'ಬೊಂಬಾಟ್ ಭೋಜನ'ದಲ್ಲಿ ಅಳಿಯ ಪಿಎಂ ಆಗಿದ್ದರ ಬಗ್ಗೆ ಸುಧಾಮೂರ್ತಿ ಹೇಳಿದ್ದೇನು..?
ಸ್ಟಾರ್ ಸುವರ್ಣ ವಾಹಿನಿಯಲ್ಲಿ 'ಬೊಂಬಾಟ್ ಭೋಜನ' ಕಾರ್ಯಕ್ರಮ ಎಲ್ಲರ ಅಚ್ಚುಮೆಚ್ಚಾಗಿದೆ. ಧಾರಾವಾಹಿಗಳ ನಡುವೆ ಬೊಂಬಾಟ್ ಭೋಜನ ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಅದರಲ್ಲೂ ಹೆಂಗಳೆಯರಿಗೆ ಈ ಶೋ ಅಂದ್ರೆ ಇನ್ನಿಲ್ಲದ ಪ್ರೀತಿ. ಅದಕ್ಕೆ ಹೆಚ್ಚಿನ ಕಾರಣವೂ ಸಿಹಿಕಹಿ ಚಂದ್ರು. ಅವರ ನಿರೂಪಣಾ ಶೈಲಿ, ಅವರ ಮಾತುಗಾರಿಕೆ ಎಲ್ಲದಕ್ಕೂ ಮಂದಿ ಫಿದಾ ಆಗಿದ್ದಾರೆ.
ಬೊಂಬಾಟ್ ಭೋಜನದಲ್ಲಿ ಹಲವು ವಿಭಿನ್ನ ಖಾದ್ಯಗಳನ್ನು ಸಿಹಿ ಕಹಿ ಚಂದ್ರು ತೋರಿಸುತ್ತಾ ಹೋಗುತ್ತಾರೆ. ಅದರಲ್ಲೂ ಇತ್ತಿಚೆಗೆ ಅಮೆರಿಕಾಗೆ ಹೋಗಿ, ಅಲ್ಲಿನ ಅದ್ಭುತ ಸ್ಥಳಗಳಲ್ಲೂ ಅಡುಗೆ ಮಾಡಿ, ನೋಡುಗರಿಗೆ ತಮ್ಮ ಅಭಿಮಾನಿಗಳಿಗೆ ಒಂದೊಳ್ಳೆ ಪ್ರೋಗ್ರಾಂ ನೀಡಿದ್ದರು.
ಈಗ ಮಹಿಳಾ ದಿನಾಚರಣೆಗಾಗಿ ಎಲ್ಲರೂ ಇಷ್ಟಪಡುವಂತ ಎಪಿಸೋಡ್ ಒಂದನ್ನು ಮಾಡಿದ್ದಾರೆ. ಸದ್ಯ ಅದರ ಝಲಕ್ ಎಂಬಂತೆ ಪ್ರೋಮೋ ಸಿಕ್ಕಾಪಟ್ಟೆ ಸದ್ದು ಮಾಡ್ತಾ ಇದೆ.

ಸಿಹಿ ಕಹಿ ಚಂದ್ರು ಭೋಜನ ಅಂದ್ರೆ ಫೇವರಿಟ್..!
ಅಡುಗೆ ಕಲಿತಿರುವವರಿಗೆ, ಕಲಿಯುವವರಿಗೆ, ಕಲಿಯಬೇಕು ಎಂದುಕೊಂಡವರಿಗೆ, ರುಚಿ ರುಚಿಯಾದದ್ದನ್ನು ಬಯಸುವವರಿಗೆ, ವೆರೈಟಿ ನಿರೀಕ್ಷೆ ಮಾಡುವವರಿಗೆ ಸಿಹಿ ಕಹಿ ಚಂದ್ರು ದಿ ಬೆಸ್ಟ್ ಪರ್ಸನ್. ಎಲ್ಲಾ ರೀತಿಯಾದ ಅಡುಗೆಯನ್ನು ಪಟಾಪಟ್ ಅಂತ ಸಿಂಪಲ್ ಆಗಿ ಹೇಳಿಕೊಟ್ಟು ಬಿಡುತ್ತಾರೆ. ಹೀಗಾಗಿ ಹೆಂಗಳೆಯರಿಗೆಲ್ಲಾ 'ಬೊಂಬಾಟ್ ಭೋಜನ' ಅಂದ್ರೆ ಮಿಸ್ ಮಾಡದೇ ನೋಡುವಂತ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮಕ್ಕೆ ಸ್ಪೆಷಲ್ ಎನಿಸುವಂತ ಗೆಸ್ಟ್ ಗಳನ್ನೆ ಕರೆಸುತ್ತಾ ಇರುತ್ತಾರೆ. ಅವರಿಂದ ಅಡುಗೆ ಮಾಡಿಸುವುದಲ್ಲದೆ, ಅವರ ಕಥೆಗಳನ್ನೆಲ್ಲಾ ಕೇಳುತ್ತಾ, ಕಾರ್ಯಕ್ರಮಕ್ಕೊಂದು ಹೊಸ ಮೆರುಗನ್ನೇ ತಂದುಕೊಡುತ್ತಾರೆ ಸಿಹಿ ಕಹಿ ಚಂದ್ರು.

ಮಹಿಳಾ ದಿನಾಚರಣೆಗೆ ವಿಶೇಷ ಅತಿಥಿ
ಸ್ಟಾರ್ ಸುವರ್ಣದಲ್ಲಿ ಮೂಡಿ ಬರುತ್ತಿರುವ ರಿಯಾಲಿಟಿ ಶೋಗಳಲ್ಲಿ ವಿಶೇಷ ದಿನಕ್ಕಾಗಿ ವಿಶೇಷ ಕಾರ್ಯಕ್ರಮಗಳನ್ನು ಮಾಡುತ್ತಾ ಇರುತ್ತಾರೆ. ಅದರಲ್ಲೂ ಮಹಿಳಾ ದಿನಾಚರಣೆ ಬೇರೆ ಬರ್ತಾ ಇದೆ. ಈ ಮಹಿಳಾ ದಿನಾಚರಣೆಗೆ ಗೆಸ್ಟ್ ಯಾರು..? ಪ್ರೋಗ್ರಾಂ ಹೇಗಿರುತ್ತೆ ಎಂಬೆಲ್ಲಾ ಕುತೂಹಲ ನೋಡುಗರಿಗೂ ಇರುತ್ತೆ. ಅದಕ್ಕೆ ತಕ್ಕಂತೆ ಎಲ್ಲರ ಅಚ್ಚುಮೆಚ್ಚಿನ ವ್ಯಕ್ತಿಯನ್ನೇ ಅತಿಥಿಯಾಗಿ ಕರೆದಿದ್ದಾರೆ ಸಿಹಿ ಕಹಿ ಚಂದ್ರು. ಮಹಿಳಾ ದಿನಾಚರಣೆಯ ಅಂಗವಾಗಿ ಇನ್ಫೋಸಿಸ್ ಮಾಲಕಿ ಸುಧಾಮೂರ್ತಿ ಅವರನ್ನು ಕರೆಸಿದ್ದಾರೆ.

ರಿಷಿ ಸುನಕ್ ಬಗ್ಗೆ ಸುಧಾಮೂರ್ತಿ ಹೆಮ್ಮೆ
ಸುಧಾಮೂರ್ತಿ ಅಳಿಯ ರಿಷಿ ಸುನಕ್ ಬಗ್ಗೆ ಎಲ್ಲರಿಗೂ ಗೊತ್ತೆ ಇದೆ. ಈಗ ಬ್ರಿಟನ್ ದೇಶದ ಪ್ರಧಾನಿಯಾಗಿದ್ದಾರೆ. ಮೊದಲ ಬಾರಿಗೆ ಪ್ರಧಾನಿಯಾಗಬೇಕಿತ್ತು ಆದ್ರೆ ಲೀಜ್ ಆ ಸ್ಥಾನವನ್ನು ಅಲಂಕರಿಸಿದ್ದರು. ಬಳಿಕ ಬ್ರಿಟನ್ ಆರ್ಥಿಕ ಬಿಕ್ಕಟ್ಟಿಗೆ ಹೆದರಿ ಲೀಜ್ ರಾಜೀನಾಮೆ ನೀಡಿದರು. ಬಳಿಕ ಎಲ್ಲರ ಅನುಮತಿ ಮೇರೆಗೆ ರಿಷಿ ಸುನಕ್ ಪ್ರಧಾನಿಯಾಗಿ ಆಯ್ಕೆಯಾದರು. ಅಳಿಯನ ಬಗ್ಗೆ ಸುಧಾಮೂರ್ತಿ, "ನಮಗೆ ನಮ್ಮ ಅಳಿಯ ಪಿಎಂ ಆಗುತ್ತಾರೆ ಅಂತಾನೆ ಗೊತ್ತಿರಲಿಲ್ಲ. ದೇವರ ಕೃಪೆಯಿಂದ ಪಿಎಂ ಆಗಿದ್ದಾರೆ" ಎಂದಿದ್ದಾರೆ.

ಸುಧಾಮೂರ್ತಿ ಭೋಜನಕ್ಕೆ ನೆಟ್ಟಿಗರು ಏನಂದ್ರು..?
ಸುಧಾಮೂರ್ತಿ ಕಂಡರೆ ಇನ್ನಿಲ್ಲದ ಪ್ರೀತಿ. ಅವಳ ಸರಳತೆಗೆ, ಅವರ ವೈಯಕ್ತಿಕ ಬದುಕಿಗೆ, ಅವರ ಸಹಾಯದ ಗುಣಕ್ಕೆ ಎಲ್ಲರು ಮಾರು ಹೋಗಿದ್ದಾರೆ. ಅವರು ಎಲ್ಲಾದರೂ ಕಾಣಿಸಿಕೊಂಡ ವಿಡಿಯೋಗಳು ಬಹಳ ಬೇಗನೆ ವೈರಲ್ ಆಗುವುದು ಅದೇ ಕಾರಣಕ್ಕೆ. ಈಗ 'ಬೊಂಬಾಟ್ ಭೋಜನ'ದಲ್ಲಿ ಅದರಲ್ಲೂ ಮಹಿಳಾ ದಿನಾಚರಣೆಯ ವಿಶೇಷತೆಗೆ ಸುಧಾಮೂರ್ತಿ ಅವರು ಬಂದಿರುವುದು ನೆಟ್ಟಿಗರಿಗೆ ಅಪಾರ ಸಂತಸ ತಂದಿದೆ. ಆ ಪ್ರೋಮೋಗೆ ಎಲ್ಲರೂ ಹಾರ್ಟ್ ಇಮೋಜಿ ಹಾಕಿ ಬೆಂಬಲ ಸೂಚಿಸಿದ್ದಾರೆ.


Click it and Unblock the Notifications











