For Quick Alerts
  ALLOW NOTIFICATIONS  
  For Daily Alerts

  ಇನ್ಫೋಸಿಸ್ ಮಾಜಿ ಉದ್ಯೋಗಿ ಈಗ ಹಾಟ್ ಬೆಡಗಿ

  By ರವಿಕಿಶೋರ್
  |

  ಈ ಫೋಟೋದಲ್ಲಿ ತಮ್ಮ ಸೌಂದರ್ಯದ ಗಣಿಯನ್ನು ತೆರೆದಿಟ್ಟ ಬೆಡಗಿ ಹೆಸರು ಅಂಕಿತಾ ಶರ್ಮ. ಒಂದು ಕಾಲದಲ್ಲಿ ಅಗ್ರಗಣ್ಯ ಸಾಫ್ಟ್ ವೇರ್ ರಫ್ತು ಸಂಸ್ಥೆ ಇನ್ಫೋಸಿಸ್ ಉದ್ಯೋಗಿ. ತಮ್ಮ ಸೌಂದರ್ಯ ಕೇವಲ ನಾಲ್ಕು ಗೋಡೆಗಳ ನಡುವೆ ಸೀಮಿತವಾಗುವುದು ಇಷ್ಟವಿಲ್ಲದೆ ರೂಟು ಬದಲಾಯಿಸಿಕೊಂಡರು.

  ಅಂಕಿತಾ ಕಣ್ಣಿಗೆ ಬಿದ್ದ ಮೊದಲ ದಾರಿಯೇ ಮಾಡೆಲಿಂಗ್. ಅಲ್ಲಿ ಕ್ಯಾಟ್ ವಾಕ್ ಮಾಡುತ್ತಾ ತಮ್ಮ ಅಂದವನ್ನು ತೆರೆದಿಟ್ಟರು. ಆಕೆಯ ಅಂದಚೆಂದಕ್ಕೆ ಮರುಳಾಗದರಿಲ್ಲ. ಸಹಜವಾಗಿಯೇ ಅಂಕಿತಾ ಮೇಲೆ ಹಿಂದಿ ಎಂಟರ್ ಟೈನ್ ಮೆಂಟ್ ಚಾನಲ್ ಗಳ ಕಣ್ಣು ಬಿತ್ತು. ಅಲ್ಲಿಂದ ಅಂಕಿತಾ ಕಿರುತೆರೆಯಲ್ಲಿ ಮಿನುಗತೊಡಗಿದರು.

  ಧಾರಾವಾಹಿಗಳ ಮೂಲಕ ಕಿರುತೆರೆ ವೀಕ್ಷಕರಿಗೆ ಮತ್ತಷ್ಟು ಹತ್ತಿರವಾದರು. ಕಿರುತೆರೆಯಲ್ಲಿ ತಮ್ಮದೇ ಆದಂತಹ ಛಾಪು ಮೂಡಿಸಿದರು. ಬೆಳ್ಳಿತೆರೆಯ ಮೇಲೂ ಬೆಳಗಬೇಕು ಎಂದು ಅಂಕಿತಾ ತಹತಹಿಸುತ್ತಿದ್ದರು. ಕಡೆಗೂ ಆಕೆಯ ಪ್ರಯತ್ನಕ್ಕೆ ಫಲ ಸಿಗಲಿಲ್ಲ.

  ಇಂಥಹಾ ಬ್ಯೂಟಿ ಕಡೆಗೆ ಬಾಲಿವುಡ್ ಕಣ್ಣು ಯಾಕೆ ಬೀಳಲಿಲ್ಲವೋ. ಈಗ ತಮ್ಮ ಹಾಟ್ ಫೋಟೋಗಳನ್ನು ಬಿಡುಗಡೆ ಮಾಡಿ ಬಾಲಿವುಡ್ ಗಮನಸೆಳೆದಿದ್ದಾರೆ. ಕಡೆಗೆ ಬಾಲಿವುಡ್ ನಲ್ಲಿ ಸಿಗದಿದ್ದರೆ ಈ ಬೆಡಗಿಗೆ ನಮ್ಮ ಸ್ಯಾಂಡಲ್ ವುಡ್ ನಲ್ಲಾದರೂ ಅವಕಾಶಗಳು ಸಿಗಲಿ.

  ಹಾಟ್ ಬ್ಯೂಟಿ ಅಂಕಿತಾ ಟೂ ಲೈನ್ ಬಯೋಡಾಟಾ

  ಹಾಟ್ ಬ್ಯೂಟಿ ಅಂಕಿತಾ ಟೂ ಲೈನ್ ಬಯೋಡಾಟಾ

  ಅಂಕಿತಾ ಶರ್ಮಾ ಹುಟ್ಟಿದ್ದು 1987, ಫೆಬ್ರವರಿ 7ರಂದು ದೆಹಲಿಯಲ್ಲಿ. ಪುಣೆ, ಜೈಪುರದಲ್ಲಿ ಇನ್ಫೋಸಿಸ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ.

  ಹಿಂದಿ ಧಾರಾವಾಹಿಗಳಲ್ಲಿ ಚಿರಪರಿಚಿತ ಮುಖ

  ಹಿಂದಿ ಧಾರಾವಾಹಿಗಳಲ್ಲಿ ಚಿರಪರಿಚಿತ ಮುಖ

  ಜೀ ಟಿವಿ, ಸೋನಿ, ಇಮ್ಯಾಜಿನ್, ಲೈಫ್ ಓಕೆ ಚಾನಲ್, ಕಲರ್ಸ್ ಸೇರಿದಂತೆ ಹಿಂದಿಯ ಬಹುತೇಕ ಚಾನಲ್ ಗಳಲ್ಲಿ ಅಂಕಿತಾ ಮುಖ ಚಿರಪರಿಚಿತ. ಕಿರುತೆರೆ ಧಾರಾವಾಹಿಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

  ಉದ್ಯೋಗಕ್ಕೆ ಗುಡ್ ಬೈ ಹೇಳಿದ ಬೆಡಗಿ

  ಉದ್ಯೋಗಕ್ಕೆ ಗುಡ್ ಬೈ ಹೇಳಿದ ಬೆಡಗಿ

  ಇನ್ಫೋಸಿಸ್ ಉದ್ಯೋಗಕ್ಕೆ ಗುಡ್ ಬೈ ಹೇಳಿದ ಬಳಿಕ ಮೊದಲು ಅಡಿಯಿಟ್ಟಿದ್ದೇ ಮಾಡೆಲಿಂಗ್ ಕ್ಷೇತ್ರಕ್ಕೆ. ಬಳಿಕ ಕಿರುತೆರೆಯಲ್ಲಿ ಪ್ರಯಾಣ. ಈಗ ಬೆಳ್ಳಿತೆರೆಗೆ ಅಡಿಯಿಡುವ ಪ್ರಯತ್ನ.

  ಹಲವಾರು ಧಾರಾವಾಹಿಗಳಲ್ಲಿ ನಟನೆ

  ಹಲವಾರು ಧಾರಾವಾಹಿಗಳಲ್ಲಿ ನಟನೆ

  ಹಿಂದಿಯ ಅಗ್ಲೇ ಜನಂ ಮೊಹೆ ಬಿತಿಯಾ ಹಿ ಕಿಜೋ, ಬಾತ್ ಹಮಾರಿ ಪಕ್ಕಿ ಹೈ, ಬೂಗಿ ವೂಗಿ, ಇಂಡಿಯನ್ ಐಡಲ್ 5, ಸವಾರೆ ಸಬ್ಕೆ ಸಪ್ನೆ ಪ್ರೀತೋ, ಅಮೃತ್ ಮಂಥನ್, ರಂಗ್ ರಾಸಿಯಾ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.

  ಬಾಲಿವುಡ್ ಗಮನಸೆಳೆಯುವ ಪ್ರಯತ್ನ

  ಬಾಲಿವುಡ್ ಗಮನಸೆಳೆಯುವ ಪ್ರಯತ್ನ

  ಸದ್ಯಕ್ಕೆ ತಮ್ಮ ಹಾಟ್ ಅಂಡ್ ಬ್ಯೂಟಿಫುಲ್ ಫೋಟೋಗಳನ್ನು ಬಿಡುಗಡೆ ಮಾಡಿದ್ದು ಬಾಲಿವುಡ್ ಗಮನಸೆಳೆಯುವ ಪ್ರಯತ್ನ ಮಾಡಿದ್ದಾರೆ.

  ಐಟಂ ಬೆಡಗಿಯಾದರೆ ಚೆಂದ ಅನ್ನುತ್ತಿದ್ದಾರೆ

  ಐಟಂ ಬೆಡಗಿಯಾದರೆ ಚೆಂದ ಅನ್ನುತ್ತಿದ್ದಾರೆ

  ಅಂಕಿತಾ ಶರ್ಮ ಅಂದಚೆಂದ ವೈಯಾರನ್ನು ನೋಡಿದ ಕೆಲವರು ಈಕೆ ಐಟಂ ಬೆಡಗಿಯಾದರೆ ಸೂಪರ್ ಆಗಿರುತ್ತದೆ ಎಂದು ಭಾವಿಸಿದ್ದಾರೆ. ಈಗಿರುವ ಐಟಂ ಬೆಡಗಿಯರ ಸಾಲಿಗೆ ಈಕೆಯೂ ಸೇರುತ್ತಾರೋ ಏನೋ?

  English summary
  Ankita Sharma is an Indian television actress, born on 7 February 1987. She has worked for Infosys Technologies Ltd. Pune and later moved to Jaipur Office. She is recognized for playing the lead female character, Nimrit Malik, in Life OK's serial Amrit Manthan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X