ಮುತ್ತು ಕೊಡಲು ಬಂದ್ರೆ ತುಟಿ ಸೀಳುವೆ: ಗುಡುಗಿದ 'ಬಿಗ್ ಬಾಸ್' ಸ್ಪರ್ಧಿ.!

ಕಲರ್ಸ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಹಿಂದಿಯ 'ಬಿಗ್ ಬಾಸ್-13' ಕಾರ್ಯಕ್ರಮ ಪ್ರತಿ ನಿತ್ಯ ಒಂದಲ್ಲಾ ಒಂದು ವಿವಾದದಿಂದ ಸೌಂಡ್ ಮಾಡುತ್ತಲೇ ಇದೆ. 'ಬಿಗ್ ಬಾಸ್' ಮನೆಯಲ್ಲಿ ಉಳಿದುಕೊಳ್ಳಲು ಸ್ಪರ್ಧಿಗಳಂತೂ ಸಭ್ಯತೆಯ ಎಲ್ಲೆ ಮೀರಿ ನಡೆದುಕೊಳ್ಳುತ್ತಿದ್ದಾರೆ.

ಅದರಲ್ಲೂ ಪಾರಸ್ ಛಾಬ್ರಾ ಅಂತೂ ಮಾಹಿರಾ ಶರ್ಮಾ ಹಿಂದೆ ಬಿದ್ದಿದ್ದಾರೆ. ಪದೇ ಪದೇ ಆಕೆಯನ್ನ ತಬ್ಬಿ ಹಿಡಿದು, ಮುತ್ತು ಕೊಡ್ತಾರೆ ಪಾರಸ್. ಕಿಸ್ ಕೊಡಲು ಪಾರಸ್ ಛಾಬ್ರಾ ಹತ್ತಿರ ಬಂದಾಗೆಲ್ಲಾ ಆಕೆ ತಡೆದರೂ, ಆತ ಮಾತ್ರ ಹಿಂದೆ ಸರಿಯುವುದಿಲ್ಲ.

ಅಸಲಿಗೆ, 'ಬಿಗ್ ಬಾಸ್' ಮನೆಯಲ್ಲಿ ಪಾರಸ್ ಮತ್ತು ಮಾಹಿರಾ ಕ್ಲೋಸ್ ಫ್ರೆಂಡ್ಸ್. ಸಲುಗೆಯಿಂದ ಪದೇ ಪದೇ ಪಾರಸ್ ಮುತ್ತು ಕೊಡುವುದು ಮಾಹಿರಾಗೆ ಇಷ್ಟ ವಿಲ್ಲ. ಇನ್ನೂ ಪಾರಸ್ ಕೀಳು ಮಟ್ಟದ ಕಾಮೆಂಟ್ ಮಾಡಿದ್ಮೇಲೆ, ''ಮುತ್ತು ಕೊಡಲು ಬಂದ್ರೆ ತುಟಿ ಸೀಳುತ್ತೇನೆ'' ಎಂದು ಮಾಹಿರಾ ಶರ್ಮಾ ಗುಡುಗಿದ್ದಾರೆ. ಮುಂದೆ ಓದಿರಿ...

ಗುಟುರು ಹಾಕಿದ ಮಾಹಿರಾ ಶರ್ಮಾ

ಗುಟುರು ಹಾಕಿದ ಮಾಹಿರಾ ಶರ್ಮಾ

''ನಿನಗೆ ಮುತ್ತು ಕೊಡದೆ ಹೋದರೆ, ಮಂಚದಿಂದ ಏಳಲು ಸಾಧ್ಯವೇ ಇಲ್ಲ'' ಅಂತ ಪಾರಸ್ ಛಾಬ್ರಾ ಹೇಳುತ್ತಿದ್ದ ಹಾಗೆ ಮಾಹಿರಾ ಶರ್ಮಾ ಗರಂ ಆದರು. ಕೂಡಲೆ ಪಾರಸ್ ನ ಹಿಂದಕ್ಕೆ ತಳ್ಳಿ ''ಮುತ್ತು ಕೊಡಲು ಬಂದ್ರೆ ತುಟಿ ಸೀಳುತ್ತೇನೆ'' ಅಂತ ಹೇಳುತ್ತಾ ಮಾಹಿರಾ ಶರ್ಮಾ ಗುಟುರು ಹಾಕಿದರು.

ಗರ್ಲ್ ಫ್ರೆಂಡ್ ಇದ್ದರೂ ಪಾರಸ್ ನಡವಳಿಕೆ ಹೀಗೆ.!

ಗರ್ಲ್ ಫ್ರೆಂಡ್ ಇದ್ದರೂ ಪಾರಸ್ ನಡವಳಿಕೆ ಹೀಗೆ.!

ಪಾರಸ್ ಛಾಬ್ರಾಗೆ ಆಕಾಂಕ್ಷ ಪುರಿ ಎಂಬ ಗರ್ಲ್ ಫ್ರೆಂಡ್ ಇದ್ದಾರೆ. ಆದರೂ, 'ಬಿಗ್ ಬಾಸ್' ಮನೆಯೊಳಗೆ 'ಪ್ಲೇ ಬಾಯ್' ಇಮೇಜ್ ಕ್ರಿಯೇಟ್ ಮಾಡಿಕೊಂಡು ವಿವಾದದ ಕೇಂದ್ರಬಿಂದುವಾಗಿದ್ದಾರೆ ಪಾರಸ್.

ವಾರ್ನ್ ಮಾಡಿದ್ದ ಮಾಹಿರಾ ತಾಯಿ

ವಾರ್ನ್ ಮಾಡಿದ್ದ ಮಾಹಿರಾ ತಾಯಿ

ತಮ್ಮ ಮಗಳು ಮಾಹಿರಾ ಜೊತೆಗೆ ಪಾರಸ್ ಸಲುಗೆಯಿಂದ ನಡೆದುಕೊಳ್ಳುವ ರೀತಿ ತಾಯಿ ಸಾನಿಯಾ ಶರ್ಮಾಗೆ ಇಷ್ಟ ಆಗಿಲ್ಲ. ಹೀಗಾಗಿ, 'ಬಿಗ್ ಬಾಸ್' ಮನೆಯೊಳಗೆ ಸಾನಿಯಾ ಶರ್ಮಾ ಭೇಟಿ ಕೊಟ್ಟಾಗ, ಪಾರಸ್ ಛಾಬ್ರಾಗೆ ವಾರ್ನ್ ಮಾಡಿದ್ದರು.

ಮಾಹಿರಾ ತಾಯಿ ಹೇಳಿದ್ದೇನು.?

ಮಾಹಿರಾ ತಾಯಿ ಹೇಳಿದ್ದೇನು.?

''ಪಾರಸ್.. ನಿನಗೆ ನಾನು ಹೊಡೆಯಬೇಕು. ನಿನ್ನ ಗರ್ಲ್ ಫ್ರೆಂಡ್ ಆಕಾಂಕ್ಷ ನಿನ್ನನ್ನು ಎಷ್ಟೊಂದು ಪ್ರೀತಿ ಮಾಡುತ್ತಾಳೆ. ಮಾಹಿರಾ ನಿನಗೆ ಸ್ನೇಹಿತೆ ಮಾತ್ರ. ಹೀಗಾಗಿ ಕಿಸ್ ಕೊಡಬೇಡ. ನನಗೆ ಅದು ಇಷ್ಟ ಆಗಲ್ಲ'' ಎಂದು 'ಬಿಗ್ ಬಾಸ್' ಮನೆಯೊಳಗೆ ಬಂದಿದ್ದಾಗ ಮಾಹಿರಾ ತಾಯಿ ಸಾನಿಯಾ ಶರ್ಮಾ, ಪಾರಸ್ ಛಾಬ್ರಾಗೆ ಬೆಂಡೆತ್ತಿದ್ದರು.

ಎಲ್ಲವೂ ಸ್ಟ್ರಾಟೆಜಿ

ಎಲ್ಲವೂ ಸ್ಟ್ರಾಟೆಜಿ

'ಬಿಗ್ ಬಾಸ್-13' ಮನೆಯಲ್ಲಂತೂ ಪ್ರತಿ ದಿನ ಸ್ಪರ್ಧಿಗಳ ಗೇಮ್ ಪ್ಲಾನ್ ಬದಲಾಗುತ್ತಿದೆ. ಯಾರು ಯಾವಾಗ ಯಾರಿಗೆ ಸ್ನೇಹಿತರಾಗುತ್ತಾರೋ, ದುಷ್ಮನ್ ಗಳಾಗಿ ಬದಲಾಗುತ್ತಾರೋ ಹೇಳುವುದೇ ಕಷ್ಟ.! ಪಾರಸ್ ಮೇಲೆ ಒಮ್ಮೊಮ್ಮೆ ಕೆಂಡಕಾರುವ ಮಾಹಿರಾ ಮರುಕ್ಷಣ ತೀರಾ ಕ್ಲೋಸ್ ಆಗಿರ್ತಾರೆ. ಒಟ್ನಲ್ಲಿ, 'ಬಿಗ್ ಬಾಸ್' ಶೋ ಗೆಲ್ಲೋಕೆ ಸ್ಪರ್ಧಿಗಳು ಒಂದಲ್ಲಾ ಒಂದು ಸ್ಟ್ರಾಟೆಜಿ ಮಾಡುತ್ತಲೇ ಇದ್ದಾರೆ.

More from Filmibeat

English summary
Bigg Boss 13: ''I will get your lips cut'' says Mahira Sharma to Paras Chhabra.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X