ಮದುವೆ ಮುಂಚೆ ಹುಡುಗಿಯರ ಜೊತೆ ನನಗೆ ಸಂಬಂಧ ಇತ್ತು ; ಬದುಕಿನ ರಹಸ್ಯ ಹೇಳಿ ವೇದಿಕೆಯಲ್ಲಿ ಗಳಗಳನೆ ಅತ್ತ ನಟಿ
ಪ್ರೀತಿ ಅಂದರೆ ಹಾಗೇ. ಅದಕ್ಕೆ ಕಣ್ಣಿಲ್ಲದಿದ್ದರೂ ಕಣ್ಣಿನ ತುಂಬಾ ಆಸೆ ಹುಟ್ಟಿಸುವ ಸಾಮರ್ಥ್ಯ ಇದೆ. ಪ್ರೀತಿ ಎನ್ನುವುದು ಕೇವಲ ಎರಡು ದೇಹಕ್ಕೆ ಸಂಬಂಧಿಸಿದ್ದಲ್ಲ. ಎರಡು ಮನಸ್ಸುಗಳು ಮುಕ್ತವಾಗಿ ಒಂದನ್ನೊಂದು ಅರಿತುಕೊಳ್ಳುವುದು. ಪ್ರೀತಿಗೆ ಎಲ್ಲರನ್ನು ಎಲ್ಲವನ್ನೂ ಜಯಿಸುವಂತಹ ನಿಗೂಢವಾದ ಶಕ್ತಿ ಇದೆ.
ಇಂತಹ ಪ್ರೀತಿ ಸಾಮಾನ್ಯವಾಗಿ ಗಂಡು ಮತ್ತು ಹೆಣ್ಣಿನ ನಡುವೆ ಚಿಗುರೊಡೆಯುತ್ತೆ. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಜನರ ಆಚಾರ-ವಿಚಾರಗಳಲ್ಲಿ ಭಾರೀ ಬದಲಾವಣೆಗಳಾಗಿವೆ. ಇಂದು ಪ್ರೀತಿ ಕೇವಲ ಗಂಡು ಮತ್ತು ಹೆಣ್ಣಿನ ನಡುವೆ ಮಾತ್ರ ಇಲ್ಲ. ಇಂದು ಯಾರ ಮೇಲೆ ಯಾರಿಗೆ ಬೇಕಾದರೂ ಆಕರ್ಷಣೆಯಾಗಬಹುದು. ಯಾರ ಮೇಲೆ ಯಾರಿಗೆ ಬೇಕಾದರೂ ಪ್ರೀತಿಯಾಗಬಹುದು. ಇದಕ್ಕೆ ಕೈಗನ್ನಡಿ ಎಂಬಂತೆ ಭಾರತದಲ್ಲಿ ಈಗೀಗ ಸಲಿಂಗ ಪ್ರೇಮ.. ಸಲಿಂಗ ವಿವಾಹಗಳು ಹೆಚ್ಚಾಗುತ್ತಿವೆ. ಗಂಡಿನ ಜೊತೆ ಗಂಡಿನ.. ಹೆಣ್ಣಿನ ಜೊತೆ ಹೆಣ್ಣಿನ ಮದುವೆಗಳು ನಡೆಯುತ್ತಿವೆ.

ಇನ್ನು ಕೆಲವರಿಗೆ ಹುಡುಗ ಹುಡುಗಿ ಯಾರೇ ಇರಲಿ, ಇಬ್ಬರ ಮೇಲೂ ಲವ್ ಆಗುತ್ತೆ. ಕ್ರಶ್ ಆಗುತ್ತೆ. ಇವರಿಗೆ ಗಂಡು ಮತ್ತು ಹೆಣ್ಣು ಇಬ್ಬರ ಮೇಲೂ ಲೈಂ*ಗಿಕ ಆಸಕ್ತಿ ಇರುತ್ತೆ. ಇವರನ್ನು ನಮ್ಮ ಸಮಾಜ ಬೈಸೆಕ್ಸುವಲ್ ಎಂದು ಕರೆಯುತ್ತೆ.
ಆದರೆ ಎಲ್ಲರೂ ತಮ್ಮ ಮನದ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳುವುದಿಲ್ಲ. ಸಾರ್ವಜನಿಕವಾಗಿ ಹೇಳುವುದಿಲ್ಲ. ಯಾಕೆಂದರೆ ಸಮಾಜ ಏನ್ ಅನ್ನುತ್ತೋ ಏನೋ ಎನ್ನುವ ಭಯ ಇವರಲ್ಲಿರುತ್ತೆ. ಅಲ್ಲೊಬ್ಬರು.. ಇಲ್ಲೊಬ್ಬರು.. ಮಾತ್ರ ತಮ್ಮ ಬದುಕಿನ ಸತ್ಯವನ್ನು ಎಲ್ಲರೆದುರು ಹೇಳಿ ಕಣ್ಣೀರಾಗುತ್ತಾರೆ. ಮನಸು ಹಗುರ ಮಾಡಿಕೊಳ್ಳುತ್ತಾರೆ. ಉದಾಹರಣೆಗೆ ಆಕಾಂಕ್ಷಾ ಚಮೋಲಾ.

ಆಕಾಂಕ್ಷಾ ಚಮೋಲಾ ಹಿನ್ನೆಲೆ
ಹೌದು, ಆಕಾಂಕ್ಷಾ ಚಮೋಲಾ .. ಹಿಂದಿ ಕಿರುತೆರೆಯ ಖ್ಯಾತ ಚೆಲುವೆ. ''ಸ್ವರಾಗಿಣಿ-ಜೋಡೇ ರಿಶ್ತೋ ಕಾ ಸುರ್''.. ''ಭಾಗ್ಯ ಲಕ್ಷ್ಮೀ''.. ''ಕೈಸೇ ಮುಝೇ ತುಮ್ ಮಿಲ್ ಗಯೇ''.. ಇವರು ಅಭಿನಯಿಸಿರುವ ಪ್ರಖ್ಯಾತ ಸೀರಿಯಲ್‌ಗಳು.
ಸರಿಯಾಗಿ ಹತ್ತು ಹನ್ನೊಂದು ವರ್ಷದ ಹಿಂದೆ ಬಣ್ಣದ ಲೋಕದಲ್ಲಿ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಲು ಬಂದಿದ್ದ ಆಕಾಂಕ್ಷಾ, 2015ರಲ್ಲಿ ಗೌರವ್ ಖನ್ನಾ ಅವರನ್ನು ಮೊದಲ ಬಾರಿ ಭೇಟಿಯಾಗಿದ್ದರು. ಈ ಗೌರವ್ ಖನ್ನಾ ಬೇರೆ ಯಾರು ಅಲ್ಲ. ಬದಲಿಗೆ ಹಿಂದಿ ಕಿರುತೆರೆಯ ಶಾರುಖ್ ಖಾನ್. ಮೊದಲ ಭೇಟಿಯಲ್ಲೇ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಆ ನಂತರ ಅದ್ಧೂರಿಯಾಗಿ ಮದುವೆಯೂ ಆಯ್ತು.
ಮಗು ವಿಚಾರಕ್ಕೆ ಡಿವೋರ್ಸ್
ಆದರೆ ಮದುವೆಯಾದ ಹತ್ತು ವರ್ಷದ ನಂತರ ಈಗ ಇವರ ನಡುವೆ ಇದ್ದ ಪ್ರೀತಿ ಕಮರಿ ಹೋಗಿದೆ. ಖುದ್ದು ಆಕಾಂಕ್ಷಾ ಈ ವಿಚಾರವನ್ನು ಮೊನ್ನೆ ಮೊನ್ನೆ ಹೊಸದಾಗಿ ಶುರುವಾಗಿರುವ ರಿಯಾಲಿಟಿ ಶೋ ''ಲಾಕಪ್ 2'' ನಲ್ಲಿ ಹೇಳಿದ್ದಾರೆ. ಎಲ್ಲರೆದುರು ತಮ್ಮ ದಾಂಪತ್ಯ ಮುರಿದು ಬಿದ್ದು ಒಂದು ವರ್ಷವಾಗಿದೆ ಎಂದಿದ್ದಾರೆ. ಮಕ್ಕಳನ್ನು ಹೊಂದುವ ವಿಷಯದಲ್ಲಿ ಇಬ್ಬರ ನಡುವೆ ಇದ್ದ ಭಿನ್ನಾಭಿಪ್ರಾಯವೇ ನಮ್ಮ ಡಿವೋರ್ಸ್‌ಗೆ ಕಾರಣ ಎಂದು ಕೂಡ ಸ್ಪಷ್ಟಪಡಿಸಿದ್ದಾರೆ.
ಈಗ ಇದೇ ''ಲಾಕಪ್'' ವೇದಿಕೆಯಲ್ಲಿ ಗೌರವ್ ಖನ್ನಾ ಜೊತೆ ಮದುವೆಯಾಗುವ ಮುನ್ನ ನನಗೆ ಹುಡುಗಿಯರ ಜೊತೆ ಸಂಬಂಧ ಇತ್ತು ಎಂದಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಮತ್ತೊಂದು ಶಾಕ್ ನೀಡಿದ್ದಾರೆ.

ಆಕಾಂಕ್ಷಾ ವೈಯಕ್ತಿಕ ಬದುಕಿನ ಕುರಿತು ಮಾತನಾಡಿದ್ದ ಶ್ರೇಯಾ
ಹೌದು, ಅಸಲಿಗೆ ''ಲಾಕಪ್'' ಮೊದಲ ವಾರವನ್ನು ಯಶಸ್ವಿಯಾಗಿ ಪೂರೈಸಿದೆ. ''ಬಿಗ್ ಬಾಸ್'' ಕಾರ್ಯಕ್ರಮದಂತೆಯೇ ಇಲ್ಲಿಯೂ ಕೂಡ ವಾರಕ್ಕೊಬ್ಬರನ್ನು ಮನೆಯಿಂದ ಹೊರ ಹಾಕಲಾಗುತ್ತೆ. ಈ ಹಿನ್ನೆಲೆ ಮೊನ್ನೆಯ ದಿವಸ ಮತ್ತೊಬ್ಬ ಸ್ಫರ್ಧಿ ಶ್ರೇಯಾ ಕಲ್ರಾ ಅವರನ್ನು ಆಕಾಂಕ್ಷಾ ನಾಮಿನೇಟ್ ಮಾಡಿದ್ದರು.
ಇದರಿಂದ ಕೆರಳಿದ್ದ ಶ್ರೇಯಾ ಮತ್ತೊಬ್ಬ ಸ್ಫರ್ಧಿ ಸೂಫಿ ಮೋತಿವಾಲಾ ಹತ್ತಿರ ಆಕಾಂಕ್ಷಾ ವೈಯಕ್ತಿಕ ಬದುಕಿನ ಕುರಿತು ಚರ್ಚೆ ಮಾಡಿದ್ದರು. ನನಗೆ ಹುಡುಗರು ಮಾತ್ರ ಅಲ್ಲ ಹುಡುಗಿಯರು ಕೂಡ ಇಷ್ಟ (ಬೈಸೆಕ್ಷುವಲ್) ಎಂದು ನನ್ನ ಹತ್ತಿರ ವೈಯಕ್ತಿಕವಾಗಿ ಬಂದು ಆಕಾಂಕ್ಷಾ ಹೇಳಿದ್ಧಾಳೆ ಎಂದು ಶ್ರೇಯಾ ಹೇಳಿದ್ದರು.
ಇಷ್ಟೇ ಅಲ್ಲ ನನಗೆ ಗೊತ್ತಿದ್ದ ಗುಟ್ಟು ನಾನು ಈಗ ನ್ಯಾಷನಲ್ ಟಿವಿಯಲ್ಲಿ ಕುಂತು ರಟ್ಟು ಮಾಡಿದ್ದೇನೆ, ಹೀಗಾಗಿ ಆಕಾಂಕ್ಷಾ ಹತ್ತಿರ ಇದ್ದ ಮೂರು ಲೈಫ್ ಲೈನ್‌ನಲ್ಲಿ ಎರಡು ಖಾಲಿಯಾಗಿದೆ, ಇನ್ನು ಅವಳ ಹತ್ತಿರ ಇರುವುದು ಒಂದೇ ಅವಕಾಶ ಎಂದು ಲಾಕಪ್ ಸ್ಫರ್ಧೆ ಗೆದ್ದಷ್ಟೇ ಸಂಭ್ರಮ ಪಟ್ಟಿದ್ದರು.
ವಿಷಯ ತಿಳಿದು ಭಾವುಕಗೊಂಡ ಆಕಾಂಕ್ಷಾ
ತನ್ನ ಮೇಲಿನ ಜಿದ್ದಿಗೆ ಶ್ರೇಯಾ ಕಲ್ರಾ ತನ್ನೆಲ್ಲ ರಹಸ್ಯವನ್ನು ಎಲ್ಲರೆದುರು ಹೇಳಿರುವ ವಿಚಾರ ಗೊತ್ತಾಗುತ್ತಿದ್ದಂತೆಯೇ ಆಕಾಂಕ್ಷಾ ಭಾವುಕರಾಗಿದ್ದಾರೆ. ಶ್ರೇಯಾ ನಂಬಿಕೆ ದ್ರೋಹ ಮಾಡಿದ ಹಿನ್ನೆಲೆ ವೇದಿಕೆಯಲ್ಲಿ ಕಣ್ಣೀರು ಹಾಕಿದ್ದಾರೆ. ಆ ನಂತರ ಸಾವರಿಸಿಕೊಂಡು ಮಾತನಾಡಿದ ಆಕಾಂಕ್ಷಾ ಮದುವೆ ಮುನ್ನ ಹುಡುಗಿಯರ ಜೊತೆ ನನಗೆ ಸಂಬಂಧ ಇತ್ತು ಎಂದು ಹೇಳಿದ್ದಾರೆ.
ನಾನು ಗೌರವ್ ಖನ್ನಾ ಜೊತೆ ಮದುವೆಯಾಗುವ ಮೊದಲು ಬೈಸೆಕ್ಷುವಲ್ ಆಗಿದ್ದೆ. ಕೆಲವು ಹುಡುಗಿಯರ ಜೊತೆ ನನಗೆ ಸಂಬಂಧವಿತ್ತು ಎಂದು ಹೇಳಿರುವ ಆಕಾಂಕ್ಷಾ, ಆದರೆ ದೈಹಿಕ ಸಂಪರ್ಕ ಹೊಂದಿರಲಿಲ್ಲ ಎಂದು ಹೇಳಿದ್ದಾರೆ. ಕೇವಲ ಸಂಬಂಧದಲ್ಲಿದ್ದೆ ಎಂದಿದ್ದಾರೆ.
ಹುಡುಗಿಯರ ಜೊತೆ ಇದ್ದಾಗ ಸುರಕ್ಷಿತವಾದ ಭಾವನೆ
ನನಗೆ ಹುಡುಗಿಯರು ಅಂದರೆ ಇಷ್ಟ. ನಾನು ಹೆಣ್ಣಾಗಿ ಹೆಣ್ಣಿನತ್ತ ಆಕರ್ಷಿತಳಾಗುತ್ತೇನೆ ಎಂದು ಹೇಳಿರುವ ಆಕಾಂಕ್ಷಾ, ಹುಡುಗಿಯರ ಜೊತೆ ನಾನು ಇರುವಾಗ ನನ್ನಲ್ಲಿ ಹೆಚ್ಚು ಸುರಕ್ಷಿತವಾದ ಭಾವನೆ ಮೂಡುತ್ತೆ ಎಂದು ಹೇಳಿದ್ದಾರೆ.
ಮುಂದುವರೆದು ನಾನು ಹುಡುಗಿಯರನ್ನು ಗೌರವಿಸುತ್ತೇನೆ, ಅವರ ಕಡೆ ಬಹುಬೇಗ ಅಟ್ಯ್ರಾಕ್ಟ್ ಆಗುತ್ತೇನೆ ಎಂದು ಹೇಳಿರುವ ಆಕಾಂಕ್ಷಾ, ನನ್ನ ಪ್ರಕಾರ ಅವರು ನನ್ನ ಸೇಫ್ ಸ್ಪೇಸ್ ಎಂದು ಹೇಳಿದ್ಧಾರೆ.
ಹುಡುಗಿಯರ ಜೊತೆ ನಾನು ಯಾವಾಗಲೂ ಕಂಫರ್ಟಬಲ್ ಆಗಿರುತ್ತೇನೆ ಎಂದು ಕೂಡ ಹೇಳಿರುವ ಆಕಾಂಕ್ಷಾ, ಬೆಳೆಯುವಾಗ ಈ ಇಡೀ ಪ್ರಪಂಚ ಪುರುಷ ಪ್ರಧಾನವಾಗಿದೆ ಎಂದು ಅಂದುಕೊಂಡಿದ್ದರಿಂದ ತಮಗೆ ಹುಡುಗಿಯರ ಜೊತೆಯೇ ಹೆಚ್ಚು ಸೇಫ್ ಅನಿಸುತ್ತಿತ್ತು ಎಂದು ಹೇಳಿದ್ದಾರೆ.
ಸಮಾಜ ನನಗೆ 'ಬೈಸೆಕ್ಷುವಲ್' ಎಂಬ ಲೇಬಲ್ ಕೊಟ್ಟಿರಬಹುದು, ಆದರೆ..
ತನ್ನ ತಾಯಿ ಮತ್ತು ತಂಗಿಯ ಜೊತೆ ಇದ್ದಾಗ ನನಗೆ ನೆಮ್ಮದಿ ಸಿಗುತ್ತಿತ್ತು ಎಂದು ಹೇಳಿರುವ ಆಕಾಂಕ್ಷಾ, ನನ್ನ ಪಾಲಿಗೆ ಎಲ್ಲ ಮಹಿಳೆಯರೂ ಸುಂದರ, ಎಂದಿದ್ದಾರೆ. ಸಮಾಜ ತನಗೆ 'ಬೈಸೆಕ್ಷುವಲ್' ಎಂಬ ಲೇಬಲ್ ಕೊಟ್ಟಿರಬಹುದು, ಆದರೆ ನನ್ನ ಪಾಲಿಗೆ ಇದು ಕೇವಲ ಪವಿತ್ರ ಪ್ರೀತಿ ಅಷ್ಟೇ ಎಂದು ಹೇಳಿದ್ದಾರೆ. ಆಕಾಂಕ್ಷಾ ಅವರ ಈ ನಡೆಯನ್ನು ಕಾರ್ಯಕ್ರಮದ ನಿರೂಪಕರಾದ ರಿತೇಶ್ ದೇಶಮುಖ್ ಮತ್ತು ಫರಾ ಖಾನ್ ಮೆಚ್ಚಿಕೊಂಡಿದ್ದು ಧೈರ್ಯವನ್ನು ಶ್ಲಾಘಿಸಿದ್ದಾರೆ.
ಇಷ್ಟೆಲ್ಲ ಆದ ನಂತರ ಮನೆಯ ಸದಸ್ಯರ ವೋಟ್‌ಗಳ ಆಧಾರದ ಮೇಲೆ ಆಕಾಂಕ್ಷಾ ಎಲಿಮಿನೇಷನ್‌ನಿಂದ ಸೇಫ್ ಎಂದು ಅನೌನ್ಸ್ ಮಾಡಲಾಯಿತು. ಇದರ ಬೆನ್ನಲ್ಲೇ ಮನೆ ಒಳಗೆ ಹೋದ ಆಕಾಂಕ್ಷಾ, ಶ್ರೇಯಾ ವಿರುದ್ಧ ಕೆಂಡ ಕಾರಿದ್ದಾರೆ.
ಶ್ರೇಯಾ ವಿರುದ್ದ ಆಕಾಂಕ್ಷಾ ಆಕ್ರೋಶ
ಮನೆಯೊಳಗೆ ಶ್ರೇಯಾ ವಿರುದ್ಧ ಆಕ್ರೋಶ ಹೊರ ಹಾಕಿದ ಆಕಾಂಕ್ಷಾ, ಬೇರೆಯವರ ಭಾವನೆಗಳಿಗೆ ಕಿಂಚಿತ್ತಾದರೂ ಬೆಲೆ ಕೊಡುವುದು ಬೇಡ್ವಾ..? ಎಂದು ಪ್ರಶ್ನೆ ಮಾಡಿದ್ದಾರೆ. ಸೂಫಿ ಎದುರು ನೀನು ಹಂಚಿಕೊಂಡ ನನ್ನ ವೈಯಕ್ತಿಕ ಬದುಕಿನ ವಿಚಾರ ನಾನು ನಿನ್ನ ಹತ್ತಿರ ಹೇಳಿಯೇ ಇರಲಿಲ್ಲ, ಕದ್ದು ಕೇಳಿಸಿಕೊಂಡು ನನ್ನ ಖಾಸಗಿ ಬದುಕನ್ನು ನಿನ್ನ ಆಟಕ್ಕೆ ಉಪಯೋಗ ಮಾಡಿಕೊಂಡೆ ಎಂದು ಕಿಡಿ ಕಾರಿದ್ದಾರೆ. ಈ ಹೆಂಗಸನ್ನು ಯಾರು ನಂಬಬೇಡಿ ಎಂದು ಇತರೆ ಸ್ಫರ್ಧಿಗಳಿಗೆ ಹೇಳಿದ್ಧಾರೆ. ದೇವರು ನಿನಗೆ ಒಳ್ಳೆಯದು ಮಾಡಲಿ, ನಿನ್ನ ಮನದಲ್ಲಿರುವ ದ್ವೇಷ ಕರಗಲಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.


Click it and Unblock the Notifications