For Quick Alerts
  ALLOW NOTIFICATIONS  
  For Daily Alerts

  ಜೀವನದಲ್ಲಿ ಎಚ್.ಡಿ.ದೇವೇಗೌಡ ಮಾಡಿರುವ ಮಹಾನ್ ಶಪಥ ಏನ್ಗೊತ್ತಾ.?

  By Harshitha
  |

  ರಾಜಕಾರಣಿಗಳು ಅಂದ್ರೆ ಭ್ರಷ್ಟರು ಎಂಬ 'ನಂಬಿಕೆ' ಜನಸಾಮಾನ್ಯರಿಗೆ. ಯಾಕಂದ್ರೆ, ಜನಪರ ಕೆಲಸ ಮಾಡಬೇಕಿರುವ ರಾಜಕಾರಣಿಗಳು, 'ಸ್ವ'ಕಾರ್ಯಕ್ಕಾಗಿ ಜನರ ದುಡ್ಡನ್ನು ಬಳಸಿ ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿ-ಪಾಸ್ತಿ ಸಂಪಾದಿಸುತ್ತಾರೆ ಹೊರತು, ಸಮಾಜದ ಏಳಿಗೆ ಬಯಸುವುದಿಲ್ಲ.

  ಹಾಗಂತ ಎಲ್ಲ ರಾಜಕಾರಣಿಗಳು 'ಭ್ರಷ್ಟ'ರು ಅಂತ ಹೇಳುವುದು ಕಷ್ಟ. ನಿಷ್ಟಾವಂತವಾಗಿ ಸಮಾಜ ಸೇವೆ ಮಾಡುವ ರಾಜಕಾರಣಿಗಳು ನಮ್ಮ-ನಿಮ್ಮೆಲ್ಲರ ನಡುವೆ ಇದ್ದಾರೆ. ಅಂಥವರಲ್ಲಿ ಒಬ್ಬರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು.!

  ಈ ಮಾತನ್ನು ನಾವ್ಯಾಕೆ ಹೇಳ್ತಿದ್ದೀವಿ ಅಂದ್ರೆ, ''ಕಂಡವರ ದುಡ್ಡು ಮುಟ್ಟುವುದಿಲ್ಲ'' ಎಂಬ ಮಹಾನ್ ಶಪಥ ಮಾಡಿದ್ದಾರಂತೆ ಎಚ್.ಡಿ.ದೇವೇಗೌಡರು.!

  ಅನೇಕ ಪುಕಾರು ಹಬ್ಬಿರುವುದು ನಿಜ.!

  ಅನೇಕ ಪುಕಾರು ಹಬ್ಬಿರುವುದು ನಿಜ.!

  ಎಚ್.ಡಿ.ದೇವೇಗೌಡ ರವರ ಬಗ್ಗೆ ಅನೇಕ ಪುಕಾರುಗಳು ಹಬ್ಬಿರುವುದು ನಿಜ. ಅವೆಲ್ಲ ಸುಳ್ಳೋ... ನಿಜವೋ... ನಮಗೆ ಗೊತ್ತಿಲ್ಲ. ಆದ್ರೆ, ಕಳೆದ ವಾರ ಪ್ರಸಾರ ಅದ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಮಾತ್ರ ತಮ್ಮ ಶಪಥದ ಕುರಿತು ಎಚ್.ಡಿ.ದೇವೇಗೌಡ ಮಾತನಾಡಿದರು.

  ಎಚ್.ಡಿ.ದೇವೇಗೌಡ ಹೇಳಿದ್ದೇನು.?

  ಎಚ್.ಡಿ.ದೇವೇಗೌಡ ಹೇಳಿದ್ದೇನು.?

  ''ಜೀವನದಲ್ಲಿ ನಾನು ಬೇರೆಯವರ ದುಡ್ಡು ಮುಟ್ಟಲ್ಲ ಎಂದು ಶಪಥ ಮಾಡಿದ್ದೇನೆ'' ಎಂದು ಹೆಮ್ಮೆಯಿಂದ ಅಷ್ಟೇ ಗರ್ವದಿಂದ ಎಚ್.ಡಿ.ದೇವೇಗೌಡ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ನುಡಿದರು.

  ಅಂತಹ ಆಸ್ತಿ ಏನೂ ಮಾಡಿಲ್ಲ.!

  ಅಂತಹ ಆಸ್ತಿ ಏನೂ ಮಾಡಿಲ್ಲ.!

  ಎಚ್.ಡಿ.ದೇವೇಗೌಡ ರವರಿಗೆ ಏನ್ ಕಮ್ಮಿ ಅಂತ ಎಲ್ಲರೂ ಅಂದುಕೊಳ್ಳಬಹುದು. ಆದ್ರೆ, ''ನಾನು ಅಂತಹ ಆಸ್ತಿ ಏನೂ ಮಾಡಿಲ್ಲ'' ಎನ್ನುತ್ತಾರೆ ಎಚ್.ಡಿ.ದೇವೇಗೌಡ.

  ಬ್ಯಾಂಕ್ ಬ್ಯಾಲೆನ್ಸ್ ಎಷ್ಟಿದೆ.?

  ಬ್ಯಾಂಕ್ ಬ್ಯಾಲೆನ್ಸ್ ಎಷ್ಟಿದೆ.?

  ''ನನ್ನ ಬ್ಯಾಂಕ್ ಅಕೌಂಟ್ ನಲ್ಲಿ ಹದಿನೆಂಟು ಲಕ್ಷ ರೂಪಾಯಿ ಇದೆ. 1962 ರಲ್ಲಿ ನಾನು ಎಂ.ಎಲ್.ಎ ಆದೆ. ಅವತ್ತಿಂದ ನನಗೆ ಸಂಬಳ ಬರುತ್ತದೆ. ಬೇಕಾದರೆ ವೆರಿಫೈ ಮಾಡಿಕೊಳ್ಳಬಹುದು'' ಎನ್ನುತ್ತಾರೆ ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡ.

  'ಅಧಿಕಾರ' ಅವಧಿ ಮೂರುವರೆ ವರ್ಷ.!

  'ಅಧಿಕಾರ' ಅವಧಿ ಮೂರುವರೆ ವರ್ಷ.!

  ಅರವತ್ತೈದು ವರ್ಷಗಳ ರಾಜಕೀಯ ಜೀವನದಲ್ಲಿ ಕರ್ನಾಟಕ ರಾಜ್ಯದ 'ಮುಖ್ಯಮಂತ್ರಿ' ಆಗಿ ಹದಿನೆಂಟು ತಿಂಗಳು, 'ಪ್ರಧಾನಿ' ಅಗಿ ಹನ್ನೊಂದು ತಿಂಗಳು, ನೀರಾವರಿ ಸಚಿವರಾಗಿ ಒಂದು ವರ್ಷ... ಒಟ್ಟು ಮೂರುವರೆ ವರ್ಷ ಮಾತ್ರ ಎಚ್.ಡಿ.ದೇವೇಗೌಡ ಅಧಿಕಾರದಲ್ಲಿ ಇದ್ದವರು. ಉಳಿದದ್ದು ಸಮಾಜ ಸೇವೆಗೆ ತಮ್ಮನ್ನ ತಾವು ಅರ್ಪಿಸಿಕೊಂಡಿದ್ದಾರೆ.

  English summary
  'I have taken an oath that I never touch others Money' says EX Prime Minister, Politician, JDS Leader, HD Devegowda in Zee Kannada Channel's popular show 'Weekend With Ramesh 3'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X