ಸ್ಪರ್ಧಿಗಳಾಗಿ 'ಬಿಗ್ ಬಾಸ್' ಮನೆ ಸೇರಿದ ನಟ ಮತ್ತು ಆತನ ಪತ್ನಿ

ಬಿಗ್ ಬಾಸ್ ಶೋ ಅಂದ್ರೆನೇ ಹಾಗೆ. ಅಚ್ಚರಿಗಳು, ವಿವಾದಗಳು, ಸಂತೋಷ, ದುಃಖ ಎಲ್ಲವೂ ಇರುತ್ತೆ. ಕನ್ನಡ, ತೆಲುಗು, ತಮಿಳು, ಹಿಂದಿ ಬಿಗ್ ಬಾಸ್ ಇತಿಹಾಸದಲ್ಲಿ ಇದುವರೆಗೂ ಹಲವು ರೀತಿ ಸ್ಪರ್ಧಿಗಳು ಮನೆಯೊಳಗೆ ಹೋಗಿದ್ದಾರೆ.

ಒಬ್ಬರಿಗೊಬ್ಬರು ಪರಿಚಯವಿಲ್ಲದರು ಹೋಗಿದ್ದಾರೆ. ಆಪ್ತ ಸ್ನೇಹಿತರು ಎನಿಸಿಕೊಂಡವರು ಹೋಗಿದ್ದಾರೆ. ಶತ್ರುಗಳಂತೆ ಇದ್ದವರು ಹೋಗಿದ್ದಾರೆ. ಲವರ್ಸ್ ಹೋಗಿದ್ದಾರೆ. ಲವ್ ಮಾಡಿ ಬ್ರೇಕ್ ಅಪ್ ಆದವರು ಹೋಗಿದ್ದಾರೆ. ಮದುವೆ ಆಗಿ ಡಿವೋರ್ಸ್ ಆಗಿರುವವರು ಹೋಗಿದ್ದಾರೆ.

ಆದರೆ, ಮದುವೆ ಆಗಿ ಒಟ್ಟಿಗೆ ಜೀವನ ಮಾಡುತ್ತಿರುವ ಗಂಡ-ಹೆಂಡತಿ ಹೋಗಿರುವ ಬಗ್ಗೆ ಮಾಹಿತಿ ಇಲ್ಲ. (ಹಿಂದಿ ಅಥವಾ ಇಂಗ್ಲಿಷ್ ಬಿಗ್ ಬಾಸ್ ಹೋಗಿದ್ದರೆ ಹೋಗಿರುವ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ). ಆದರೆ, ಇದೇ ಮೊದಲ ಸಲ ಬಿಗ್ ಬಾಸ್ ಶೋ ಇತಿಹಾಸದಲ್ಲಿ ಗಂಡ-ಹೆಂಡತಿ ಬಿಗ್ ಮನೆಯೊಳಗೆ ಸ್ಪರ್ಧಿಗಳಾಗಿ ಪ್ರವೇಶ ಮಾಡಿದ್ದಾರೆ. ಅಷ್ಟಕ್ಕೂ, ಯಾರು ಆ ದಂಪತಿ? ಮುಂದೆ ಓದಿ....

ಬಿಗ್ ಮನೆಗೆ ಬಂದ ಟಾಲಿವುಡ್ ಕಪಲ್ಸ್

ಬಿಗ್ ಮನೆಗೆ ಬಂದ ಟಾಲಿವುಡ್ ಕಪಲ್ಸ್

ತೆಲುಗು ಚಿತ್ರರಂಗದ ತಾರಾ ಜೋಡಿ ಬಿಗ್ ಬಾಸ್ ತೆಲುಗು ಮೂರನೇ ಆವೃತ್ತಿಗೆ ಸ್ಪರ್ಧಿಗಳಾಗಿ ಬಂದಿದ್ದಾರೆ. ನಟ ವರುಣ್ ಸಂದೇಶ್ ಮತ್ತು ಪತ್ನಿ ವಿತೀಕಾ ಶೇರು ಇಬ್ಬರು ಒಟ್ಟಿಗೆ ಬಿಗ್ ಬಾಸ್ ಆಟ ಆಡಲು ಮನೆ ಪ್ರವೇಶ ಮಾಡಿದ್ದಾರೆ. ಇದು ಬಹಳ ಅಚ್ಚರಿ ಮತ್ತು ಕುತೂಹಲವಾಗಿದೆ.

ಕನ್ನಡದಲ್ಲಿ ವೃತ್ತಿ ಆರಂಭಿಸಿದ್ದ ವಿನೀತಾ

ಕನ್ನಡದಲ್ಲಿ ವೃತ್ತಿ ಆರಂಭಿಸಿದ್ದ ವಿನೀತಾ

ವರುಣ್ ಸಂದೇಶ್ ಅವರ ಪತ್ನಿ ವಿನೀತಾ ಶೇರು ಸಿನಿ ಜರ್ನಿ ಆರಂಭಿಸಿದ್ದ ಕನ್ನಡ ಚಿತ್ರರಂಗದಲ್ಲಿ. ರಮ್ಯಾ ಅಭಿನಯಿಸಿದ್ದ 'ಅಂತು ಇಂತು ಪ್ರೀತಿ ಬಂತು' ಸಿನಿಮಾದಲ್ಲಿ ಒಂದು ಪಾತ್ರ ಮಾಡಿದ್ದರು. ಅದಾದ ಬಳಿಕ ಗಣೇಶ್ ಅಭಿನಯದ 'ಉಲ್ಲಾಸ ಉತ್ಸಾಹ' ಚಿತ್ರದಲ್ಲೂ ನಟಿಸಿದರು. ಅಲ್ಲಿಂದ ತೆಲುಗಿಗೆ ಎಂಟ್ರಿಯಾದ ವಿನೀತಾ ನಾಯಕಿಯಾಗಿ ನಟಿಸಿದ್ದರು.

ಯಾರು ಈ ವರುಣ್ ಸಂದೇಶ್

ಯಾರು ಈ ವರುಣ್ ಸಂದೇಶ್

'ಹ್ಯಾಪಿ ಡೇಸ್' ಚಿತ್ರದ ಮೂಲಕ ತೆಲುಗು ಇಂಡಸ್ಟ್ರಿ ಪ್ರವೇಶ ಮಾಡಿದ್ದ ವರುಣ್ ಮೊದಲ ಸಿನಿಮಾದಲ್ಲೇ ಎಲ್ಲರ ಗಮನ ಸೆಳೆದರು. ನಂತರ ಕೊತ್ತಾ ಬಂಗಾರ ಲೋಕಂ, ಎವರೈನಾ ಎಪುಡೈನಾ, ಕುರ್ರಾಡು, ಮರೋ ಚರಿತ್ರಾ, ನುವ್ವಲಾ ನೇನಿಲಾ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ.

ಲವ್ ಮ್ಯಾರೇಜ್ ಜೋಡಿ

ಲವ್ ಮ್ಯಾರೇಜ್ ಜೋಡಿ

ವರುಣ್ ಮತ್ತು ವಿನೀತಾ ಚಿತ್ರವೊಂದರಲ್ಲಿ ನಾಯಕ ಮತ್ತು ನಾಯಕಿಯಾಗಿ ನಟಿಸುತ್ತಿದ್ದರು. ಈ ಸಿನಿಮಾ ಮುಗಿಯುವಷ್ಟರಲ್ಲಿ ಇಬ್ಬರು ಪ್ರೀತಿಯಲ್ಲಿದ್ದರು. ವಿನೀತಾ ಅವರೇ ಪ್ರಪೋಸ್ ಮಾಡಿ ಮದುವೆ ಆಗೋಣ ಎಂದರು. ಅದಕ್ಕೆ ಸಮ್ಮತಿಸಿದ ವರುಣ್ ಮನೆಯವರ ಒಪ್ಪಿಗೆ ಪಡೆದು ಮದುವೆ ಆದರು. ಈಗ ಒಟ್ಟಿಗೆ ಬಿಗ್ ಬಾಸ್ ಗೆ ಬಂದು ಅಚ್ಚರಿ ನೀಡಿದ್ದಾರೆ.

More from Filmibeat

English summary
Telugu actor varun sandesh entered in bigg boss telugu 3 with his wife vanitha sheru.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X