ಒಂದೂವರೆ ತಿಂಗಳು ನರಕಯಾತನೆ ; ಆಸ್ಪತ್ರೆಗೆ ದಾಖಲಾಗಿದ್ದೇಕೆ 'ವಧು' ಖ್ಯಾತಿಯ ದುರ್ಗಶ್ರೀ ?

ಬಣ್ಣದ ಲೋಕ ಅನೇಕರ ಆಕರ್ಷಣೆಯ ಕ್ಷೇತ್ರ. ಕಿರುತೆರೆ ಇರಲಿ.. ಬೆಳ್ಳಿತೆರೆ ಇರಲಿ .. ಕನಸೆಂಬ ಕುದುರೆಯನ್ನೇರಿದ ಅನೇಕರು ತಮ್ಮ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಳ್ಳಲು ಈ ಕಡೆ ಬರುತ್ತಾರೆ. ಕೆಲವರು ಗೆಲ್ಲುತ್ತಾರೆ. ಕೆಲವರು ಸೋಲುತ್ತಾರೆ.

ಇನ್ನು, ಸಾಮಾನ್ಯವಾಗಿ ಬಣ್ಣದ ಜನ ಅಂದರೆ ಅನೇಕರು ಮೂಗು ಮುರಿಯುತ್ತಾರೆ. ಹಲವರು ಮನೆಯವರ ವಿರೋಧ ಕಟ್ಟಿಕೊಂಡು ಈ ಬಣ್ಣದಲ್ಲಿ ಭವಿಷ್ಯವನ್ನು ಹುಡುಕುತ್ತಾರೆ. ಮತ್ತೂ ಕೆಲವರು ಮನೆಯವರ ಪ್ರೋತ್ಸಾಹದಿಂದ ಮುನ್ನುಗ್ಗುತ್ತಾರೆ. ಸಾಧನೆಯ ಶಿಖರಕ್ಕೇರಲೇಬೇಕೆಂಬ ಶಪಥ ಮಾಡಿ ಹಗಲಿರುಳು ಪ್ರಯತ್ನ ಮಾಡುತ್ತಾರೆ. ಆದರೆ ಕೆಲ ಒಮ್ಮೆ ಈ ಪ್ರಯಾಣದಲ್ಲಿ ಅಗ್ನಿ ಪರೀಕ್ಷೆಗಳು ಎದುರಾಗುತ್ತಾವೆ. ಇದರಿಂದ ಕೆಲವರ ಕನಸು ಕಮರಿ ಹೋದರೆ, ಇನ್ನು ಕೆಲವರಿಗೆ ಆರೋಗ್ಯ ಕೈ ಕೊಡುತ್ತೆ. ಉದಾಹರಣೆಗೆ ದುರ್ಗಶ್ರೀ ಅವರನ್ನೇ ತೆಗೆದುಕೊಳ್ಳಿ.

ICU Medical Emergency Durgashree Breaks Silence on Her Ended Career Dreams

ಹೌದು, ದುರ್ಗಶ್ರೀ.. ಕನ್ನಡ ಕಿರುತೆರೆಯ ''ನೇತ್ರಾವತಿ''. ಉದಯ ಟಿವಿ ಮೂಲಕ ಬಣ್ಣದ ಯಾತ್ರೆ ಶುರು ಮಾಡಿದ ದುರ್ಗಶ್ರೀ ಆ ನಂತರ ''ವಧು'' ಧಾರಾವಾಹಿಯ ಮೂಲಕ ಜನ ಮನ ಗೆದ್ದರು. ಕಲರ್ಸ್ ಕನ್ನಡದಲ್ಲಿ ಈ ಧಾರಾವಾಹಿ ಪ್ರಸಾರವಾಗಿತ್ತು.

ಇನ್ನು ಕನ್ನಡದಲ್ಲಿ ಮಾತ್ರವಲ್ಲ ತೆಲುಗಿನಲ್ಲಿಯೂ ದುರ್ಗಶ್ರೀ ತಮ್ಮ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಂಡರು. ''ಅರ್ಧಾಂಗಿ''.. ''ಮಧುರಾ ನಗರಿಯಲೋ''.. ಧಾರಾವಾಹಿಯಲ್ಲಿ ಕಾಣಿಸಿಕೊಂಡರು. ತಮ್ಮ ಅಭಿನಯದಿಂದ ಆಂಧ್ರದೆಲ್ಲೆಡೆ ಮನೆ ಮಾತಾದರು.

''ಸಂಧ್ಯಾರಾಗಂ'' ಇವರ ಮತ್ತೊಂದು ಜನಪ್ರಿಯ ತೆಲುಗು ಧಾರಾವಾಹಿ. ಈ ಟಿವಿ ತೆಲುಗು ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಈ ''ಸಂಧ್ಯಾರಾಗಂ'' ಧಾರಾವಾಹಿಯ ಮೂಲಕ ದುರ್ಗಶ್ರೀ ತೆಲುಗು ರಾಜ್ಯದ ಮನ ಮನೆ ತಲುಪಿದ್ದರು.

ಆದರೆ ಅದೊಂದು ದಿನ ಹೆಸರು-ಕೀರ್ತಿ ನೀಡಿದ ''ಸಂಧ್ಯಾರಾಗಂ'' ಧಾರಾವಾಹಿಯಿಂದ ಏಕಾಏಕಿ ದುರ್ಗಶ್ರೀ ಹೊರ ಬಂದರು. ದುರ್ಗಶ್ರೀ ಅವರ ಈ ನಡೆ ಹಲವರನ್ನು ಅಚ್ಚರಿಗೆ ದೂಡಿತ್ತು. ''ಸಂಧ್ಯಾರಾಗಂ'' ಧಾರಾವಾಹಿಯಿಂದ ದುರ್ಗಶ್ರೀ ಹೊರ ಬಂದಿದ್ದೇಕೆ ಎನ್ನುವ ಪ್ರಶ್ನೆ ಹಲವರಲ್ಲಿತ್ತು. ಈ ಪ್ರಶ್ನೆಗೆ ಈಗ ಖುದ್ದು ದುರ್ಗಶ್ರೀ ಉತ್ತರ ನೀಡಿದ್ಧಾರೆ.

icu-medical-emergency-durgashree-breaks-silence-on-her-ended-career-dreams

ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿರುವ ದುರ್ಗಶ್ರೀ, ''ಸಂಧ್ಯಾರಾಗಂ'' ಶುರುವಾಗಿ ಇಂದಿಗೆ ಸರಿಯಾಗಿ ಒಂದು ವರ್ಷ ತುಂಬಿದೆ. ಈ ಧಾರಾವಾಹಿಯಿಂದ ನೀವ್ಯಾಕೆ ಹೊರಬಂದ್ರಿ ಎಂದು ಸಾಕಷ್ಟು ಮಂದಿ ಕೇಳುತ್ತಿದ್ದರು. ತುಂಬಾ ಚೆನ್ನಾಗಿ ನಟಿಸುತ್ತಿದ್ದಿರಿ, ಆದರೂ ಕೂಡ ಧಾರಾವಾಹಿಯಿಂದ ಹೊರ ನಡೆದಿದ್ದೇಕೆ..? ನಿಮ್ಮ ಈ ನಿರ್ಧಾರಕ್ಕೆ ಕಾರಣವೇನು..? ಸ್ಪಷ್ಟನೆಯನ್ನು ಕೂಡ ಕೊಡುತ್ತಿಲ್ಲ ಯಾಕೆ..? ಎಂದು ಬೇಸರ ವ್ಯಕ್ತಪಡಿಸಿದ್ದರು ಎಂದು ಹೇಳಿದ್ದಾರೆ. ಆ ಸಮಯದಲ್ಲಿ ನಾನು ಯಾವುದಕ್ಕೂ ಉತ್ತರ ಕೊಡುವಂತಹ ಪರಿಸ್ಥಿತಿಯಲ್ಲಿ ಇರಲಿಲ್ಲ ಎಂದು ಹೇಳಿದ್ದಾರೆ.

ಮುಂದುವರೆದು''ಸಂಧ್ಯಾರಾಗಂ'' ಅದ್ಭುತವಾದ ತಂಡ ಹಾಗೂ ನನ್ನ ಕನಸಿನ ಪ್ರಾಜೆಕ್ಟ್ ಆಗಿತ್ತು ಎಂದು ಹೇಳಿರುವ ದುರ್ಗಶ್ರೀ, ಆ ಅವಕಾಶ ಸಿಕ್ಕಾಗ ನನ್ನ ಕನಸು ನನಸಾದಂತೆ ನಾನು ಸಂಭ್ರಮಿಸಿದ್ದೆ ಎಂದು ಹೇಳಿದ್ದಾರೆ. ಆದರೆ, ದುರದೃಷ್ಟವಶಾತ್ ನನ್ನ ಆರೋಗ್ಯ ಸಮಸ್ಯೆಯಿಂದಾಗಿ ನಾನು ಈ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಯಿತು ಎಂದು ಹೇಳಿರುವ ದುರ್ಗಶ್ರೀ, ಹೈದರಾಬಾದ್‌ನಲ್ಲಿ ಒಂದು ಶೆಡ್ಯೂಲ್ ಶೂಟಿಂಗ್ ಮುಗಿಸಿ ಬೆಂಗಳೂರಿಗೆ ಬಂದ ತಕ್ಷಣ ನನ್ನ ಆರೋಗ್ಯದಲ್ಲಿ ಏರುಪೇರಾಯ್ತು ಎಂದು ಹೇಳಿದ್ದಾರೆ.

ಆರೋಗ್ಯ ಹದಗೆಟ್ಟ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಬೇಕಾಯ್ತು ಎಂದು ಹೇಳಿರುವ ದುರ್ಗಶ್ರೀ ಆಗ ನನ್ನ ಗರ್ಭಾಶಯದಲ್ಲಿ ಗಂಟು ಇರುವುದು ಪತ್ತೆಯಾಯಿತು ಎಂದು ಹೇಳಿದ್ದಾರೆ. ವೈದ್ಯರು ನನ್ನನ್ನು ತಕ್ಷಣ ಐಸಿಯುಗೆ ಶಿಫ್ಟ್ ಮಾಡಿದರು. ತಪಾಸಣೆಯ ನಂತರ ತುರ್ತಾಗಿ ಶಸ್ತ್ರಚಿಕಿತ್ಸೆಯ ಅಗತ್ಯವಿತ್ತು ಎಂದು ಹೇಳಿರುವ ದುರ್ಗಶ್ರೀ ಆಪರೇಷನ್ ನಂತರ ಸುಮಾರು ಒಂದೂವರೆ ತಿಂಗಳ ಕಾಲ ಸಂಪೂರ್ಣ ಬೆಡ್ ರೆಸ್ಟ್‌ನಲ್ಲಿ ಇರಬೇಕಾಯಿತು ಎಂದು ಹೇಳಿದ್ದಾರೆ.

English summary
Actress Durgashree breaks her silence on the medical emergency that forced her off the screen. Find out what happened during her month-long health battle.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X