Pallavi Gowda: "ಹೌದು.. ನಾನು ಸಿಂಗಲ್, ಆದ್ರೆ ಮಿಂಗಲ್ ಆಗೋಕೆ ರೆಡಿಯಿಲ್ಲ" ಎಂದ ಸೇವಂತಿ
ಕನ್ನಡ ಕಿರುತೆರೆಯಿಂದ ದೂರವಾಗಿ ವರುಷಗಳೇ ಕಳೆದರೂ ಇಂದಿಗೂ ಕನ್ನಡ ವೀಕ್ಷಕರ ಫೇವರಿಟ್ ಎನಿಸಿಕೊಂಡಿರುವ ನಟಿ ಪಲ್ಲವಿ ಗೌಡ ಹೊಸ ಸುದ್ದಿ ಕೊಟ್ಟಿದ್ದಾರೆ. ಸವಿರುಚಿ ಕಾರ್ಯಕ್ರಮ ಹಾಗೂ ಸೇವಂತಿ ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ಚಿರಪರಿಚಿತರಾದ ಪಲ್ಲವಿ ಗೌಡ ಈಗ ಪರಭಾಷೆಯ ಬಹುಬೇಡಿಕೆಯ ನಟಿ.
ಕನ್ನಡದ ಕಿರುತೆರೆಯಲ್ಲಿ ಹಲವು ವರ್ಷಗಳ ಕಾಲ ಅಭಿನಯಿಸಿರುವ ಪಲ್ಲವಿ ಗೌಡ ಬಹುತೇಕ ಧಾರಾವಾಹಿಗಳಲ್ಲಿ ನಾಯಕಿ ಪಾತ್ರದಲ್ಲಿ ನಟಿಸಿದ್ದರು. ಜೊತೆಗೆ ಖಳ ನಾಯಕಿ ರೋಲ್‌ನಲ್ಲೂ ಕಾಣಿಸಿಕೊಂಡಿದ್ದಾರೆ.

ಕೇವಲ ಕಿರುತೆರೆಗಷ್ಟೇ ಮೀಸಲಾಗಿರದ ಪಲ್ಲವಿ ಗೌಡ ಅವರು ಸಿನಿಮಾಗಳಿಗೂ ಬಣ್ಣ ಹಚ್ಚಿದ್ದಾರೆ. ಹಲವು ಸಿನಿಮಾಗಳಲ್ಲಿ ಮಿಂಚಿದ್ದು, ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡ ಮಾತ್ರವಲ್ಲದೇ, ತೆಲುಗು, ಮಳಯಾಳಂ ಭಾಷೆಗಳಲ್ಲೂ ಪಲ್ಲವಿ ಗೌಡ ಅವರು ನಟಿಸಿದ್ದಾರೆ.
ಕನ್ನಡದ ನಟಿ ಪರಭಾಷೆಯಲ್ಲಿ
ಸದಾ ಆಕ್ಟೀವ್ ಆಗಿರುವ ಪಲ್ಲವಿ ಗೌಡ ಒಂದಲ್ಲಾ ಒಂದು ಕೆಲಸದಲ್ಲಿ ಬ್ಯುಸಿಯಾಗಿರುತ್ತಾರೆ. ಏಕಕಾಲಕ್ಕೆ ಎರಡರಿಂದ ಮೂರು ಸೀರಿಯಲ್‌ಗಳಲ್ಲಿ ಒಟ್ಟಿಗೆ ನಟಿಸುತ್ತಾರೆ. ಕಿರುತೆರೆಯಲ್ಲಿ ಈ ಮಟ್ಟದಲ್ಲಿ ಹೆಸರು ಪಡೆಯಲು ಪಲ್ಲವಿ ಗೌಡ ತುಂಬಾನೇ ಕಷ್ಟಪಟ್ಟಿದ್ದಾರೆ. ಅತಿಹೆಚ್ಚು ಲೀಡ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪಲ್ಲವಿ ನಟನೆಯ ಜೊತೆಗೆ ನೃತ್ಯ ಕೂಡ ಮಾಡುತ್ತಾರೆ. ಇನ್ನು ಪಲ್ಲವಿ ಗೌಡಗೆ ಕಿರುತೆರೆಯಲ್ಲಿ ಬಹಳ ಬೇಡಿಕೆ ಇದ್ದು, ಒಟ್ಟೊಟ್ಟಿಗೆ ಎರಡೆರಡು ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ.
ಬಹುಬೇಡಿಕೆಯ ನಟಿ
ಪಲ್ಲವಿ ಗೌಡ ಪುಟ್ಟ ಮುಖದ ಮುದ್ದು ಚೆಲುವೆ ಪಲ್ಲವಿ ಗೌಡ ಎಂದರೂ ತಪ್ಪಾಗೋದಿಲ್ಲ. ಇವರು ನೋಡುವುದಕ್ಕೆ ಸೌಂದರ್ಯದ ಗಣಿಯಂತೆಯೇ ಕಾಣುತ್ತಾರೆ. ಕನ್ನಡ ಕಿರುತೆರೆಯಲ್ಲಿ 'ಚಂದ್ರ ಚಕೋರಿ', 'ಮನೆಯೊಂದು ಮೂರು ಬಾಗಿಲು', 'ಗಾಳಿಪಟ', 'ಜೋಡಿಹಕ್ಕಿ', 'ಪರಿಣಯ', ಸೇರಿದಂತೆ ಹಲವು ಮೆಗಾ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಬಳಿಕ ಪರಭಾಷೆಗೆ ಹಾರಿದ ಈ ಬೆಡಗಿ ಈಗಲೂ ಬಹುಬೇಡಿಕೆಯ ನಾಯಕಿ. ತೆಲುಗು ಹಾಗೂ ಮಳಯಾಳಂ ಭಾಷೆಯಲ್ಲೂ ನಟಿಸಿರುವ ಪಲ್ಲವಿ ಗೌಡ 'ಪಸುಪು ಕುಂಕುಮಂ', 'ಅಲ್ಲಿ ಆಂಬೆಲ್', 'ಚದುರಂಗಂ' ಮುಂತಾದ ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದಾರೆ.

ತೆಲುಗಿನಲ್ಲಿ ಬ್ಯುಸಿಯಾಗಿರುವ ಬೆಡಗಿ
ಪಕ್ಕಡ ತೆಲುಗು ಕಿರುತೆರೆಯಿಂದ ಪಲ್ಲವಿ ಗೌಡಗೆ ಆಫರ್ ಬಂದಾಗ ಭಾಷೆ ಬರುತ್ತಿರಲಿಲ್ಲವಂತೆ. ಆದರೆ, ನಟನೆ ಆರಂಭಿಸಿದ ಹದಿನೆಂಟೇ ದಿನಕ್ಕೆ ತೆಲುಗು ಕಲಿತಿದ್ದು ಹೆಮ್ಮೆಯ ವಿಷಯವೇ ಸರಿ. ನಂತರ 'ಜೋಡಿಹಕ್ಕಿ'ಯಲ್ಲಿ ನೆಗೆಟಿವ್ ಪಾತ್ರದಲ್ಲಿ ನಟಿಸಿರುವ ಪಲ್ಲವಿ ಅವರಿಗೆ ನಾಯಕಿ ಹಾಗೂ ಖಳನಾಯಕಿ ಪಾತ್ರಗಳೆರಡೂ ಒಲಿದು ಬರುತ್ತಿವೆ. ಇನ್ನು ಪಲ್ಲವಿಗೆ ಖಳನಾಯಕಿ ಪಾತ್ರಗಳೆಂದರೆ ಇಷ್ಟವಂತೆ. ಸದ್ಯ ತೆಲುಗು ಕಿರುತೆರೆಯಲ್ಲಿ ಮಿಂಚುತ್ತಿರುವ ಪಲ್ಲವಿ ಅವರಿಗೆ ಒಳ್ಳೊಳ್ಳೆಯ ಪಾತ್ರವಿರುವ ಧಾರಾವಾಹಿಗಳಿಂದಲೂ ಆಫರ್ ಬರುತ್ತಿವೆಯಂತೆ. ಸದ್ಯ ತೆಲುಗಿನ 'ನಿಂಡು ನೂರೆಲ್ಲಾ ಸಾವಾಸಮ್' ಎಂಬ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
ಪಲ್ಲವಿ ಹೊಸ ಪ್ರಾಜೆಕ್ಟ್
ಇಂದಿಗೂ ಪಲ್ಲವಿ ಗೌಡ ಅವರು ಸೇವಂತಿ, ನಂದಿನಿ ಹೆಸರಿನ ಮೂಲಕವೇ ಚಿರಪರಿಚಿತರಾಗಿದ್ದು, ಸಿನಿಮಾಗಳಲ್ಲೂ ನಟಿಸಿದ್ದಾರೆ. 'ಪ್ರೇಮ ಗೀಮ ಜಾನೆ ದೋ' ಚಿತ್ರದ ಮೂಲಕ ಪಲ್ಲವಿ ಬೆಳ್ಳಿತೆರೆಗೆ ಎಂಟ್ರಿಕೊಟ್ಟರು. ಬಳಿಕ 'ಕಿಡಿ', 'ಕೊಡೆ ಮುರುಗ' 'ಜೋಡಿಹಕ್ಕಿ' ಹಾಗೂ 'ನಮ್ ಗಣಿ ಬಿಕಾಂ ಪಾಸು' ಚಿತ್ರಗಳಲ್ಲಿ ನಟಿಸಿದ್ದಾರೆ. ಇದೀಗ ಅಭಿಮಾನಿಗಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸುವಾಗ ಕನ್ನಡ ಧಾರಾವಾಹಿಯಲ್ಲಿ ಮತ್ತೆ ನಟಿಸಲಿ ಎಂದು ಬಯಸುತ್ತಿರುವವರಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಅಭಿಮಾನಿಯೊಬ್ಬರು ಸಿಂಗಲ್ ಆ ಎಂದು ಕೇಳಿದ್ದಕ್ಕೆ ಹೌದು ಸಿಂಗಲ್, ಆದರೆ ಮಿಂಗಲ್ ಆಗಲು ರೆಡಿಯಿಲ್ಲ ಎಂದಿದ್ದಾರೆ. ಫೇವರಿಟ್ ಕಲರ್ ವೈಟ್ ಮತ್ತು ರೆಡ್ ಎಂದು ಹೇಳಿದ್ದಾರೆ. ಇನ್ನು ಕನ್ನಡದ ಧಾರಾವಾಹಿ ಹಾಗೂ ಸಿನಿಮಾದಲ್ಲಿ ನಟಿಸುತ್ತೀರಾ? ಎಂದು ಕೇಳಿದ್ದಕ್ಕೆ ಶೀಘ್ರದಲ್ಲೇ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಅಲ್ಲಿಗೆ ಪಲ್ಲವಿ ಅವರು ಕನ್ನಡ ಸಿನಿಮಾ ಪ್ರಾಜೆಕ್ಟ್‌ನಲ್ಲಿ ಬ್ಯುಸಿಯಾಗಿರುವುದು ಪಕ್ಕಾ ಆಗಿದೆ.


Click it and Unblock the Notifications











