Amruthadhaare ; 6 ವರ್ಷಗಳ ವಿರಹ ವೇದನೆ ಅಂತ್ಯ, ಒಂದಾದ ಗೌತಮ್ ಮತ್ತು ಭೂಮಿಕಾ - ಕ್ಲೈಮ್ಯಾಕ್ಸ್ ಬಂದೇ ಬಿಡ್ತಾ?

''ಅಮೃತಧಾರೆ'' ಧಾರಾವಾಹಿಯನ್ನು ಕಣ್ತುಂಬಿಕೊಳ್ಳುವ ಪ್ರೇಕ್ಷಕರು ಗೌತಮ್ ಮತ್ತು ಭೂಮಿಕಾ ಪುನರ್ಮಿಲನಕ್ಕೆ ಕಾಯುತ್ತಿದ್ದರು. ಆದರೆ ಆ ಘಳಿಗೆ ಇಲ್ಲಿಯವರೆಗೆ ಬಂದಿರಲಿಲ್ಲ. ಕಳೆದ ಐದು ವರ್ಷಗಳಿಂದ ಬೇರೆ ಬೇರೆ ಆಗಿ ಬದುಕಿ ಈಗ ಕಳೆದೊಂದು ವರ್ಷದಿಂದ ಒಂದೇ ವಠಾರದಲ್ಲಿ ವಾಸ ಮಾಡುತ್ತಿರುವ ಗೌತಮ್ ಮತ್ತು ಭೂಮಿಕಾ ಹಲವು ಬಾರಿ ಒಂದಾಗುವ ಪ್ರಯತ್ನ ಮಾಡಿದರೂ ಕೂಡ ಕಾಲ ಕೂಡಿ ಬಂದಿರಲಿಲ್ಲ.

ಒಂದಿಲ್ಲೊಂದು ಸಮಸ್ಯೆ ಅಥವಾ ಒಂದಿಲ್ಲೊಂದು ರೀತಿಯ ಮನಸ್ತಾಪ ಇಬ್ಬರ ನಡುವೆ ಬರುತ್ತಿತ್ತು. ಇನ್ನೂ ಹಲವು ಬಾರಿ ಇಬ್ಬರು ಒಂದಾದರು ಎಂದುಕೊಂಡಾಗಲೇ ಅದು ಕನಸೆಂದು ಗೊತ್ತಾಗಿ ಪ್ರೇಕ್ಷಕರು ಹಿಡಿ ಶಾಪ ಹಾಕಿದ್ದು ಇದೆ. ಆದರೆ ಈಗ ಹಲವರು ಕಾತುರದಿಂದ ಕಾಯುತ್ತಿದ್ದ ಆ ಅಮೃತ ಘಳಿಗೆ ಕೊನೆಗೆ ಬಂದಂತೆ ಇದೆ.

Is this the Climax Amruthadhaare s Jan 11 Promo Reveals the Reunion Everyone Was Praying For

ಹೌದು, ''ಅಮೃತಧಾರೆ'' ಧಾರಾವಾಹಿಯಲ್ಲಿ ಸದ್ಯ ಗೌತಮ್ ಮತ್ತು ಭೂಮಿಕಾ ಕಳೆದು ಹೋದ ಮಗುವನ್ನು ಜೊತೆಯಾಗಿ ಹುಡುಕುತ್ತಿದ್ದಾರೆ. ಹೀಗಾಗಿ ಆಕಾಶ್ ಮತ್ತು ಮಿಂಚುನ ಶಾಲೆಯಿಂದ ಕರೆದುಕೊಂಡು ಬರುವ ಜವಾಬ್ಧಾರಿಯನ್ನು ಇಬ್ಬರು ಮಲ್ಲಿಗೆ ವಹಿಸಿದ್ದಾರೆ.

ಈ ಹಿನ್ನೆಲೆ ಆಕಾಶ್ ಮತ್ತು ಮಿಂಚು ಬಸ್‌ಸ್ಟ್ಯಾಂಡ್‌ನಲ್ಲಿ ಕುಳಿತುಕೊಂಡು ಮಲ್ಲಿಯ ದಾರಿಯನ್ನು ಕಾಯುತ್ತಿರುತ್ತಾರೆ. ಇದೇ ಸಮಯದಲ್ಲಿ ಭೂಮಿಕಾ ತಂದೆ ಸದಾಶಿವ ಬಸ್‌ಸ್ಟ್ಯಾಂಡ್ ಬಳಿ ಬಂದಿದ್ದಾರೆ.

ಇನ್ನು ಎಲ್ಲರಿಗೆ ಗೊತ್ತಿರುವಂತೆ ಈ ಹಿಂದೆಯೇ ಆಕಾಶ್ ಮತ್ತು ಸದಾಶಿವನ ಪರಿಚಯ ಆಗಿದೆ. ಆಕಾಶ್‌ನೇ ನನ್ನ ಮೊಮ್ಮಗ ಎನ್ನುವ ಸತ್ಯ ಗೊತ್ತಿರದ ಸದಾಶಿವ, ಆಕಾಶ್‌ನ ಮನಸಾರೆ ಇಷ್ಟ ಪಟ್ಟಿದ್ದಾರೆ. ನನ್ನ ಮೊಮ್ಮಗ ಕೂಡ ಹೀಗೆ ಇರಬಹುದು ಎಂದುಕೊಂಡು ಸಿಕ್ಕವರಿಗೆಲ್ಲ ಆಕಾಶ್ ಬಗ್ಗೆ ಹೇಳುತ್ತಿರುತ್ತಾರೆ.

ಹೀಗಾಗಿ ಆಕಾಶ್‌ನ ಕಂಡು ಅಚ್ಚರಿ ಮತ್ತು ಖುಷಿ ಪಡುವ ಸದಾಶಿವ ಸದ್ಯ ಆಕಾಶ್‌ನ ಮಾತನಾಡಿಸಿದ್ದಾರೆ. ಸದಾಶಿವಗೆ ಮಿಂಚುನ ಆಕಾಶ್ ಪರಿಚಯ ಮಾಡಿಸಿದ್ದಾನೆ.

Is this the Climax Amruthadhaare s Jan 11 Promo Reveals the Reunion Everyone Was Praying For

ಈಗ ಸದಾಶಿವನ ಆಕಾಶ್ ವಠಾರಕ್ಕೆ ಕರೆದುಕೊಂಡು ಬಂದಿದ್ದಾನೆ. ವಠಾರದಲ್ಲಿ ತಂದೆ ಮತ್ತು ಮಗಳ ಮುಖಾಮುಖಿಯಾಗಿದ್ದು ಆರು ವರ್ಷಗಳ ನಂತರ ಇಬ್ಬರು ಮನ ಬಿಚ್ಚಿ ಮಾತನಾಡಿದ್ದಾರೆ. ದೇವರಂತಹ ಅಳಿಯ ಗೌತಮ್‌ನ ದೂರ ಮಾಡಿದ್ದಕ್ಕೆ ಭೂಮಿಕಾಗೆ ಸದಾಶಿವ ಬುದ್ದಿ ಮಾತನ್ನು ಹೇಳಿದ್ದು ಮಗಳೇ, ತನ್ನ ಸರ್ವಸ್ವವನ್ನೂ ತ್ಯಾಗ ಮಾಡಿ, ನಿನಗೋಸ್ಕರ ಕಾಯುತ್ತಿದ್ದಾರೆ, ಇನ್ನು ಹಠ ಮಾಡಬೇಡ, ಒಪ್ಪಿಕೊಂಡು ಬಿಡು ಎಂದು ಹೇಳಿದ್ದಾರೆ. ಭೂಮಿಕಾ ಕೂಡ ತಲೆಯಾಡಿಸಿದ್ದಾಳೆ.

ಭೇಟಿಯಾಗಲು ಗೌತಮ್‌ನ ಭೂಮಿಕಾ ಕರೆದಿದ್ದು, ಗೌತಮ್ ಬಂದಿದ್ದಾನೆ. ಭಾವುಕಗೊಂಡಿದ್ದಾನೆ. ಇನ್ನು ಸಾಕು ಗೌತಮ್‌ ಅವರೇ, ಇನ್ನು ದೂರ ಇರೋದು ಬೇಡ, ಕೊನೆ ಉಸಿರು ಇರೋವರೆಗೂ ಒಟ್ಟಿಗೆ ಬಾಳೋಣ ಎಂದು ಭೂಮಿಕಾ ಕಣ್ಣೀರು ಹಾಕುತ್ತಾ ಹೇಳಿದ್ದು ಗೌತಮ್‌ ನನ್ನ ಮನಸ್ಸು ನೀವು ನನ್ನನ್ನು ಎಷ್ಟು ಪ್ರೀತಿ ಮಾಡ್ತೀರಾ ಅಂತ ಹೇಳುತ್ತಾನೇ ಇತ್ತು, ಒಂದಲ್ಲ ಒಂದು ದಿನ ನೀವು ನನ್ನ ಒಪ್ಪಿಕೊಳ್ತೀರಾ ಅಂತ ಗೊತ್ತಿತ್ತು ಎಂದು ಹೇಳಿದ್ದಾನೆ.

ಈ ಮೂಲಕ ಗೌತಮ್ ಮತ್ತು ಭೂಮಿಕಾಳ 6 ವರ್ಷದ ವಿರದ ವೇದನೆ ಅಂತ್ಯಗೊಂಡಿದ್ದು, ಇಬ್ಬರು ಒಂದಾಗಿದ್ದಾರೆ. ಸದ್ಯ ಈ ಪ್ರೋಮೋ ನೋಡಿ ''ಅಮೃತಧಾರೆ''ಯ ಹಲವಾರು ಪ್ರೇಕ್ಷಕರು ಖುಷಿಯಾಗಿದ್ದು ನಮ್ಮ ಪ್ರಾರ್ಥನೆ ಫಲಿಸಿತು, ಈ ಕ್ಷಣಕ್ಕಾಗಿ ನಾವು ಎಷ್ಟು ದಿನದಿಂದ ಕಾಯುತ್ತಿದ್ದೇವು ಎಂದೆಲ್ಲಾ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.

ಇನ್ನು ಇದೇ ವೇಳೆ ಗೌತಮ್ ಮತ್ತು ಭೂಮಿಕಾ ಒಂದಾದರೆ ಧಾರಾವಾಹಿ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಂತೆಯೇ. ಕೇವಲ ಗೌತಮ್ ಮತ್ತು ಭೂಮಿಕಾ ಮಾತ್ರ ಒಂದಾಗಿಲ್ಲ. ಬದಲಿಗೆ ಸದಾಶಿವನ ಕುಟುಂಬ ಕೂಡ ಜೊತೆಯಲ್ಲಿದೆ. ಭಾಗ್ಯಮ್ಮ ಕೂಡ ಜೊತೆಯಲ್ಲಿದ್ದಾಳೆ. ಈ ಹಿನ್ನೆಲೆ ಧಾರಾವಾಹಿ ಕ್ಲೈಮ್ಯಾಕ್ಸ್‌ ಹಂತಕ್ಕೆ ತಲುಪಿತಾ ಎನ್ನುವ ಪ್ರಶ್ನೆ ಕೂಡ ಹಲವರನ್ನು ಕಾಡುತ್ತಿದೆ. ಶಕುಂತಲಾ ಮತ್ತು ಜೈದೇವ್ ಇಷ್ಟು ಬೇಗ ತಮ್ಮ ಆಟ ಮುಗಿಸುವುದಿಲ್ಲ ಎನ್ನುವ ಅಭಿಪ್ರಾಯ ಕೂಡ ವ್ಯಕ್ತವಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಧಾರಾವಾಹಿ ಮತ್ಯಾವುದಾದರೂ ತಿರುವು ಪಡೆಯುತ್ತಾ..? ಅಥವಾ ಅಂತ್ಯಗೊಳ್ಳುತ್ತಾ..? ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
Gowtham and Bhoomika Reunion: Latest Amruthadhaare promo reveals the long-awaited moment. See how the power couple reunites after 6 years in this Jan 11 update.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X