9 ವರ್ಷಗಳ ದಾಂಪತ್ಯ ಅಂತ್ಯ ; ಡಿವೋರ್ಸ್ ಸಿಕ್ಕ ಸುದ್ದಿ ಕೇಳಿ ಸೆಟ್‌ನಲ್ಲೇ ಕಣ್ಣೀರು ಹಾಕಿದ ನಟಿ
ಬಣ್ಣದ ಪ್ರಪಂಚದಲ್ಲಿ ಬದುಕು ರೂಪಿಸಿಕೊಂಡವರ ಬಹುತೇಕರ ವೈಯಕ್ತಿಕ ಜೀವನದಲ್ಲಿ ಪ್ರೀತಿ-ಪ್ರೇಮ-ಪ್ರಣಯ-ಮದುವೆ ಮತ್ತು ವಿಚ್ಛೇದನ ಮಾಮೂಲು. ಇಲ್ಲಿ ಮದುವೆಯಾದ ಆರಂಭದಲ್ಲಿ ಬದುಕು ತುಂಬಾನೇ ಸಂತೋಷಮಯವಾಗಿರುತ್ತೆ. ಆದರೆ ದಾಂಪತ್ಯ ಜೀವನ ನಡೆಸುತ್ತಾ ಒಬ್ಬರನ್ನೊಬ್ಬರು ಹುಚ್ಚರಂತೆ ಪ್ರೀತಿಸುವ ಅನೇಕರು ಆ ನಂತರ ತಮ್ಮ ಸಂಬಂಧಕ್ಕೆ ಗುಡ್ ಬೈ ಹೇಳಿ ಹೊರ ಬರುತ್ತಾರೆ.
ಇಷ್ಟೇ ಅಲ್ಲ ಆದರ್ಶ ದಂಪತಿಗಳಂತೆ ಬದುಕುತ್ತೇವೆ ಎಂದು ಹೇಳಿ, ಮದುವೆಯಾದ ಕೆಲವೇ ದಿನ ಅಥವಾ ವರ್ಷಗಳಲ್ಲಿ ಅದ್ಯಾವುದೋ ಕ್ಷುಲ್ಲಕ ಕಾರಣಕ್ಕಾಗಿ ಸಂಬಂಧ ಕಡಿದುಕೊಂಡೂ ಬಿಡುತ್ತಾರೆ. ಒಂದೆರಡಲ್ಲ ಹಲವಾರು ವರ್ಷ ಜೊತೆಯಾಗಿ ಒಂದೇ ಮನೆಯಲ್ಲಿ ಕೂಡಿ ಬಾಳಿದರೂ ಕೂಡ ಆ ನಂತರ ಏಕಾಏಕಿ ಡಿವೋರ್ಸ್ ಘೋಷಿಸುತ್ತಾರೆ. ಅದರಲ್ಲಿಯೂ ಕಳೆದ ಎರಡು ಮೂರು ವರ್ಷಗಳಲ್ಲಿ ಚಿತ್ರರಂಗದಲ್ಲಿ ಮದುವೆ ಮತ್ತು ಪ್ರೀತಿಗೆ ಅರ್ಥವೇ ಇಲ್ಲದಂತಾಗಿದೆ. ಅನ್ಯೋನ್ಯತೆಯ ಕೊರತೆಯಿಂದ.. ಚಿಕ್ಕ ಚಿಕ್ಕ ಕಾರಣಗಳಿಂದ ಹಲವರು ಸಂಬಂಧ ಮುರಿದುಕೊಂಡು ಎದ್ದು ಬಂದಿದ್ದಾರೆ. ಈ ಸಾಲಿಗೆ ''ಹುನರ್ ಅಲಿ'' ಕೂಡ ಈಗ ಅಧಿಕೃತವಾಗಿ ಸೇರಿಕೊಂಡಿದ್ದಾರೆ.

ಹೌದು.. ಹುನರ್ ಅಲಿ.. ಹಿಂದಿಯ ಖ್ಯಾತ ಕಿರುತೆರೆ ನಾಯಕಿ. 2007ರಿಂದ ಕಿರುತೆರೆಯಲ್ಲಿ ಸಕ್ರಿಯರಾಗಿರುವ ಹುನರ್ ಅಲಿ ಜಗದ್ವಿಖ್ಯಾತ ''ಕಹಾನಿ ಘರ್ ಘರ್ ಕೀ'' ಧಾರಾವಾಹಿಯಲ್ಲಿ ಆಕ್ಟ್ ಮಾಡಿದ್ದರು. ''ಕೆಹ್ತಾ ಹೈ ದಿಲ್ ಜೀ ಲೇ ಜರಾ''.. ''ಟಿವಿ ಬಿವಿ ಔರ್ ಮೈ''.. ''ಪಟಿಯಾಲಾ ಬೇಬಿಸ್'' .. ''ದಿವಾನಿ''.. ಇವರು ಅಭಿನಯದ ಕೆಲ ಪ್ರಸಿದ್ಧ ಸೀರಿಯಲ್‌ಗಳು.
ಸದ್ಯ ''ವೀರ್ ಹನುಮಾನ್'' ಧಾರಾವಾಹಿಯಲ್ಲಿ ''ಕೈಕೇಯಿ'' ಪಾತ್ರ ನಿರ್ವಹಿಸುತ್ತಿರುವ ಹುನರ್ ಅಲಿ ಆಗಸ್ಟ್ 28-2016ರಂದು ''ಮಯಾಂಕ್ ಗಾಂಧಿ'' ಅವರನ್ನು ಮದುವೆಯಾಗಿದ್ದರು. ವಿಶೇಷ ಅಂದರೆ ಇವರಿಬ್ಬರದ್ದು ಲವ್ ಮ್ಯಾರೇಜ್ ಅಲ್ಲ ಬದಲಿಗೆ ಅರೆಂಜ್ ಮ್ಯಾರೇಜ್ ಆಗಿತ್ತು.
ಆದರೆ ಇವರ 09 ವರ್ಷದ ದಾಂಪತ್ಯ ಮುರಿದು ಬಿದ್ದಿದೆ. ನ್ಯಾಯಾಲಯದಲ್ಲಿ ವಿಚ್ಛೇದನ ಪಡೆಯುವಲ್ಲಿ ಈ ಮಾಜಿ ಜೋಡಿ ಯಶಸ್ವಿಯಾಗಿದೆ.
ಸದ್ಯ ಮುರಿದು ಬಿದ್ದ ತಮ್ಮ ಮದುವೆಯ ಮೇಲೆ ಹುನರ್ ಅಲಿ ತಂಡ ಅಧಿಕೃತವಾದ ಮುದ್ರೆ ಒತ್ತಿದ್ದು ಡಿವೋರ್ಸ್ ಸುದ್ದಿ ಹೊರ ಬಂದಾಗ ಹುನರ್ ಅಲಿ ಚಿತ್ರೀಕರಣದಲ್ಲಿದ್ದರು ಎಂದು ಹೇಳಿದೆ. ಡಿವೋರ್ಸ್ ಸಿಕ್ಕ ಸುದ್ದಿ ಕೇಳಿ ಭಾವೋದ್ವೇಗಕ್ಕೆ ಒಳಗಾದರು ಎಂದಿದ್ದಾರೆ.

ಈ ಕುರಿತು ''ಟೈಮ್ಸ್ ಆಫ್ ಇಂಡಿಯಾ''ಗೆ ಪ್ರತಿಕ್ರಿಯೆ ನೀಡಿರುವ ಹುನರ್ ಅಲಿ ತಂಡ ಹುನರ್ ಅಲಿ ಆ ದಿನ ಚಿತ್ರೀಕರಣದಲ್ಲಿದ್ದರು. ಅಂದೇ ವಕೀಲರಿಂದ ಡಿವೋರ್ಸ್ ಸಿಕ್ಕಿರುವ ಮಾಹಿತಿ ನಮಗೆ ಸಿಕ್ಕಿತು ಎಂದಿದ್ದಾರೆ.
ಹಾಗೇ ನೋಡಿದರೆ ವಕೀಲರಿಂದ ಕರೆ ಬಂದಾಗ., ಹುನರ್ ಅಲಿ ಚಿತ್ರೀಕರಣದಲ್ಲಿದ್ದರು, ಹೀಗಾಗಿ ಫೋನ್ ಕರೆ ಸ್ವೀಕರಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿರುವ ಹುನರ್ ಅಲಿ ತಂಡ ನಿರ್ದೇಶಕರು 'ಕಟ್' ಎಂದು ಹೇಳಿದ ತಕ್ಷಣ, ಅವರು ತಮ್ಮ ಫೋನ್ ಪರಿಶೀಲಿಸಿದಾಗ ಅವರ ವಕೀಲರ ತಂಡದಿಂದ ವಿಚ್ಛೇದನ ಮಂಜೂರಾಗಿದೆ ಎಂಬ ಸಂದೇಶ ಬಂದಿತ್ತು. ಅದನ್ನು ನೋಡಿ ಅವರು ತೀವ್ರ ಭಾವೋದ್ವೇಗಕ್ಕೆ ಒಳಗಾದರು. ಸಂದೇಶ ಓದುತ್ತಿದ್ದಂತೆ ಸೆಟ್‌ನಲ್ಲೇ ಕಣ್ಣೀರು ಹಾಕಿದರು ಎಂದು ಹೇಳಿದೆ. ಆ ದಿನ ಅವರ ಪಾಲಿಗೆ ಎಷ್ಟು ಮಹತ್ವದ್ದಾಗಿತ್ತು ಎಂಬುದನ್ನು ಅವರ ಸುತ್ತಮುತ್ತಲಿದ್ದವರೆಲ್ಲರೂ ಅರ್ಥಮಾಡಿಕೊಂಡರು ಎಂದು ಪ್ರತಿಕ್ರಿಯೆ ನೀಡಿದೆ.
ಇನ್ನು ಡಿವೋರ್ಸ್ ವಿಚಾರದ ಮೇಲೆ ಹುನರ್ ಅಲಿ ವಕೀಲರಾದ ರುಗ್ವೇದ್ ಮೋರೆ ಕೂಡ ಅಧಿಕೃತ ಮುದ್ರೆ ಒತ್ತಿದ್ದು, ವಿಚ್ಛೇದನದ ಪ್ರಕ್ರಿಯೆಗಳು ಈಗ ಅಧಿಕೃತವಾಗಿ ಮುಕ್ತಾಯಗೊಂಡಿವೆ. ನ್ಯಾಯಾಲಯವು ಹುನರ್ ಅಲಿ ಅವರ ಅರ್ಜಿಯನ್ನು ಪುರಸ್ಕರಿಸಿದ್ದು, ಕಾನೂನಾತ್ಮಕವಾಗಿ ಇದು ಮುಗಿದ ಅಧ್ಯಾಯ ಎಂದು ಹೇಳಿದ್ದಾರೆ.
ಮುಂದುವರಿದು ವೈವಾಹಿಕ ವಿವಾದಗಳಲ್ಲಿ ಸಾಮಾನ್ಯವಾಗಿ ಕಂಡುಬರುವಂತೆ, ಈ ಪ್ರಕರಣದಲ್ಲೂ ವಿಚ್ಛೇದನದ ಇತ್ಯರ್ಥಕ್ಕೆ (Settlement) ಸಂಬಂಧಿಸಿದ ಕೆಲವು ವಿಷಯಗಳಿದ್ದವು. ವಿಷಯವನ್ನು ಅಂತಿಮಗೊಳಿಸುವ ಮುನ್ನ ಅವುಗಳನ್ನು ಬಗೆಹರಿಸಬೇಕಾಗಿತ್ತು ಎಂದು ಹೇಳಿರುವ ವಕೀಲರಾದ ರುಗ್ವೇದ್ ಮೋರೆ, ದಂಪತಿಗಳು ಪರಸ್ಪರ ಒಪ್ಪಿಗೆಯೊಂದಿಗೆ ಸೌಹಾರ್ದಯುತವಾಗಿ ಜೂನ್ 9ರಂದು ವಿಷಯವನ್ನು ಬಗೆಹರಿಸಿಕೊಂಡಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.


Click it and Unblock the Notifications