ನೂರಾರು ಹುಡುಗರು ದುಂಬಾಲು ಬಿದ್ದರೂ ಮದುವೆಯಾಗಿಲ್ಲ ಯಾಕೆ ವೈಷ್ಣವಿ ಗೌಡ ; ಸನ್ನಿಧಿ ಕೊಟ್ಟ ಕಾರಣ ಏನು..?
ಅಗ್ನಿಸಾಕ್ಷಿ ಧಾರಾವಾಹಿಯ ಸನ್ನಿಧಿ ಆಗಿ ಚರಪರಿಚಿತರಾಗಿರುವ ನಟಿ ವೈಷ್ಣವಿ ಗೌಡ ಅವರು ಸದ್ಯ ಸೀತಾ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ವೈಷ್ಣವಿ ಗೌಡ ಅಭಿಮಾನಿಗಳ ಬಳಗ ದೊಡ್ಡದಾಗಿದೆ. ಇನ್ ಸ್ಟಾಗ್ರಾಂ ಪೇಜ್ ನಲ್ಲಿ 1.4 ಮಿಲಿಯನ್ ಫಾಲೋವರ್ಸ್ ಗಳನ್ನು ವೈಷ್ಣವಿ ಗೌಡ ಅವರು ಹೊಂದಿದ್ದಾರೆ.ಸದಾ ಸೋಶಿಯಲ್ ಮೀಡಿಯಾಗಳಲ್ಲಿ ಆಕ್ಟೀವ್ ಆಗಿರುವ ವೈಷ್ಣವಿ ಗೌಡ ಅವರು, ಆಗಾಗ ಐಕಾನಿಕ್ ಲುಕ್ ಗಳನ್ನು ರಿಕ್ರಿಯೇಟ್ ಮಾಡಿ, ವೀಡಿಯೋ ಅಪ್ ಲೋಡ್ ಮಾಡುವ ಹವ್ಯಾಸ ರೂಡಿಸಿಕೊಂಡಿದ್ದಾರೆ.
ಪ್ರತಿಭಾನ್ವಿತ ನಟಿ ವೈಷ್ಣವಿ ಗೌಡ..!
ಸದಾ ಹೊಸತನಕ್ಕೆ ತುಡಿಯುವ ವೈಷ್ಣವಿ ಗೌಡ ಸಖತ್ ಟ್ಯಾಲೆಂಟೆಡ್ ಹುಡುಗಿ ಎಂದರೆ ತಪ್ಪಾಗಲಾರದು. ಭರತನಾಟ್ಯಂ ಕುಚುಪುಡಿ, ಬೆಲ್ಲಿ ಡ್ಯಾನ್ಸ್ ಹೀಗೆ ಅನೇಕ ನೃತ್ಯ ಪ್ರಕಾರ ಕರಗತ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ವೈಷ್ಣವಿ ಗೌಡ ಹಾಡನ್ನು ಕೂಡ ಹಾಡುತ್ತಾರೆ. ಬಿಗ್ ಬಾಸ್ ಮನೆಯಲ್ಲಿದ್ದಾಗಲೂ ಹಾಡು ಹೇಳುವುದು, ಕಥೆ ಹೇಳಿ ನಗಿಸುವುದನ್ನೂ ಮಾಡುತ್ತಿದ್ದರು. ಪೋಲಿ ಮಾತುಗಳನ್ನಾಡುತ್ತಾ, ವೈಷ್ಣವಿ ಹೀಗೂ ಮಾತನಾಡುತ್ತಾರಾ ಎಂದು ಪ್ರೇಕ್ಷಕರು ಅಚ್ಚರಿಗೊಂಡಿದ್ದರು. ಇನ್ನು ವೈಶೂ ಸದಾ ಅಭಿಮಾನಿಗಳನ್ನು ರಂಜಿಸಲು ಸಾಮಾಜಿಕ ಜಾಲತಾಣದಲ್ಲಿ ಏನಾದರೂ ಒಂದು ಮಾಡುತ್ತಲೇ ಇರುತ್ತಾರೆ. ಇವರು ಬಳಸುವ ಮೇಕಪ್, ಸ್ಟೈಲ್, ಕಾಸ್ಟ್ಯೂಮ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ದೇವರನ್ನು ನಂಬುವ ವೈಷ್ಣವಿ ಅವರು ಆಗಾಗ ವ್ರತ ಹಾಗೂ ಉಪವಾಸ ಮಾಡುತ್ತಾರೆ.

ಸಿನಿಮಾ, ಕಿರುತೆರೆ ಎರಡರಲ್ಲೂ ನಟನೆ..!
ದೇವಿ ಧಾರಾವಾಹಿ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ ವೈಷ್ಣವಿ ಗೌಡ ಅವರು ಪುನರ್ ವಿವಾಹ ಹಾಗೂ ಅಗ್ನಿ ಸಾಕ್ಷಿ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಇನ್ನು ರಿಯಾಲಿಟಿ ಶೋಗಳಾದ ಕುಣಿಯೋಣ ಬಾರಾ ಹಾಗೂ ಬಿಗ್ ಬಾಸ್ ಸೀಸನ್ 8ಲ್ಲಿ ಭಾಗವಹಿಸಿದ್ದಾರೆ. ಇತ್ತೀಚೆಗೆ ಹಲವು ಜಾಹೀರಾತುಗಳಿಗೆ ಬಣ್ಣ ಕೂಡ ಹಚ್ಚಿದ್ದಾರೆ. ಮೇಕಪ್, ಸೀರೆ, ಆಭರಣಗಳ ಬಗ್ಗೆ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಗಿರಗಿಟ್ಲೆ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರುವ ವೈಷ್ಣವಿ ಭಲೇ ಹುಚ್ಚ, ಬಹುಕೃತ ವೇಷಂ ಎಂಬ ಸಿನಿಮಾಗಳಲ್ಲೂ ನಟಿಸಿ ಸೈ ಅನಿಸಿಕೊಂಡಿದ್ದಾರೆ.
ಸನ್ನಿಧಿಗೆ ಮದುವೆ ಬಗ್ಗೆ ಇದೆ ದೊಡ್ಡ ಕನಸು
ಬಿಗ್ ಬಾಸ್ ಸೀಸನ್ 8ರಲ್ಲಿ ಭಾಗವಹಿಸದ ನಂತರ ವೈಷ್ಣವಿ ಗೌಡ ಅವರು ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಒಂದನ್ನು ತೆರೆದು, ತಮ್ಮ ಡೈಲಿ ರೋಟಿನ್, ವರ್ಕೌಟ್, ಯೋಗ, ಅಡುಗೆ, ಶಾಪಿಂಗ್ ಸೇರಿದಂತೆ ಹಲವು ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಇನ್ನು ಕಳೆದ ವರ್ಷ ಮದುವೆ ವಿಚಾರವಾಗಿ ವೈಷ್ಣವಿ ಗೌಡ ಅವರು ಸುದ್ದಿಯಲ್ಲಿದ್ದರು. ವೈಷ್ಣವಿ ಗೌಡ ಅವರ ಮದುವೆಯ ಬಗ್ಗೆ ಹಲವರು ಬಹಳಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು. ಇದೇ ವೇಳೆಗೆ ವೈಷ್ಣವಿ ಅವರ ಹಾರ ಬದಲಾಯಿಸಿಕೊಂಡು ಸಿಹಿ ತಿನ್ನುತ್ತಿದ್ದ ಫೋಟೋ ವೈರಲ್ ಆಗಿತ್ತು ಈ ಬಗ್ಗೆ ಮಾತನಾಡಿದ ವೈಷ್ಣವಿ ಅವರು ಮದುವೆ ಮಾಡಿಕೊಳ್ಳುವುದು ನನ್ನ ದೊಡ್ಡ ಕನಸು. ಅದನ್ನು ನಾನು ನನಸು ಮಾಡಿಕೊಳ್ಳುತ್ತೇನೆ. ಎಲ್ಲಾವುದಕ್ಕೂ ಸಮಯ ಬರಬೇಕು ಎಂದಿದ್ದರು.

300 ಪ್ರಪೋಸಲ್ ಗಳು ರಿಜೆಕ್ಟ್
ಯೂಟ್ಯೂಬ್ ನಲ್ಲಿ ತಮ್ಮ ಮದುವೆ ಬಗ್ಗೆ ಹಲವು ಆಸೆಗಳನ್ನು ಹೇಳಿಕೊಂಡಿದ್ದರು. ಇನ್ನು ಬಿಗ್ ಬಾಸ್ ವೇದಿಕೆಯಲ್ಲೂ ಕಿಚ್ಚ ಸುದೀಪ್ ಅವರ ಬಳಿ ತಮಗೆ ಬಂದ ಮದುವೆಯ ಪ್ರಸ್ತಾವನೆ ವಿಚಾರದ ಬಗ್ಗೆ ಮಾತನಾಡಿದ್ದರು. ವಿಶೇಷ ಅಂದರೆ ಅಂದು ವೈಷ್ಣವಿ ಮಾತನಾಡಿದ ವಿಡಿಯೋ ತುಣುಕು ಈಗ ವೈರಲ್ ಆಗಿದೆ. ಹೌದು, ಅಸಲಿಗೆ ಸುದೀಪ್ ಅವರು ನಿಮಗೆ ಎಷ್ಟು ಪ್ರಪೋಸಲ್ ಬಂದಿದೆ ಎಂದು ಕೇಳಿದ್ದರು. ಅದಕ್ಕೆ ವೈಷ್ಣವಿ 200-300 ಎಂದು ಹೇಳಿದ್ದರು. ಅದರಲ್ಲಿ ಯಾವುದನ್ನು ನೋಡಬೇಕು ಅನಿಸಲಿಲ್ಲ. ನನ್ನ ಮನಸ್ಸಿಗೆ ಕನೆಕ್ಟ್ ಆಗಿಲ್ಲ ಎಂದು ಹೇಳಿದ್ದರು. ಈ ವೀಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.


Click it and Unblock the Notifications











