Bhagyalakshmi: ಅರೇ ಸ್ಟ್ರಾಂಗ್ ಆಗಿ ಬಿಟ್ಲು ಭಾಗ್ಯ..?! ತನ್ವಿಗೆ ಪಾಠ ಕಲಿಸುವಲ್ಲಿ ಮೊದಲ ಮೆಟ್ಟಿಲಲ್ಲೇ ಗೆಲುವು..!
ಭಾಗ್ಯಲಕ್ಷ್ಮೀ ಧಾರವಾಹಿಯಲ್ಲಿ ಪ್ರೇಕ್ಷಕರು ಬಯಸಿದಂತೆಯೇ ಭಾಗ್ಯ ಸ್ಟ್ರಾಂಗ್ ಆಗುತ್ತಿದ್ದಾಳೆ .ಈ ಮೊದಲು ಭಾಗ್ಯಳನ್ನ ದಡ್ಡಿ ದಡ್ಡಿ ಎಂಬ ಸ್ವರೂಪದಲ್ಲಿ ನೋಡಿ ನೋಡಿ ಪ್ರೇಕ್ಷಕರಿಗೆ ಸಾಕಾಗಿ ಹೋಗಿತ್ತು. ಎಲ್ಲರೂ ಕಾಮೆಂಟ್‌ಗಳ ಮೂಲಕ ಭಾಗ್ಯ ಕ್ಯಾರೆಕ್ಟರ್ ಯಾವಾಗ ಸ್ಟ್ರಾಂಗ್ ಮಾಡುತ್ತೀರಿ ಎಂದು ಕೇಳುತ್ತಲೇ ಇದ್ದರು. ಇದಕ್ಕೆ ತಕ್ಕಂತೆ ಭಾಗ್ಯ ಈಗ ಸ್ಟ್ರಾಂಗ್ ಆಗಿದ್ದಾಳೆ. ಇನ್ಮುಂದೆ ಭಾಗ್ಯಳಲ್ಲಿ ಒಂದು ಹೊಸತನವನ್ನು ಕಾಣಬಹುದಾಗಿದೆ.
ತಾಂಡವ್ ಯಾರೋ ಎಸೆದ ಗುಲಾಬಿ ಹೂವಿನ ಬೊಕ್ಕೆಯನ್ನು ಭಾಗ್ಯಳಿಗೆ ತಂದುಕೊಟ್ಟು ಟೋಪಿ ಹಾಕಲು ನೋಡಿದ್ದಾನೆ. ಆದರೆ ಡಸ್ಟ್‌ಬಿನ್‌ಗೆ ಸೇರಬೇಕಾದ ಹೂವನ್ನು ತಾಂಡವ್ ತಂದು ಕೊಟ್ಟಾಗ ಇದನ್ನು ಎಲ್ಲಿಂದ ತಂದಿರಿ ಎಂದು ಭಾಗ್ಯ ಪ್ರಶ್ನೆ ಮಾಡಿದ್ದಾಳೆ. ಇದಕ್ಕೆ ತಾಂಡವ್ ಏನು ಉತ್ತರ ಕೊಡಬೇಕು ಎಂಬುದು ತಿಳಿಯದೆ ಸುಮ್ಮನೆ ನಿಂತಿದ್ದಾನೆ. ನಿನಗೆ ಸರ್ಪ್ರೈಸ್ ಕೊಡಲು ತಂದೆ ಎಂದು ಹೇಳಿದ್ದಾನೆ. ತಾಂಡವ್ ನಾಟಕ ನೋಡಿ ನೋಡಿ ಭಾಗ್ಯಗೆ ಬೇಸರವೇ ಆಗಿದೆ.

ಈ ಕಡೆ ತಾಂಡವ್ ಮೇಲೆ ಶ್ರೇಷ್ಠಾ ಅಪ್ಪ ಅಮ್ಮಗೆ ಒಳ್ಳೆಯ ಅಭಿಪ್ರಾಯವಿಲ್ಲ. ಕಾವ್ಯ ತಾಯಿಯ ಬಳಿಯಲ್ಲಿ ಈ ಬಗ್ಗೆ ಮಾತನಾಡಿರುವ ಅವರು, ತಾಂಡವ್ ನೋಡಿದರೆ ಯಾಕೋ ನಮಗೆ ಹುಡುಗ ಸೆಟ್ ಆಗಲ್ಲ ಎಂದೆನಿಸುತ್ತದೆ. ಅವನಲ್ಲಿ ಏನನ್ನು ನೋಡಿ ಇವಳು ಲವ್ ಮಾಡಿದಳು. ನಮ್ಮ ರಘುವೇ ಎಷ್ಟೋ ಚೆನ್ನಾಗಿ ಇದ್ದಾನೆ ಎಂದೆಲ್ಲ ಹೇಳುತ್ತಿದ್ದಾರೆ. ಮುಖವನ್ನು ಗಂಟು ಹಾಕಿಕೊಂಡು ನಮ್ಮ ಬಳಿ ಮಾತನಾಡುತ್ತಿದ್ದ. ಅವನ ಮೇಲೆ ನಮಗೆ ಅನುಮಾನ ಬರುತ್ತಿದೆ ಎಂದು ಹೇಳಿದ್ದಾರೆ. ಇದಕ್ಕೆ ಶ್ರೇಷ್ಠ ಕೋಪ ಮಾಡಿಕೊಂಡು ದೊಡ್ಡ ಕಂಪನಿಯಲ್ಲಿ ಕೆಲಸ ಮಾಡುವವರು ಇನ್ನೂ ಯಾವ ರೀತಿ ಇರುತ್ತಾರೆ ಎಂದು ಮರು ಪ್ರಶ್ನೆ ಹಾಕಿದ್ದಾಳೆ.
ಭಾಗ್ಯಗಳಿಂದ ತನ್ವಿಗೆ ಕ್ಲಾಸ್! ಕೊನೆಗೂ ಅಮ್ಮನ ಬಳಿ ತಲೆ ತಗ್ಗಿಸಿದ ಜಂಭದ ಕೋಳಿ!
ಭಾಗ್ಯ, ತನ್ವಿ ರೂಮಿಗೆ ಹೋಗಿದ್ದಾಳೆ... ತನ್ವಿ ಭಯದಿಂದ ನಿಂತಿದ್ದಾಳೆ.. ಬಾ ಬಂಗಾರಿ ಕುಳಿತುಕೋ ಎಂದು ಮಗಳನ್ನು ಕರೆದಿದ್ದಾಳೆ. ಆದರೆ ತನ್ವಿಗೆ ಒಂದು ರೀತಿ ಭಯ ಶುರುವಾಗಿದೆ. ಯಾಕೆಂದರೆ ಅಮ್ಮ ನನ್ನನ್ನ ಹೊಡೆದು ಬಿಟ್ಟರೆ ಎಂದು ಭಯ ಭೀತಳಾಗಿದ್ದಾಳೆ. ಭಾಗ್ಯ ಜೋರು ಧ್ವನಿಯಲ್ಲಿ ಕುಳಿತಿಕೋ ಎಂದಾಗ ಬಂದು ಮಂಚದ ಮೇಲೆ ಕುಳಿತುಕೊಂಡಿದ್ದಾಳೆ. ಮಂಚದ ಮೇಲೆ ಕುಳಿತುಕೊಂಡ ತನ್ವಿ ತಲೆ ತಗ್ಗಿಸಿ ಕುಳಿತಿದ್ದಾಳೆ. ಈ ವೇಳೆ ಭಾಗ್ಯ ನನ್ನ ಮಗಳು ಈ ರೀತಿ ಕುಳಿತುಕೊಳ್ಳುವುದಿಲ್ಲ. ತಲೆ ಎತ್ತಿ ಎದೆ ಹುಬ್ಬಿಸಿ ಕಾಲು ಮೇಲೆ ಕಾಲು ಹಾಕಿ ಕೊಂಡು ಕುಳಿತುಕೊಳ್ಳುತ್ತಿದ್ದಳು. ಇವತ್ತು ಏನಾಗಿದೆ ಎಂದು ಕೇಳಿದ್ದಾಳೆ.

ಅಮ್ಮ ದಯವಿಟ್ಟು ಅಜ್ಜಿಯ ಬಳಿ ಯಾವ ವಿಷಯವನ್ನ ಹೇಳಬೇಡ ಅಜ್ಜಿ ನನ್ನನ್ನ ಸಾಯಿಸಿ ಬಿಡುತ್ತಾರೆ ಎಂದು ತನ್ವಿ ಅಮ್ಮನ ಬಳಿಯಲ್ಲಿ ಮನವಿ ಮಾಡಿದ್ದಾಳೆ. ಇದಕ್ಕೆ ಭಾಗ್ಯ ಅಂತ ತಪ್ಪನ್ನ ನೀನು ಏನು ಮಾಡಿದೆ ಎಂದು ಕೇಳಿದ್ದಾಳೆ. ಇದಕ್ಕೆ ತಂದ್ವಿ ತಡವರಿಸುತ್ತಾ ಅಮ್ಮ ಇವತ್ತು ಮಾತ್ರ ನಾನು ರಜೆ ಹಾಕಿ ಸ್ನೇಹಿತರು ಹೇಳಿದರು ಎಂದು ಅವರ ಜೊತೆ ಹೋಗಿದ್ದೆ ಎಂದಿದ್ದಾಳೆ. ಮಗಳು ಹೇಳುತ್ತಿರುವುದೆಲ್ಲವನ್ನ ಕೇಳಿಸಿಕೊಳ್ಳುತ್ತಿರುವ ಭಾಗ್ಯಳಿಗೆ ಸಿಟ್ಟು ಬರುತ್ತಿದೆ ಆದರೂ ಸಹ ಮಗಳು ಹೇಳುವುದನ್ನ ಕೇಳಿಸಿಕೊಳ್ಳುತ್ತಿದ್ದಾಳೆ.
ಭಾಗ್ಯ ಕ್ಯಾರೆಕ್ಟರ್‌ಗೆ ಜೀವ ಕೊಡ್ರಿ ಎಂದು ಮನವಿ ಮಾಡಿದ್ದ ಪ್ರೇಕ್ಷಕರು!
ಭಾಗ್ಯ ಈಗ ತನ್ವಿ ಮೇಲೆ ಕೋಪ ಮಾಡಿಕೊಂಡು ತನ್ವಿಗೆ ಬುದ್ಧಿ ಕಲಿಸಬೇಕು ಎಂದು ತೀರ್ಮಾನ ಮಾಡಿ ಜೋರಾಗಿ ಗದರಿದ್ದಾಳೆ. ಇದೇ ವೇಳೆ ತನ್ವಿ ಅಮ್ಮನ ಅಬ್ಬರವನ್ನ ನೋಡಿ ಬೆಚ್ಚಿ ಬಿದ್ದಿದ್ದಾಳೆ. ಪ್ರೇಕ್ಷಕರು ಮಾತ್ರ ಭಾಗ್ಯ ಸ್ಟ್ರಾಂಗ್ ಆಗಿದ್ದನ್ನ ನೋಡಿ ಅರೇ ಭಾಗ್ಯ ಈಗ ಸ್ಟ್ರಾಂಗ್ ಆಗಿದ್ದಾರೆ. ಭಾಗ್ಯ ಕ್ಯಾರೆಕ್ಟರ್‌ಗೆ ಈಗ ಒಂದು ಜೀವ ಬಂದಿದೆ ಎಂದು ಹೇಳುತ್ತಿದ್ದಾರೆ. ಮಗಳು ಹಾಗೂ ಗಂಡನನ್ನು ಸರಿ ದಾರಿಗೆ ತರಲು ಹೊರಟಿರುವ ಭಾಗ್ಯಗಳಿಗೆ ಸಕ್ಸಸ್ ಸಿಗಲಿ ಎಂದು ಪ್ರೇಕ್ಷಕರು ಆಲ್ ದ ಬೆಸ್ಟ್ ಹೇಳಿದ್ದಾರೆ.


Click it and Unblock the Notifications











