ಕೋಟಿ ಕೊಟ್ಟರೂ 'ಬಿಗ್ ಬಾಸ್' ಮನೆಗೆ ಹೋಗಲ್ಲ ಎಂದ ನಟಿ ವಿಜಯಲಕ್ಷ್ಮಿ.!

Recommended Video

Big Boss Kannada Season 6 : ಬಿಗ್ ಬಾಸ್‌ಗೆ ಹೋಗೋದಿಲ್ಲ ಎಂದ ವಿಜಯಲಕ್ಷ್ಮಿ..! | Filmibeat Kannada

'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮ ಶುರುವಾಗಲು ದಿನಗಣನೆ ಆರಂಭ ಆಗಿದೆ. ಅಕ್ಟೋಬರ್ 21 ರಿಂದ 'ಬಿಗ್ ಬಾಸ್' ಆರನೇ ಆವೃತ್ತಿ ಪ್ರಸಾರವಾಗಲಿದೆ. ಈ ಬಾರಿ ಯಾರ್ಯಾರು 'ಬಿಗ್ ಬಾಸ್' ಮನೆಯೊಳಗೆ ಸ್ಪರ್ಧಿಗಳಾಗಿ ಕಾಲಿಡುತ್ತಾರೆ ಎಂಬ ಖಚಿತ ಮಾಹಿತಿ ಸಿಕ್ಕಿಲ್ಲ. ಆದ್ರೆ, ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ತರಹೇವಾರಿ ಪಟ್ಟಿಗಳು ಹರಿದಾಡುತ್ತಿವೆ.

'ಬಿಗ್ ಬಾಸ್' ಕಾರ್ಯಕ್ರಮದಲ್ಲಿ 'ನಾಗಮಂಡಲ' ಚೆಲುವೆ ವಿಜಯಲಕ್ಷ್ಮಿ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಕಳೆದ ಎರಡ್ಮೂರು ಸೀಸನ್ ಗಳಿಂದಲೂ ಕೇಳಿಬರುತ್ತಿದೆ. ಈ ಬಾರಿಯೂ ಅದೇ ಸುದ್ದಿ ಆಗುತ್ತಿದೆ.

ಇತ್ತೀಚೆಗಷ್ಟೇ ಸುದ್ದಿ ವಾಹಿನಿಯಲ್ಲಿ ಕೂತು ತಮ್ಮ ಕಷ್ಟವನ್ನೆಲ್ಲಾ ವಿಜಯಲಕ್ಷ್ಮಿ ಹೊರಹಾಕಿದ್ದರು. ಅದಾದ್ಮೇಲೆ, 'ಬಿಗ್ ಬಾಸ್' ಮನೆಗೆ ವಿಜಯಲಕ್ಷ್ಮಿ ಹೋಗಬಹುದು ಎಂಬ ಲೆಕ್ಕಾಚಾರ ಆರಂಭವಾಯ್ತು.

ಆದ್ರೀಗ, ಕೋಟಿ ಕೊಟ್ಟರೂ 'ಬಿಗ್ ಬಾಸ್' ಮನೆಗೆ ಹೋಗಲ್ಲ ಅಂತ ಕಡ್ಡಿ ತುಂಡು ಮಾಡಿದ ಹಾಗೆ 'ಪಬ್ಲಿಕ್ ಟಿವಿ'ಗೆ ನಟಿ ವಿಜಯಲಕ್ಷ್ಮಿ ಹೇಳಿಕೆ ಕೊಟ್ಟಿದ್ದಾರೆ. ಮುಂದೆ ಓದಿರಿ...

ನನಗೆ ಇಷ್ಟ ಇಲ್ಲ.!

ನನಗೆ ಇಷ್ಟ ಇಲ್ಲ.!

''ನಾನು ಮದ್ರಾಸ್ ನಲ್ಲಿ ಶೂಟಿಂಗ್ ಮಾಡುವಾಗಿನಿಂದಲೂ, 'ಬಿಗ್ ಬಾಸ್' ಮನೆಗೆ ವಿಜಯಲಕ್ಷ್ಮಿ ಹೋಗ್ತಾರೆ ಎಂಬ ಸುದ್ದಿ ಬರುತ್ತಲೇ ಇದೆ. ನಾನು ಯಾವುದೇ ವಿವಾದಗಳನ್ನು ಸೃಷ್ಟಿಸಿದ ನಟಿ ಅಲ್ಲ. ರಿಯಾಲಿಟಿ ಶೋಗೆ ಹೋಗಲು ನನಗೆ ಇಷ್ಟ ಇಲ್ಲ'' ಅಂತಾರೆ ನಟಿ ವಿಜಯಲಕ್ಷ್ಮಿ

ಕೋಟಿ ಕೊಟ್ಟರೂ ಹೋಗಲ್ಲ.!

ಕೋಟಿ ಕೊಟ್ಟರೂ ಹೋಗಲ್ಲ.!

''ಬಿಗ್ ಬಾಸ್' ಕಾರ್ಯಕ್ರಮವನ್ನ ನಾನು ನೋಡುವ ದೃಷ್ಟಿಯೇ ಬೇರೆ. ಅದರಲ್ಲಿ ಇರುವ ಟಾಸ್ಕ್, ನಾಮಿನೇಷನ್ ಗಳಲ್ಲಿ ಪಾಲ್ಗೊಳ್ಳುವುದು ನನಗೆ ಇಷ್ಟ ಇಲ್ಲ. ಐವತ್ತು ಲಕ್ಷ ಅಲ್ಲ, ಒಂದು ಕೋಟಿ ಕೊಡ್ತೀನಿ ಅಂದರೂ ನಾನು ಯಾವತ್ತೂ 'ಬಿಗ್ ಬಾಸ್'ಗೆ ಹೋಗಲ್ಲ'' ಎಂದಿದ್ದಾರೆ ನಟಿ ವಿಜಯಲಕ್ಷ್ಮಿ

ನಿರ್ಮಾಪಕರು ಹಿಂದೇಟು ಹಾಕುತ್ತಿದ್ದಾರೆ

ನಿರ್ಮಾಪಕರು ಹಿಂದೇಟು ಹಾಕುತ್ತಿದ್ದಾರೆ

''ಬಿಗ್ ಬಾಸ್' ಸ್ಪರ್ಧಿಗಳ ಪಟ್ಟಿಯಲ್ಲಿ ಪದೇ ಪದೇ ನನ್ನ ಹೆಸರು ಬರುತ್ತಿರುವ ಕಾರಣ, ನಿರ್ಮಾಪಕರು ನನಗೆ ಅವಕಾಶ ಕೊಡಲು ಹಿಂದೇಟು ಹಾಕುತ್ತಿದ್ದಾರೆ. ನನ್ನ ವೃತ್ತಿ ಜೀವನ ಇದರಿಂದ ಕ್ರಿಟಿಕಲ್ ಆಗುತ್ತೆ. ನನಗೀಗ ತುಂಬಾ ಒಳ್ಳೆಯ ಆಫರ್ಸ್ ಬರುತ್ತಿವೆ. ನನ್ನ ಕೆರಿಯರ್ ಈಗ ಚೆನ್ನಾಗಿ ಆಗುತ್ತಿದೆ. 'ಬಿಗ್ ಬಾಸ್'ನಿಂದಾಗಿ ನನ್ನ ವೃತ್ತಿ ಜೀವನ ಹಾಳಾಗುವುದು ಬೇಡ'' - ವಿಜಯಲಕ್ಷ್ಮಿ, ನಟಿ

ಒಳ್ಳೆ ದುಡ್ಡು ಸಿಗುತ್ತೆ, ನಿಜ

ಒಳ್ಳೆ ದುಡ್ಡು ಸಿಗುತ್ತೆ, ನಿಜ

''ಹಾಗ್ನೋಡಿದ್ರೆ, 'ಬಿಗ್ ಬಾಸ್'ನಿಂದ ಒಳ್ಳೆ ದುಡ್ಡು ಸಿಗುತ್ತದೆ. ಆದ್ರೆ, ನಾನು ಆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ. ಈ ಬಗ್ಗೆ ಕ್ಲಿಯರ್ ಆಗಿದ್ದೇನೆ'' - ವಿಜಯಲಕ್ಷ್ಮಿ, ನಟಿ

More from Filmibeat

English summary
I will not participate in Bigg Boss says Kannada Actress Vijayalakshmi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X