ಮೊದಲ ಡೇಟ್ ನಲ್ಲಿಯೇ ಮುತ್ತು ಕೊಟ್ಟಿದ್ದರಂತೆ ಐಂದ್ರಿತಾ ರೇ.!
ಬಾಯ್ ಫ್ರೆಂಡ್, ಡೇಟಿಂಗ್, ಲವ್ ಸ್ಟೋರಿ... ಹೀಗೆ ತಮ್ಮ ವೈಯುಕ್ತಿಕ ಜೀವನದ ಬಗ್ಗೆ ನಟಿಯರು ಅದರಲ್ಲಿಯೂ ಕನ್ನಡ ನಟಿಯರು ಅಷ್ಟು ಸುಲಭವಾಗಿ ಬಾಯಿ ಬಿಡುವುದಿಲ್ಲ. ಆದರೆ, ನಟಿ ಐಂದ್ರಿತಾ ರೇ ಎಲ್ಲರಂತಲ್ಲ. ಅನಿಸಿದ್ದನ್ನ ನೇರವಾಗಿ ಮಾತನಾಡುವ ಐಂದ್ರಿತಾ ರೇ ನಿಜಕ್ಕೂ 'ಖುಲ್ಲಾಂಖುಲ್ಲ'.!
ತಮ್ಮ ಮೊದಲ ಡೇಟಿಂಗ್ ಬಗ್ಗೆ ಮುಚ್ಚು ಮರೆ ಇಲ್ಲದೇ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ನಟಿ ಐಂದ್ರಿತಾ ರೇ ಮಾತನಾಡಿದ್ದಾರೆ.

''ಮೊದಲ ಡೇಟ್ ನಲ್ಲಿಯೇ ತಾವು ಕಿಸ್ ಮಾಡಿದ್ರಾ.?'' ಅಂತ ನಿರೂಪಕ ಅಕುಲ್ ಬಾಲಾಜಿ ಕೇಳಿದ ಪ್ರಶ್ನೆಗೆ ನಟಿ ಐಂದ್ರಿತಾ ರೇ ''ಹೌದು'' ಎಂದು ಒಪ್ಪಿಕೊಂಡರು.
''ಹಾಗಾದ್ರೆ, ಆ ಹುಡುಗ ಯಾರು.?'' ಎಂದು ಅಕುಲ್ ಕೇಳಿದಾಗ, ''ಇಬ್ರಾಹಂ ರೋಷನ್'' ಎಂದರು ಐಂದ್ರಿತಾ ರೇ.
ಅಂದ್ಹಾಗೆ, ಇದೇ ಕಾರ್ಯಕ್ರಮದಲ್ಲಿ ''ದಿಗಂತ್ ನನ್ನ ಬಾಯ್ ಫ್ರೆಂಡ್'' ಎಂದು ನಟಿ ಐಂದ್ರಿತಾ ರೇ ಒಪ್ಪಿಕೊಂಡಿದ್ದಾರೆ.
English summary
''I kissed in my first Date'' says Kannada Actress Aindrita Ray in Colors Super Channel's popular show 'Super Talk Time'
aindrita ray akul balaji colors channel tv reality show ಐಂದ್ರಿತಾ ರೇ ಅಕುಲ್ ಬಾಲಾಜಿ ಕಲರ್ಸ್ ವಾಹಿನಿ ಟಿವಿ ರಿಯಾಲಿಟಿ ಶೋ


Click it and Unblock the Notifications