ಬಿಗ್​​ಬಾಸ್​​ಗೆ ಹೋದ ತಪ್ಪಿಗೆ ನನ್ನ ಚಪ್ಪಲಿಯಿಂದ ನಾನೇ ಹೊಡೆದುಕೊಳ್ಳಬೇಕು ; ಮಾಜಿ ಸ್ಫರ್ಧಿ ಕಣ್ಣೀರು

'ಬಿಗ್ ಬ್ರದರ್'' ಎಂಬ ವಿದೇಶಿ ಮೂಲದ ಶೋದ ಯಥಾವತ್ತು ನಕಲು ''ಬಿಗ್ ಬಾಸ್''. ಒಂದೂವರೆ ಡಜನ್ ವ್ಯಕ್ತಿಗಳನ್ನು ಮನೆಯಲ್ಲಿ ಗುಡ್ಡೆ ಹಾಕಿ ವಾರಪೂರ್ತಿ ಅವರ ನಡುವೆ ದ್ವೇಷ- ಅಸೂಯೆಯ ಕಿಚ್ಚು ಹತ್ತಿಸುವ ಈ ಕಾರ್ಯಕ್ರಮ 2006ರಲ್ಲಿ ಭಾರತದಲ್ಲಿ ಮೊದಲ ಬಾರಿ ಪ್ರಸಾರವಾಗಿತ್ತು. ''ಸೋನಿ'' ಟಿವಿಯಲ್ಲಿ ಪ್ರಸಾರವಾದ ಮೊದಲ ''ಬಿಗ್ ಬಾಸ್'' ಸೀಸನ್ ಸುಮಾರು 86 ದಿನಗಳ ಕಾಲ ನಡೆದಿತ್ತು.

ಮೊದಲ ಪ್ರಯತ್ನದಲ್ಲಿಯೇ ಅಪಾರವಾದ ಯಶಸ್ಸನ್ನು ಕೂಡ ಈ ಕಾರ್ಯಕ್ರಮ ಪಡೆಯಿತು. ಅಲ್ಲಿಂದ ಇಲ್ಲಿಯವರೆಗೆ ಈ ''ಬಿಗ್ ಬಾಸ್'' ಲಂಗು ಲಗಾಮು ಇಲ್ಲದೇ ಸಾಗುತ್ತಲೇ ಇದೆ.

I Should Hit Myself With a Slipper Anchor Vishnupriya s EXPLOSIVE Bigg Boss Confession

ಇಂಥಾ "ಬಿಗ್ ಬಾಸ್" ಕಾರ್ಯಕ್ರಮದಲ್ಲಿ ಒಮ್ಮೆಯಾದರು ಭಾಗಿಯಾಗಬೇಕು ಎನ್ನುವ ಕನಸನ್ನು ಹಲವರು ಕಾಣುತ್ತಾರೆ. "ಬಿಗ್ ಬಾಸ್" ಗಮನ ಸೆಳೆಯಲು ನಾನಾ ಕಸರತ್ತು ಕೂಡ ಮಾಡುತ್ತಾರೆ. ಆ ಪೈಕಿ ಕೆಲವರು ಅವಕಾಶ ಪಡೆದು ಒಳಗಡೆ ಹೋಗಿ ಬಂದವರು ಇದ್ದಾರೆ. ಇನ್ನೂ ಕೆಲವರು "ಬಿಗ್ ಬಾಸ್" ನಲ್ಲಿ ಭಾಗವಹಿಸಿ ಆ ನಂತರ ಪಶ್ಚಾತಾಪ ಪಟ್ಟಿರುವವರು ಕೂಡ ಇದ್ದಾರೆ. ಉದಾಹರಣೆಗೆ ವಿಷ್ಣುಪ್ರಿಯಾ.

ಹೌದು, ವಿಷ್ಣುಪ್ರಿಯಾ.. ಪಕ್ಕದ ಆಂಧ್ರದ ಪ್ರಖ್ಯಾತ ನಿರೂಪಕಿ. ಕೆಲ ಚಿತ್ರಗಳಲ್ಲಿಯೂ ಕೂಡ ಇವರು ಅಭಿನಯಿಸಿದ್ದಾರೆ. ತಮ್ಮ ಮಾತು ಮತ್ತು‌ ಮೈಮಾಟದಿಂದಲೇ ಆಗಾಗ ಸದ್ದು ಮಾಡುವ ಪಡ್ಡೆ ಹುಡುಗರ ಕಣ್ಣು ಕುಕ್ಕುವ ವಿಷ್ಣುಪ್ರಿಯಾ ತೆಲುಗಿನ ''ಬಿಗ್ ಬಾಸ್'' ಮನೆಗೆ ಕಳೆದ ವರ್ಷ ಹೋಗಿದ್ದರು. ಸೀಸನ್ 8ರಲ್ಲಿ ಭಾಗವಹಿಸಿದ್ದರು. ಹೆಚ್ಚು ಕಡಿಮೆ ಕೊನೆಯವರೆಗೆ ಮನೆಯಲ್ಲಿಯೇ ಉಳಿದು 98 ದಿನಗಳ ನಂತರ ಹೊರ ಬಂದರು.

ಆದರೆ ಈಗ ಒಂದು ವರ್ಷದ ನಂತರ ಆ 98 ದಿನಗಳು ನನ್ನ ಪಾಲಿಗೆ ನರಕದಂತೆ ಇದ್ದವು ಎಂದು ವಿಷ್ಣುಪ್ರಿಯಾ ಹೇಳಿದ್ದಾರೆ. ''ಬಿಗ್ ಬಾಸ್'' ಮನೆಗೆ ಹಫದ ತಪ್ಪಿಗೆ ನನ್ನ ಚಪ್ಪಲಿ ತಗೊಂಡು ನಾನೇ ಹೊಡ್ಕೋಬೇಕು ಎಂದು ಹೇಳಿದ್ದಾರೆ.

ಈ ಕುರಿತು "ಕಿಸ್ಸಿಕ್ ಟಾಕ್ಸ್‌''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ವಿಷ್ಣುಪ್ರಿಯಾ,ನಿಜಾ ಹೇಳಬೇಕು ಅಂದರೆ '' ಬಿಗ್ ಬಾಸ್'' ನನ್ನ ಬದುಕಿನ ಬಹುದೊಡ್ಡ ತಪ್ಪು ನಿರ್ಧಾರ ಎಂದು ಹೇಳಿದ್ದಾರೆ. ಈ ಕುರಿತು ಮಾತನಾಡಿರುವ ವಿಷ್ಣುಪ್ರಿಯಾ ಹಾಗೇ ನೋಡಿದರೆ ''ಬಿಗ್ ಬಾಸ್‌''ದಿಂದ ನಾನು ಹೊಸದಾಗಿ ಏನೂ ಕಲಿಯಲಿಲ್ಲ. ಅಲ್ಲಿ ಹೋಗುವ ಮುನ್ನವೇ ನನಗೆ ಜೀವನಾನುಭವ ಆಗಿತ್ತು ಎಂದು ಹೇಳಿದ್ದಾರೆ.

I Should Hit Myself With a Slipper Anchor Vishnupriya s EXPLOSIVE Bigg Boss Confession

ಮುಂದುವರೆದು ''ಬಿಗ್ ಬಾಸ್‌'' ಮನೆಗೆ ಹೋದ ಕೆಲವೇ ದಿನಗಳಲ್ಲಿ ನನಗೆ ಪಶ್ಚಾತಾಪ ಆಗಲು ಶುರುವಾಗಿತ್ತು, ನಾನ್ಯಾಕೇ ಇಲ್ಲಿ ಬಂದೆ ಎಂದು ಪ್ರಶ್ನೆ ಕಾಡತೊಡಗಿತು ಎಂದು ಹೇಳಿರುವ ವಿಷ್ಣುಪ್ರಿಯಾ ನಾನು ''ಬಿಗ್ ಬಾಸ್‌'' ಮನೆಗೆ ಹೋಗಿದ್ದು ಕೇವಲ ದುಡ್ಡಿನಾಸೆಗೆ ಮಾತ್ರ. ''ಬಿಗ್ ಬಾಸ್‌''ನಲ್ಲಿ ಸಿಗುವ ಸಂಭಾವನೆಯಿಂದ ಹೊಸ ಮನೆ ಖರೀದಿ ಮಾಡಬೇಕೆನ್ನುವ ಆಶಯ ನನ್ನದಾಗಿತ್ತು. ಆದರೆ, ದುರ್ದೈವ, ಇವತ್ತು ಕೂಡ ನಾನು ಹಳೆಯ ಮನೆಯಲ್ಲಿಯೇ ವಾಸ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.

''ಬಿಗ್ ಬಾಸ್'' ಕಾರ್ಯಕ್ರಮದಿಂದ ಹೊರ ಬಂದ ನಂತರ ನಾನು ಮನಸೋಇಚ್ಛೆ ಬಯ್ಯೋಣ ಎಂದುಕೊಂಡಿದ್ದೇ, ಆದರೆ.. ಮನೆಯಿಂದ ಹೊರ ಬಂದ ನಂತರ ಜನರಿಂದ ನನಗೆ ಸಿಕ್ಕ ಪ್ರೀತಿ ನನ್ನ ಬಾಯಿಯನ್ನು ಮುಚ್ಚಿಸಿತು ಎಂದು ಹೇಳಿರುವ ವಿಷ್ಣುಪ್ರಿಯಾ ಆ ಮನೆಯಲ್ಲಿ ನಾನು ಇದ್ದಾಗ ನನ್ನನ್ನೂ ನಾನು ಬೈದುಕೊಳ್ಳದ ದಿನ ಇರಲಿಲ್ಲ ಎಂದು ಹೇಳಿದ್ದಾರೆ.

ವ್ಯೆಯಕ್ತಿಕವಾಗಿ ನನ್ನ ಪಾಲಿಗೆ ''ಬಿಗ್ ಬಾಸ್'' ಅಕ್ಷರಶಃ ನರಕ ಆಗಿತ್ತು ಎಂದಿರುವ ವಿಷ್ಣುಪ್ರಿಯಾ, ಸಾಮಾನ್ಯವಾಗಿ ನಾನು ಮೂರು ದಿನ ಕೆಲಸ ಮಾಡಿದರೆ ನಾಲ್ಕನೇ ದಿನ ವಿಶ್ರಾಂತಿ ಪಡೆಯುತ್ತೇನೆ. ಬಾಡಿ ಮಸಾಜ್ ಮಾಡಿಸಿಕೊಂಡು ನಿರಾಳವಾಗುತ್ತೇನೆ. ಆದರೆ.. ''ಬಿಗ್ ಬಾಸ್‌'' ಮನೆಯಲ್ಲಿ ಮಸಾಜ್ ಮರೆತುಬಿಡಿ ಸರಿಯಾದ ಊಟ ಕೂಡ ನನಗೆ ಸಿಗಲಿಲ್ಲ. ಸಮಯಕ್ಕೆ ಸರಿಯಾಗಿ ಟೀ ಮತ್ತು ಕಾಫಿ ಕೂಡ ಅಲ್ಲಿ ನೀಡಲಿಲ್ಲ ಎಂದು ಹೇಳಿದ್ದಾರೆ. ಅಲ್ಲಿದ್ದ ಅಷ್ಟು ದಿನ ನನ್ನ ನಿದ್ದೆಗೆ ಕೊಳ್ಳಿ ಬಿದ್ದಿತ್ತು, ಹೀಗಾಗಿ ಮಾಡಿದ ಈ ತಪ್ಪಿಗೆ ನನ್ನ ಚಪ್ಪಲಿ ತಗೊಂಡು ನನಗೆ ನಾನೇ ಹೊಡೆದುಕೊಳ್ಳುವಷ್ಟು ಕೋಪ ನನಗೆ ಬರುತ್ತಿತ್ತು ಎಂದು ಕೂಡ ಹೇಳಿದ್ದಾರೆ ವಿಷ್ಣುಪ್ರಿಯಾ.

ಸದ್ಯ ವಿಷ್ಣುಪ್ರಿಯಾ ಅವರ ಈ ಹೇಳಿಕೆಯ ಕುರಿತು ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆ ಶುರುವಾಗಿದೆ. ಕೆಲವರು ವಿಷ್ಣುಪ್ರಿಯಾ ಅವರ ಬೆಂಬಲಕ್ಕೆ ನಿಂತರೆ ಹಲವರು ವಿಷ್ಣುಪ್ರಿಯಾ ಅವರನ್ನು ತರಾಟೆ ತೆಗೆದುಕೊಳ್ಳುತ್ತಿದ್ದಾರೆ. ''ಬಿಗ್ ಬಾಸ್‌'' ಕಾರ್ಯಕ್ರಮದ ನೀತಿ ನಿಯಮ ಗೊತ್ತಿದ್ದ ಮೇಲೆ ಕೂಡ ಯಾಕೆ ಹೋಗಬೇಕಿತ್ತು. ಅಲ್ಲಿ ಹೋಗಿ ಬಂದು ಒಂದು ವರ್ಷದ ನಂತರ ಈ ರೀತಿ ಮಾತನಾಡುವ ಅವಶ್ಯಕತೆಯಾದರೂ ಏನಿದೆ ಎಂದು ಪ್ರಶ್ನೆ ಮಾಡುತ್ತಿದ್ಧಾರೆ.

More from Filmibeat

English summary
In a candid interview, Anchor Vishnupriya makes a brutally honest admission about her Bigg Boss journey. Find out her 'explosive' comments on the pain, regret, and the real reason she entered the house
Read more about: biggboss bigg boss ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X