Archana Jois: "ಕೆಜಿಎಫ್‌ನಲ್ಲಿ ಶಾಂತಮ್ಮ ಪಾತ್ರ ಇಂತಹ ಜನಪ್ರಿಯತೆ ಸಿಗುತ್ತಿರಲಿಲ್ಲ" - ಅರ್ಚನಾ ಜೋಯಿಸ್
'ಕೆಜಿಎಫ್' ಕನ್ನಡ ಸಿನಿರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಸಿನಿಮಾ. ಜಗತ್ತಿನಾದ್ಯಂತ ಬಹಳ ಪಾಪ್ಯುಲರ್ ಆದ ಸಿನಿಮಾ ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಈ ಚಲನಚಿತ್ರ ಎರಡು ಭಾಗಗಳಲ್ಲಿ ಬಂದು ಜಗತ್ತಿನಾದ್ಯಂತ ಜನರ ಮೆಚ್ಚುಗೆಗೆ ಕಾರಣವಾಯಿತು. ಅದರಲ್ಲಿ ಪ್ರಮುಖ ಪಾತ್ರಗಳಲ್ಲೊಂದಾದ ಶಾಂತಮ್ಮನ ಪಾತ್ರವನ್ನು ಅಚ್ಚುಕಟ್ಟಾಗಿ ನಟಿಸಿ ಜನರ ಮನ ಗೆದ್ದ ನಟಿ ಅರ್ಚನ ಜೋಯಿಸ್ ತಮ್ಮ ಈ ಜರ್ನಿ ಬಗ್ಗೆ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.
ಮೊದಲಿಗೆ ನಿರ್ದೇಶಕ ಪ್ರಶಾಂತ್ ನೀಲ್ ಈ ಪಾತ್ರವನ್ನು ತಂದಾಗ ಅರ್ಚನಾ ಜೋಯಿಸ್ ಅವರು ಮೊದಲಿಗೆ ಬೇಡ ಎಂದಿದ್ದರಂತೆ. ಹೌದು, ಆಗಿನ್ನು 22 ವರ್ಷದ, ನಟನೆ ಬಗ್ಗೆ ಹೊಸ ಕನಸುಗಳನ್ನು ಇಟ್ಟುಕೊಂಡ ನಟಿ ಅರ್ಚನಾಗೆ ತಾಯಿ ಪಾತ್ರ ಮಾಡುವುದು ಖಂಡಿತ ಇಷ್ಟವಿರಲಿಲ್ಲವಂತೆ.

ಅಸಲಿಗೆ ನಟಿ, ನಿರ್ದೇಶಕಿ ಶೃತಿ ನಾಯ್ಡು ಅವರ 'ಮಹಾದೇವಿ' ಧಾರಾವಾಹಿಯಲ್ಲಿ ಒಂದಷ್ಟು ಎಪಿಸೋಡ್‌ಗಳನ್ನು ಮಾಡಿದ್ದ ಅರ್ಚನಾ ಜೋಯಿಸ್ 'ಕೆಜಿಎಫ್' ಸಿನಿಮಾದಲ್ಲಿ ಇಷ್ಟೊಳ್ಳೆಯ ಸಿನಿಮಾ ಸಿಕ್ಕಿದರೂ ತಾಯಿ ಪಾತ್ರ ಎಂದು ಬಿಟ್ಟಿದ್ದರಂತೆ.
ಆದರೂ ಸಿನಿ ತಂಡದಿಂದ ಹಾಗೂ ಆಕೆಯ ಸ್ನೇಹಿತರು, ಕುಟುಂಬಸ್ಥರಿಂದ ಬಂದ ಒತ್ತಾಯಕ್ಕೆ ಒಪ್ಪಿದ್ದರಂತೆ. ಅಷ್ಟಾಗಿಯೂ ಕಥೆಯನ್ನು ಕೇಳಿದಾಗಲೂ ಅಥವಾ ಫಸ್ಟ್ ಲುಕ್ಕಿನಲ್ಲಿಯೂ ನಟಿ ಅರ್ಚನಾ ಜೋಯಿಸ್ ಅವರಿಗೆ ಈ ಪಾತ್ರ ಚೂರು ಇಷ್ಟವಾಗಿರಲಿಲ್ಲವಂತೆ.
ಪ್ರತಿ ನಟ ನಟಿಯರು ತಮ್ಮ ವಯಸ್ಸಿಗೆ ತಕ್ಕಂತಹ ಪಾತ್ರಗಳನ್ನು ಬಯಸುತ್ತಿರುತ್ತಾರೆ. ಅದರಲ್ಲೂ ದೊಡ್ಡ ದೊಡ್ಡ ಪಾತ್ರಗಳಲ್ಲಿ ಮಿಂಚಬೇಕೆನ್ನುವುದು ಪ್ರತಿಯೊಬ್ಬರ ಕನಸು. ಹೀಗಿರುವಾಗ ಇಷ್ಟು ದೊಡ್ಡ ಸಿನಿಮಾದಲ್ಲಿ ಒಂದೊಳ್ಳೆಯ ಪಾತ್ರ ಸಿಕ್ಕಿದ್ದರೂ ತಾಯಿ ಪಾತ್ರ ಎಂದಾಗ ಯಾರಿಗಾದರೂ ಗೊಂದಲವಾಗುವುದು ಸಹಜ. ಅಂಥದ್ದೇ ಗೊಂದಲವನ್ನು ಎದುರಿಸಿದ ನಟಿ ಅರ್ಚನಾ ಜೋಯಿಸ್ ಅವರು ಕೊನೆಗೂ ಕೆಜಿಎಫ್ ಸಿನಿಮಾದಲ್ಲಿ ಅದ್ಭುತವಾಗಿ ನಟಿಸಿ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಅಂದ ಹಾಗೆ 'ಕೆಜಿಎಫ್' ಜಗದಾದ್ಯಂತ ಬಹಳಷ್ಟು ಜನಪ್ರಿಯತೆಯನ್ನು ಪಡೆದು ಇಡೀ ಕನ್ನಡ ಸಿನಿಮಾ ರಂಗವನ್ನು ಒಂದು ಹೊಸ ಹಂತಕ್ಕೆ ತೆಗೆದುಕೊಂಡು ಹೋದಂತಹ ಸಿನಿಮಾ. ರಾಕಿಂಗ್ ಸ್ಟಾರ್ ಯಶ್ ಅವರ ಅಭಿನಯದ ಈ ಸಿನಿಮಾದಲ್ಲಿ ಅವರ ತಾಯಿಯಾಗಿ ಪಾತ್ರ ವಹಿಸಿರುವ ಅರ್ಚನಾ ಜೋಯಿಸ್ ಅವರದು ಅಷ್ಟೇ ಮುಖ್ಯ ಪಾತ್ರ ಎಂದರೆ ತಪ್ಪಾಗಲ್ಲ.
"ತಾಯಿ ಪಾತ್ರದ ಮೂಲಕ ಬಹಳ ಭಾವನಾತ್ಮಕವಾಗಿ ಜನರನ್ನು ಬೆಸೆದ ಈ ಪಾತ್ರಕ್ಕೆ ಇಂದಿಗೂ ಬಹಳ ಮೆಚ್ಚುಗೆ ಇದೆ. ನಾನು ಈ ಪಾತ್ರವನ್ನು ಒಪ್ಪದಿದ್ದರೆ ಇವತ್ತು ನನಗೆ ಸಿಕ್ಕಂತಹ ಜನಪ್ರಿಯತೆ ಯಾವತ್ತೂ ಸಿಗುತ್ತಲೇ ಇರಲಿಲ್ಲವೇನು" ಎಂಬುದು ನಟಿ ಅರ್ಚನಾ ಜೋಯಿಸ್ ಅವರ ಅಭಿಪ್ರಾಯ.


Click it and Unblock the Notifications











