ಒಬ್ಬರಲ್ಲ, ಇಬ್ಬರು ಮಹಿಳೆಯರ ಜೊತೆ ನನ್ನ ಗಂಡನಿಗೆ ಅಕ್ರಮ ಸಂಬಂಧ ಇದೆ ; ಬಿಗ್ ಬಾಸ್ ಸ್ಫರ್ಧಿ ಕಣ್ಣೀರು
ಪ್ರೀತಿ ಅಂದರೆ ಹಾಗೇ ಜೀವನವನ್ನೇ ಬದಲಾಯಿಸುವ ಶಕ್ತಿ ಹೊಂದಿರುವ ಮಾಯಾಜಾಲ. ಮಧುರ ಪ್ರೀತಿಗೆ ತಂದೆ ತಾಯಿಯೂ ಬೇಡ, ಹಣ ಒಡವೆ ಕೂಡ ಬೇಡ. ಸಂಗಾತಿಯ ಮಾತಿನ ಕಚಗುಳಿಯ ನಡುವೆ ಸ್ಪರ್ಶದ ಸಿಂಚನ ಸಾಕು ಅನ್ಸುತ್ತೆ. ಬಿಟ್ಟಿರಲಾರದ ತವಕ, ಏನೂ ಬೇಡವೆನ್ನುವ ಭಾವ, ಹಸಿವು ಇಲ್ಲದ ಅದೆಷ್ಟೋ ಗಂಟೆಗಳು ಅವಳ ನೆನಪಲ್ಲೇ ಕಳೆದು ಹೋಗುತ್ತೆ.
ಆದರೆ ಈಗೀಗ ಪ್ರೀತಿಯ ಅರ್ಥ ಬದಲಾಗಿದೆ. ಅರ್ಥೈಸಿಕೊಳ್ಳುವ ರೀತಿ ಕೂಡ ಬದಲಾಗಿದೆ. ಎಂಥದ್ದೋ ತಿರುವುಗಳಲ್ಲಿ ಪ್ರೀತಿ ಅಂತ್ಯವಾದ ನಂತರ ಇಂಥದ್ದೊಂದು ಸಂಬಂಧವಿತ್ತು ಎನ್ನುವ ನೆನಪನ್ನು ಕೂಡ ಉಳಿಸದೆ ಹೋಗುವಷ್ಟು ಸಂಬಂಧಗಳು ವ್ಯವಹಾರಿಕವಾಗಿವೆ. ಇಷ್ಟೇ ಅಲ್ಲ ದಾಂಪತ್ಯ ಮುರಿದು ಬಿದ್ದ ನಂತರ ಕೆಸರೆರಚಾಟಕ್ಕಿಳಿಯುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಇದಕ್ಕೆ ಮತ್ತೊಂದು ಉದಾಹರಣೆ ಚಂದ್ರಿಕಾ ದೀಕ್ಷಿತ್ ಮತ್ತು ಯುಗಮ್ ಗೇರಾ ಅವರ ವೈವಾಹಿಕ ಜೀವನ ಮತ್ತು ಅದರ ಸುತ್ತ ಮುತ್ತದ ವಿದ್ಯಮಾನ.

ಹೌದು, ಚಂದ್ರಿಕಾ ದೀಕ್ಷಿತ್ ..ದೆಹಲಿಯ ವಡಾ ಪಾವ್ ಗರ್ಲ್ ಎಂದೇ ಜನಜನಿತರಾದವರು. ಹೆಚ್ಚೇನು ಇಲ್ಲ. ಎರಡು-ಮೂರು ವರ್ಷದ ಹಿಂದೆ ಬದುಕಿನ ಬಂಡಿಯನ್ನ ಎಳೆಯಲು ಇವರು ಹರಸಾಹಸ ಮಾಡುತ್ತಿದ್ದರು. ಪರಿಸ್ಥಿತಿಯ ಹೊಡೆತಕ್ಕೆ ಸಿಲುಕಿ, ಕುಟುಂಬ ನಿರ್ವಹಣೆಗೆ ದೆಹಲಿ ಬೀದಿ ಬದಿಯಲ್ಲಿ ಹಲವು ವರ್ಷಗಳಿಂದ ವಡಾ-ಪಾವ್ ಮಾರುತ್ತಿದ್ದರು.
ಹೀಗೆ ಅದೊಂದು ದಿನ ಚಂದ್ರಿಕಾ ವಡಾ-ಪಾವ ಮಾರುತ್ತಿದ್ದಾಗ ವ್ಯಕ್ತಿಯೊಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇಲ್ಲಿಂದ ಚಂದ್ರಿಕಾ ದೀಕ್ಷಿತ್ ಬದುಕು ಸಂಪೂರ್ಣವಾಗಿ ಬದಲಾಗಿ ಹೋಯ್ತು.ಚಂದ್ರಿಕಾ ಅವರ ತಳ್ಳುವ ಗಾಡಿಯ ಮುಂದೆ ಕಣ್ಣಾಯಿಸಿದ ಕಡೆಯೆಲ್ಲ ಜನ ಕಂಡು ಬಂದರು. ದಿನಕ್ಕೊಬ್ಬರು ವಡಾ ಪಾವ್ ಮತ್ತು ಚಂದ್ರಿಕಾ ಅವರ ವಿಡಿಯೋಗಳನ್ನ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳತೊಡಗಿದರು.
ನೋಡ .. ನೋಡುತ್ತಾ.. ಸಾಮಾಜಿಕ ಜಾಲತಾಣದಲ್ಲಿ ಇವರ ಹಿಂಬಾಲಕರ ಸಂಖ್ಯೆ ಹೆಚ್ಚಾಯಿತು. 70 ಲಕ್ಷ ಬೆಲೆ ಬಾಳುವ ಪೋರ್ಡ್ ಮಸ್ಟಾಂಗ್ ಕಾರು ಕೂಡ ಚಂದ್ರಿಕಾ ಅವರನ್ನ ಅರಸಿಕೊಂಡು ಬಂತು. ಇಷ್ಟೇ ಅಲ್ಲ ಬೀದಿಯಲ್ಲಿದ್ದ ಚಂದ್ರಿಕಾ ಆ ನಂತರ ''ಬಿಗ್ ಬಾಸ್'' ಮನೆಗೆ ಕೂಡ ಹೋದರು. 2024ರ ''ಬಿಗ್ ಬಾಸ್'' ಓಟಿಟಿ ಸೀಸನ್ 03ರಲ್ಲಿ ಭಾಗಿಯಾದರು. ಆಲ್ಬಂ ಹಾಡುಗಳಿಗೆ ಹೆಜ್ಜೆಯನ್ನು ಕೂಡ ಹಾಕಿದರು.
ಆದರೆ.. ಅದ್ಯಾವಾಗ ಬೆಳಗಾಗುವುದರೊಳಗೆ ಚಂದ್ರಿಕಾ ಅವರ ವಡಾ ಪಾವ್ ಪ್ರಚಾರ ಗಗನಕ್ಕೆ ತಲುಪಿತ್ತೋ, ಅಂದಿನಿಂದಲೇ .. ಜನಪ್ರಿಯತೆ ಎಂಬ ಭ್ರಮೆಯಲ್ಲಿ ಚಂದ್ರಿಕಾ ಬದುಕಲು ಆರಂಭ ಮಾಡಿದ್ದರು. ಸದ್ಯ ಚಂದ್ರಿಕಾ ದೀಕ್ಷಿತ್ ಅವರ ದಾಂಪತ್ಯ ಕಲಹ ಇದೀಗ ಬೀದಿಗೆ ಬಿದ್ದಿದೆ.
ಇಂಥಾ ಚಂದ್ರಿಕಾ ದೀಕ್ಷಿತ್ ಕಳೆದ ಕೆಲ ದಿನಗಳಿಂದ ವ್ಯೂವ್ಸ್ ಮತ್ತು ಲೈಕ್ಸ್‌ಗೋಸ್ಕರ ತಮ್ಮ ವ್ಯೆಯಕ್ತಿಕ ಬದುಕನ್ನು ಸಾರ್ವಜನಿಕವಾಗಿ ಪ್ರದರ್ಶನಕಿಟ್ಟಿದ್ದಾರೆ. ಹಲವರ ಪಾಲಿಗೆ ಮನರಂಜನೆಯ ಸರಕಾಗಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೇ ಪತಿ ಯುಗಮ್ ಗೆರಾ ಅವರ ವಿರುದ್ಧ ಅಕ್ರಮ ಸಂಬಂಧದ ಆರೋಪ ಮಾಡಿದ್ದ, ಚಂದ್ರಿಕಾ ಕೆಲವು ಮೆಸೇಜ್‌ಗಳ ಸ್ಕ್ರೀನ್ ಶಾಟ್‌ನ್ನು ಕೂಡ ಸಾಕ್ಷಿಯನ್ನಾಗಿ ತೋರಿಸಿದ್ದರು. ಎರಡು ತಿಂಗಳಿಂದ ನಾನು ನರಕ ಅನುಭವಿಸುತ್ತಿದ್ದೇನೆ ಎಂದು ಹೇಳಿ ಬಿಕ್ಕಿದ್ದರು. ಆ ನಂತರ @kon_mysteryman ಎಂಬ ಹ್ಯಾಂಡಲ್ ಹೊಂದಿರುವ ವ್ಯಕ್ತಿಯ ಜೊತೆ ಪ್ರೇಮ ಸಲ್ಲಾಪ ತಾವೇ ಖುದ್ದು ನಡೆಸಿದ್ದರು. ಐ ಲವ್ ಯೂ ಎಂದು ಹೇಳಿದ್ದರು. ವಿಡಿಯೋವನ್ನು ಹಂಚಿಕೊಂಡಿದ್ದರು.

ಆ ನಂತರ ಸಂದರ್ಶನವೊಂದರಲ್ಲಿ ನನ್ನ ಮಗನ ಭವಿಷ್ಯಕ್ಕಾಗಿ ನಾನು ಯಾರ ಜೊತೆಯಾದರೂ ಮಲಗಲು ಸಿದ್ದ ಎಂದು ಘಂಟಾಘೋಷವಾಗಿ ಘೋಷಿಸಿದರು. ಈ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿತ್ತು. ವ್ಯಾಪಕವಾಗಿ ವೈರಲ್ ಆಗಿತ್ತು.
ಹಲವರು ಚಂದ್ರಿಕಾ ಅವರ ಈ ನುಡಿಯನ್ನು ಕೇಳಿ ಬೆಚ್ಚಿ ಬಿದ್ದಿದ್ದರು. ಜೀವನೋಪಾಯಕ್ಕೆ ಹಲವಾರು ಕಾನೂನುಬದ್ಧ ಮತ್ತು ಗೌರವಯುತ ಮಾರ್ಗಗಳಿವೆ ಎನ್ನುವುದನ್ನು ಮರೆತು ಇಂತಹ ಅಸಹ್ಯಕರವಾದ ಮಾತುಗಳನ್ನಾಡಲು ನಾಚಿಕೆಯಾಗಲ್ವಾ..? ಎಂದು ಕಿಡಿ ಕಾರಿದ್ದರು.
ತಮ್ಮ ವಿರುದ್ಧ ಭುಗಿಲೆದ್ದ ಈ ಆಕ್ರೋಶವನ್ನು ಕಂಡು ಚಂದ್ರಿಕಾ ಮತ್ತೆ ಮಾತನಾಡಿದರು. ತಮ್ಮ ಬಗ್ಗೆ ಮಾತನಾಡುತ್ತಿರುವವರ ವಿರುದ್ಧ ಆಕ್ರೋಶ ಹೊರ ಹಾಕಿದರು. ನಿಮ್ಮ ವ್ಯೂವ್ಸ್ ಹುಚ್ಚಿಗೆ ನನ್ನ ಚಾರಿತ್ರ್ಯ ಹರಣ ಮಾಡುತ್ತಿದ್ದೀರಾ ಎಂದು ಪ್ರಶ್ನೆ ಮಾಡಿದರು. ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.
ಹೀಗೆ ಈ ವರ್ಷದ ಆರಂಭದಿಂದಲೂ ಸದ್ದು ಮಾಡುತ್ತಾ, ತಮ್ಮ ವೈಯಕ್ತಿಕ ಜೀವನದಿಂದ ಸುದ್ದಿಯ ಕೇಂದ್ರಬಿಂದುವಾಗುತ್ತಾ ಬಂದ ಚಂದ್ರಿಕಾ ಈಗ ತಮ್ಮ ಗಂಡ ಯುಗಮ್ ಗೇರಾ ಅವರಿಗೆ ಒಬ್ಬರ ಜೊತೆ ಬದಲಿಗೆ ಇಬ್ಬರು ಚೆಲುವೆಯರ ಜೊತೆ ಅಕ್ರಮ ಸಂಬಂಧ ಇದೆ ಎಂದು ಹೇಳಿದ್ಧಾರೆ. ಗಂಡನ ಕೈಯನ್ನು ನಾನು ಬಿಡಲು ಇದೇ ಪ್ರಮುಖ ಕಾರಣವೆಂದು ಹೇಳಿ ಬಿಕ್ಕಿದ್ಧಾರೆ.
''ಸಿದ್ಧಾರ್ಥ್ ಕಣ್ಣನ್'' ಅವರಿಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಚಂದ್ರಿಕಾ ದೀಕ್ಷಿತ್, ನನ್ನ ಗಂಡ ಆ ಮಾತನ್ನು ಕೋಪದಲ್ಲಿ ಹೇಳಿದ್ದಾ..? ಬೇಕಂತಲೇ ಹೇಳಿದ್ದಾ..? ಗೊತ್ತಿಲ್ಲ. ಆದರೆ ನನಗೆ ಇಬ್ಬರು ಮಹಿಳೆಯರ ಜೊತೆ ಅನೈತಿಕ ಸಂಬಂಧ ಇದೆ ಎಂದು ನನ್ನೆದುರು ಹೇಳಿದ ಎಂದು ಹೇಳಿದ್ಧಾರೆ. ಆ ಇಬ್ಬರು ಮಹಿಳೆಯರು ಯಾರು..? ಅವರ ಹೆಸರೇನು..? ಎಂದು ತಿಳಿದುಕೊಳ್ಳುವ ಆಸಕ್ತಿ ಅಥವಾ ಕುತೂಹಲ ನನಗೆ ಇಲ್ಲ ಎಂದು ಹೇಳಿರುವ ಚಂದ್ರಿಕಾ ದೀಕ್ಷಿತ್ ನನ್ನನ್ಯಾಕೆ ನೀನು ಬಿಡ್ತಿಲ್ಲ, ನನಗೆ ನಿನ್ನ ಜೊತೆ ಇರಲು ಮನಸ್ಸಿಲ್ಲ ಎಂದು ಅವನು ನನಗೆ ಮುಖಕ್ಕೆ ಹೊಡೆದಂತೆ ಹೇಳಿದ್ದ ಎಂದು ಹೇಳಿದ್ದಾರೆ. ಈ ಕಾರಣಕ್ಕೆ ನಾನು ದೂರ ಆದೆ ಎಂದಿದ್ಧಾರೆ.
ಮುಂದುವರೆದು ನನ್ನ ಗಂಡನ ಬದುಕಿನಲ್ಲಿ ನಾನೇ ಮೊದಲ ಹುಡುಗಿಯಾಗಿದ್ದೆ, ಅವನ ಪ್ರಪಂಚ ನಾನೇ ಆಗಿದ್ದೆ, ನನ್ನ ಜೊತೆ ಎಲ್ಲ ವಿಷಯವನ್ನು ಹಂಚಿಕೊಳ್ಳುತ್ತಿದ್ದ ಎಂದು ಹೇಳಿರುವ ಚಂದ್ರಿಕಾ ಈಗ ಯಾವುದು ಮೊದಲಿನಂತೆ ಇಲ್ಲ. ಪರಿಸ್ಥಿತಿ ಮತ್ತು ಮನಸ್ಥಿತಿ ಎರಡು ಬದಲಾಗಿವೆ ಎಂದು ಹೇಳಿದ್ದಾರೆ. ಬೇರೆ ಮಹಿಳೆಯರ ಎದುರು ನನ್ನ ಕುರಿತು ಕೀಳಾಗಿ ಮಾತನಾಡುತ್ತಾನೆ ಎಂದು ಭಾವುಕರಾಗಿದ್ದಾರೆ.


Click it and Unblock the Notifications











