For Quick Alerts
  ALLOW NOTIFICATIONS  
  For Daily Alerts

  ಬಾಯ್ ಫ್ರೆಂಡ್ ಆತ್ಮಹತ್ಯೆ: ಆಘಾತಗೊಂಡ ಗಾಯಕಿ ರೇಣು ಸ್ಥಿತಿ ಗಂಭೀರ

  |

  ಕಿರುತೆರೆಯ ಖ್ಯಾತ ಗಾಯನ ಶೋಗಳಲ್ಲಿ ಒಂದಾಗಿರುವ 'ಇಂಡಿಯನ್ ಐಡಲ್ ಸೀಸನ್ 10'ನ ಸ್ಪರ್ಧಿ ರೇಣು ನಗರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಬಾಯ್ ಫ್ರೆಂಡ್ ಆತ್ಮಹತ್ಯೆ ಮಾಡಿಕೊಂಡ ನಂತರ ರೇಣು ಪ್ರಜ್ಞಾಹೀನ ಸ್ಥಿತಿ ತಲುಪಿದ್ದರು, ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

  ರಾಜಸ್ಥಾನ ಮೂಲದ ಗಾಯಕಿ ರೇಣು, ರವಿ ಶಂಕರ್ ಎನ್ನುವವರನ್ನು ಪ್ರೀತಿಸುತ್ತಿದ್ದರಂತೆ. ಇತ್ತೀಚಿಗೆ ರೇಣು ತನ್ನ ಬಾಯ್ ಫ್ರೆಂಡ್ ರವಿ ಶಂಕರ್ ಜೊತೆ ಮನೆ ಬಿಟ್ಟು ಓಡಿಹೋಗಿದ್ದರು. ಈ ಸಂಬಂಧ ರೇಣು ತಂದೆ, ಜುಲೈ 1ರಂದು ರವಿ ಶಂಕರ್ ವಿರುದ್ಧ ಪೊಲೀಸ್ ಸ್ಟೇಷನ್ ನಲ್ಲಿ ದೂರು ದಾಖಲಿಸಿದ್ದರು. ಮಗಳನ್ನು ಮನವೊಲಿಸಿ ರವಿ ಕರೆದುಕೊಂಡು ಹೋಗಿದ್ದಾರೆ ಎಂದು ರೇಣು ತಂದೆ ಆರೋಪಿಸಿದ್ದರು. ಮುಂದೆ ಓದಿ...

  ಮ್ಯೂಸಿಕ್ ಮಾಫಿಯಾ ವಿರುದ್ಧ ದಂಗೆ?: ಸೋನು ನಿಗಂ ಬೆಂಬಲಕ್ಕೆ ಅದ್ನಾನ್ ಸಮಿ, ಅಲಿಶಾಮ್ಯೂಸಿಕ್ ಮಾಫಿಯಾ ವಿರುದ್ಧ ದಂಗೆ?: ಸೋನು ನಿಗಂ ಬೆಂಬಲಕ್ಕೆ ಅದ್ನಾನ್ ಸಮಿ, ಅಲಿಶಾ

   ವಿಷ ಸೇವಿಸಿ ಬಾಯ್ ಫ್ರೆಂಡ್ ಆತ್ಮಹತ್ಯೆ

  ವಿಷ ಸೇವಿಸಿ ಬಾಯ್ ಫ್ರೆಂಡ್ ಆತ್ಮಹತ್ಯೆ

  ಆಗಸ್ಟ್ 24ರಂದು ಇಬ್ಬರೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು. ಇಬ್ಬರ ಬಳಿ ಹೇಳಿಕೆ ಪಡೆದು ಮನೆಯವರ ಕೈಗೆ ಇವರನ್ನು ಒಪ್ಪಿಸಿದ್ದರು. ಮನೆಗೆ ತೆರಳಿದ್ದ ರವಿ ಗುರುವಾರ ರಾತ್ರಿ ವಿಷ ಸೇವಿಸಿದ್ದಾರೆ. ತಕ್ಷಣ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ರವಿ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

   ತೀವ್ರ ನಿಗಾ ಘಟಕದಲ್ಲಿ ರೇಣು

  ತೀವ್ರ ನಿಗಾ ಘಟಕದಲ್ಲಿ ರೇಣು

  ಬಾಯ್ ಫ್ರೆಂಡ್ ಸಾವಿನ ಸುದ್ದಿ ಕೇಳಿ ರೇಣು ಆಘಾತಗೊಂಡು ಮೂರ್ಛೆ ಹೋಗಿದ್ದಾರೆ. ನಂತರ ರೇಣು ಅವರನ್ನು ಮಿತ್ತಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ರೇಣುಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

  ಖ್ಯಾತ ಪಾಪ್ ಗಾಯಕ ಜಸ್ಟಿನ್ ಬೀಬರ್ ಮೇಲೆ ಲೈಂಗಿಕ ಕಿರುಕುಳ ಆರೋಪಖ್ಯಾತ ಪಾಪ್ ಗಾಯಕ ಜಸ್ಟಿನ್ ಬೀಬರ್ ಮೇಲೆ ಲೈಂಗಿಕ ಕಿರುಕುಳ ಆರೋಪ

   ಬಾಯ್ ಫ್ರೆಂಡ್ ಗೆ ಮದುವೆಯಾಗಿ ಮಕ್ಕಳಿದ್ದಾರೆ

  ಬಾಯ್ ಫ್ರೆಂಡ್ ಗೆ ಮದುವೆಯಾಗಿ ಮಕ್ಕಳಿದ್ದಾರೆ

  ರವಿಗೆ 27 ವರ್ಷ ವಯಸ್ಸಾಗಿದ್ದು, ಆಗಲೇ ಒಂದು ಮದುವೆಯಾಗಿದೆ. ಇಬ್ಬರು ಮಕ್ಕಳು ಸಹ ಇದ್ದಾರೆ. ರವಿ, ರೇಣು ಮನೆಯಲ್ಲಿ ತಬಲಾ ಕ್ಲಾಸ್ ತೆಗೆದುಕೊಳ್ಳುತ್ತಿದ್ದರಂತೆ. ಈ ಸಮಯದಲ್ಲಿ ಇಬ್ಬರ ನಡುವೆ ಪ್ರೀತಿ ಶುರುವಾಗಿದೆ.

  ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಗೆ ಕೊರೊನಾ ಸೋಂಕು ತಗುಲಿದ್ದು ಯಾರಿಂದ?ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಗೆ ಕೊರೊನಾ ಸೋಂಕು ತಗುಲಿದ್ದು ಯಾರಿಂದ?

   ಇಂಡಿಯನ್ ಐಡಲ್ ಶೋ ಬಗ್ಗೆ...

  ಇಂಡಿಯನ್ ಐಡಲ್ ಶೋ ಬಗ್ಗೆ...

  ಸೋನಿ ಟಿವಿಯಲ್ಲಿ ಪ್ರಸಾರವಾಗುವ ಇಂಡಿಯನ್ ಐಡಲ್ ಜನಪ್ರಿಯ ಗಾಯನ ಶೋಗಳಲ್ಲಿ ಒಂದಾಗಿದೆ. ಈ ಕಾರ್ಯಕ್ರಮದ ಜಡ್ಜ್ ಆಗಿ ಖ್ಯಾತ ಗಾಯಕಿ ನೇಹಾ ಕಕ್ಕರ್, ಅನು ಮಲ್ಲಿಕ್ ಮತ್ತು ವಿಶಾಲ್ ದದ್ಲಾನಿ ಇದ್ದಾರೆ. ಈ ಶೋ ದೇಶದಾದ್ಯಂತ ಅತ್ಯುತ್ತಮ ಗಾಯನ ಪ್ರತಿಭೆಗಳನ್ನು ಆಯ್ಕೆ ಮಾಡಿ ಅವರಿಗೆ ವೇದಿಕೆ ಕಲ್ಪಿಸಿ ಕೊಡುತ್ತಿದೆ. ಇಂಡಿಯನ್ ಐಡಲ್ ಸೀಸನ್ 10ರಲ್ಲಿ ರೇಣು ನಗರ್ ಸ್ಪರ್ಧಿಯಾಗಿದ್ದರು. ವಿನ್ನರ್ ಪಟ್ಟ ಸಿಗದಿದ್ದರೂ ಅದ್ಭುತ ಗಾಯನದ ಮೂಲಕ ಪ್ರೇಕ್ಷಕರ ಮನಗೆದ್ದಿದ್ದರು.

  English summary
  Indian Idol 10 contestant Renu Nagar admitted to hospital in critical condition after boyfriend dies by suicide.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X