For Quick Alerts
  ALLOW NOTIFICATIONS  
  For Daily Alerts

  ಟಿವಿಯಲ್ಲೂ ಭಾರೀ ಜಯಭೇರಿ ದಾಖಲಿಸಿದ ಅಗ್ನಿಪಥ್

  |

  ಬಾಲಿವುಡ್ ಹ್ಯಾಂಡಸಮ್ ಹೀರೋ ಹೃತಿಕ್ ರೋಶನ್ ಒಂದೊಂದೇ ಮೆಟ್ಟಿಲು ಮೇಲೇರುತ್ತಿದ್ದಾರೆ. ಇತ್ತೀಚಿಗೆ ಬಿಡುಗಡೆಯಾದ ಹೃತಿಕ್ ಚಿತ್ರ 'ಅಗ್ನಿಪಥ್' ಬಾಕ್ಸ್ ಆಫೀಸ್ ನಲ್ಲಿ ಯಶಸ್ವಿಯಾಗಿತ್ತು. ಅಷ್ಟೇ ಅಲ್ಲ, ಮೊದಲ ದಿನದ ಕಲೆಕ್ಷನ್ ರು. 23 ಕೋಟಿ ದಾಖಲಾಗಿ ಬಾಲಿವುಡ್ ನಲ್ಲಿ ಹೊಸ ದಾಖಲೆ ಮೆರೆದಿತ್ತು.

  ಇಷ್ಟಕ್ಕೇ ಈ ದಾಖಲೆ ನಿಂತಿಲ್ಲ. ಅಗ್ನಿಪಥ್ ಚಿತ್ರ ಈ ವರ್ಷದಲ್ಲಿ ರು. 100 ಕೋಟಿ ಗಳಿಕೆ ಮಾಡಿದ ಮೊದಲ ಚಿತ್ರವಾಗಿ ಹೊರಹೊಮ್ಮಿದೆ. ಜೊತೆಗೆ ಮೊನ್ನೆ ಟಿವಿಯಲ್ಲಿ ಪ್ರಸಾರ ಕಂಡ ಈ ಚಿತ್ರ, ಟಿವಿ ಚಿತ್ರಗಳ ಇತಿಹಾಸದಲ್ಲೇ ಹೆಚ್ಚು ಟಿವಿಆರ್ (5.5) ಗಳಿಸಿ ಎಲ್ಲರ ಹುಬ್ಬೇರಿಸಿದೆ. ಟಿವಿ ಜಗತ್ತಿನಲ್ಲಿ ಜಾಕ್ ಪಾಟ್ ಹೊಡೆದ ಚಿತ್ರವೆನಿಸಿದೆ.

  ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಮಾಹಿತಿ ನೀಡಿ ಖುಷಿ ಹಂಚಿಕೊಂಡಿದ್ದಾರೆ ನಟ ಹೃತಕ್ ರೋಶನ್. "ಟಿವಿಯಲ್ಲಿ ಚಿತ್ರ ಬಂದಾಗ ಅದೆಷ್ಟು ದೊಡ್ಡ ಸುದ್ದಿಯಾಯ್ತು ಎಂದರೆ ಯಾವ ಚಿತ್ರವೂ ಈ ಮೊದಲು ಅಷ್ಟು ಸುದ್ದಿ ಮಾಡಿರಲಿಲ್ಲ. ಬ್ರೇಕಿಂಗ್ ನ್ಯೂಸ್ ರೀತಿಯಲ್ಲಾದ ಈ ಘಟನೆಯಿಂದ ನಾನು ತುಂಬಾ ನರ್ವಸ್ ಆಗಿದ್ದೆ" ಎಂದು ಬರೆದಿದ್ದಾರೆ ಹೃತಿಕ್.

  ಅಮಿತಾಬ್ ಬಚ್ಚನ್ ಚಿತ್ರ 'ಅಗ್ನಿಪಥ್' ರೀಮೇಕ್ ನಲ್ಲಿ ಹೃತಿಕ್ ನಟಿಸಿದ್ದರು. ಬಾಲಿವುಡ್ 'ಬಿಗ್ ಬಿ' ನಟಿಸಿದ್ದ ಚಿತ್ರದಲ್ಲಿ ನಟಿಸುವಾಗ ಸಾಕಷ್ಟು ಮುಜುಗರ ಹಾಗೂ ಭಯವನ್ನು ಅನುಭವಿಸಿದ್ದಾಗಿಯೂ ಹೇಳಿಕೊಂಡಿದ್ದಾರೆ ಹೃತಿಕ್. ಆದರೆ ಬಿಡುಗಡೆಯಾದ ಮೊದಲ ದಿನವೇ ಚಿತ್ರದ ಬಗ್ಗೆ ಸಾಕಷ್ಟು ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿತ್ತು.

  ನಂತರವಂತೂ ಅಗ್ನಿಪಥ್ ಭಾರೀ ಜನಮನ್ನಣೆ ಗಳಿಸಿದೆ. ಹೃತಿಕ್ ರೋಶನ್ ಹಾಗೂ ಪ್ರಿಯಾಂಕಾ ಚೋಪ್ರಾ ಜೋಡಿ ಜನರಿಗೆ ಮೋಡಿ ಮಾಡುವಲ್ಲಿ ಸಖತ್ ಯಶಸ್ವಿಯಾಗಿದೆ. ಹೃತಿಕ್ ಹೋದಲೆಲ್ಲಾ ಜನರು ಅಗ್ನಿಪಥ್ ಬಗ್ಗೆಯೇ ಮಾತನಾಡುವಂತಾಗಿದೆ. ತಮ್ಮ ಮೊದಲ ಚಿತ್ರ 'ಕಹೋನಾ ಪ್ಯಾರ್ ಹೈ' ನಂತರ ಹೃತಿಕ್ ಮತ್ತೊಮ್ಮೆ ದೊಡ್ಡ ಯಶಸ್ಸು ದಾಖಲಿಸಿದ್ದಾರೆ. ಒಟ್ಟಿನಲ್ಲಿ ಎರಡೆರಡು ಬಾರಿ ಅಗ್ನಿಪಥ್ ಸದ್ದು ಮಾಡಿದೆ. (ಏಜೆನ್ಸೀಸ್)

  English summary
  Hrithik Roshan movie Agneepath, which set several new records at the Indian Box Office, has gained the highest TRP on world TV premiere. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X