ಬಿಗ್ ಬಾಸ್ ಮನೆಯಲ್ಲೇ ಆತ್ಮ*ಹತ್ಯೆಗೆ ಯತ್ನಿಸಿದ್ದ ಖ್ಯಾತ ನಟಿ, ಶಾಕಿಂಗ್ ಸತ್ಯ ರಿವೀಲ್

ಪ್ರೀತಿ ಎಂಬ ಪದ ಸುಂದರ ಇರಬಹುದು. ಆದರೆ, ಪ್ರೀತಿಯ ಕೆಲವೊಮ್ಮೆ ಕಾಡುತ್ತೆ. ಪ್ರೀತಿಯಲ್ಲಿ ನೋವು ಸಹಜವಾದರೂ ಅದನ್ನು ಸಹಿಸಿಕೊಳ್ಳುವುದಕ್ಕೆ ಸಾಧ್ಯವಾಗುವುದೇ ಇಲ್ಲ. ಅದರಿಂದಾಗುವ ನೋವು ಶಾಶ್ವತವಾಗಿಲ್ಲದಿದ್ದರೂ ಆ ಕ್ಷಣಕ್ಕೆ ಮಾತ್ರ ಅದು ನುಂಗಲಾರದ ತುತ್ತು. ಎಲ್ಲಾ ಉತ್ಸಾಹ, ಆಸಕ್ತಿ, ಖುಷಿಯ ಕ್ಷಣಗಳನ್ನು ಕಸಿದುಕೊಳ್ಳೋ ಈ ಬ್ರೇಕ್ ಅಪ್‌ನ ನೋವು ಸಹಿಸಿಕೊಳ್ಳೋದಕ್ಕೆ ಸಾಧ್ಯ ಆಗದೇ ಇರುವುದಕ್ಕೆ ಕಾರಣಗಳೇನು..

ಎಂಬುದು ಹೃದಯವಂತರ ಪ್ರಶ್ನೆಯಾದರೂ ಸದ್ಯ ಬಿಗ್ ಬಾಸ್‌ ಮನೆಯಲ್ಲಿ ಇದೇ ಪ್ರೇಮ ವೈಫಲ್ಯದಿಂದ ನಟಿಯೊಬ್ಬರು ಆತ್ಮಹತ್ಯೆಗೆ ಪ್ರಯತ್ನ ಮಾಡಿದ ವಿಚಾರ ಜಗಜ್ಜಾಹೀರಾಗಿದೆ. ಹೌದು, ಸದ್ಯ ಕಿರುತೆರೆಯಲ್ಲಿ ಬಿಗ್ ಬಾಸ್ ಕಲರವ ಶುರುವಾಗಿದೆ. ಆ ಭಾಷೆ ಈ ಭಾಷೆ ಎನ್ನದೇ ಎಲ್ಲ ಭಾಷೆಯಲ್ಲಿ ಬಿಗ್ ಬಾಸ್‌ ಆರಂಭಕ್ಕೆ ವೇದಿಕೆ ಸಿದ್ಧವಾಗುತ್ತಿದೆ.

Bigg Boss Horror Actress s On-Air Suicide Attempt Stopped By Production

ಅದರಲ್ಲಿಯೂ ಹಿಂದಿಯ ಬಿಗ್ ಬಾಸ್‌ನ ಕೆಲಸಗಳು ತುಸು ಹೆಚ್ಚೇ ವೇಗದಲ್ಲಿ ನಡೆಯುತ್ತಿವೆ. ಸಲ್ಮಾನ್ ಖಾನ್ ಸಾರಥ್ಯದಲ್ಲಿ ಮೂಡಿ ಬರಲಿರುವ ಈ ಕಾರ್ಯಕ್ರಮ ಈ ಬಾರಿ ಐದು ತಿಂಗಳು ನಡೆಯಲಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಸಲ್ಮಾನ್ ಖಾನ್ ಜೊತೆ ಇನ್ನು ಮೂವರು ನಿರೂಪಕರು ಈ ಬಾರಿ ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಬಡಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇದರ ನಡುವೆ ಇದೀಗ ಬಿಗ್ ಬಾಸ್‌ ನ ಎಂಡೆಮೋಲ್ ಶೈನ್ ಇಂಡಿಯಾದ ಪ್ರಾಜೆಕ್ಟ್ ಹೆಡ್ ಅಭಿಷೇಕ್ ಮುಖರ್ಜಿ ಶಾಕಿಂಗ್ ವಿಚಾರವೊಂದನ್ನು ಹೇಳಿದ್ದಾರೆ. ಬಿಗ್ ಬಾಸ್‌ ಮನೆಗೆ ಬಂದಿದ್ದ ಖ್ಯಾತ ನಟಿಯೊಬ್ಬರು ಮನೆಯಲ್ಲಿಯೇ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು ಎಂದು ಹೇಳಿದ್ದಾರೆ.

ಹೌದು, ವಿಜಯ್ ವಿಕ್ರಂ ಸಿಂಗ್ ಅವರಿಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಅಭಿಷೇಕ್ ಮುಖರ್ಜಿ, ಖ್ಯಾತ ನಟಿಯೊಬ್ಬರ ಪ್ರೇಮ ಸಂಬಂಧ ಆಗಷ್ಟೇ ಮುರಿದು ಬಿದ್ದಿತ್ತು. ಆ ದುಃಖವನ್ನು ಮರೆಯಲು ಅವರು ನಮ್ಮ ಕಾರ್ಯಕ್ರಮಕ್ಕೆ ಬಂದಿದ್ದರು ಎಂದು ಹೇಳಿದ್ದಾರೆ.

ಆದರೆ.. ಇದೇ ಸಮಯದಲ್ಲಿ ಅವರಿಗೆ ಮನೆಯಲ್ಲಿರುವ ಸ್ಫರ್ಧಿಯೊಬ್ಬರ ಮೇಲೆ ಪ್ರೀತಿಯಾಯ್ತು, ಅವರು ಆ ಸ್ಫರ್ಧಿಯ ಜೊತೆ ಆತ್ಮೀಯರಾದರು ಆದರೆ ಆ ವ್ಯಕ್ತಿ ಕೂಡ ಅವರಿಗೆ ಮೋಸ ಮಾಡಿದ ಎಂದಿರುವ ಅಭಿಷೇಕ್ ಮುಖರ್ಜಿ ಮೊದಲೇ ಬ್ರೇಕಪ್‌ದಿಂದ ಖಿನ್ನತೆಗೊಳಗಾಗಿದ್ದ ಅವರಿಗೆ ಈ ನೋವು ಸಹಿಸಲು ಸಾಧ್ಯವಾಗಲಿಲ್ಲ ಹೀಗಾಗಿಯೇ ಅದೊಂದು ದಿನ ರಾತ್ರಿ ತಾನು ಬಿಗ್‌ ಬಾಸ್‌ನಲ್ಲಿದ್ದೇನೆ ಎನ್ನುವುದನ್ನೇ ಮರೆತು ಆತ್ಮ*ಹತ್ಯೆಗೆ ಪ್ರಯತ್ನಿಸಿದ್ದರು ಎಂದು ಹೇಳಿದ್ದಾರೆ.

inside-bigg-boss-the-actress-who-tried-to-end-her-life-within-the-house

ಆ ಸಮಯದಲ್ಲಿ ತಕ್ಷಣವೇ ನಮಗೆ ಕರೆ ಬಂತು, ಅದೃಷ್ಟವಶಾತ್ ನಮಗೆ ಯಾವಾಗಲೂ 24/7 ಮನೋವೈದ್ಯರು ಲಭ್ಯ ಇರುತ್ತಾರೆ, ಆದರೆ ಮನೋವೈದ್ಯರು ಮುಂಬೈದಿಂದ ಲೋನಾವಾಲಾ ತಲುಪುವವರೆಗೆ ನಾವು ಕಾಯಬೇಕಿತ್ತು ಎಂದಿರುವ ಅಭಿಷೇಕ್ ಮುಖರ್ಜಿ ಈ ಕಾರಣಕ್ಕೆ ನಾವು ಬೆಳಗ್ಗೆ 3-30ರಿಂದ 6-45ರವರೆಗೆ ಆ ನಟಿಯ ಜೊತೆ ನಾವು ಮಾತನಾಡುತ್ತಲೇ ಇದ್ದೇವು ಎಂದು ಹೇಳಿದ್ದಾರೆ.

ತಮ್ಮ ಈ ಸಂದರ್ಶನದಲ್ಲಿ ಅಭಿಷೇಕ್ ಮುಖರ್ಜಿ ಆ ನಟಿಯ ಹೆಸರನ್ನು ಹೇಳದಿದ್ದರೂ ಕೂಡ ಇದು ನಡೆದಿದ್ದು ಪ್ರಾದೇಶಿಕ ಭಾಷೆಯ ಬಿಗ್ ಬಾಸ್‌ ಕಾರ್ಯಕ್ರಮದಲ್ಲಿ ಹಿಂದಿ ಬಿಗ್ ಬಾಸ್ ಅಲ್ಲ ಎಂದು ಹೇಳಿದ್ದಾರೆ. ಈ ಹಿನ್ನೆಲೆ ಈಗ ಆ ನಟಿ ಯಾರಿರಬಹುದು, ಯಾವ ಭಾಷೆಯ ಬಿಗ್ ಬಾಸ್‌ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿರಬಹುದು ಎನ್ನುವ ಪ್ರಶ್ನೆ ಹಲವರನ್ನು ಕಾಡುತ್ತಿದೆ. ಇನ್ನುಳಿದಂತೆ ಈ ಆಗಸ್ಟ್ 29ರಿಂದ ಹಿಂದಿ ಬಿಗ್ ಬಾಸ್ ಕಾರ್ಯಕ್ರಮ ಶುರುವಾಗಲಿದೆ ಎನ್ನುವ ಮಾತು ಸದ್ಯ ಕೇಳಿ ಬರುತ್ತಿದೆ.

More from Filmibeat

English summary
Inside the Bigg Boss house: A TV actress's live suicide attempt after heartbreak sends shockwaves, halted by production.
Read more about: bigg boss actress ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X