‘ಜೈ ಮಾರುತಿ ಯುವಕ ಮಂಡಲ (ರಿ)’ ತುಳು ಚಿತ್ರಕ್ಕೆ ಸಿಕ್ತು ಚಾಲನೆ

By Harshitha

ಮಂಗಳೂರು : ರೀವನ್ ಸಿನಿ ಕ್ರಿಯೇಷನ್ಸ್ ಬ್ಯಾನರ್‌ ನಡಿಯಲ್ಲಿ ತಯಾರಾಗುತ್ತಿರುವ ಚೊಚ್ಚಲ ತುಳು ಚಿತ್ರ 'ಜೈ ಮಾರುತಿ ಯುವಕ ಮಂಡಲ (ರಿ)' ಮುಹೂರ್ತ ಸಮಾರಂಭ ಇಂದು ಬೆಳಗ್ಗೆ 9ಕ್ಕೆ ಹಳೆಕೋಟೆ ಶ್ರೀ ಮುಖ್ಯಪ್ರಾಣ ದೇವಸ್ಥಾನ, ಬೋಳಾರ, ಮಂಗಳೂರಿನಲ್ಲಿ ನಡೆಯಿತು.

'ದೊಂಬರಾಟ'.. ತುಳು ಸಿನಿಮಾದ ನಿರ್ದೇಶಕ ರಾಜೇಶ್ ಬ್ರಹ್ಮಾವರ್ ಕ್ಲಾಪ್ ಮಾಡುವ ಮೂಲಕ 'ಜೈ ಮಾರುತಿ ಯುವಕ ಮಂಡಲ (ರಿ)' ಚಿತ್ರಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಚಿತ್ರದ ಯಶಸ್ಸಿಗೆ ಮತ್ತು ಚಿತ್ರ ತಂಡದ ಕಲಾವಿದರಿಗೆ ಶುಭ ಹಾರೈಸಿದರು.

In pics: Tulu Movie Jai Maruthi Yuvaka Mandala Muhoortha

'ಒಂದು ಮೊಟ್ಟೆಯ ಕಥೆ' ಸಿನಿಮಾದ ರಾಜ್ ಬಿ ಶೆಟ್ಟಿ, ಚಿತ್ರ ನಿರ್ದೇಶಕ ಸಾಯಿ ಕೃಷ್ಣ ಕುಡ್ಲ, ಪ್ರವೀಣ್ ಶೆಟ್ಟಿ, ಕನ್ನಡ ಸಿನೆಮಾ ನಿರ್ಮಾಪಕ ಹೇಮಂತ್ ಸುವರ್ಣ, ನಟ ಚೇತಕ್ ಪೂಜಾರಿ ಸೇರಿದಂತೆ ಹಲವರು 'ಜೈ ಮಾರುತಿ ಯುವಕ ಮಂಡಲ (ರಿ)' ಚಿತ್ರದ ಮುಹೂರ್ತಕ್ಕೆ ಸಾಕ್ಷಿ ಆದರು.

'ಕೋಳಿ ಕಳ್ರು' ಚಿತ್ರಕ್ಕೆ ನಿರ್ಮಾಪಕರಾಗಿದ್ದ ರಿಚರ್ಡ್ ಕಾರ್ಕಳ ಈ ಚಿತ್ರಕ್ಕೂ ಬಂಡವಾಳ ಹಾಕುತ್ತಿದ್ದಾರೆ. ಈ ಚಿತ್ರಕ್ಕೆ ಪ್ರಜ್ವಲ್ ಕುಮಾರ್ ಅತ್ತಾವರ ಆಕ್ಷನ್ ಕಟ್ ಹೇಳುತ್ತಿದ್ದಾರೆ.

In pics: Tulu Movie Jai Maruthi Yuvaka Mandala Muhoortha

ಚಿತ್ರಕ್ಕೆ ನಾಯಕ ನಟನಾಗಿ ಸ್ವರಾಜ್ ಶೆಟ್ಟಿ, ನಾಯಕಿಯಾಗಿ ಶಿಲ್ಪಾ ಶೆಟ್ಟಿ ಹಾಗೂ ಪ್ರಮುಖ ಹಾಸ್ಯ ಪಾತ್ರಗಳಲ್ಲಿ ಅರವಿಂದ ಬೋಳಾರ್, ದೀಪಕ್ ರೈ, ಉಮೇಶ್ ಮಿಜಾರ್, ಸುನಿಲ್ ನೆಲ್ಲಿಗುಡ್ಡೆ, ಜೆ.ಪಿ ತೂಮಿನಾಡ್, ಮನೋಜ್ ಕಾರ್ಕಳ, ಪ್ರಕಾಶ್ ತೂಮಿನಾಡ್ ಸೇರಿದಂತೆ ಹಲವರು ತಾರಾಗಣದಲ್ಲಿ ಇದ್ದಾರೆ. ಇಂದು ಮುಹೂರ್ತ ಮುಗಿಸಿರುವ ಈ ಚಿತ್ರದ ಚಿತ್ರೀಕರಣ ಸಸಿಹಿತ್ಲು ಬಳಿ 25 ದಿನಗಳಲ್ಲಿ ಒಂದೇ ಹಂತದಲ್ಲಿ ನಡೆಯಲಿದೆ.

More from Filmibeat

English summary
Tulu Movie 'Jai Maruthi Yuvaka Mandala' goes on floors from today (December 15th). Muhoortha held at Halekote Sri Mukhyaprana Temple, Bolar, Mangalore.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X