ಬಿಗ್ ಬಾಸ್‌ನಲ್ಲಿ ಗೆದ್ದ 50 ಲಕ್ಷ ಹಣ ಏನಾಯ್ತು ? ಶಾಕಿಂಗ್ ಉತ್ತರ ಕೊಟ್ಟ ಹನುಮಂತ...!
ಹನುಮಂತ ಅಂದರೆ ಆಕರ್ಷಣೆ. ಚಿಲ್ಲೂರ ಬಡ್ನಿ ತಾಂಡಾದ ಈ ವ್ಯಕ್ತಿಯ ಬಗ್ಗೆ ಅನೇಕರಿಗೆ ಆಸಕ್ತಿ. ಕುರಿ ಕಾಯುತ್ತಿದ್ದ ಹುಡುಗನೊಬ್ಬ ಇಷ್ಟೊಂದು ಹೆಸರು ಮಾಡುತ್ತಿದ್ದಾನಲ್ಲ ? ಎನ್ನುವ ಕುತೂಹಲ. ಇದೆಲ್ಲದಕ್ಕೆ ಕೈಗನ್ನಡಿಯೇ ಬಿಗ್ ಬಾಸ್ ಕಾರ್ಯಕ್ರಮ.
ಹೌದು ಆರಂಭದಲ್ಲಿ ಕಳೆಗುಂದಿದ್ದ ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮದ ಕಳೆ ಹೆಚ್ಚಿಸಿದ ಹನುಮಂತ, ದಾಖಲೆ ಮತಗಳನ್ನು ಪಡೆಯುವ ಮೂಲಕ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದ್ದಾರೆ. 50 ಲಕ್ಷ ಹಣ ಗೆದ್ದು ನಕ್ಕಿದ್ದಾರೆ. ಇನ್ನು ಬಿಗ್ ಬಾಸ್ ಮನೆಯಲ್ಲಿ ಹನುಮಂತ ಐವತ್ತು ಲಕ್ಷ ಗೆದ್ದಿದ್ದೇ ತಡ ಎಲ್ಲರಲ್ಲಿಯೂ ಹನುಮಂತ ಈ ಹಣವನ್ನು ಏನು ಮಾಡುತ್ತಾನೆ ಎನ್ನುವ ಪ್ರಶ್ನೆ ಕಾಡುತ್ತಿದೆ. ಇದಕ್ಕೆ ಪುರಾವೆ ಎನ್ನುವಂತೆ ಹನುಮಂತ ಹೋದಲ್ಲಿ ಬಂದಲ್ಲಿ ಅನೇಕರು ಈ ಪ್ರಶ್ನೆಯನ್ನೇ ಕೇಳುತ್ತಿದ್ದಾರೆ. ಹೀಗೆ ಕೇಳಲಾದ ಪ್ರಶ್ನೆಗೆ ಹನುಮಂತ ಈಗ ಉತ್ತರವನ್ನು ನೀಡಿದ್ದಾರೆ.

ಹೌದು. ಅಸಲಿಗೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಚಿಕ್ಕಣಜಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮಕ್ಕೆ ಹನುಮಂತ ಅತಿಥಿಯಾಗಿ ಆಗಮಿಸಿದ್ದರು. ಇನ್ನು ಎಲ್ಲರಿಗೆ ಗೊತ್ತು ಇರುವಂತೆ ಬಿಗ್ ಬಾಸ್ ಚಿಲ್ಲೂರು ಬಡ್ನಿ ಚೆಲುವನ ಅಭಿಮಾನಿ ಬಳಗ ಹೆಚ್ಚಾಗಿದೆ. ಈ ಕಾರಣಕ್ಕೆ ಹನುಮಂತನ ದರ್ಶನಕ್ಕೆ ಅನೇಕರು ನೆರೆದಿದ್ದರು. ಈ ಸಮಯದಲ್ಲಿ ತಮ್ಮದೇ ಶೈಲಿಯಲ್ಲಿ ಕಪ್ ಗೆದ್ದೇನಬೇ ಅವ್ವ ಎಂದು ಡೈಲಾಗ್ ಹೊಡೆದ ಹನುಮಂತ ಐದು ಕೋಟಿ ಮತ ಹಾಕಿ ನನ್ನ ಗೆಲ್ಲಿಸಿದ ಎಲ್ಲರಿಗೆ ಧನ್ಯವಾದ ಹೇಳಿದ್ದಾರೆ.
ಇನ್ನು ನನಗೆ 5 ಕೋಟಿ ಮತಗಳು ಸಿಕ್ಕಿವೆ ಎನ್ನುವ ವಿಚಾರನೇ ನನಗೆ ಗೊತ್ತಿರಲಿಲ್ಲ, ಸುದೀಪ್ ಸರ್ ನನ್ನ ಕೈ ಎತ್ತಿದಾಗಲೇ ನನಗೆ ಈ ವಿಚಾರ ಗೊತ್ತಾಗಿದ್ದು ಎಂದು ಹನುಮಂತ ಹೇಳಿದ್ದಾರೆ. ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದ ಸದಾ ನನ್ನ ಮೇಲಿರಲಿ ಹೀಗೆ ನನ್ನ ಪ್ರೋತ್ಸಾಹಿಸಿ ಬೆಂಬಲಿಸಿ ಎಂದು ಮನವಿಯನ್ನು ಮಾಡಿಕೊಂಡಿದ್ದಾರೆ. ಇದೇ ಸಮಯದಲ್ಲಿ ಅಲ್ಲಿಯೇ ನೆರೆದ ಅಭಿಮಾನಿಯೊಬ್ಬ ಗೆದ್ದಿರೋ ಹಣ ಏನ್ಮಾಡಿದ್ರೀ ? ಎಂದು ಹನುಮಂತನಿಗೆ ಪ್ರಶ್ನೆಯನ್ನು ಕೇಳಿದ್ದು ಆಗ ಹನುಮಂತ ಬಿಗ್ ಬಾಸ್‌ನಿಂದ 50 ಲಕ್ಷ ರೂ. ಇನ್ನೂ ಬಂದಿಲ್ಲ. ಬರೋಕೆ ಸ್ವಲ್ಪ ತಡವಾಗುತ್ತದೆ. ಬಂದ್ಮೇಲೆ ಹೇಳ್ತೀನಿ ಅಣ್ಣ ಆಗ ಮನೆ ಕಡೆ ಬರಬಹುದು ಎಂದು ತಮಾಷೆಯಾಗಿ ಉತ್ತರಿಸಿದ್ದಾರೆ.
ಹನುಮಂತ ಚಿಲ್ಲೂರು ಬಡ್ನಿ ಚೆಲುವ. ಸವಣೂರಿನಿಂದ ಆರು ಕೀಲೋ ಮೀಟರ್ ದೂರದಲ್ಲಿರುವ ಚಿಲ್ಲೂರು ಬಡ್ನಿ ಗ್ರಾಮದಲ್ಲಿ ಹನುಮಂತನ ಕುಟುಂಬ ನೆಲೆಸಿದೆ. ಹನುಮಂತ ಅವರ ತಂದೆ ಮೇಘಪ್ಪ, ತಾಯಿ ಶೀಲವ್ವ. ಕುರಿ ಕಾಯುತ್ತಾ ತಮ್ಮ ಮಗನನ್ನು ಸಾಕಿದ್ದಾರೆ ಇವರು ಇಬ್ಬರು. ಮನೆಯಲ್ಲಿ ಕೇವಲ ಹನುಮಂತ ಮಾತ್ರ ಅಲ್ಲ ಅಣ್ಣ ತಂಗಿ ಹಾಗೂ ಮೂವರು ಅಕ್ಕಂದಿರಿದ್ದಾರೆ. ಇನ್ನು ಹನುಮಂತ ಓದಿದ್ದು ಕೇವಲ ಐದನೇ ತರಗತಿಯವರೆಗೆ ಮಾತ್ರ. ಇಂಥಾ ಹನುಮಂತ ಬಿಗ್ ಬಾಸ್‌ನಿಂದ ಬರುವ ಹಣದಲ್ಲಿ ಮನೆ ಕಟ್ಟಬೇಕು, ಮದುವೆಯಾಗಬೇಕು ಎಂಬ ಕನಸನ್ನು ಕಂಡಿದ್ದಾರೆ.
ಅಂದ್ಹಾಗೇ ಹನುಮಂತ ಕಾರ್ಯಕ್ರಮದಲ್ಲಿ 50 ಲಕ್ಷ ಹಣ ಗೆದ್ದಿದ್ದಾರೆ. ಆದರೆ ಈ ಎಲ್ಲ ಹಣ ಹನುಮಂತ ಖಜಾನೆ ಸೇರಲ್ಲ. ಅದರಲ್ಲಿ ಶೇಕಡಾ 30 % ತೆರಿಗೆ ಕಟ್ ಆಗುತ್ತೆ. ಹೀಗಾಗಿ ಹನುಮಂತ ಅವರ ಕೈಗೆ ಅಂದಾಜು 32 ರಿಂದ 34 ಲಕ್ಷ ಸಿಗಲಿದೆ. ಇನ್ನು ಈ ಹಣ ಈಗಲೇ ಸಿಗುವುದಿಲ್ಲ. ಕೊನೆ ಪಕ್ಷ ಎರಡು ತಿಂಗಳಾದರೂ ಬೇಕಾಗಬಹುದು.


Click it and Unblock the Notifications











