ಕರ್ನಾಟಕದ ಜನತೆಗೆ ಎಚ್ಚರಿಕೆ ಕೊಡಲು ಬಂದ ಡೈನಾಮಿಕ್ ಹೀರೋ
ಅದ್ಧೂರಿ ಧಾರಾವಾಹಿಗಳು, ಸ್ಪೆಷಲ್ ರಿಯಾಲಿಟಿ ಶೋ, ವೀಕೆಂಡ್ ನಲ್ಲೊಂದು ಸ್ಪೆಷಲ್ ಸಿನಿಮಾ ಅಂತ ಹಲವು ಕಾರ್ಯಕ್ರಮಗಳನ್ನು ನೀಡುವ, ನಿಮ್ಮೆಲ್ಲರ ಮೆಚ್ಚಿನ ಸ್ಟಾರ್ ಸುವರ್ಣ ವಾಹಿನಿ ಇತ್ತೀಚೆಗಷ್ಟೇ 'ಕನೆಕ್ಷನ್' ಎಂಬ ಹೊಸ ರಿಯಾಲಿಟಿ ಶೋ ಒಂದನ್ನು ಆರಂಭಿಸಿತ್ತು.
ಇದೀಗ ಇದರ ಬೆನ್ನಲ್ಲೇ 'ಹುಷಾರ್ ಕರ್ನಾಟಕ' ಎಂಬ ಇನ್ನೊಂದು ಹೊಸ ನಾನ್ ಫಿಕ್ಷನ್ ಶೋ ಒಂದನ್ನು ಕನ್ನಡದ ಜನತೆಗೆ ನೀಡಲಿದೆ. ಈ ಬಾರಿ ಡೈನಾಮಿಕ್ ಹೀರೋ ದೇವರಾಜ್ ಅವರು ಈ ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಧುಮುಕಿದ್ದಾರೆ.[ಪ್ರೀತಿ-ದ್ವೇಷಗಳ ಕೊಂಡಿ 'ಜಸ್ಟ್ ಮಾತ್ ಮಾತಲ್ಲಿ']
ದೇಶದ ತುಂಬೆಲ್ಲಾ ನಡೆಯುತ್ತಿರುವ ಅಪರಾಧಗಳ ಹಿನ್ನಲೆ ಇಟ್ಟುಕೊಂಡು ಜನ ಜಾಗೃತಿಯನ್ನು ಮೂಡಿಸಲು "ಹುಷಾರ್ ಕರ್ನಾಟಕ" ಎಂಬ ಹೊಸ ನಾನ್ ಫಿಕ್ಷನ್ ಶೋ ಸ್ಟಾರ್ ಸುವರ್ಣದಲ್ಲಿ ಆರಂಭವಾಗುತ್ತದೆ.[ಮನರಂಜನೆಯ 'ಕನೆಕ್ಷನ್' ಕೊಡಲು ಬಂದ್ರು ಅರುಣ್ ಸಾಗರ್.!]
ಪ್ರತಿಯೊಂದು ಸಂಚಿಕೆಯು ವಿಭಿನ್ನ ರೀತಿಯ ಕಥೆಗಳಿಂದ ಕೂಡಿದ್ದು, ವೀಕ್ಷಕರಿಗೆ ಮನ ಮುಟ್ಟುವ ರೀತಿಯಲ್ಲಿ ಭಾವನಾತ್ಮಕ ಮತ್ತು ಸಸ್ಪೆನ್ಸ್ ಕಥೆಗಳನ್ನು ಹೊಂದಿರುತ್ತದೆ. ಮುಂದೆ ಓದಿ.......

ಜನರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ
ಕ್ರಿಮಿನಲ್ ಗಳು ದುರ್ಬಲ ಜನರನ್ನು ಉಪಯೋಗಿಸಿಕೊಂಡು ಅವರನ್ನು ಹೇಗೆ ಮೋಸ ಮಾಡುತ್ತಾರೆ? ಹಾಗೆ ಮನುಷ್ಯರು ಭಯದಿಂದ ಕೆಲವೊಮ್ಮ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಆಗ ಅದರಿಂದಾಗುವ ಅನಾಹುತಗಳನ್ನು ಜನರಿಗೆ ತಿಳಿಸುವ ಮೂಲ ಉದ್ದೇಶ 'ಹುಷಾರ್ ಕರ್ನಾಟಕ' ರಿಯಾಲಿಟಿ ಶೋನದ್ದು.[ಜುಲೈ 25 ರಿಂದ ನಿಮ್ಮ 'ಸುವರ್ಣ' ವಾಹಿನಿ ಹೊಸ ರೂಪದಲ್ಲಿ.!]

ಸ್ಟಾರ್ ಸುವರ್ಣದ ಸ್ಪೆಷಲ್ ಶೋ
ನಮ್ಮ ಸುತ್ತಮುತ್ತಲು ನಡೆಯುತ್ತಿರುವ ಅಪರಾಧಗಳನ್ನು ವೀಕ್ಷಕರಿಗೆ ತಿಳಿಸಿ ಜಾಗೃತಿ ಮೂಡಿಸುವ ಶೋ "ಹುಷಾರ್ ಕರ್ನಾಟಕ'ವನ್ನು ಪ್ರಾರಂಭಿಸುತ್ತಿರುವ ಮೊದಲ ಮನರಂಜನಾ ವಾಹಿನಿ ಸ್ಟಾರ್ ಸುವರ್ಣ. ಈ ಶೋ ರಾಷ್ಟ್ರೀಯ ಮಟ್ಟದ ತಂತ್ರಜ್ಞಾನದ ಗುಣಮಟ್ಟವನ್ನು ಹೊಂದಿರುತ್ತದೆ.

ಡೈನಾಮಿಕ್ ಹೀರೋ ದೇವರಾಜ್
ಈ ಶೋನಲ್ಲಿ ಸೂತ್ರಧಾರನ ಪಾತ್ರ ಬಹು ಮುಖ್ಯವಾಗಿದ್ದು, ಪ್ರತಿಯೊಂದು ಸಂಚಿಕೆಯೂ ಅವರ ಮೂಲಕವೇ ಪ್ರಾರಂಭವಾಗುತ್ತದೆ. ಅಂತೆಯೇ ಡೈನಾಮಿಕ್ ಹೀರೊ 'ದೇವರಾಜ್' ಅವರು 'ಹುಷಾರ್ ಕರ್ನಾಟಕ'ದ ಸಾರಥ್ಯವನ್ನು ವಹಿಸಿದ್ದಾರೆ.

200 ಚಿತ್ರಗಳ ಸರದಾರ
ಖ್ಯಾತ ನಟ ದೇವರಾಜ್ ಅವರು ದಕ್ಷಿಣ ಭಾರತದ 4 ಭಾಷೆಗಳಲ್ಲಿ ಒಟ್ಟು 200ಕ್ಕೂ, ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಡೈನಾಮಿಕ್ ಹೀರೋ ದೇವರಾಜ್ ಅವರು ನಾಯಕನಾಗಿ ಹಾಗೂ ವಿಲನ್ ಆಗಿ, ಜೊತೆಗೆ ಬೇರೆ ಬೇರೆ ಪಾತ್ರಗಳಲ್ಲಿ ನಟಿಸಿ ಕರ್ನಾಟಕ ಜನರ ಮೆಚ್ಚುಗೆ-ಪ್ರೀತಿಗೆ ಪಾತ್ರರಾಗಿದ್ದಾರೆ.

ಮೊದಲ ಬಾರಿಗೆ ಕಿರುತೆರೆಯಲ್ಲಿ
'ವೀರಪ್ಪನ್' ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರಿಂದ, ಕರ್ನಾಟಕ ರಾಜ್ಯ ಕೊಡಲ್ಪಡುವ 'ಬೆಸ್ಟ್ ಆಕ್ಟರ್' ಪ್ರಶಸ್ತಿ ಇವರಿಗೆ ಲಭಿಸಿದೆ. ಇಂತಹ ಡೈನಾಮಿಕ್ ಹೀರೊ ದೇವರಾಜ ಇದೇ ಮೊದಲ ಬಾರಿಗೆ ಸ್ಟಾರ್ ಸುವರ್ಣ ವಾಹಿನಿಯ 'ಹುಷಾರ್ ಕರ್ನಾಟಕ' ಶೋ ಮೂಲಕ ಕಿರುತೆರೆಯಲ್ಲಿ ನಿರೂಪಕರಾಗಿ ಕಾಣಿಸಿಕೊಂಡಿದ್ದಾರೆ.

ಯಾವಾಗ ಆರಂಭ
"ಹುಷಾರ್ ಕರ್ನಾಟಕ' ಶೋ ಆಗಸ್ಟ್ 14ರಿಂದ ಪ್ರತಿ ಭಾನುವಾರ ರಾತ್ರಿ 8.30ಕ್ಕೆ, ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.


Click it and Unblock the Notifications











