ಹಲವು ಹುಡುಗಿಯರ ಜೊತೆ ಮಲಗಿ ಎದ್ದಿದ್ದಾನೆ-ಬಿಗ್ ಬಾಸ್ ಸ್ಫರ್ಧಿಯ ಮೇಲೆ ಅನೈತಿಕ ಸಂಬಂಧದ ಬಾಂಬ್ ಎಸೆದ ಮಾಜಿ ಪತ್ನಿ
ಅರೆಂಜ್ ಮ್ಯಾರೇಜ್ ಆಗಿರಲಿ.. ಲವ್ ಮ್ಯಾರೇಜ್ ಆಗಿರಲಿ.. ಮದುವೆಯಾದ ನಂತರ ಒಬ್ಬರ ಮೇಲೊಬ್ಬರಿಗೆ ನಂಬಿಕೆ ಇರಬೇಕು. ಸಂಬಂಧ ಆಳವಾಗಿ ಬೇರೂರಬೇಕು. ಆಗಲೇ ದಾಂಪತ್ಯ ಜೀವನ ಯಶಸ್ವಿಯಾಗಿ ಮುನ್ನಡೆಯಲು ಸಾಧ್ಯ. ಆದರೆ.. ಬದಲಾದ ಈ ಕಾಲದಲ್ಲಿ. ಬದುಕಲು ದೊರೆತ ಅಸಂಖ್ಯ ಅವಕಾಶಗಳು, ವ್ಯಕ್ತಿ ಸ್ವಾತಂತ್ರ್ಯ..ಹೊಂದಾಣಿಕೆ ಕೊರತೆ.. ದೈಹಿಕ ಅತೃಪ್ತಿ.. ಪ್ರೀತಿಯ ಕೊರತೆ..
ಹೀಗೆ ಮುಂತಾದ ಕಾರಣಗಳಿಂದ ಹಲವರು ಮದುವೆಯ ನಂತರ ಅನೈತಿಕ ಸಂಬಂಧಕ್ಕೆ ಹಾತೊರೆಯುತ್ತಿದ್ದಾರೆ. ವೈವಾಹಿಕ ಸಂಬಂಧದಲ್ಲಿ ಸಿಗದಿದ್ದನ್ನು ಹೊರಗಡೆ ಹುಡುಕುವ ಮನೋಭಾವ ಬೆಳೆಸಿಕೊಳ್ಳುತ್ತಿದ್ದಾರೆ. ಒಂದರ್ಥದಲ್ಲಿ ಇಂದು ವೈವಾಹಿಕ ಸಂಬಂಧ ಪವಿತ್ರವಾದ ಅನುಬಂಧ ಎನ್ನುವ ಮಾತಿಗೆ ಬೆಲೆ ಕೊಡುವವರು ತೀರಾ ಕಡಿಮೆಯಾಗಿದ್ದಾರೆ.

ಇದಕ್ಕೆ ಕೈಗನ್ನಡಿ ಎಂಬಂತೆ ಇದೇ ವರ್ಷ ಡೇಟಿಂಗ್ ಆಪ್‌ಗಳಲ್ಲಿ ಒಂದಾದ ''Gleeden'' ಮಾಡಿದ ಅಧ್ಯಯನದ ಪ್ರಕಾರ ಶೇಕಡಾ 48% ದಂಪತಿಗಳಲ್ಲಿ ಗಂಡ ಅಥವಾ ಹೆಂಡತಿಯಲ್ಲಿ ಯಾರಾದರೂ ಒಬ್ಬರು ವಿವಾಹೇತರ ಸಂಬಂಧ ಹೊಂದಿರುತ್ತಾರೆ. ಇದಕ್ಕೆ ಇನ್ನೊಂದು ಉದಾಹರಣೆಯೇ ಅಭಿಷೇಕ್ ಬಜಾಜ್.
ಹೌದು, ಅಭಿಷೇಕ್ ಬಜಾಜ್.. ಹಿಂದಿ ಕಿರುತೆರೆಯ ಆಕ್ಟರ್. ''ಪರವರಿಶ್''... ''ದಿಲ್ ದೇಕೆ ದೇಖೋ''.. ''ಜೂಬಲಿ ಟಾಕೀಸ್''.. ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿರುವ ಅಭಿಷೇಕ್ ಬಜಾಜ್ ''ಸ್ಟೂಡೆಂಟ್ ಆಫ್ ದಿ ಇಯರ್-2''.. ''ಬಬ್ಲಿ ಬೌನ್ಸರ್''.. ಚಿತ್ರಗಳಲ್ಲಿ ಕೂಡ ಕಾಣಿಸಿಕೊಂಡಿದ್ದರು. ಇಂಥಾ ಅಭಿಷೇಕ್ ಬಜಾಜ್ 2017ರಲ್ಲಿ ಆಕಾಂಕ್ಷಾ ಜಿಂದಾಲ್ ಅವರನ್ನು ಮದುವೆಯಾಗಿದ್ದರು.

ವಿಶೇಷ ಅಂದರೆ ಆಕಾಂಕ್ಷಾ ಮತ್ತು ಅಭಿಷೇಕ್ ಬಾಲ್ಯ ಸ್ನೇಹಿತರು. ಒಂದೇ ಶಾಲೆಯಲ್ಲಿ ಓದಿದವರು. ಆ ನಂತರ ಕೆಲ ವರ್ಷ ದೂರವಾಗಿದ್ದ ಇಬ್ಬರು ಶಾಲೆಯ ರೀಯೂನಿಯನ್ ಸಮಯದಲ್ಲಿ ಮತ್ತೆ ಸಿಕ್ಕರು. ಅಲ್ಲಿಂದ ಇಬ್ಬರ ಪ್ರೀತಿ ಶುರುವಾಗಿತ್ತು. 08 ವರ್ಷ ಪರಸ್ಪರ ಇಬ್ಬರು ಪ್ರೀತಿಸಿದ್ದರು ಕೂಡ.
ಇಷ್ಟೆಲ್ಲಾ ಆತ್ಮೀಯತೆ.. ಅನ್ಯೋನ್ಯತೆ ಇದ್ದರು ಕೂಡ ಮದುವೆ ನಂತರ ಇಬ್ಬರ ಸಂಬಂಧದಲ್ಲಿ ಬಿರುಕು ಮೂಡಿತು. ಮದುವೆಯಾದ ಮೂರೇ ವರ್ಷಕ್ಕೆ ಅಂದರೆ 2020ರಲ್ಲಿ ಇವರ ದಾಂಪತ್ಯ ಜೀವನ ಮುರಿದು ಬಿತ್ತು. ಅಲ್ಲಿಂದ ಇಲ್ಲಿಯವರೆಗೆ ಇಬ್ಬರು ಅವರ ಅವರ ಬದುಕನ್ನು ಬದುಕುತ್ತಿದ್ದಾರೆ.
ಸದ್ಯ ತಮ್ಮ ಹಳೆಯ ಜೀವನ ಮರೆತು ಅಭಿಷೇಕ್ ಬಜಾಜ್ ''ಬಿಗ್ ಬಾಸ್ 19'' ಮನೆಯಲ್ಲಿದ್ದಾರೆ. ಗೆಲ್ಲುವ ಛಲದಿಂದ ಆಡುತ್ತಿದ್ದಾರೆ. ಆದರೆ.. ಇತ್ತ ಇವರ ಮಾಜಿ ಪತ್ನಿ ಆಕಾಂಕ್ಷಾ ಜಿಂದಾಲ್ ಇವರ ಮೇಲೆ ಆರೋಪ ಹೊರಿಸಿದ್ದಾರೆ. ಹಲವು ಹುಡುಗಿಯರಿಗೆ ಅಭಿಷೇಕ್ ಬಜಾಜ್ ಮೋಸ ಮಾಡಿದ್ದಾನೆ. ಮಲಗಿ ಎದ್ದಿದ್ದಾನೆ ಎಂದು ಹೇಳಿದ್ದಾರೆ.
ಹೌದು, ಈ ಕುರಿತು ''ವಿವೇಕ್ ಲಾಲ್ವಾನಿ''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಆಕಾಂಕ್ಷಾ ಜಿಂದಾಲ್ ಆಗಿದ್ದೆಲ್ಲವೂ ಒಳ್ಳೆಯದಾಯ್ತು ಎಂದು ಹೇಳಿದ್ದಾರೆ. ಈ ಕುರಿತು ಮಾತನಾಡಿರುವ ಆಕಾಂಕ್ಷಾ ಮದುವೆ ನಂತರ ಎಲ್ಲವೂ ಬದಲಾಯ್ತು.. ನನ್ನ ಹೃದಯ ಛಿದ್ರವಾಯಿತು.. ನನ್ನ ಬದುಕೇ ಹಾಳಾಯ್ತು.. ಮದುವೆ ನಂತರ ಹಲವು ವಿಚಾರಗಳನ್ನು ನಾನು ಒಪ್ಪಿಕೊಳ್ಳಲು ಸಾಧ್ಯವಾಗಲೇ ಇಲ್ಲ ಎಂದು ಹೇಳಿರುವ ಆಕಾಂಕ್ಷಾ ಸಹಜವಾಗಿ ನಾನು ಮೋಸಕ್ಕೊಳಗಾಗಿದ್ದೆ ಹೀಗಾಗಿ ಇನ್ನೂ ಸಂಬಂಧ ಮುಂದುವರೆಸುವುದರಲ್ಲಿ ಅರ್ಥ ಇಲ್ಲ ಎಂದುಕೊಂಡು ಆ ಸಂಬಂಧದಿಂದ ಹೊರ ಬಂದೆ ಎಂದು ಹೇಳಿದ್ದಾರೆ.

ಮುಂದುವರೆದು ಚಿತ್ರರಂಗದ ಅನೇಕ ಹುಡುಗಿಯರ ಜೊತೆ ನನ್ನ ಮಾಜಿ ಪತಿಗೆ ಅನೈತಿಕ ಸಂಬಂಧ ಇತ್ತು ಎಂದು ಹೇಳಿರುವ ಆಕಾಂಕ್ಷಾ ಉದ್ಯಮದಲ್ಲಿರುವ ಹಲವರೇ ನನಗೆ ಸ್ಕ್ರೀನ್ ಶಾಟ್‌ಗಳನ್ನು ಮತ್ತು ಫೋಟೊಗಳನ್ನು ತೋರಿಸಿದ್ದರು ಆಗ ನಾನು ಪ್ರಶ್ನೆ ಮಾಡಿದ್ದೇ. ಆದರೆ ಆತ ತಪ್ಪು ಒಪ್ಪಿಕೊಳ್ಳುವ ಬದಲು ನನ್ನನ್ನೇ ದೂಷಿಸಲು ಶುರು ಮಾಡಿದ್ದ ಎಂದು ಹೇಳಿದ್ದಾರೆ.
ಆತನ ನಡುವಳಿಕೆ ಮಾತ್ರವಲ್ಲ ಆತನ ಮನಸ್ಥಿತಿ ಕೂಡ ಸರಿ ಇರಲಿಲ್ಲ ಎಂದು ಹೇಳಿರುವ ಆಕಾಂಕ್ಷಾ, ನನ್ನನ್ನೂ ಬದುಕಿನಲ್ಲಿ ಕಟ್ಟಿ ಹಾಕುವ ಪ್ರಯತ್ನ ಮಾಡಿದ್ದ. ಬೇರೆ ಎಲ್ಲಿಯೂ ಕೆಲಸಕ್ಕೆ ಹೋಗದಂತೆ ತಡೆದ. ನನ್ನ ಮ್ಯಾನೇಜರ್ ಆಗಿ ಕೆಲಸ ಮಾಡು ಎಂದು ಒತ್ತಾಯ ಮಾಡಿದ ಇದೆಲ್ಲದರಿಂದ ನಾನು ನೊಂದು ಬೆಂದು ಹೋಗಿದ್ದೇ ಎಂದು ಹೇಳಿದ್ಧಾರೆ.
ಸದ್ಯ ಆಕಾಂಕ್ಷಾ ಐಎನ್‌ಜೆ (INJ) ಕಾನೂನು ಸಂಸ್ಥೆಯಲ್ಲಿ ಕಂಪನಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದಲ್ಲದೇ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿ ಕೂಡ ಕೆಲಸ ಮಾಡುತ್ತಿದ್ದಾರೆ. ಇನ್ನೂ ಈ ಸಂದರ್ಶನದ ನಂತರ ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಚರ್ಚೆಯನ್ನು ಕೂಡ ಗಮನಿಸಿರುವ ಆಕಾಂಕ್ಷಾ ಸತ್ಯವನ್ನು ನಾನು ಹೇಳಿದ್ದು ಸಹಾನುಭೂತಿಗಾಗಿಯೂ ಅಲ್ಲ ಆರ್ಥಿಕ ಲಾಭಕ್ಕಾಗಿಯೂ ಅಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.


Click it and Unblock the Notifications











