Drama Juniors Season 4 Contestants : ಡ್ರಾಮಾ ಜೂನಿಯರ್ಸ್ ಮೆಗಾ ಆಡಿಷನ್, 25 ಮಕ್ಕಳು ಆಯ್ಕೆ!
ವೀಕೆಂಡ್‌ನಲ್ಲಿ ಪ್ರೇಕ್ಷಕರನ್ನು ರಂಜಿಸಲು ಜೀ ಕನ್ನಡ ವಾಹಿನಿ ಹತ್ತು ಹಲವು ರಿಯಾಲಿಟಿ ಶೋ ಗಳನ್ನು ನಡೆಸಿ ಕೊಟ್ಟಿದೆ. ಅದರಲ್ಲಿ ಒಂದು ಡ್ರಾಮಾ ಜೂನಿಯರ್ಸ್. ಮಕ್ಕಳಿಂದ ಹಿರಿಯರವರೆಗೂ ಡ್ರಾಮಾ ಜೂನಿಯರ್ಸ್ ವೀಕ್ಷಕರನ್ನು ರಂಜಿಸಿದೆ. ಈ ಹಿಂದೆ ಪ್ರತಿ ವಾರ ಭಿನ್ನ-ವಿಭಿನ್ನ ಸ್ಕಿಟ್‌ಗಳಿಂದ ಪ್ರೇಕ್ಷಕರನ್ನು ಸೆಳೆದಿತ್ತು.
ಸಾಕಷ್ಟು ಮನೋರಂಜನಾತ್ಮಕ ಅಂಶಗಳಿರುವ ಡ್ರಾಮಾ ಜೂನಿಯರ್ಸ್ ಈಗ ಮತ್ತೆ ಶುರುವಾಗಿದೆ. ಡ್ರಾಮಾ ಜೂನಿಯರ್ಸ್ ಸೀಸನ್ 4ರಲ್ಲಿ ಕರ್ನಾಟಕದ ಮೂಲೆ ಮೂಲೆಗಳಿಂದ ಪುಟಾಣಿಗಳು ಆಗಮಿಸಿದ್ದಾರೆ. ಮೆಗಾ ಆಡಿಷನ್‌ನಲ್ಲಿ ಪಾಸ್ ಆದವರಿಗೆ ಜ್ಯೂರಿಗಳು ಪದಕ ಹಾಕಿ ಬರಮಾಡಿಕೊಂಡಿದ್ದಾರೆ.
ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮದ ಮೆಗಾ ಆಡಿಷನ್ ಆರಂಭವಾಗಿದೆ. ಎರಡನೇ ವಾರವೂ ಡ್ರಾಮಾ ಜೂನಿಯರ್ಸ್ ಮೆಗಾ ಆಡಿಷನ್‌ಗೆ ಪುಟಾಣಿಗಳು ಬಂದು ತಮ್ಮ ಟ್ಯಾಲೆಂಟ್ ತೋರಿಸಿದರು. ಮಕ್ಕಳ ಪ್ರತಿಭೆಯನ್ನು ಕಂಡು ಜಡ್ಜ್‌ಗಳು ಬೆರಗಾದರು. ಕೊನೆಗೆ ಕೆಲವರನ್ನು ಆಯ್ಕೆ ಮಾಡಿದರು.

ಡ್ರಾಮಾ ಜೂನಿಯರ್ಸ್‌ಗೆ 25 ಮಕ್ಕಳು ಆಯ್ಕೆ!
ಸದ್ಯ ಡ್ರಾಮಾ ಜೂನಿಯರ್ಸ್ ಗೆ ಇದುವರೆಗೂ 25 ಮಕ್ಕಳು ಆಯ್ಕೆ ಆಗಿದ್ದಾರೆ. ವಿಶ್ವ ಶಂಕರ್ ಲಕ್ಕುಂಡಿ, ಪೂರ್ವಿ, ಸಮೃದ್ಧಿ, ಚಿರಂತೆ ಕುಂಬಾರ್, ಅಪೇಕ್ಷಾ, ವೇದಿಕ್ ಕೌಶಲ್, ಸಾತ್ವಿಕ್ ಸತೀಶ್, ಭಾರ್ಗವ್ ಗೌಡ, ರಚನಾ, ಪರಿಚಿತ್, ರೇಶ್ಮಾ, ಧನ್ಯಾ ದಿನೇಶ್, ಪ್ರಾರ್ಥನಾ ರಾಯ್ಕರ್, ಭೈರವಿ ಸೇರಿದಂತೆ ಹಲವರು ಆಯ್ಕೆ ಆಗಿದ್ದಾರೆ. ಮುಂದಿನ ವಾರವೂ ಮೆಗಾ ಆಡಿಷನ್ ನಡೆಯಲಿದ್ದು, ಒಟ್ಟು 36 ಮಕ್ಕಳನ್ನು ಆಯ್ಕೆ ಮಾಡಿಕೊಳ್ಳಬೇಕಿದೆ.

ಕಾರ್ಯಕ್ರಮಕ್ಕೆ ಬೇಕು 36 ಮಕ್ಕಳು!
ಡ್ರಾಮಾ ಜೂನಿಯರ್ಸ್ ಮೂಲಕ ಪುಟ್ಟ ಮಕ್ಕಳ ಪ್ರತಿಭೆಯನ್ನು ಅನಾವರಣ ಮಾಡಲಾಗುತ್ತದೆ. ಈ ಬಾರಿಯೂ ಕೂಡ ಈ ಕಾರ್ಯಕ್ರಮದಲ್ಲಿ ಹಲವು ಮಕ್ಕಳು ಪಾಲ್ಗೊಂಡಿದ್ದಾರೆ. ತಮ್ಮ ಅಭಿನಯದ ಮೂಲಕ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದ್ದಾರೆ. ಕಾರ್ಯಕ್ರಮದ ಜಡ್ಜ್‌ಗಳನ್ನು ಮೆಚ್ಚಿಸಿ ಈಗಾಗಲೇ 25 ಜಡ್ಜ್‌ಗಳು ಆಯ್ಕೆ ಆಗಿದ್ದಾರೆ. ಕಾರ್ಯಕ್ರಮದಲ್ಲಿ ಒಟ್ಟು 36 ಮಕ್ಕಳು ಇರಲಿದ್ದಾರೆ.

ರವಿಚಂದ್ರನ್, ರಚಿತಾ ಬಗ್ಗೆ ಜೂಲಿ ಲಕ್ಷ್ಮೀ ಮಾತು!
ಡ್ರಾಮಾ ಜೂನಿಯರ್ಸ್ ಮೊದಲ ಸೀಸನ್ ಆರಂಭವಾದಾಗಿನಿಂದ ಹಿರಿಯ ನಟಿ ಲಕ್ಷ್ಮೀ ಅವರು ಜಡ್ಜ್ ಆಗಿ ಮುಂದುವರಿದಿದ್ದಾರೆ. ಮಕ್ಕಳ ಜೊತೆ ಸಮಯ ಕಳೆಯಲು ಬಯಸುವ ಅವರು, ಡ್ರಾಮಾ ಜೂನಿಯರ್ಸ್ ಗಾಗಿ ಪ್ರತೀ ವಾರವೂ ಬೆಂಗಳೂರಿಗೆ ಬರುತ್ತಾರೆ. ಇನ್ನು ಮಕ್ಕಳ ಜೊತೆ ಶೂಟಿಂಗ್‌ಗೆ ಹೋಗಿ ಬಂದಾಗಲೆಲ್ಲಾ ತುಂಬಾ ಫ್ರೆಶ್ ಆಗಿರುತ್ತೇನೆ. ಮುದ್ದು ಮಕ್ಕಳ ಜೊತೆ ಸೇರಿ ನಾನು ಮಗುವಾಗಿ ಬಿಡುತ್ತೇನೆ. ಈ ಶೋ ನಲ್ಲಿ ನಾನು ಎಲ್ಲವನ್ನೂ ಮರೆತು ಬಿಡುತ್ತೇನೆ. ನಕ್ಕು ನಕ್ಕೂ ಹೊಟ್ಟೆ ಹುಣ್ಣಾಗುತ್ತದೆ. ಮಕ್ಕಳ ಅಭಿನಯ ನೋಡಲು ಚೆಂದ. ಮಕ್ಕಳಿಂದ ನಾನು ತುಂಬಾ ಕಲಿತಿದ್ದೇನೆ. ಜಡ್ಜ್ ಮಾಡುವುದು ಸುಲಭದ ಕೆಲಸವಲ್ಲ. ಜೊತೆಗೆ ಕ್ರೇಜಿ ಸ್ಟಾರ್ ರವಿಚಂದ್ರನ್ ಹಾಗೂ ರಚಿತಾ ರಾಮ್ ಜೊತೆ ಕೆಲಸ ಮಾಡುತ್ತಿರುವುದರಲ್ಲಿ ಖುಷಿ ಇದೆ ಎಂದು ನಟಿ ಲಕ್ಷ್ಮೀ ಹೇಳಿದ್ದಾರೆ.

ಮಕ್ಕಳೊಂದಿಗೆ ಮಗುವಾದ ನಟಿ ರಚಿತಾ ರಾಮ್!
ಡ್ರಾಮಾ ಜೂನಿಯರ್ಸ್ ನ ಮೆಗಾ ಆಡಿಷನ್ ಗೆ ಬಂದಿರುವ ಮಕ್ಕಳು ಒಬ್ಬರಿಗಿಂತ ಒಬ್ಬರು ಅದ್ಭುತವಾಗಿ ನಟಿಸುತ್ತಿದ್ದಾರೆ. ಮಕ್ಕಳ ಅಭಿನಯಕ್ಕೆ ಜಡ್ಜ್ ಗಳು ಫುಲ್ ಫಿದಾಗಿದ್ದಾರೆ. ಇನ್ನು ಸಾಗರದಿಂದ ಬಂದಿದ್ದ ಪುಟಾಣಿ ರಿಧಿ ಶರಪಂಜರದಲ್ಲಿನ ಕಲ್ಪನಾ ಪಾತ್ರವನ್ನು ಅದ್ಭುತವಾಗಿ ನಟಿಸಿ ತೋರಿಸಿದಳು. ಆಕೆಗೆ ಮೆಡಲ್ ತೊಡಿಸಲಾಯ್ತು. ರಿಧಿ ಅಭಿನಯಕ್ಕೆ ಮನಸೋತ ರಚಿತಾ ರಾಮ್ ವೇದಿಕೆ ಮೇಲೆ ಹೋಗಿ ಆಕೆಯ ಜೊತೆಗೆ ತಾವೂ ನಟಿಸಿ ತೋರಿಸಿದರು. ಇದನ್ನು ನೋಡಿ ಖುಷಿಪಟ್ಟ ಆ ಕಂದ ತನ್ನ ಮೆಡಲ್ ಅನ್ನು ತೆಗೆದು ರಚಿತಾ ರಾಮ್ ಅವರಿಗೆ ಹಾಕಿದಳು. ಅದ್ಭುತವಾಗಿ ನಟಿಸಿದಿರಿ ಎಂದು ಹೇಳಿದಳು. ಇದಕ್ಕೆ ಭಾವುಕರಾದ ರಚಿತಾ ರಾಮ್ ನಮ್ಮ ನಟನೆಯನ್ನು ಮೆಚ್ಚಿಕೊಂಡು ಮೆಡಲ್ ಹಾಕಿದ ಬಾಲಕಿ ಎದುರು ನಾವು ಸಣ್ಣವರೇ ಎಂದರು.


Click it and Unblock the Notifications











