ವಿವಾಹ ಸಂಭ್ರಮದಲ್ಲಿ ಕನ್ನಡದ 'ಇನ್ಸ್ ಪೆಕ್ಟರ್ ಝಾನ್ಸಿ' ನಟಿ ನೇಹಾ.!

ಕೊಡಗಿನ ಕುವರಿ, ಕನ್ನಡ ನಟಿ ಪ್ರೇಮ ಪೊಲೀಸ್ ಅಧಿಕಾರಿಯಾಗಿ ಅಭಿನಯಿಸಿದ 2005 ರಲ್ಲಿ ಬಿಡುಗಡೆ ಆಗಿದ್ದ ಕನ್ನಡ ಸಿನಿಮಾ 'ಇನ್ಸ್ ಪೆಕ್ಟರ್ ಝಾನ್ಸಿ'. ಈ ಚಿತ್ರದ ಒಂದು ಪಾತ್ರದಲ್ಲಿ ನೇಹಾ ಪೇಂಡ್ಸೆ ನಟಿಸಿದ್ದರು.

ಅಸಲಿಗೆ, ನೇಹಾ ಪೇಂಡ್ಸೆ ಮುಂಬೈ ಮೂಲದ ಮರಾಠಿ ನಟಿ. ಹಿಂದಿ, ತೆಲುಗು ಮತ್ತು ಮರಾಠಿ ಚಿತ್ರಗಳಲ್ಲಿ ಗುರುತಿಸಿಕೊಂಡಿರುವ ನೇಹಾ ಪೇಂಡ್ಸೆ ಬಾಲನಟಿಯಾಗಿ ಚಿತ್ರರಂಗಕ್ಕೆ ಪ್ರವೇಶಿಸಿದವರು.

ಹಿಂದಿಯ 'ಬಿಗ್ ಬಾಸ್' ಕಾರ್ಯಕ್ರಮದಲ್ಲೂ ಸ್ಪರ್ಧಿಸಿದ್ದ ನೇಹಾ ಪೇಂಡ್ಸೆ ಇದೀಗ ವಿವಾಹ ಸಂಭ್ರಮದಲ್ಲಿದ್ದಾರೆ. ಇನಿಯ ಶಾರ್ದೂಲ್ ಸಿಂಗ್ ಕೈ ಹಿಡಿಯುತ್ತಿದ್ದಾರೆ ನೇಹಾ ಪೇಂಡ್ಸೆ. ಇಂದು ನೇಹಾ ಪೇಂಡ್ಸೆ ಮತ್ತು ಶಾರ್ದೂಲ್ ಸಿಂಗ್ ವಿವಾಹ ಮಹೋತ್ಸವ ನಡೆಯಲಿದೆ. ಇದಕ್ಕೂ ಮುನ್ನ ನಡೆದ ಮೆಹಂದಿ ಮತ್ತು ಸಂಗೀತ ಕಾರ್ಯಕ್ರಮದ ಫೋಟೋಗಳು ಇಲ್ಲಿವೆ, ನೋಡಿರಿ...

ವಿವಾಹ ಪೂರ್ವ ಕಾರ್ಯಕ್ರಮಗಳು

ವಿವಾಹ ಪೂರ್ವ ಕಾರ್ಯಕ್ರಮಗಳು

ಚಿತ್ರರಂಗ ಮತ್ತು ಕಿರುತೆರೆಯಲ್ಲೂ ಖ್ಯಾತಿ ಪಡೆದಿರುವ ನೇಹಾ ಪೇಂಡ್ಸೆ ವಿವಾಹ ಇವತ್ತು ಪುಣೆಯಲ್ಲಿ ಮರಾಠಿ ಸಂಪ್ರದಾಯದಂತೆ ಅದ್ಧೂರಿಯಾಗಿ ನಡೆಯಲಿದೆ. ವಿವಾಹಕ್ಕೂ ಮುನ್ನ ನಡೆದ ಪೂಜಾ ಕಾರ್ಯಕ್ರಮಗಳಲ್ಲಿ ನೇಹಾ ಪೇಂಡ್ಸೆ ಖುಷಿಯಿಂದ ಸಂಭ್ರಮಿಸಿದ್ದು ಹೀಗೆ..

ಮೆಹಂದಿ ಮತ್ತು ಸಂಗೀತ ಕಾರ್ಯಕ್ರಮ

ಮೆಹಂದಿ ಮತ್ತು ಸಂಗೀತ ಕಾರ್ಯಕ್ರಮ

ನಿನ್ನೆಯಷ್ಟೇ ನೇಹಾ ಪೇಂಡ್ಸೆಯವರ ಮೆಹಂದಿ ಮತ್ತು ಸಂಗೀತ ಸಮಾರಂಭ ನಡೆಯಿತು. ಸಂಗೀತ ಕಾರ್ಯಕ್ರಮದಲ್ಲಿ ಕಲರ್ ಫುಲ್ ಆಗಿರುವ ಲೆಹಂಗಾದಲ್ಲಿ ನೇಹಾ ಪೇಂಡ್ಸೆ ಕಂಗೊಳಿಸಿದರೆ, ಕಲರ್ ಫುಲ್ ಕುರ್ತಾದಲ್ಲಿ ಶಾರ್ದೂಲ್ ಸಿಂಗ್ ಮಿಂಚಿದರು. ಕೈಗೆ ಮದರಂಗಿ ಹಾಕಿಸಿಕೊಂಡು ನೇಹಾ ಪೇಂಡ್ಸೆ ಸಂಭ್ರಮಿಸಿದ್ದಾರೆ.

ಲವ್ ಕಮ್ ಅರೇಂಜ್ಡ್ ಮ್ಯಾರೇಜ್

ಲವ್ ಕಮ್ ಅರೇಂಜ್ಡ್ ಮ್ಯಾರೇಜ್

ನಟಿ ನೇಹಾ ಪೇಂಡ್ಸೆ ಮತ್ತು ಶಾರ್ದೂಲ್ ಸಿಂಗ್ ರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ವರ್ಷದ ಹಿಂದೆಯಷ್ಟೇ ಪಾರ್ಟಿಯೊಂದರಲ್ಲಿ ನೇಹಾ-ಶಾರ್ದೂಲ್ ಭೇಟಿ ಮಾಡಿದ್ದರು. ಅಲ್ಲಿಂದಲೇ ಸ್ನೇಹಿತರಾದ ಇವರಿಬ್ಬರ ಮಧ್ಯೆ ಪ್ರೀತಿ ಚಿಗುರೊಡೆಯಿತು. ಮೂರೇ ತಿಂಗಳಲ್ಲಿ ನೇಹಾ ಪೇಂಡ್ಸೆಗೆ ಶಾರ್ದೂಲ್ ಸಿಂಗ್ ಲವ್ ಪ್ರಪೋಸ್ ಮಾಡಿದರು. ಮದುವೆ ಆಗಲು ಮುಂದಾದ ಇವರಿಬ್ಬರಿಗೆ ಕುಟುಂಬ ಕೂಡ ಗ್ರೀನ್ ಸಿಗ್ನಲ್ ನೀಡಿತು.

ಕಿಸ್ ಕೊಟ್ಟಿದ್ದ ನೇಹಾ

ಕಿಸ್ ಕೊಟ್ಟಿದ್ದ ನೇಹಾ

ಮದುವೆಗೂ ಮುನ್ನ ಭಾವಿ ಪತಿ ಶಾರ್ದೂಲ್ ಸಿಂಗ್ ಗೆ ನೇಹಾ ಪೇಂಡ್ಸೆ ಕಿಸ್ ನೀಡಿದ್ದ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇಬ್ಬರ ಲವ್ವಿ ಡವ್ವಿಗೆ ನೆಟ್ಟಿಗರು ಕ್ಲೀನ್ ಬೌಲ್ಡ್ ಆಗಿದ್ದಾರೆ.

ನೇಹಾ ಪೇಂಡ್ಸೆ ಕುರಿತು..

ನೇಹಾ ಪೇಂಡ್ಸೆ ಕುರಿತು..

ಹಿಂದಿಯ 'ದೀವಾನೆ', 'ಡ್ರೀಮ್ಸ್', 'ಸ್ವಾಮಿ', ಕನ್ನಡದ 'ಇನ್ಸ್ ಪೆಕ್ಟರ್ ಝಾನ್ಸಿ', ತೆಲುಗಿನ 'ವೀಧಿ ರೌಡಿ', ತಮಿಳಿನ 'ಮೌನಂ ಪೇಸಾದೆ', ಮರಾಠಿಯ 'ಟೂರಿಂಗ್ ಟಾಕೀಸ್', 'ಬೋಲ್ ಬೇಬಿ ಬೋಲ್', 'ನಟ್ ಸಾಮ್ರಾಟ್' ಸೇರಿದಂತೆ ಅನೇಕ ಚಿತ್ರಗಳಲ್ಲಿ ನೇಹಾ ಪೇಂಡ್ಸೆ ಅಭಿನಯಿಸಿದ್ದಾರೆ.

ಕಿರುತೆರೆಯಲ್ಲಿ ನೇಹಾ ಪೇಂಡ್ಸೆ ಫೇಮಸ್

ಕಿರುತೆರೆಯಲ್ಲಿ ನೇಹಾ ಪೇಂಡ್ಸೆ ಫೇಮಸ್

'ಪಡೋಸನ್', 'ಮೀಟಿ ಮೀಟಿ ಬಾತೇ', 'ಮೇ ಐ ಕಮ್ ಇನ್ ಮೇಡಮ್', 'ಕಾಮಿಡಿ ದಂಗಲ್' ಮುಂತಾದ ಜನಪ್ರಿಯ ಶೋಗಳಲ್ಲಿ ಕಾಣಿಸಿಕೊಂಡು ಕಿರುತೆರೆಯಲ್ಲೂ ಖ್ಯಾತಿ ಪಡೆದಿದ್ದಾರೆ ನೇಹಾ ಪೇಂಡ್ಸೆ. ಹಿಂದಿಯ 'ಬಿಗ್ ಬಾಸ್-12' ನಲ್ಲಿ ನೇಹಾ ಪೇಂಡ್ಸೆ ಸ್ಪರ್ಧಿಯಾಗಿದ್ದರು.

More from Filmibeat

English summary
TV Actress Neha Pendse and Shardul Singh Bayas Mehendi and Sangeeth ceremony photos
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X