ತಂದೆ-ತಾಯಿಯ ನಂತರ ನನಗೆ ಅವನೇ ಸರ್ವಸ್ವ ಆಗಿದ್ದ ; ಮಾಜಿ ಪ್ರೇಮಿಯನ್ನು ನೆನೆದು ಬಿಗ್ ಬಾಸ್ ರಾಶಿಕಾ ಶೆಟ್ಟಿ ಭಾವುಕ

ಪ್ರೀತಿ ಎಂಬ ಪದ ಸುಂದರ ಇರಬಹುದು. ಆದರೆ, ಪ್ರೀತಿ ಕೆಲವೊಮ್ಮೆ ಕಾಡುತ್ತೆ. ಪ್ರೀತಿಯಲ್ಲಿ ನೋವು ಸಹಜವಾದರೂ ಅದನ್ನು ಸಹಿಸಿಕೊಳ್ಳುವುದಕ್ಕೆ ಸಾಧ್ಯವಾಗುವುದೇ ಇಲ್ಲ. ಅದರಿಂದಾಗುವ ನೋವು ಶಾಶ್ವತವಾಗಿಲ್ಲದಿದ್ದರೂ ಆ ಕ್ಷಣಕ್ಕೆ ಮಾತ್ರ ಅದು ನುಂಗಲಾರದ ತುತ್ತು. ಎಲ್ಲಾ ಉತ್ಸಾಹ, ಆಸಕ್ತಿ, ಖುಷಿಯ ಕ್ಷಣಗಳನ್ನು ಕಸಿದುಕೊಳ್ಳೋ ಆ ಬ್ರೇಕ್ ಅಪ್‌ನ ನೋವು ಸಹಿಸಿಕೊಳ್ಳೋದಕ್ಕೆ ಸಾಧ್ಯ ಆಗದೇ ಇರುವುದಕ್ಕೆ ಕಾರಣಗಳೇನು ಎಂಬುದು ಹೃದಯವಂತರ ಪ್ರಶ್ನೆ.

ಈ ಪ್ರಶ್ನೆಗೆ ಲವ್ ಗುರುಗಳು ಇನ್ನು ಉತ್ತರವನ್ನು ನೀಡದೇ ಇದ್ದರೂ ಚಿತ್ರರಂಗದಲ್ಲಿ ಹಲವರು ಈ ಪ್ರೀತಿಯ ಬೆಂಕಿಯಲ್ಲಿ ಬಿದ್ದು ಬೆಂದಿದ್ದಾರೆ. ನೊಂದು ಕಣ್ಣೀರು ಹಾಕಿದ್ದಾರೆ. ಉದಾಹರಣೆಗೆ ರಾಶಿಕಾ ಶೆಟ್ಟಿ.

I Gave Him My Parents Status Rashika Shetty s Heart-Wrenching Love Story Shakes Bigg Boss

ಹೌದು ರಾಶಿಕಾ ಶೆಟ್ಟಿ.. ಚಿಕ್ಕಮಗಳೂರಿನ ಚೆಲುವೆ. ಬಾಲ್ಯದಲ್ಲಿಯೇ ರಮ್ಯಾ ಮತ್ತು ರಕ್ಷಿತಾ ಅಭಿನಯದ ''ತನನಂ ತನನಂ'' ಚಿತ್ರದ ''ಕಂಡೆ ಕಂಡೆ ಗೋವಿಂದನಾ'' ಹಾಡಿನಲ್ಲಿ‌ಕಾಣಿಸಿಕೊಂಡಿದ್ದ ರಾಶಿಕಾ ಆ ನಂತರ ''ದೊರೆಸಾನಿ'' ಮೂಲಕ ಕಿರುತೆರೆಗೆ ಬಂದರು.

ಇಷ್ಟೇ ಅಲ್ಲ ತೆಲುಗಿನಲ್ಲಿ ''ಸಾವಿತ್ರಮ್ಮಗಾರಿ ಅಬ್ಬಾಯಿ'' ಧಾರಾವಾಹಿಯಲ್ಲಿಯೂ ಕೂಡ ಆಕ್ಟ್ ಮಾಡಿದರು. ಇನ್ನು ಯೋಗರಾಜ್ ಭಟ್ ನಿರ್ದೇಶನದ ''ಮನದ ಕಡಲು'' ಚಿತ್ರದ ಮೂಲಕ ಬೆಳ್ಳಿತೆರೆಯಲ್ಲಿಯೂ ಅದೃಷ್ಟ ಪರೀಕ್ಷೆ ಮಾಡ್ಕೊಂಡ ರಾಶಿಕಾ ಕರುನಾಡಿನೆಲ್ಲೆಡೆ ಮನೆ ಮಾತಾಗಿದ್ದು "ಬಿಗ್ ಬಾಸ್" ಮೂಲಕ. ಇಂಥಾ ರಾಶಿಕಾ ಸದ್ಯ ತಮ್ಮ ಲವ್ ಮತ್ತು ಬ್ರೇಕಪ್ ಕಥೆ ಹಂಚಿಕೊಂಡಿದ್ದಾರೆ. ವಿರಹ ವೇದನೆ ನೆನೆದು ಬಿಕ್ಕಿದ್ದಾರೆ.

ಈ ಕುರಿತು ರಾಜೇಶ್‌ ಗೌಡ ಅವರ ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ರಾಶಿಕಾ, ಅವರು ಇವರು ಅಂತಲ್ಲ, ಎಲ್ಲರಿಗೆ ಪ್ರೀತಿ ಎನ್ನುವುದೇ ಆಗೇ ಆಗುತ್ತೆ ಎಂದು ಹೇಳಿದ್ದಾರೆ.

ನನಗೆ ಆಗಿನ್ನೂ 23 ವರ್ಷ. ಹೀಗೆ ಒಂದು ಶೋ ಮೂಲಕ ನಮ್ಮ ಪರಿಚಯ ಆಗುತ್ತೆ ಎಂದು ತಮ್ಮ ಮೊದಲ ಭೇಟಿಯ ಕ್ಷಣ ಮೆಲುಕು ಹಾಕಿರುವ ರಾಶಿಕಾ ನಾನು ಪ್ರೀತಿಯನ್ನು ನೋಡುವ ದೃಷ್ಟಿಕೋನವೇ ಬೇರೆ ಎಂದು ಹೇಳಿದ್ದಾರೆ.

I Gave Him My Parents Status Rashika Shetty s Heart-Wrenching Love Story Shakes Bigg Boss

ನನ್ನ ಪಾಲಿಗೆ ಪ್ರೀತಿ ದೇವರು. ಯಾಕೆಂದರೆ ನಮ್ಮ ಅಪ್ಪ-ಅಮ್ಮನ ಪ್ರೀತಿಯನ್ನ ಹತ್ತಿರದಿಂದ ನೋಡಿಕೊಂಡು ಬೆಳೆದವಳು ನಾನು ಎಂದು ಹೇಳಿರುವ ರಾಶಿಕಾ ಪ್ರೀತಿಯನ್ನು ಕೂಡ ದೇವರಂತೆಯೇ ನಾನು ಪೂಜೆ ಮಾಡುತ್ತೇನೆ ಎಂದು ಹೇಳಿದ್ದಾರೆ.

ನನಗೆ ಪ್ರೀತಿ ಅಂದರೆ ಆ ತರಹ. ನನ್ನ ಜೀವನದಲ್ಲಿ ಬರೋ ಹುಡುಗನನ್ನೂ ನೋಡುತ್ತಿದ್ದರೆ ಅವನ ಮೇಲೆ ಗೌರವ ಹೆಚ್ಚಾಗಬೇಕು ಎಂದು ಹೇಳಿರುವ ರಾಶಿಕಾ ಅವನ ಸಂಪಾದನೆ.. ಅವನ ಫ್ಯಾಮಿಲಿ ಹಿನ್ನೆಲೆ ಅದೆಲ್ಲ ನನಗೆ ಮುಖ್ಯವಾಗಲ್ಲ ಎಂದು ಹೇಳಿದ್ದಾರೆ.

ನಾನು ಕೆಲಸ ಮಾಡುತ್ತೇನೆ, ನೀನು ಮಾಡು ಎನ್ನುವಂತಹ ಹುಡುಗಿ ನಾನು ಚಿಕ್ಕ ಸಂಸಾರ ಮಾತ್ರ ನನ್ನ ಹೆಬ್ಬಯಕೆ ಎಂದಿರುವ ರಾಶಿಕಾ ನಾನು ಯಾರಾನ್ನಾದರೂ ಪ್ರೀತಿ ಮಾಡಿದ್ರೆ ತುಂಬಾ ಬೇಗ ಹಚ್ಚಿಕೊಂಡು ಬಿಡುತ್ತೇನೆ ಅದೇ ನನ್ನ ಸಮಸ್ಯೆ ಎಂದಿದ್ಧಾರೆ.

ಮುಂದುವರೆದು ನನ್ನ ಅಪ್ಪ ಅಮ್ಮನ ಸ್ಥಾನವನ್ನು ನಾನು ಅವನಿಗೆ ನೀಡಿದ್ದೇ ಎಂದು ಹೇಳಿರುವ ರಾಶಿಕಾ ಇವತ್ತು ಕೂಡ ಅವನ ಮೇಲೆ ನನಗೆ ದ್ವೇಷ ಇಲ್ಲ ಎಂದು ಹೇಳಿದ್ದಾರೆ. ಅವರ ಜೊತೆ ಕಳೆದ ಕ್ಷಣಗಳನ್ನು ನಾನು ಮರೆಯಲು ಸಾಧ್ಯ ಇಲ್ಲ ಎಂದಿದ್ದಾರೆ.

ನನ್ನ ಈ ಪ್ರೀತಿಯಿಂದ ಬದುಕಿನಲ್ಲಿ ನಾನು ಕೆಲ ಪಾಠ ಕಲಿತೆ ಎಂದು ಹೇಳಿರುವ ರಾಶಿಕಾ ಇವಾಗಾ ನನ್ನ ಪುರಾತನ ಕಾಲದ ಪ್ರೀತಿಯ ಬಗ್ಗೆ ಕೇಳಿದರೆ ಆಗಿದ್ದೆಲ್ಲವೂ ಒಳ್ಳೆಯದಕ್ಕೇ ಎಂದು ಅನಿಸುತ್ತದೆ ಎಂದಿದ್ದಾರೆ.

ಅವರು ಬೇಡ ಅಂತಂದರು ಕೂಡ ನಾನೇ ಮೆಸೇಜ್‌ ಮಾಡ್ತಿದ್ದೆ. ಇದನ್ನ ಸರಿಪಡಿಸಿಕೊಳ್ಳೋಣ ಎನ್ನುವ ಆಲೋಚನೆ ನನ್ನಾದಗಿತ್ತು ಎಂದಿರುವ ರಾಶಿಕಾ, ನಿನ್ನನ್ನ ಬಿಟ್ಟು ಇರೋದಕ್ಕೆ ಆಗಲ್ಲ ಅಂತ ನಾನು ತುಂಬಾ ಟ್ರೈ ಮಾಡಿದೆ. ನನಗೆ ಸೆಲ್ಫ್‌ ರೆಸ್ಪೆಕ್ಟ್‌ ಇಲ್ವಾ ಅಂತ ಪ್ರಶ್ನೆ ಮಾಡಿಕೊಂಡು ಮತ್ತೆ ನಾನೇ ಮೆಸೇಜ್‌ ಮಾಡುತ್ತಿದ್ದೆ ಎಂದು ಹೇಳಿದ್ದಾರೆ. ನನ್ನ ಜೀವನದಲ್ಲಿ ನೀನು ಬೇಡ್ವೇ ಬೇಡ ಅಂತಂದಾಗ, ಸರಿ ಆಯ್ತು ಅಂದೆ ಎಂದು ಹೇಳಿದ್ದಾರೆ.

ಇವತ್ತಿಗೂ ಆ ಭಯ ನನ್ನಲ್ಲಿ ಇದೆ ಎಂದು ಹೇಳಿರುವ ರಾಶಿಕಾ ಶೆಟ್ಟಿ, ನನ್ನ ಜೀವನದಲ್ಲಿ ಈ ಕ್ಷಣಕ್ಕೂ ಯಾರಾದರೂ ಬಂದರೆ, ನಿಜವಾಗಲೂ ಇಷ್ಟ ಪಡ್ತಿದ್ದಾರಾ..? ಹೇಗೆ ನಂಬಬೇಕು.. ? ಮತ್ತೆ ಅದೇ ರೀತಿ ಮೋಸ ಮಾಡಿದರೆ..? ಹೀಗೆ ಹಲವಾರು ಪ್ರಶ್ನೆಗಳು ನನ್ನನ್ನೂ ಕಾಡುತ್ತಾವೆ ಎಂದು ''ರಾಜೇಶ್ ಗೌಡ'' ಅವರ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಾ ಭಾವುಕರಾಗಿದ್ದಾರೆ ರಾಶಿಕಾ ಶೆಟ್ಟಿ.

More from Filmibeat

English summary
Rashika Shetty opens up about her heartbreaking breakup in the BBK 12 house. See how the star lost her self-respect for a love that ultimately walked away.
Read more about: breakup biggboss ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X