Boys vs Girls ; ನಿಮ್ಮನ್ನೆಲ್ಲ ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ.ಪ್ರತಿ ಕ್ಷಣ ಮರೆಯಲ್ಲ ಎಂದ ಐಶ್ವರ್ಯಾ ವಿನಯ್
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಹೊಸದೊಂದು ರಿಯಾಲಿಟಿ ಶೋ ಮುಗಿದಿದೆ. ಹೌದು, "ಬಾಯ್ಸ್ ವರ್ಸಸ್ ಗರ್ಲ್ಸ್" ರಿಯಾಲಿಟಿ ಶೋ ಗ್ರಾಂಡ್ ಫಿನಾಲೆ ಕಳೆದ ಭಾನುವಾರವಷ್ಟೇ ನಡೆಯಿತು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಆರಂಭವಾದ ಹೊಚ್ಚ ಹೊಸ ಕಾನ್ಸೆಪ್ಟ್ ಇದಾಗಿತ್ತು. ಈ ರಿಯಾಲಿಟಿ ಶೋ ನ ಟೈಟಲ್ ಹೇಳುವಂತೆ ಇದು ಬಾಯ್ಸ್ ವರ್ಸಸ್ ಗರ್ಲ್ಸ್ ರಿಯಾಲಿಟಿ ಶೋ ಆಗಿತ್ತು.
ಕಲರ್ಸ್ ಕನ್ನಡ ವಾಹಿನಿ ಕಳೆದ ಒಂದು ದಶಕದಿಂದಲೂ ಬಿಗ್ ಬಾಸ್ ಎಂಬ ಬಹುದೊಡ್ಡ ರಿಯಾಲಿಟಿ ಶೋ ನಡೆಸಿಕೊಂಡು ಬಂದಿದೆ. ಈ ವರ್ಷ ಬಾಯ್ಸ್ ವರ್ಸಸ್ ಗರ್ಲ್ಸ್ ಎನ್ನುವ ಹೊಸ ರಿಯಾಲಿಟಿ ಶೋಗೆ ಮುನ್ನುಡಿ ಹಾಡಿದೆ. ಬಿಗ್ ಬಾಸ್ ಕೆಲ ಸೀಸನ್ ಗಳಲ್ಲಿ ಸ್ಪರ್ಧಿಸಿದ್ದ ಹಲವು ಸ್ಪರ್ಧಿಗಳು ಬಾಯ್ಸ್ ವರ್ಸಸ್ ಗರ್ಲ್ಸ್ ರಿಯಾಲಿಟಿ ಶೋನಲ್ಲಿ ಇದ್ದರು.

ಬಹಳ ವಿಭಿನ್ನವಾಗಿದ್ದ ಈ ಕಾರ್ಯಕ್ರಮ ಸುಮಾರು ಎರಡು ತಿಂಗಳ ಕಾಲ ನಡೆಯಿತು. ಇದರಲ್ಲಿ ಪ್ರೇಕ್ಷಕರು ಪ್ರತಿ ವಾರ ವೋಟ್ ಮಾಡುವ ಅವಕಾಶವೂ ಇತ್ತು. ನಟಿ, ನಿರೂಪಕಿ ಅನುಪಮಾ ಗೌಡ ಕಾರ್ಯಕ್ರಮದ ನಿರೂಪಕಿಯಾಗಿದ್ದರು. ಬಾಯ್ಸ್ ವರ್ಸಸ್ ಗರ್ಲ್ಸ್ ಇದು ಜಿಗರ್ ಇರುವ ಹುಡುಗ ಹುಡುಗಿಯರ ಜಿದ್ದಾಜಿದ್ದಿ ಎಂಬ ಶೀರ್ಷಿಕೆ ಅಡಿಯಲ್ಲಿ ಬಹಳಷ್ಟು ಪ್ರೊಮೋ ಹಾಗೂ ಹೆಚ್ಚಿನ ಟಿಆರ್ ಪಿ ಕೂಡ ನೀಡಿತು.
ಈ ರಿಯಾಲಿಟಿ ಶೋನಲ್ಲಿ ಸೆಲೆಬ್ರಿಟಿಗಳಾದ ವಿನಯ್ ಗೌಡ, ಶುಭ ಪೂಂಜ, ಐಶ್ವರ್ಯ ಸಿಂಧೋಗಿ, ಕೋಳಿ ರಮ್ಯಾ, ಜಗದೀಶ್ ಗೌಡ, ಮಂಜು ಪಾವಗಡ, ವಿಶ್ವಾಸ್, ಸೂರಜ್, ವಿವೇಕ್ ಸಿಂಹ, ಸ್ಫೂರ್ತಿ, ಸ್ಪಂದನ ಸೋಮಣ್ಣ ಮುಂತಾದವರು ಭಾಗವಹಿಸಿದ್ದರು.
ಬಾಯ್ಸ್ ಹಾಗೂ ಗರ್ಲ್ಸ್ ನಡುವಿನ ಜಿದ್ದಾಜಿದ್ದಿ ಈ ರಿಯಾಲಿಟಿ ಶೋಲ್ ಹಲವು ರೀತಿಯ ಟಾಸ್ಕ್ ಗಳನ್ನು ಹೊಂದಿತ್ತು. ಕೆಲವು ಟಾಸ್ಕ್ ಗಳಲ್ಲಿ ಹುಡುಗಿಯರ ವಿನ್ ಆದರೆ ಇನ್ನು ಕೆಲವು ಹುಡುಗರು ವಿನ್ನಾಗಿದ್ದರು.
ಕೊನೆಗೆ ವೋಟಿಂಗ್ ಮಾಡಿ ಬಾಯ್ಸ್ ಅಥವಾ ಗರ್ಲ್ಸ್ ಇಬ್ಬರಲ್ಲಿ ಒಂದು ಟೀಮನ್ನು ಗೆಲ್ಲಿಸಲಾಯಿತು. ಗ್ರಾಂಡ್ ಫಿನಾಲೆಯಲ್ಲಿ ಎಲ್ಲರೂ ಊಹಿಸಿದಂತೆ ಬಾಯ್ಸ್ ಟೀಮ್ ವಿನ್ ಆಯ್ತು.
ಇನ್ನು ಈ ಇಡೀ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿದ್ದ ನಟಿ ಐಶ್ವರ್ಯಾ ವಿನಯ್ ತಮ್ಮ ಸೋಶಿಯಲ್ ಮೀಡಿಯಾ ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ.
ಮನೋಜ್ಞ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದ ಐಶ್ವರ್ಯಾ ಅವರಿಗೆ ಈ ರಿಯಾಲಿಟಿ ಶೋವಿನಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಇದರಲ್ಲಿ ಬಹಳ ಆಕ್ಟಿವ್ ಆಗಿ ಭಾಗವಹಿಸಿದ್ದ ಈಕೆ ಗ್ರಾಂಡ್ ಫಿನಾಲೆ ಬಗ್ಗೆ ಬರೆದುಕೊಂಡಿದ್ದಾರೆ. "ನಿಮ್ಮನ್ನೆಲ್ಲ ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ಇಲ್ಲಿದ್ದ ಪ್ರತಿ ಕ್ಷಣವನ್ನು ಇಷ್ಟಪಟ್ಟಿದ್ದೇನೆ. ಬೆಳ್ಳಂಬೆಳಗ್ಗಿನ ಫೋನ್ ಕಾಲ್ ಗಳು, ತಡ ರಾತ್ರಿಯ ಶೂಟ್ ಗಳು ಎಲ್ಲಾ ಫನ್ ಮಸ್ತಿ, ಇಷ್ಟೊಳ್ಳೆಯ ಅವಕಾಶ ಎಲ್ಲವನ್ನು ಮಿಸ್ ಮಾಡಿಕೊಳ್ಳುತ್ತೇನೆ" ಎಂದು ಬರೆದುಕೊಂಡಿದ್ದಾರೆ.
"ಬಾಯ್ಸ್ ವರ್ಸಸ್ ಗರ್ಲ್ಸ್" ರಿಯಾಲಿಟಿ ಶೋ ರಿಯಾಲಿಟಿ ಶೋ ಹೊರತಾಗಿ ಧಾರಾವಾಹಿಗಳಲ್ಲಿ ಬ್ಯುಸಿಯಾಗಿದ್ದಾರೆ ಐಶ್ವರ್ಯಾ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ "ರಾಮಾಚಾರಿ" ಧಾರಾವಾಹಿಯಲ್ಲಿ ರಾಮಾಚಾರಿ ಅತ್ತಿಗೆ ವೈಶಾಖಾ ಆಗಿ ಈಕೆ ನಟಿಸುತ್ತಿದ್ದಾರೆ. ಇದರ ಜೊತೆಗೆ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ "ಸೇವಂತಿ" ಧಾರಾವಾಹಿಯಲ್ಲಿ ಪ್ರಿಯಾ ಆಗಿ ಈಕೆ ಬಣ್ಣ ಹಚ್ಚುತ್ತಿದ್ದಾರೆ.


Click it and Unblock the Notifications











