ಸ್ವಚ್ಛತೆಯೇ ಇಲ್ಲ, ಅವ್ಯವಸ್ಥೆಯೇ ಎಲ್ಲ ; ಬಿಗ್ ಬಾಸ್ ಮನೆಯಲ್ಲಿ ನನಗೆ ನರಕ ದರ್ಶನ ಆಯ್ತು - ಕಹಿಸತ್ಯ ಹೇಳಿದ ನಟಿ
''ಬಿಗ್ ಬ್ರದರ್'' ಎಂಬ ವಿದೇಶಿ ಮೂಲದ ಶೋದ ಯಥಾವತ್ತು ನಕಲು ''ಬಿಗ್ ಬಾಸ್''. ಒಂದರ್ಧ ಡಜನ್ ವ್ಯಕ್ತಿಗಳನ್ನು ಮನೆಯಲ್ಲಿ ಗುಡ್ಡೆ ಹಾಕಿ ವಾರಪೂರ್ತಿ ಅವರ ನಡುವೆ ದ್ವೇಷ- ಅಸೂಯೆಯ ಕಿಚ್ಚು ಹತ್ತಿಸುವ ಈ ಕಾರ್ಯಕ್ರಮ 2006ರಲ್ಲಿ ಭಾರತದಲ್ಲಿ ಮೊದಲ ಬಾರಿ ಪ್ರಸಾರವಾಗಿತ್ತು. ''ಸೋನಿ'' ಟಿವಿಯಲ್ಲಿ ಪ್ರಸಾರವಾದ ಮೊದಲ ''ಬಿಗ್ ಬಾಸ್'' ಸೀಸನ್ ಸುಮಾರು 86 ದಿನಗಳ ಕಾಲ ನಡೆದಿತ್ತು. ಮೊದಲ ಪ್ರಯತ್ನದಲ್ಲಿಯೇ ಅಪಾರವಾದ ಯಶಸ್ಸನ್ನು ಕೂಡ ಈ ಕಾರ್ಯಕ್ರಮ ಪಡೆಯಿತು.
ಅಲ್ಲಿಂದ ಇಲ್ಲಿಯವರೆಗೆ ಈ ''ಬಿಗ್ ಬಾಸ್'' ಲಂಗು ಲಗಾಮು ಇಲ್ಲದೇ ಸಾಗುತ್ತಲೇ ಇದೆ. ಕೇವಲ ಹಿಂದಿಯಲ್ಲಿ ಮಾತ್ರವಲ್ಲ.. ಕನ್ನಡದಲ್ಲಿ ಮಾತ್ರವಲ್ಲ.. ಬದಲಿಗೆ ತೆಲುಗು, ತಮಿಳು, ಮಲಯಾಳಂ ಮತ್ತು ಮರಾಠಿಯಲ್ಲಿ ಪ್ರತಿ ವರ್ಷ ಕಾರ್ಯಕ್ರಮ ಪ್ರಸಾರವಾಗುತ್ತೆ. ಹಿಂದಿಯಲ್ಲಿ ಈ ಕಾರ್ಯಕ್ರಮದ 19 ಸೀಸನ್‌ಗಳು ಪೂರ್ಣಗೊಂಡರೆ, ಕನ್ನಡದಲ್ಲಿ 12 ಸೀಸನ್ ಯಶಸ್ವಿಯಾಗಿ ನಡೆದಿವೆ. ತೆಲುಗು ಮತ್ತು ತಮಿಳಿನಲ್ಲಿ 9 ಸೀಸನ್ ಪೂರ್ಣಗೊಂಡಿದ್ದರೆ ಮಲಯಾಳಂನಲ್ಲಿ 8 ಸೀಸನ್‌ಗಳು ಮುಕ್ತಾಯಗೊಂಡಿವೆ. ಮರಾಠಿಯಲ್ಲಿ ಇಲ್ಲಿಯವರೆಗೆ 5 ಸೀಸನ್‌ಗಳಾಗಿವೆ.

ಇಂಥಾ ''ಬಿಗ್ ಬಾಸ್'' ಕಾರ್ಯಕ್ರಮ ಕೆಲ ದಿನಗಳ ಹಿಂದೆಯಷ್ಟೇ ಎಲ್ಲ ಭಾಷೆಯಲ್ಲಿ ಮುಕ್ತಾಯಗೊಂಡಿದೆ. ಆದರೆ.. ಮರಾಠಿಯಲ್ಲಿ 6ನೇ ಸೀಸನ್‌ಗೆ ಹೊಸ ವರ್ಷದ ಆರಂಭದಲ್ಲಿ ರಿತೇಶ್ ದೇಶಮುಖ್ ಅವರ ನೇತೃತ್ವದಲ್ಲಿ ಚಾಲನೆ ಸಿಕ್ಕಿದೆ.
ಇನ್ನೂ ''ಬಿಗ್ ಬಾಸ್'' ಅಂದರೆ ಮೊದಲು ನೆನಪಾಗುವುದು ಮನೆ. ಭವ್ಯವಾದ ಈ ಮನೆಯನ್ನು ಕಣ್ತುಂಬಿಕೊಳ್ಳಲು ಎರಡು ಕಣ್ಣು ಕೂಡ ಸಾಲದು. ಅಷ್ಟರ ಮಟ್ಟಿಗೆ ಈ ಮನೆಯ ವಾತಾವರಣ ಸುಂದರವಾಗಿರುತ್ತೆ.
ಆದರೆ ಈ ಬಾರಿಯ ಮರಾಠಿ ''ಬಿಗ್ ಬಾಸ್'' ಮನೆ ಇದಕ್ಕೆ ಅಪವಾದ ಎಂಬಂತೆ ಇದೆ ಅಸ್ತವಸ್ತ್ಯವಾಗಿದೆ. ನೈರ್ಮಲ್ಯಕ್ಕೆ ಆದ್ಯತೆಯನ್ನು ನೀಡಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಮನೆಗೆ ಅತ್ಯುತ್ಸಾಹದಿಂದ ಹೋಗಿದ್ದ ಸೋನಾಲಿ ರಾವುತ್ ಎರಡು ವಾರದಲ್ಲಿ ಸೋಂಕು ತಗುಲಿ ಹೊರ ಬಂದಿದ್ದಾರೆ. ಖುದ್ದು ಈ ವಿಚಾರವನ್ನು ಹೇಳಿದ್ದಾರೆ.

ಈ ಕುರಿತು ''ಇಟ್ಸ್ ಮಜ್ಜಾ''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಸೋನಾಲಿ ಮೊದಲ ವಾರದ ಅನುಭವ ತುಂಬಾ ಚೆನ್ನಾಗಿತ್ತು ಎಂದು ಹೇಳಿದ್ದಾರೆ. ಮನೆಯಲ್ಲಿದ್ದ ಕೆಲ ಸ್ಫರ್ಧಿಗಳಿಗೆ ನನ್ನ ಬಗ್ಗೆ ಮೊದಲೇ ತುಂಬಾ ಚೆನ್ನಾಗಿ ಗೊತ್ತಿತ್ತು ಎಂದು ಹೇಳಿರುವ ಸೋನಾಲಿ ಅವರಿಗೆಲ್ಲ ಜಗಳದ ಕಿಡಿ ಮನೆಯಲ್ಲಿ ಹೊತ್ತಿದರೆ ಅದು ಕೇವಲ ನನ್ನಿಂದಲೇ ಎನ್ನುವುದು ಕೂಡ ಗೊತ್ತಿತ್ತು ಎಂದು ಹೇಳಿದ್ದಾರೆ. ಹೀಗಾಗಿ ಮೊದಲ ವಾರದಲ್ಲಿ ಜಗಳ ನನ್ನಿಂದಲೇ ಶುರುವಾಯ್ತು ಎಂದಿರುವ ಸೋನಾಲಿ ಮೊದಲೇ ಗುಂಪುಗಳಾಗಿದ್ದವು ಎಂದಿದ್ದಾರೆ.
ಮುಂದುವರೆದು ''ಬಿಗ್ ಬಾಸ್'' ಮನೆಯಲ್ಲಿ ವಾಸ ಮಾಡುವುದು ಸುಲಭ ಅಲ್ಲ ಎಂದು ಹೇಳಿರುವ ಸೋನಾಲಿ, ಗಾರ್ಡನ್ ಪ್ರದೇಶ ಸಂಪೂರ್ಣವಾಗಿ ತೆರೆದಿರಲಿಲ್ಲ, ಇನ್ನೂ ಮನೆಯಲ್ಲಿನ ಎಲ್ಲಾ ಸ್ಫರ್ಧಿಗಳದ್ದು ಬೇರೆ ಬೇರೆ ಹಿನ್ನೆಲೆ, ಎಲ್ಲರೂ ಜೊತೆಯಲ್ಲಿ ಒಂದೇ ಸೂರಿನಡಿ ವಾಸ ಮಾಡಿದಾಗ ನೈರ್ಮಲ್ಯಕ್ಕೆ ಎಲ್ಲೋ ಒಂದು ಕಡೆ ಸಿಗಬೇಕಾದ ಆದ್ಯತೆ ಸಿಗುವುದಿಲ್ಲ, ಇದರಿಂದ ನನಗೆ ಸೋಂಕು ತಗುಲಿತು ಎಂದು ಹೇಳಿದ್ದಾರೆ. ನನ್ನ ಆಟದ ಮೇಲೆ ಅದು ಪರಿಣಾಮ ಬೀರಿತು ಎಂದು ಹೇಳಿದ್ದಾರೆ.
ಸೋಂಕು ತಗುಲಿ ಆರಂಭದ ಮುರು ನಾಲ್ಕು ದಿನದಲ್ಲೇ ನಾನು ಅನಾರೋಗ್ಯಕ್ಕೀಡಾದ ಕಾರಣ ಇತರೆ ಸ್ಫರ್ಧಿಗಳಿಂದ ನಾನು ದೂರ ಉಳಿಯಬೇಕಾಯ್ತು, ಆ ಸಮಯದಲ್ಲಿ ಬೇರೆ ಚಟುವಟಿಕೆಯಲ್ಲಿ ಭಾಗವಹಿಸಲು ನನ್ನಿಂದ ಸಾಧ್ಯವಾಗಲಿಲ್ಲ, ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ ಎನ್ನುವ ಕಾರಣಕ್ಕೆ ನಾನು ಸಗಣಿ ಟಾಸ್ಕ್‌ದಿಂದ ಕೂಡ ದೂರ ಉಳಿದೆ ಎಂದು ಹೇಳಿರುವ ಸೋನಾಲಿ ಕಾರ್ಯಕ್ರಮದ ಆರಂಭಕ್ಕೂ ಮುನ್ನವೇ ಒಸಿಡಿ ಇದೆಯಾ ಎಂದು ನನಗೆ ಕೇಳಿದ್ದರು, ಆಗ ನಾನು ಹೌದು ಎಂದಿದ್ದೆ, ಸ್ಪರ್ಧಿಗಳನ್ನು ನೋಡಿದಾಗ ನೈರ್ಮಲ್ಯದ ವಿಷಯದಲ್ಲಿ ಸಮಸ್ಯೆಗಳಾಗಬಹುದು ಎಂದು ನಾನು ಅಂದುಕೊಂಡಿದ್ದೇ. ಕೊನೆಗೆ ಅದೇ ಆಯ್ತು ಎಂದು ಹೇಳಿದ್ದಾರೆ.
ನಾನು ನನ್ನ ಬಟ್ಟೆ ಬದಲಿಸಬೇಕು ಎಂದು ಪದೇ ಪದೇ ಹೇಳುತ್ತಿದ್ದೆ, ಆದರೆ ನನ್ನ ಪರಿಸ್ಥಿತಿ ಅಲ್ಲಿದ್ದವರಿಗೆ ಅರ್ಥವಾಗಲಿಲ್ಲ ಎಂದು ಹೇಳಿರುವ ಸೋನಾಲಿ ಮನೆಗೆ ಡಾಕ್ಟರ್ ಬಂದಿದ್ದರು, ಔಷಧಿಗಳನ್ನು ಕೂಡ ನೀಡಿದರು, ಆದರೆ ಅದರಿಂದ ಏನೂ ಉಪಯೋಗವಾಗಲಿಲ್ಲ ಎಂದು ಹೇಳಿದ್ದಾರೆ. ಏನಾಗಿದೆ ಎಂದು ಅವರಿಗೂ ಕೂಡ ಗೊತ್ತಾಗಲಿಲ್ಲ ಎಂದು ಹೇಳಿರುವ ಸೋನಾಲಿ ಮನೆಯಲ್ಲಿ ನನಗೆ ನರಕ ದರ್ಶನವಾಯ್ತು ಎಂದಿದ್ದಾರೆ. ಈ ಕಾರಣಕ್ಕೆ ನಾನು ಮನೆಯಿಂದ ಅನಿವಾರ್ಯವಾಗಿ ಹೊರಗಡೆ ಬರಲೇಬೇಕಿತ್ತು ಎಂದಿರುವ ಸೋನಾಲಿ ಸದ್ಯ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ.

ಅಂದ್ಹಾಗೇ ಸೋನಾಲಿ ರಾವುತ್ ಈ ಹಿಂದೆ ಹಿಂದಿಯಲ್ಲಿ ಸಲ್ಮಾನ್ ಖಾನ್ ಸಾರಥ್ಯದ ''ಬಿಗ್ ಬಾಸ್'' ಮನೆಯನ್ನು ಕೂಡ ಪ್ರವೇಶ ಮಾಡಿದ್ದರು. 2014ರಲ್ಲಿ ಹಿಂದಿ ''ಬಿಗ್ ಬಾಸ್'' ಮನೆಗೆ ಹೋಗಿದ್ದ ಸೋನಾಲಿ ಟಾಪ್ 7ರಲ್ಲಿ ಸ್ಥಾನವನ್ನು ಪಡೆದಿದ್ದರು. ಹೀಮೇಶ್ ರೇಶಮ್ಮಿಯಾ ಅವರ ''ದಿ ಎಕ್ಸ್‌ಪೋಸ್'' ಹಾಗೂ ರಿತೇಶ್ ದೇಶಮುಖ್ ಅಭಿನಯದ 'ಗ್ರೇಟ್ ಗ್ರ್ಯಾಂಡ್ ಮಸ್ತಿ'' ಸೋನಾಲಿ ರಾವುತ್ ಅವರಕೆಲ ಪ್ರಮುಖವಾದ ಚಿತ್ರಗಳು. ಸದ್ಯ ಸೋನಾಲಿ ಅವರ ಈ ಮಾತು ಚರ್ಚೆಗೆ ಕಾರಣವಾಗಿದ್ದು ಇವರ ಅಭಿಮಾನಿಗಳು ಶೀಘ್ರ ಗುಣಮುಖರಾಗಿ ಬನ್ನಿ ಎಂದು ಹಾರೈಸುತ್ತಿದ್ದಾರೆ.


Click it and Unblock the Notifications











