ಯುವಕರ ನಿದ್ದೆಕದ್ದ 'ರಾಧಾಕೃಷ್ಣ' ಧಾರಾವಾಹಿಯ ನಟಿ ರಾಧೆ ಯಾರು? ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿ
ಲಾಕಾ ಡೌನ್ ಸಮಯದಲ್ಲಿ ಹಿಂದಿಯ ಸಾಕಷ್ಟು ಧಾರಾವಾಹಿಗಳು ಕನ್ನಡಕ್ಕೆ ಡಬ್ ಆಗಿ ಪ್ರಸಾರವಾಗುತ್ತಿವೆ. ಅದರಲ್ಲೂ ಪೌರಾಣಿಕ ಧಾರಾವಾಹಿಗಳು ಕನ್ನಡ ಚಿತ್ರಪ್ರೇಕ್ಷಕರ ಹೃದಯಗೆದ್ದಿವೆ. ಸದ್ಯ ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಹೆಚ್ಚು ಪ್ರೇಕ್ಷಕರನ್ನು ಸೆಳೆದ ಸೀರಿಯಲ್ ಗಳಲ್ಲಿ "ರಾಧಾಕೃಷ್ಣ" ಕೂಡ ಒಂದು.
Recommended Video
ಸಾಮಾನ್ಯವಾಗಿ ರಾಧಾ-ಕೃಷ್ಣರ ಪ್ರೀತಿಯ ಬಗ್ಗೆ ಎಲ್ಲರಿಗೂ ತಿಳಿದಿರುತ್ತೆ. ಇಬ್ಬರ ಪರಿಶುದ್ಧ ಪ್ರೀತಿಗೆ ಮಾರುಹೋಗದವರೆ ಇಲ್ಲ. ಇವರಿಬ್ಬರ ಪ್ರೀತಿ ಎಂತವರನ್ನಾದರು ಪ್ರೀತಿಯಲ್ಲಿ ಬೀಳುವಂತೆ ಮಾಡುತ್ತೆ. ಧಾರಾವಾಹಿ ಮೂಲಕ ರಾಧಾಕೃಷ್ಣರ ಪರಿಶುದ್ಧ ಪ್ರೀತಿಯನ್ನು ಜನರ ಮುಂದೆ ಇಡಲಾಗಿದೆ. ಧಾರಾವಾಹಿಯಲ್ಲಿ ರಾಧಾಕೃಷ್ಣ ಆಗಿ ಅಭಿನಯಿಸಿದ ಇಬ್ಬರು ಸಖತ್ ಖ್ಯಾತಿಗಳಿಸಿದ್ದಾರೆ. ಕನ್ನಡ ಕಿರುತೆರೆ ಪ್ರಿಯರು ರಾಧಾಕೃಷ್ಣ ಜೋಡಿಗೆ ಫಿದಾ ಆಗಿದ್ದಾರೆ. ಮುಂದೆ ಓದಿ...

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ವಿಡಿಯೋ
ಸಾಮಾಜಿಕ ಜಾಲತಾಣದಲ್ಲಿ ಧಾರಾವಾಹಿಗೆ ಸಂಬಂಧಪಟ್ಟ ವಿಡಿಯೋ ಮತ್ತು ಫೋಟೋಗಳು ವೈರಲ್ ಆಗುತ್ತಿವೆ. ಎಲ್ಲಾ ಕಡೆ ರಾಧಾಕೃಷ್ಣರ ಸುಂದರ ವಿಡಿಯೋಗಳು ಹರಿದಾಡುತ್ತಿವೆ. ಕೃಷ್ಣನಾಗಿ ನಟ ಸುಮೇದ್ ಬಣ್ಣಹಚ್ಚಿದ್ದಾರೆ. ಮುದ್ದು ಮುದ್ದಾಗಿ ಕಾಣಿಸಿಕೊಂಡಿರುವ ರಾಧೆ ಯುವಕರ ನಿದ್ದೆಗೆಡಿಸಿದ್ದಾರೆ.

ಕಾಶ್ಮೀರ ಸುಂದರಿ ರಾಧೆ
ಮುಗ್ದ ಮುಖದ ರಾಧೆಯಾಗಿ ಬಣ್ಣಹಚ್ಚಿದ್ದು ಮಲ್ಲಿಕಾ ಸಿಂಗ್. ಈಕೆ ಕಾಶ್ಮೀರದ ಕುವರಿ. ರಾಧಾಕೃಷ್ಣ ಆಕೆಯ ಮೊದಲ ಧಾರಾವಾಹಿ. ಈ ಧಾರಾವಾಹಿಗಾಗಿಯೆ ಮಲ್ಲಿಕಾ ಸಿಂಗ್ ಕಾಶ್ಮೀರದಿಂದ ಮುಂಬೈಗೆ ಬಂದು ನೆಲೆಸಿದ್ದಾರೆ. ಅಂದ್ಹಾಗೆ 10ನೇ ತರಗತಿ ಓದುತ್ತಿರುವಾಗಲೆ ರಾಧಾಕೃಷ್ಣ ಧಾರಾವಾಹಿಗೆ ಆಡಿಷನ್ ನೀಡಿದ್ದಾರೆ. ಆಡಿಷನ್ ನೀಡಿ ಎರಡುವರೆ ವರ್ಷದ ನಂತರ ಈ ಧಾರಾವಾಹಿ ಪ್ರಾರಂಭವಾಗಿದೆ. ಅಂದರೆ 2018ರಲ್ಲಿ ರಾಧಾಕೃಷ್ಣ ಧಾರಾವಾಹಿ ಪ್ರಾರಂಭವಾಗಿದೆ.

ಅದ್ಭುತ ಡ್ಯಾನ್ಸರ್ ಮಲ್ಲಿಕಾ
ಮಲ್ಲಿಕಾ ಸಿಂಗ್ ಅವರದ್ದು ಸಂಪ್ರದಾಯಸ್ತ ಹಿಂದೂ ಕುಟುಂಬ. ತಾಯಿ ರುಬಿ ಸಿಂಗ್. ಕ್ಲಾಸಿಕಲ್ ಡ್ಯಾನ್ಸ್ ಟೀಚರ್. ಅಂದ್ಮೇಲೆ ಮಗಳು ಕೂಡ ಉತ್ತಮ ಡ್ಯಾನ್ಸರ್ ಆಗಿರುವುದರಲ್ಲಿ ಯಾವುದೆ ಅನುಮಾನ ವಿಲ್ಲ. ಹೌದು, ಮಲ್ಲಿಕಾ ಸಿಂಗ್ ಕೂಡ ಉತ್ತಮ ಡ್ಯಾನ್ಸರ್. ಚಿಕ್ಕ ವಯಸ್ಸಿನಲ್ಲಿಯೆ ಮುಂಬೈಗೆ ಬಂದ ಮಲ್ಲಿಕಾ ಪೋಷಕರಿಂದ ದೂರ ಇರಬೇಕಾಯಿತು. ಮುಂಬೈನ ಸಂಬಂಧಿಕರ ಮನೆಯಲ್ಲಿ ನೆಲೆಸಿದ್ದಾರೆ.

ಆಡಿಷನ್ ನೀಡಿ ಎರಡು ವರ್ಷದ ಬಳಿಕ ಧಾರಾವಾಹಿ ಪ್ರಾರಂಭ
ಮಲ್ಲಿಕಾ ಸಿಂಗ್ ಗೆ ಅಭಿನಯದಲ್ಲಿ ಆಸಕ್ತಿ ಇರಲಿಲ್ಲವಂತೆ. ಆದರೆ ತಾಯಿಯ ಒತ್ತಾಯದ ಮೇರೆಗೆ ಆಡಿಷನ್ ನಲ್ಲಿ ಭಾಗಿಯಾಗಿದ್ದರಂತೆ. ಆಡಿಷನ್ ಮಾಡಿ 2 ವರ್ಷದ ಬಳಿಕ ಧಾರಾವಾಹಿಗೆ ಸೆಲೆಕ್ಟ್ ಆಗಿದ್ದೀರಾ ಅಂತ ಧಾರಾವಾಹಿಯ ನಿರ್ಮಾಪಕರಿಂದ ಕರೆಬರುತ್ತೆ. ಮಲ್ಲಿಕಾ ಸಿಂಗ್ ಅವರನ್ನು ರಾಧೆಯಾಗಿ ಸೆಲೆಕ್ಟ್ ಮಾಡಲು ಪ್ರಮುಖ ಕಾರಣ ಆಕೆಯ ಮುಗ್ದ ಮುಖ.

ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿದ್ದಾರೆ ಮಲ್ಲಿಕಾ
ಧಾರಾವಾಹಿ ಮಾಡುವಾಗ ಮಲ್ಲಿಕಾಗೆ ಇನ್ನೂ 18 ವರ್ಷ. ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ವೀಟ್ ಆಗಿರುವ ಮಲ್ಲಿಕಾ ಸಿಂಗ್ ಸಾಕಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ರಾಧೆಯಾಗಿ ಯುವಕರ ಮನದಲ್ಲಿ ಜಾಗಪಡೆದಿರುವ ಮಲ್ಲಿಕಾ ಅವರ ಫೋಟೋಗಳು ಅಚ್ಚರಿ ಪಡುವಂತೆ ಮಾಡುತ್ತಿವೆ.


Click it and Unblock the Notifications