»   » ಬ್ರಾಹ್ಮಣರ ಬಗ್ಗೆ ಅವಹೇಳನ: ಕ್ಷಮೆ ಕೇಳುತ್ತಾರಾ ರಾಘವೇಂದ್ರ ಹುಣಸೂರು.?

ಬ್ರಾಹ್ಮಣರ ಬಗ್ಗೆ ಅವಹೇಳನ: ಕ್ಷಮೆ ಕೇಳುತ್ತಾರಾ ರಾಘವೇಂದ್ರ ಹುಣಸೂರು.?

Posted By:
Subscribe to Filmibeat Kannada

ಒಂದ್ಕಾಲದಲ್ಲಿ 'ಡ್ರಾಮಾ ಜ್ಯೂನಿಯರ್ಸ್' ಕಾರ್ಯಕ್ರಮ ನೋಡಲು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದ ವೀಕ್ಷಕರು ಇಂದು ಅದೇ ಶೋ ಬಗ್ಗೆ ಟೀಕೆ ಮಾಡುತ್ತಿದ್ದಾರೆ.

'ಜೀ ಕನ್ನಡ'ದಿಂದ ದೊಡ್ಡ ಎಡವಟ್ಟು: ಕೋಪೋದ್ರೇಕದಿಂದ ಗುಟುರು ಹಾಕಿದ ಬ್ರಾಹ್ಮಣರು.!

'ಡ್ರಾಮಾ ಜ್ಯೂನಿಯರ್ಸ್' ಕಾರ್ಯಕ್ರಮದಲ್ಲಿ ಪುರೋಹಿತರನ್ನ ಕೇವಲವಾಗಿ ತೋರಿಸಿರುವ ಜೀ ಕನ್ನಡ ವಾಹಿನಿಗೆ ಬ್ರಾಹ್ಮಣ ಸಮುದಾಯ ಛೀಮಾರಿ ಹಾಕುತ್ತಿದೆ.

ಸಿಡಿದೆದ್ದ ಬ್ರಾಹ್ಮಣರು: ಜೀ ಕನ್ನಡ ವಾಹಿನಿಗೆ 'ಧಿಕ್ಕಾರ' ಕೂಗಿದ ಓದುಗರು.!

ಜೀ ಕನ್ನಡ ವಾಹಿನಿಯ ಅಫೀಶಿಯಲ್ ಫೇಸ್ ಬುಕ್ ಪೇಜ್ ಸೇರಿದಂತೆ ಟಿ.ಎನ್.ಸೀತಾರಾಂ, ವಿಜಯ್ ರಾಘವೇಂದ್ರ, ಮಾಸ್ಟರ್ ಆನಂದ್, ರಾಘವೇಂದ್ರ ಹುಣಸೂರು ಅವರ ಫೇಸ್ ಬುಕ್ ಪುಟಗಳಲ್ಲೂ ವೀಕ್ಷಕರು ಕೆಂಡಕಾರುತ್ತಿದ್ದಾರೆ. ಇದನ್ನೆಲ್ಲ ಗಮನಿಸಿರುವ ಜೀ ಕನ್ನಡ ವಾಹಿನಿಯ ಬಿಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಬಹಿರಂಗವಾಗಿ ಕ್ಷಮೆ ಕೇಳುತ್ತಾರಾ.? ಮುಂದೆ ಓದಿರಿ...

ರಾಘವೇಂದ್ರ ಹುಣಸೂರು ಜೊತೆ ಮಾತುಕತೆ

ಜೀ ಕನ್ನಡ ವಾಹಿನಿಯ ಬಿಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಜೊತೆ ಈಗಾಗಲೇ ದೂರವಾಣಿ ಮೂಲಕ ಬ್ರಾಹ್ಮಣ ಸಮುದಾಯದ ಕೆಲವರು ಮಾತುಕತೆ ನಡೆಸಿದ್ದಾರಂತೆ.

ಇದೇ ವಾರ ಸ್ಪಷ್ಟನೆ

ಇದೇ ಶನಿವಾರದಂದು ಪ್ರಸಾರ ಆಗುವ 'ಡ್ರಾಮಾ ಜ್ಯೂನಿಯರ್ಸ್' ಕಾರ್ಯಕ್ರಮದ ಸಂಚಿಕೆಯಲ್ಲಿ ವಿವಾದದ ಕುರಿತು ಸ್ಪಷ್ಟನೆ ಹಾಗೂ ಪ್ರತಿಕ್ರಿಯೆ ನೀಡುವುದಾಗಿ ರಾಘವೇಂದ್ರ ಹುಣಸೂರು ತಿಳಿಸಿದ್ದಾರಂತೆ. ಹಾಗಂತ ರಾಘವೇಂದ್ರ ಹುಣಸೂರು ಜೊತೆ ದೂರವಾಣಿಯಲ್ಲಿ ಮಾತನಾಡಿದ ಸುಧೀರ್ ಸಾಗರ್ ಎಂಬುವರು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ಒತ್ತಾಯಕ್ಕೆ ಮಣಿದು ಕ್ಷಮೆ ಕೇಳುತ್ತಾರಾ.?

ಅವಹೇಳನ ಹಾಗೂ ಕೀಳು ಮಟ್ಟದಲ್ಲಿ ತೋರಿಸಿರುವ ಕಾರಣ ಜೀ ಕನ್ನಡ ವಾಹಿನಿ ಬಹಿರಂಗವಾಗಿ ಬೇಷರತ್ತಾಗಿ ಕ್ಷಮೆ ಕೇಳಲೇಬೇಕು ಎಂದು ಬ್ರಾಹ್ಮಣ ಸಮುದಾಯ ಫೇಸ್ ಬುಕ್ ನಲ್ಲಿ ಒತ್ತಾಯ ಮಾಡುತ್ತಿದೆ. ಒತ್ತಾಯಕ್ಕೆ ಮಣಿದು ಜೀ ಕನ್ನಡ ವಾಹಿನಿಯ ಬಿಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಕ್ಷಮೆ ಕೇಳುತ್ತಾರಾ.? ಕಾದು ನೋಡಬೇಕು.

ಈ ಶನಿವಾರದವರೆಗೂ ಕಾಯಿರಿ...

ವಿವಾದ ಕುರಿತು ಜೀ ಕನ್ನಡ ವಾಹಿನಿ ನೀಡುವ ಸ್ಪಷ್ಟನೆ ಏನು ಎಂದು ತಿಳಿದುಕೊಳ್ಳಲು ಈ ಶನಿವಾರ ರಾತ್ರಿ 9 ಗಂಟೆವರೆಗೂ ಕಾಯಲೇಬೇಕು.

English summary
Insult for Brahmin Community in 'Drama Juniors': Will Zee Kannada Channel's Business Head Raghavendra Hunsur Apologize.?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada