ಡಿಸ್ಕವರಿಯಲ್ಲಿ ವನಿತೆಯರ ಎವರೆಸ್ಟ್ ಪರ್ವತಾರಾರೋಹಣ

ಭಾರತೀಯ ಭೂಸೈನ್ಯದಲ್ಲಿರುವ ವನಿತಾಧಿಕಾರಿಗಳ ಎವರೆಸ್ಟ್ ಸಾಹಸಗಳನ್ನು ಡಿಸ್ಕವರಿ ಚಾನಲ್ ಪ್ರಸಾರ ಮಾಡಲಿದೆ. ಆದರೆ ಪ್ರಸಾರದ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಈ ಕಾರ್ಯಕ್ರಮದ ಮತ್ತೊಂದು ವಿಶೇಷತೆ ಎಂದರೆ ಇದುವರೆಗೂ ಮಹಿಳೆಯರ್ಯಾರು ಬಳಸದ ಸೌತ್ ರಿಟ್ಜ್ ಹಾದಿಯಲ್ಲಿ ಎವರೆಸ್ಟ್ ಶಿಖರವನ್ನು ಹತ್ತುತ್ತಿರುವುದು.
ಈ ಹಾದಿಯನ್ನು ಈ ಹಿಂದೆ 1953ರಲ್ಲಿ ಎಡ್ಮಂಡ್ ಹಿಲ್ಲರಿ ಹಾಗೂ ತೇನಸಿಂಗ್ ನೋರ್ಗೆ ಬಳಸಿದ್ದರು. ಈ ಶೋ ಇದೇ ವರ್ಷ ಡಿಸ್ಕವರಿ ಚಾನಲ್‌ನಲ್ಲಿ ಪ್ರಸಾರವಾಗಲಿದೆ. ಭಾರತೀಯ ರಾಷ್ಟ್ರೀಯತೆಗೆ ಹಾಗೂ ಯುವ ಜನತೆಯಲ್ಲಿ ಮತ್ತಷ್ಟು ಉತ್ಸಾಹ, ಸ್ಫೂರ್ತಿ ಹಾಗೂ ಶಕ್ತಿಯನ್ನು ತುಂಬಲು ಈ ಕಾರ್ಯಕ್ರಮ ಸಹಾಯಕವಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿವೆ.
ಇನ್ನು ಭಾರತೀಯ ಭೂಸೇನೆಗಂತೂ ಈ ಕಾರ್ಯಕ್ರಮ ಮತ್ತಷ್ಟು ಸ್ಫೂರ್ತಿ ನೀಡಲಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಬಗ್ಗೆ ಲೆಫ್ಟಿನೆಂಟ್ ಜನರಲ್ ಎಸ್.ಪಿ. ತನ್ವೀರ್ ಮಾತನಾಡುತ್ತಾ, "ಈ ರೀತಿಯ ಕಾರ್ಯಕ್ರಮಗಳಿಂದ ಭವಿಷ್ಯದಲ್ಲಿ ಭಾರತೀಯ ಸೈನ್ಯದೊಂದಿಗೆ ಡಿಸ್ಕವರಿ ಚಾನಲ್ ವಿವಿಧ ರೀತಿಯ ಕಾರ್ಯಕ್ರಮಗಳನ್ನು ರೂಪಿಸಲು ಸಹಾಯಕವಾಗುತ್ತದೆ. ಭಾರತೀಯ ಆರ್ಮಿಯಲ್ಲಿನ ಕ್ರೀಡೆಗಳು, ಸಾಹಸಗಳು ಹೊರ ಜಗತ್ತಿಗೆ ಗೊತ್ತಾಗಲಿವೆ" ಎಂದಿದ್ದಾರೆ.
ಈ ಕಾರ್ಯಕ್ರಮಕ್ಕಾಗಿ ಭಾರತೀಯ ಸೈನ್ಯದ ಏಳು ಮಂದಿ ವನಿತಾಧಿಕಾರಿಗಳು ಕೆಲಸ ಮಾಡಿದ್ದಾರೆ. ಡಿಸ್ಕವರಿ ಚಾನಲ್ ಸೌತ್ ಏಷ್ಯಾ ಪ್ರತಿನಿಧಿ ರಾಹುಲ್ ಜುವಾರಿ ಮಾತನಾಡುತ್ತಾ, "ಡಿಸ್ಕವರಿ ಚಾನಲ್ ಈ ರೀತಿಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಾ ಭಾರತೀಯ ಸೈನ್ಯದಲ್ಲಿನ ವನಿತೆಯರ ಧೈರ್ಯ ಸಾಹಸಗಳನ್ನು ಇಡೀ ಜಗತ್ತಿಗೆ ತೋರಿಸುವ ಪ್ರಯತ್ನ ಮಾಡುತ್ತಿದೆ" ಎಂದಿದ್ದಾರೆ. (ಏಜೆನ್ಸೀಸ್)


Click it and Unblock the Notifications