For Quick Alerts
  ALLOW NOTIFICATIONS  
  For Daily Alerts

  ಹೆಣ್ಣು ಮಕ್ಕಳ ಪಾಲಿಗೆ ನಿಜವಾದ 'ದಾರಿದೀಪ' ಈ ಸುಧಾಮೂರ್ತಿ

  |
  Weekend with Ramesh Season 4: ಇನ್ಫೋಸಿಸ್ ಸುಧಾ ಮೂರ್ತಿ ಬಗ್ಗೆ ನಿಮಗೆ ಗೊತ್ತಿರದ ವಿಚಾರ ಬಹಿರಂಗ

  ರಮೇಶ್ ಅರವಿಂದ್ ಸಾರಥ್ಯದಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ ವೀಕೆಂಡ್ ವಿಥ್ ರಮೇಶ್ ಸೀಸನ್ 4 ಕಾರ್ಯಕ್ರಮ ಎಲ್ಲರ ಮೆಚ್ಚುಗೆ ಗಳಿಸುತ್ತಿದ್ದು, ಇಷ್ಟು ದಿನಗಳ ಕಾಲ ಜನರು ಕಾತುರದಿಂದ ಕಾಯುತ್ತಿದ್ದ ಆ ಅಮೃತ ಘಳಿಗೆ ಕೊನೆಗೂ ಬಂದಿದೆ. ಕಳೆದ ಮೂರು ಸೀಸನ್ ‌ಗಳಿಂದ ಇನ್ಫೋಸಿಸ್ ಸಂಸ್ಥಾಪಕರಾದ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ಅವರನ್ನು ಸಾಧಕರ ಸೀಟ್‌ ಮೇಲೆ ನೋಡುವ ಇಚ್ಚೆಯನ್ನು ಜನರು ಜೀ ಕನ್ನಡ ವಾಹಿನಿಯ ಮುಂದಿಟ್ಟಿದ್ದು, ಕೊನೆಗೂ ಅವರ ಆಸೆ ನೆರವೇರುತ್ತಿದೆ.

  ಇದೇ ಶನಿವಾರ ಹಾಗೂ ಭಾನುವಾರದಂದು ರಾತ್ರಿ 9:30 ಕ್ಕೆ ನಿಮ್ಮ ನೆಚ್ಚಿನ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದಲ್ಲಿ ಈ ಇಬ್ಬರು ಮಹಾ ಸಾಧಕರ ಸಾಧನೆಯ ಹಾದಿಯನ್ನು ನೀವು ನೋಡಬಹುದು. ಅದಕ್ಕೂ ಮುಂಚೆ ಸುಧಾಮೂರ್ತಿ ಅವರ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಸುವ ಪ್ರಯತ್ನ ಈ ಸ್ಟೋರಿ.

  ಇನ್ಫೋಸಿಸ್ ನಾರಾಯಣ ಮೂರ್ತಿ 6 ಸಾವಿರ ಸಾಲ ಪಡೆದು ಕೋಟ್ಯಧಿಪತಿ ಆದ ಕಥೆ ಇನ್ಫೋಸಿಸ್ ನಾರಾಯಣ ಮೂರ್ತಿ 6 ಸಾವಿರ ಸಾಲ ಪಡೆದು ಕೋಟ್ಯಧಿಪತಿ ಆದ ಕಥೆ

  ಇನ್ಫೋಸಿಸ್ ಸಂಸ್ಥಾಪಕರಾದ ನಾರಾಯಣ ಮೂರ್ತಿ ಸಾಧನೆಯಲ್ಲಿ ಜೊತೆಯಾಗಿ, ಅವರ ಬೆನ್ನೆಲುಬಾಗಿ ನಿಂತಿರುವ ಸರಳ ವ್ಯಕ್ತಿತ್ವದ ವ್ಯಕ್ತಿ ಸುಧಾಮೂರ್ತಿ.ಇವರು ಹುಟ್ಟಿದ್ದು ಶಿಗ್ಗಾವ್ನಲ್ಲಿ ಆದರೂ ಬೆಳದದ್ದು ಹುಬ್ಬಳ್ಳಿಯಲ್ಲಿ. ಅವರ ಹುಬ್ಬಳ್ಳಿ ಮನೆ ಈಗ ಲೈಬ್ರರಿಯಾಗಿ ಬದಲಾಗಿದ್ದು ಅದಕ್ಕೆ ಅವರ ತಂದೆ ಶ್ರೀ ರಾಮಚಂದ್ರ ರಾವ್ ಅವರ ಹೆಸರನ್ನು ಇಡಲಾಗಿದೆ. ಮುಂದೆ ಓದಿ.....

  ಹೆಣ್ಣು ಮಕ್ಕಳ ಕಷ್ಟಕ್ಕೆ ಮಿಡಿದ ಹೃದಯ

  ಹೆಣ್ಣು ಮಕ್ಕಳ ಕಷ್ಟಕ್ಕೆ ಮಿಡಿದ ಹೃದಯ

  ಹುಬ್ಬಳ್ಳಿ ಬಿವಿಬಿ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ & ಎಲೆಕ್ಟ್ರಿಕಲ್ಸ್ ವಿಭಾಗದಲ್ಲಿ ಎಂಜಿನಿಯರಿಂಗ್ ಮಾಡಿರುವ ಸುಧಾ ಮೂರ್ತಿಯವರಿಗೆ ಸಮಾಜ ಸೇವೆಯ ಕಡೆಗೆ ಭಾರಿ ಒಲವು. ಕಾಲೇಜಿನಲ್ಲಿ ಓದುವಾಗ ಶೌಚಾಲಯಕ್ಕಾಗಿ ಅವರು ಅನುಭವಿಸಿದ ಕಷ್ಟ ಬೇರೆ ಹೆಣ್ಣು ಮಕ್ಕಳಿಗೆ ಬರಬಾರದೆಂದು ಗುಲಬರ್ಗಾದಲ್ಲಿ 15,000 ಹೆಚ್ಚು ಶೌಚಾಲಯಗಳನ್ನು ನಿರ್ಮಿಸಿದ್ದಾರೆ.

  ದೇವದಾಸಿ ಪದ್ದತಿ ಕಿತ್ತೊಗೆಯಲು ಹೋರಾಟ

  ದೇವದಾಸಿ ಪದ್ದತಿ ಕಿತ್ತೊಗೆಯಲು ಹೋರಾಟ

  ಇದಿಷ್ಟೇ ಅಲ್ಲದೇ ಭಾರತಕ್ಕೆ ಅಂಟಿಕೊಂಡಿದ್ದ ಅನಿಷ್ಟ ದೇವದಾಸಿ ಪದ್ದತಿಯನ್ನು ನಿರ್ಮೂಲನೆ ಮಾಡಲು ಸಾಕಷ್ಟು ಕಷ್ಟ ಪಟ್ಟಿದ್ದಾರೆ. ರಾಯಚೂರಿನಲ್ಲಿ ಹೆಚ್ಚಾಗಿ ಇದ್ದ ಈ ಪಿಡುಗನ್ನು ನಿರ್ಮೂಲನೆ ಮಾಡಿ 20,000 ಹೆಚ್ಚು ಹೆಣ್ಣುಮಕ್ಕಳನ್ನೂ ಅದರಿಂದ ಹೊರ ತಂದು ಅವರಿಗೆ ಕೌದಿ ಹೊಲೆಯುವುದನ್ನು ಹೇಳಿಕೊಟ್ಟು ಸ್ವಾವಲಂಬಿಯಾಗಿ ಬದುಕಲು ಹೇಳಿಕೊಟ್ಟಿದ್ದಾರೆ.

  ಕೊನೆಗೂ ಸಾಧಕರ ಕುರ್ಚಿಯಲ್ಲಿ ಕುಳಿತ ಇನ್ಫೋಸಿಸ್ ನಾರಾಯಣ ಮೂರ್ತಿ ದಂಪತಿಕೊನೆಗೂ ಸಾಧಕರ ಕುರ್ಚಿಯಲ್ಲಿ ಕುಳಿತ ಇನ್ಫೋಸಿಸ್ ನಾರಾಯಣ ಮೂರ್ತಿ ದಂಪತಿ

  3000 'Stitiches' ಪುಸ್ತಕ

  3000 'Stitiches' ಪುಸ್ತಕ

  ಇದರ ಕುರಿತು ಅವರು 3000 'Stitiches' ಎಂಬ ಅದ್ಭುತ ಪುಸ್ತಕವನ್ನೂ ಬರೆದಿದ್ದಾರೆ. ಇನ್ನು ಈ ಹೆಣ್ಣು ಮಕ್ಕಳು ಹೊಲೆಯುವ ಕೌದಿಯನ್ನೇ ಇವರ ಪ್ರೀತಿ ಪಾತ್ರರಿಗೆ ಉಡುಗೊರೆಯಾಗಿ ಕೊಡುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡುವ, ಬೇಸಿಗೆ ಕಾಲದಲ್ಲಿ ತಂಪು ನೀಡುವ ಕೌದಿಯನ್ನು ಉಡುಗೊರೆಯಾಗಿ ನೀಡಿ ಎಲ್ಲಾ ಕಾಲದಲ್ಲೂ ನಾವು ನಿಮ್ಮ ಜೊತೆ ಇದ್ದೀವಿ ಎನ್ನುವುದನ್ನು ಹೇಳುತ್ತಾರೆ.

  ಸಮಾಜ ಸೇವೆಗೆಂದೇ 400 ಕೋಟಿ ಮೀಸಲು

  ಸಮಾಜ ಸೇವೆಗೆಂದೇ 400 ಕೋಟಿ ಮೀಸಲು

  ಸದಾ ಸಮಾಜ ಸೇವೆಯ ಬಗ್ಗೆ ಯೋಚಿಸುವ ಇವರು ಪ್ರತಿ ವರ್ಷ ಇನ್ಫೋಸಿಸ್ ಫೌಂಡೇಶನ್ ಮೂಲಕ 400 ಕೋಟಿ ರೂಪಾಯಿಗಳನ್ನು ಸಮಾಜ ಸೇವೆಗೆಂದೇ ಮೀಸಲಿಟ್ಟಿದ್ದಾರೆ. ಪದ್ಮಶ್ರೀ ಪುರಸ್ಕೃತರಾಗಿರುವ ಸುಧಾ ಮೂರ್ತಿಯವರು ಕಾರ್ಯಕ್ರಮಕ್ಕೆ ಅವರ ಗುರುಗಳಾದ ಸುಮತಿ ಯಾದಪ್ಪನವರ್ ಅವರು ಬಂದಾಗ ತಮ್ಮ ಸಾಧಕರ ಸೀಟ್‌ನಿಂದ ಎದ್ದು ನಿಂತು ಅವರ ಕಾಲಿಗೆ ನಮಸ್ಕರಿಸಿ ಗುರುಗಳ ಮುಂದೆ ಕೂರಬಾರದು ಎಂದು ಅವರು ವೇದಿಕೆ ಮೇಲೆ ಇದ್ದಷ್ಟು ಕಾಲ ನಿಂತೇ ಮಾನತಾಡಿದರು. ಇನ್ನು ನೀವು ಎಂದೂ ನೋಡಿರದ ಸುಧಾ ಮೂರ್ತಿಯವರ ಇನ್ನೊಂದು ಮುಖದ ಪರಿಚಯವೂ ನಿಮಗೆ ವೀಕೆಂಡ್ ವಿಥ್ ಕಾರ್ಯಕ್ರಮದಲ್ಲಿ ನೋಡಲು ಸಿಗಲಿದೆ.

  ಈ ವೀಕೆಂಡ್ ನಲ್ಲಿ ಪ್ರಸಾರ

  ಈ ವೀಕೆಂಡ್ ನಲ್ಲಿ ಪ್ರಸಾರ

  ನೀವು ಇಷ್ಟು ದಿನಗಳ ಕಾಲ ನೀವೆಲ್ಲ ಕಾತುರದಿಂದ ಕಾಯುತ್ತಿದ್ದ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿಯವರ ಅದ್ಭುತ ಸಂಚಿಕೆ ಇದೇ ಶನಿವಾರ ಹಾಗೂ ಭಾನುವಾರ ಅಂದ್ರೆ ಜೂನ್ 1 ಮತ್ತು 2ನೇ ತಾರೀಖು ರಾತ್ರಿ 9:30ಕ್ಕೆ ನಿಮ್ಮ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದು. ಈ ಎರಡು ಮೇರು ವ್ಯಕ್ತಿಗಳ ಬಗ್ಗೆ ನೀವು ಮತ್ತಷ್ಟು ತಿಳಿದುಕೊಳ್ಳಬಹುದು.

  English summary
  Infosys foundation chairperson sudha murthy and narayana murthy are participating in weekend with ramesh season 4.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X