ದೇವಸ್ಥಾನದ ಹೊರಗೆ ಬಿಗ್‌ಬಾಸ್‌ ಮಾಜಿ ಸ್ಪರ್ಧಿಗೆ ಲೈಂ*ಗಿಕ ಕಿರುಕುಳ

ಹೆಣ್ಣಿನ ಮೇಲೆ ಗಂಡಿನ ಶೋಷಣೆ, ಅತ್ಯಾಚಾರದ ಕುರಿತ ಸುದ್ದಿಗಳನ್ನು ನಾವು ಓದುತ್ತಲೇ ಇದ್ದೇವೆ, ಕೇಳುತ್ತಲೇ ಇದ್ದೇವೆ. ಪ್ರಪಂಚದಾದ್ಯಂತ ಲಕ್ಷಾಂತರ ಮಹಿಳೆಯರು, ಹುಡುಗಿಯರು, ದೈಹಿಕ, ಲೈಂಗಿಕ ಹಿಂಸೆ ಅನುಭವಿಸುತ್ತಾರೆ. ಚಿತ್ರರಂಗದಲ್ಲಿರುವ ನಾಯಕಿಯರು.. ಗಾಯಕಿಯರು ಕೂಡ ಇದರಿಂದ ಹೊರತಾಗಿಲ್ಲ. ಕೆಲವರು ಅಭಿಮಾನದ ಹೆಸರಿನಲ್ಲಿ ಮಾಡಬಾರದ್ದನ್ನೆಲ್ಲಾ ಮಾಡಲು ಮುಂದಾದರೆ, ಇನ್ನೂ ಕೆಲವರು ಗುಂಪಿನಲ್ಲಿ ಸೇರಿಕೊಂಡು ಹೆಣ್ಣು ಮಕ್ಕಳ ಖಾಸಗಿ ಭಾಗಕ್ಕೆ...

ಕೈ ಹಾಕುವ ಪ್ರಯತ್ನ ಮಾಡುತ್ತಾರೆ. ಮತ್ತೂ ಕೆಲವರು ಸಾರ್ವಜನಿಕ ಸ್ಥಳದಲ್ಲಿಯೇ ನರಕ ದರ್ಶನ ಮಾಡಿಸುತ್ತಾರೆ. ಇದಕ್ಕೆ ಎಡಿನ್ ರೋಸ್ ಹಂಚಿಕೊಂಡ ಕಹಿ ಅನುಭವ ಸದ್ಯದ ಉದಾಹರಣೆ. ಹೌದು, ಎಡಿನ್ ರೋಸ್. ಆಗಸ್ಟ್ 20-1998ರಲ್ಲಿ ಹುಟ್ಟಿದ ಈ ಚೆಲುವೆಯ ಬಾಲ್ಯವೆಲ್ಲ ಕಳೆದಿದ್ದು ದುಬೈನಲ್ಲಿ. ಮಯನ್ಮಾರನ ಬರ್ಮಾ ಮತ್ತು ನಮ್ಮ ಕರ್ನಾಟಕದಲ್ಲಿ ಕೂಡ ಈ ಬೆಡಗಿಯ ಬೇರುಗಳಿವೆ.

I Was Fully Covered Bigg Boss s Edin Rose Details HORRID Harassment Outside Temple

ಬಣ್ಣದ ಲೋಕದ ಮೇಲೀನ ಮೋಹದಿಂದ 20ರ ಹರೆಯದಲ್ಲಿ ಅವಕಾಶಗಳನ್ನು ಅರಸಿಕೊಂಡು ಮುಂಬೈಗೆ ಬಂದ ಎಡಿನ್ ರೋಸ್ ಬಿ ಗ್ರೇಡ್ ವೆಬ್ ಸರಣಿಗಳಲ್ಲಿ ನಾಯಕಿಯ ಪಾತ್ರಗಳನ್ನು ನಿರ್ವಹಿಸಿದರು. ಜನಪ್ರಿಯತೆಯನ್ನು ಕೂಡ ಗಳಿಸಿದರು. ''ಗಂಧಿ ಬಾತ್‌'' ಇವರ ಜನಪ್ರಿಯ ಸರಣಿ.

ಆ ನಂತರ ಸಿನೆಪ್ರೈಮ್‌ನ ''ಗುಡ್‌ ಗರ್ಲ್ಸ್‌ -ಬ್ರೈಡ್ಸ್ ನೈಟ್'' ಎಂಬ ಮತ್ತೊಂದು ವೆಬ್ ಸರಣಿಯನ್ನು ಮಾಡಿದ ಎಡಿನ್ ರೋಸ್ ತೆಲುಗಿನ ಮಾಸ್ ಮಹಾರಾಜಾ ರವಿತೇಜಾ ಅಭಿನಯದ ''ರಾವಣಾಸುರ'' ಚಿತ್ರದಲ್ಲಿ ಹಾಡೊಂದಕ್ಕೆ ಸೊಂಟವನ್ನು ಕೂಡ ಬಳುಕಿಸಿದರು. ಇದರ ನಡುವೆ ಹಿಂದಿಯ ''ಬಿಗ್ ಬಾಸ್ ಸೀಸನ್‌ 18''ರಲ್ಲಿ ಕೂಡ ಎಡಿನ್ ರೋಸ್ ಭಾಗವಹಿಸಿದ್ದರು.

ಇನ್ನು ಈ ಹಿಂದೆ ಭಾರತದ ಸ್ಟಾರ್ ಕ್ರಿಕೆಟ್ ಪ್ಲೇಯರ್ ಶ್ರೇಯಸ್ ಅಯ್ಯರ್ ಜೊತೆ ನಾನು ಮಾನಸಿಕವಾಗಿ ಮದುವೆಯಾಗಿದ್ದೇನೆ. ನಮಗೆ ಈಗಾಗಲೇ ಮಕ್ಕಳಿದ್ದು ನಾನು ಅವರ ಮಕ್ಕಳ ತಾಯಿಯೆಂದು ನಾನು ಭಾವಿಸುತ್ತೇನೆ ಎಂದು ಹೇಳಿ ಸುದ್ದಿಯಾಗಿದ್ದರು ಎಡಿನ್ ರೋಸ್.

ಇಂಥಾ ಇಂದು ( ಅಕ್ಟೋಬರ್ 14) ಬೆಳಗ್ಗೆ 7ಕ್ಕೆ ದೇವಸ್ಥಾನಕ್ಕೆ ತೆರಳಿದ್ದರು. ಈ ಸಮಯದಲ್ಲಿ ದೇವಸ್ಥಾನದ ಹೊರಗಡೆ ಇವರಿಗೆ ವ್ಯಕ್ತಿಯೊಬ್ಬ ಲೈಂಗಿಕ ಕಿರುಕುಳ ನೀಡಿದ್ದಾನೆ. ತಮಗೆ ಕಿರುಕುಳ ನೀಡಿದ್ದ ವ್ಯಕ್ತಿಗೆ ಬುದ್ದಿಯನ್ನು ಕಲಿಸಿರುವ ವಿಡಿಯೋವನ್ನು ಕೂಡ ಹಂಚಿಕೊಂಡಿರುವ ಎಡಿನ್ ತಮಗಾದ ಕಹಿ ಅನುಭವ ಹೇಳಿದ್ದಾರೆ.

I Was Fully Covered Bigg Boss s Edin Rose Details HORRID Harassment Outside Temple

ಈ ಕುರಿತು ವಿಡಿಯೋದಲ್ಲಿ ಮಾತನಾಡಿರುವ ಎಡಿನ್ ರೋಸ್, ಇದು ದೆಹಲಿಯಲ್ಲಿನ ದೊಡ್ಡ ಸಮಸ್ಯೆ. ಬೆಳಗ್ಗೆ 7ಕ್ಕೆ ನಾನು ಪಂಜಾಬಿ ಸೂಟ್ ಧರಿಸಿ ದೇವಸ್ಥಾನಕ್ಕೆ ಬಂದಿದ್ದೆ, ದೇವಾಕಯದ ಆಚೆ ನಿಂತಿದ್ದೆ ಆಗ ಈ ವ್ಯಕ್ತಿ ಆ ವ್ಯಕ್ತಿ ಉದ್ದೇಶಪೂರ್ವಕವಾಗಿ ನನಗೆ ಮೂರು ಬಾರಿ ಮುಟ್ಟಿದ್ದಾನೆ ಎಂದು ಹೇಳಿದ್ದಾರೆ.

ನನ್ನನ್ನು ಮುಟ್ಟಿದ್ದು ಮಾತ್ರವಲ್ಲದೇ ನನ್ನನ್ನೇ ನೋಡುತ್ತಾ ಪ್ರೇಮಗೀತೆಯನ್ನು ಕೂಡ ಹಾಡಲು ಶುರು ಮಾಡಿದ್ದ ಎಂದು ಹೇಳಿರುವ ಎಡಿನ್ ರೋಸ್, ನನ್ನನ್ನು ಅವನು ಗುರುತಿಸಲೂ ಇಲ್ಲ. ನನ್ನನ್ನು ನೋಡಿ ನನ್ನ ಕೆಲವು ಅಭಿಮಾನಿಗಳು ನನ್ನೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು ಮತ್ತು ಅವರು ಕೂಡ ಎಲ್ಲವನ್ನೂ ರೆಕಾರ್ಡ್ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ನನಗೆ ವಿಪರೀತ ಕೋಪ ಬಂದಿತ್ತು. ಆದರೂ ಕೂಡ ನಾನು ನನ್ನನ್ನು ಸಮಾಧಾನ ಮಾಡಿಕೊಂಡೆ ಎಂದು ಹೇಳಿರುವ ಎಡಿನ್ ಇದೇ ಸಮಯದಲ್ಲಿ ಅಲ್ಲಿ ಬಂದ ವ್ಯಕ್ತಿಯೊಬ್ಬರಿಗೆ ನಡೆದ ಘಟನೆ ವಿವರಿಸುತ್ತಾರೆ. ಅದಕ್ಕೆ ಆ ವ್ಯಕ್ತಿ ಅಲ್ಲಿದ್ದ ವ್ಯಕ್ತಿಯನ್ನು ಗದರಿಸಿ ಕಳುಹಿಸುತ್ತಾನೆ. ಮುಂದೆ ಹೋದಂತೆ ಮಾಡುವ ವ್ಯಕ್ತಿ ಮತ್ತೆ ಅಲ್ಲಿಯೇ ಬರುತ್ತಾನೆ. ವಿಡಿಯೋದಲ್ಲಿ ಇದು ಗಮನಿಸಬಹುದು.

ಇದೇ ಸಮಯದಲ್ಲಿ ಎಡಿನ್ ರೋಸ್ ಅವರ ಖಾಸಗಿ ಕ್ಯಾಮರಾಮ್ಯಾನ್ ದೇವಸ್ಥಾನದತ್ತ ಬಂದಾಗ, ಎಡಿನ್ ಕ್ಯಾಮರಾಮ್ಯಾನ್‌ಗೆ ಕೂಡ ನಡೆದ ಘಟನೆಯನ್ನು ವಿವರಿಸಿದ್ದಾರೆ.ಆಗ ಆ ಕ್ಯಾಮರಾ ಮ್ಯಾನ್ ಎಡಿನ್‌ ರೋಸ್‌ಗೆ ಕಿರುಕುಳ ನೀಡಿದ್ದ ವ್ಯಕ್ತಿಯ ಕೆನ್ನೆಗೆ ಬಾರಿಸಿದ್ದಾರೆ. ಈ ವೇಳೆ ನನ್ನನ್ನು ಹೊಡೆಯಿರಿ.. ನಾನು ತಪ್ಪು ಮಾಡಿದೆ ಎಂದು ಆ ವ್ಯಕ್ತಿ ಹೇಳುತ್ತಾನೆ. ಆ ನಂತರ ಕ್ಯಾಮರಾ ಮ್ಯಾನ್ ಆ ವ್ಯಕ್ತಿಯನ್ನು ಒದ್ದು ಕಳುಹಿಸುತ್ತಾರೆ.

ಸದ್ಯ ಈ ವಿಡಿಯೋ ವೈರಲ್ ಆಗಿದ್ದು ಹಲವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಹನ್ನೊಂದು ಗಂಟೆಯಲ್ಲಿ ಎಡಿನ್ ಅವರ ಖಾತೆಯಲ್ಲಿ ಅವರು ಹಂಚಿಕೊಂಡ ವಿಡಿಯೋಗೆ 62,536 ಜನ ಮೆಚ್ಚುಗೆಯನ್ನು ಸೂಚಿಸಿದ್ದಾರೆ.

More from Filmibeat

English summary
'I was fully covered.' Bigg Boss star Edin Rose shares her horror and detailed account of being groped and harassed outside a holy Delhi temple.
Read more about: harrasment biggboss ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X