನ ಆ ಸಣ್ಣ ಪುಟ್ಟ ದಾರಿಯಲ್ಲಿ ಇದನ್ನ ತರಲಾಯಿತು.

    ಆನೆಗಳಿಂದ ಎಳೆಯಲಾಯಿತು

    ಆನೆಗಳಿಂದ ಎಳೆಯಲಾಯಿತು

    ಮಾರ್ಗಮಧ್ಯೆ ವಾಹನಕ್ಕೆ ಬಲವಾಗಿ 21 ಆನೆಗಳನ್ನ ಬಳಸಲಾಯಿತು. ಅರಣ್ಯ ಇಲಾಖೆಯಿಂದ ಅನುಮತಿ ಪಡೆದು ಒಂದು ಕಡೆ ಹತ್ತು ಇನ್ನೊಂದು ಕಡೆ 11 ಆನೆಗಳನ್ನ ಕಟ್ಟಿ ಎಳೆಯಲಾಯಿತು. ಅದಕ್ಕೂ ಹೆಚ್ಚಿನ ಶಕ್ತಿಯಾಗಿ 4-5 ಸಾವಿರ ಜನ ಹಗ್ಗ ಕಟ್ಟಿ ಎಳೆದರು.

    ಸೇತುವೆಗಳನ್ನ ನಿರ್ಮಾಣ ಮಾಡಿದ್ರು

    ಸೇತುವೆಗಳನ್ನ ನಿರ್ಮಾಣ ಮಾಡಿದ್ರು

    ಮಾರ್ಗಮಧ್ಯೆ ನಾಲ್ಕೈದು ಕಾಲುವೆ, ನದಿಯನ್ನ ದಾಟಬೇಕಿತ್ತು. ಅದಕ್ಕಾಗಿ ಕೃತಕವಾಗಿ ಸೇತುವೆ ನಿರ್ಮಿಸಲಾಯಿತು. ಬ್ರಿಡ್ಜ್ ಮೇಲೆ ಸಾಗಿಸುವುದಾಗಿ ಸರ್ಕಾರಕ್ಕೆ ಕೇಳಿಕೊಂಡಾಗ, ಒಂದು ವೇಳೆ ಮೇಲ್ಸುತುವೆ ಬಿದ್ದರೇ ನೀವೆ ಕಟ್ಟಿಕೊಡಬೇಕು ಎಂದು ಸೂಚಿಸಿದರು. ನಂತರ ತಾವೇ ಖುದ್ದು 5 ಸೇತುವೆ ನಿರ್ಮಿಸಿ, ಅದರ ಮೇಲೆ ಸಾಗಿಸಲಾಯಿತು.

    ಧರ್ಮಸ್ಥಳದ ಪ್ರದಕ್ಷಿಣೆ

    ಧರ್ಮಸ್ಥಳದ ಪ್ರದಕ್ಷಿಣೆ

    ಅಷ್ಟು ದೂರದಿಂದ, ಅಷ್ಟು ತೂಕದ ಬಾಹುಬಲಿ ಮೂರ್ತಿಯನ್ನ ಅಂತಿಮವಾಗಿ ಧರ್ಮಸ್ಥಳಕ್ಕೆ ಸಾಗಿಸಲಾಯಿತು. ನಂತರ ಮಂಜುನಾಥ ಸ್ವಾಮಿ ದೇವಸ್ಥಾನವನ್ನ ಪ್ರದಕ್ಷಿಣೆ ಹಾಕಲಾಗಿದೆ. ಇದನ್ನ ಯಾರೂ ನಂಬಲು ಸಾಧ್ಯವಿಲ್ಲ. ಅಂದಿನ ಸಮಯದಲ್ಲೇ ಸುತ್ತ ಸಣ್ಣದ ದಾರಿ ಇತ್ತು. ಆದರೂ ಅದಕ್ಕಾಗಿ ಎಲ್ಲ ಸಿದ್ಧ ಮಾಡಿ ಪ್ರದಕ್ಷಿಣೆ ಹಾಕಿದ ನಂತರ ಬೆಟ್ಟಕ್ಕೆ ಕೊಂಡೊಯ್ದರು.

    1982ರಲ್ಲಿ ಪ್ರತಿಷ್ಠಾಪನೆ ಆಯ್ತು

    1982ರಲ್ಲಿ ಪ್ರತಿಷ್ಠಾಪನೆ ಆಯ್ತು

    ಬಾಹುಬಲಿ ಮೂರ್ತಿ ಧರ್ಮಸ್ಥಳಕ್ಕೆ ಬಂದ ನಂತರೂ ಮೂರು ವರ್ಷ ಮಲಗಿಸಿದ್ದೇವೆ. ನಂತರ ಮುಂಬೈನಿಂದ ಪರಿಣಿತರು ಬಂದ ಬಳಿಕ ಯಂತ್ರಗಳನ್ನ ಬಳಸಿ ನಿಲ್ಲಿಸಿದರು. 1982 ಪ್ರತಿಷ್ಠಾಪನೆ ಆಯ್ತು. ಬಾಹುಬಲಿ ವಿಗ್ರಹವನ್ನ ಸಾಗಿಸಲು ಸುಮಾರು 40 ದಿನ ಸಮಯ ಬೇಕಾಯಿತು'' ಎಂದು ವೀರೇಂದ್ರ ಹೆಗ್ಗಡೆ ಅವರು ತಿಳಿಸಿದರು.

    English summary
    Weekend with ramesh season 4: How was Bahubali Murti founded in Dharmasthala? here is the interesting story behind of this special moment.
    Saturday, April 27, 2019, 9:22
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X