ಕಿರುತೆರೆಯಿಂದ ದೂರಾದ ನಟಿ ನಯನಾ ಪುಟ್ಟಸ್ವಾಮಿ ಈಗೇನು ಮಾಡುತ್ತಿದ್ದಾರೆ?

By ಪೂರ್ವ

ಪ್ಯಾಟೆ ಹುಡ್ಗಿರ್ ಹಳ್ಳಿ ಲೈಫ್ ರಿಯಾಲಿಟಿ ಶೋ ಮೂಲಕ ಖ್ಯಾತಿ ಪಡೆದವರು ನಯನ ಪುಟ್ಟಸ್ವಾಮಿ. ಸುವರ್ಣ ವಾಹಿನಿಯಲ್ಲಿ ಆರಂಭವಾಗಿ ಅತ್ಯಂತ ಜನಪ್ರಿಯತೆ ಗಳಿಸಿದ್ದ ಪ್ಯಾಟೆ ಹುಡ್ಗಿರ್ ಹಳ್ಳಿ ಲೈಫ್ ಮೊದಲ ಸೀಸನ್ ನ ವಿನ್ನರ್ ನಯನ ಪುಟ್ಟಸ್ವಾಮಿ. ರಿಯಾಲಿಟಿ ಶೋಗಳ ಮೂಲಕ ಮೊದಲು ಜನಪ್ರಿಯತೆ ಪಡೆದು ನಂತರ ಚಿಟ್ಟೆಹೆಜ್ಜೆ ಧಾರವಾಹಿ ಮೂಲಕ ಕಿರುತೆರೆ ಪ್ರವೇಶ ಮಾಡಿದರು.

ಚಿಟ್ಟೆಹೆಜ್ಜೆ ಮತ್ತು ಇನ್ನು ಕೆಲವು ಧರವಾಹಿಗಳು, ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡ ನಯನ, ಪವರ್, ಅಲೆಮಾರಿ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ಹೀರೋಯಿನ್ ಫ್ರೆಂಡ್ ಪಾತ್ರದಲ್ಲಿ ನಟಿಸಿದರು. ಬಿಗ್ ಬಾಸ್ ಕನ್ನಡ ಸೀಸನ್ 8 ರಲ್ಲಿ ಸ್ಪರ್ಧಿಯಾಗಿ ಬಿಗ್ ಮನೆಗೆ ಎಂಟ್ರಿ ಕೊಟ್ಟಿದ್ದರು ನಯನ. ನೇರ ನುಡಿಯ ಸ್ವಭಾವ ಹೊಂದಿದ್ದ ಇವರು ಒಳ್ಳೆಯ ಆಟಗಾರ್ತಿ ಆದರು ಸಹ ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ದಿನಗಳ ಕಾಲ ಉಳಿಯಲು ಸಾಧ್ಯವಾಗಲಿಲ್ಲ. ಕೆಲವು ತಿಂಗಳುಗಳ ಹಿಂದೆ ನಟಿ ನಯನಾ ಪುಟ್ಟಸ್ವಾಮಿ ಗಂಡು ಮಗುವಿಗೆ ಜನ್ಮ ನೀಡಿದ್ದರು ಕೂಡ.ಬಹಳ ಮುದ್ದಾಗಿ ಬೆಳೆದಿದ್ದಾನೆ. ತಮ್ಮ ಮುದ್ದು ಮಗನಿಗೆ ತಾರುಶ್ ಕೃಷ್ಣ ಎಂದು ಹೆಸರು ಇಟ್ಟಿದ್ದಾರೆ.

ನಯನ ಪುಟ್ಟಸ್ವಾಮಿ ಅವರ ಪತಿಯ ಹೆಸರು ಚರಣ್. ಅವರು ಪೆನ್ಸಿಲ್ವೇನಿಯಾದ ಫಿಲಾಡೆಲ್ಫಿಯಾ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ನಯನಾ ಕೂಡ ಈಗ ಪತಿ ಜೊತೆ ಅಲ್ಲಿಯೇ ಇದ್ದಾರೆ. ಹೊರದೇಶದಲ್ಲಿ ಸಿನಿಮಾ ಕುರಿತು ಕೋರ್ಸ್ ಮಾಡುತ್ತಿದ್ದಾರೆ. ಆದಷ್ಟು ಬೇಗ ಭಾರತಕ್ಕೆ ಬಂದು ಕನ್ನಡ ಸಿನಿಮಾಗೆ ಸೇವೆ ಸಲ್ಲಿಸುವ ಆಸೆ ಹೊಂದಿದ್ದಾರೆ.

Information About Actress Nayana Puttaswamy And Her Family

ಬಿಗ್ ಬಾಸ್ ಸೀಸನ್ 6 ರಲ್ಲಿ ನಯನಾ ಭಾಗವಹಿಸಿದ್ದರು. 56 ದಿನಗಳ ಕಾಲ ಅವರು ಬಿಗ್ ಬಾಸ್ ಮನೆಯಲ್ಲಿದ್ದು, ಆಟವಾಡಿ ಹೊರನಡೆದಿದ್ದರು. ಅಷ್ಟೇ ಅಲ್ಲದೆ ಅವರು 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಆಗಮಿಸಿದ್ದರು. ಈ ಶೋನಲ್ಲಿ ಅದ್ಭುತವಾದ ಆಟವಾಡಿ ಟ್ರೋಫಿ ಗೆದ್ದಿದ್ದರು. ನಟ ಅನಂತ್ ನಾಗ್, ಶ್ರೀಮಹದೇವ್ ಜೊತೆ 'ಚಿಟ್ಟೆಹೆಜ್ಜೆ' ಧಾರಾವಾಹಿಯಲ್ಲಿ ನಟಿಸಿದ್ದರು.

Information About Actress Nayana Puttaswamy And Her Family

ಕಿರುತೆರೆ ಜೊತೆಗೆ ಬೆಳ್ಳಿತೆರೆಯಲ್ಲಿಯೂ ಕಾಣಿಸಿಕೊಂಡಿದ್ದ ನಯನಾ, ಸಿದ್ದಾರ್ಥ', 'ಲಿಮಿಟ್', 'ಅಲೆಮಾರಿ', 'ಅಯೋಧ್ಯಪುರಂ' ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. 2018ರಲ್ಲಿ ಚರಣ್ ಜೊತೆ ನಯನಾ ಮದುವೆ ನೆರವೇರಿತ್ತು. ಕನ್ನಡ ಚಿತ್ರರಂಗದ ಅನೇಕರು ಈ ಮದುವೆಗೆ ಆಗಮಿಸಿ ಈ ಜೋಡಿಗೆ ಶುಭ ಕೋರಿದ್ದರು. ಚರಣ್ ವಿಜ್ಞಾನಿಯಾಗಿದ್ದು ಪ್ರಸ್ತುತ ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದಾರೆ.

Recommended Video

KGF 2 Making Video | Ramika Sen | ಶೂಟಿಂಗ್ ಸೆಟ್ ನಲ್ಲಿ ರಮಿಕಾ ಸೇನ್ | Raveena Tandon | Prashanth Neel

More from Filmibeat

English summary
Actress Nayana Puttaswamy who acted in a serial and participated in Bigg Boss is now in USA, learning movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X