Bhagyalakshmi: ಲಕ್ಷ್ಮೀ -ವೈಷ್ಣವ್ ದೂರ ಮಾಡಲು ಸುಪ್ರೀತಾ ಮಾಡಿದ ಪ್ಲ್ಯಾನ್ ಫಲಿಸುತ್ತಾ..?
ಕೀರ್ತಿಯನ್ನು ಮನಸಾರೆ ಪ್ರೀತಿ ಮಾಡ್ತಾ ಇದ್ದ ವೈಷ್ಣವ್. ಇಬ್ಬರ ಕನಸಿಗೆ ಯಾರ ಭಯವೂ ಇರಲಿಲ್ಲ. ಮದುವೆ ಹೇಗೆ ಆಗಬೇಕು? ಫಸ್ಟ್ ನೈಟ್ ಡೆಕೋರೇಷನ್ ಹೇಗಿರಬೇಕು? ಜೀವನ ಹೇಗೆ ನಡೆಸಬೇಕು ಎಂಬೆಲ್ಲಾ ವಿಚಾರಗಳನ್ನು ಇಬ್ಬರು ಆಗಾಗ ಚರ್ಚೆ ನಡೆಸ್ತಾ ಇದ್ರು. ವೈಷ್ಣವ್‌ಗೆ ಕೂಡ ಕೀರ್ತಿಯನ್ನು ಅವಳಿಷ್ಟದಂತೆ ನೋಡಿಕೊಳ್ಳುವ ಬಯಕೆ ಇತ್ತು. ಆದರೆ ಕೀರ್ತಿ ಮಾಡಿದ ಮೋಸದಿಂದ ಮರೆಯಲಾರದ ಗಾಯ ಮಾಡಿಕೊಂಡಿದ್ದಾನೆ ವೈಷ್ಣವ್.
ಕಾವೇರಿ ಮಾಡಿದ ನಾಟಕಕ್ಕೆ ಸರಿಯಾಗಿ ಮರುಳಾಗಿದ್ದಾಳೆ ಕೀರ್ತಿ. ಅಲ್ಲದೆ ಹೋಗಿದ್ದರೆ ವೈಷ್ಣವ್ ನ ಬಿಡು ಎಂದರೂ ಕೀರ್ತಿ ಬಿಡ್ತಾ ಇರಲಿಲ್ಲ. ಬುದ್ಧಿವಂತಿಕೆ ಮಾತ್ರ ಇಲ್ಲಿ ವರ್ಕೌಟ್ ಆಗ್ತಾ ಇದ್ದದ್ದು. ಅದಕ್ಕೆ ಕೀರ್ತಿಯೇ ಮದುವೆ ಬೇಡ ಎಂದು ಹೇಳುವ ಮಟ್ಟಕ್ಕೆ ಕಾವೇರಿ ಬ್ರೈನ್ ವಾಶ್ ಮಾಡಿದ್ದಳು. ಕಾವೇರಿಯ ನಾಟಕಕ್ಕೆ ಕೀರ್ತಿ ಬಕ್ರ ಆಗಿದ್ದಾಳೆ.

ಹೊತ್ತಿಕೊಂಡೆ ತಿರುಗುವ ವೈಷ್ಣವ್
ಲಕ್ಷ್ಮೀಯ ಮನಸ್ಸು ಏನೆಂಬುದು ವೈಷ್ಣವ್ ಚೆನ್ನಾಗಿಯೇ ಅರಿತಿದ್ದಾನೆ. ಮನೆಯವರಿಗೆಲ್ಲಾ ಬೇಸರ ಮಾಡಬಾರದು ಎಂಬ ಕಾರಣಕ್ಕೇನೆ ಮದುವೆಯಾದರೂ, ಇಬ್ಬರು ಪ್ರೀತಿಸಲು ಸಮಯ ನಿಗದಿ ಮಾಡಿಕೊಂಡಿದ್ದಾರೆ. ಹಳೆಯದ್ದನ್ನು ಮರೆತು, ಮುಂದೆ ಸಾಗೋಣಾ. ಹೂ ಅರಳಿದಷ್ಟೇ ಸಹಜವಾಗಿ ನಮ್ಮ ನಡುವೆ ಪ್ರೀತಿ ಚಿಗುರಲಿ ಎಂದು ಇಬ್ಬರು ಮಾತಾಡಿಕೊಂಡಿದ್ದಾರೆ. ಹೀಗಾಗಿಯೇ ವೈಷ್ಣವ್, ಲಕ್ಷ್ಮೀಯ ಜವಾಬ್ದಾರಿ ತೆಗೆದುಕೊಂಡಿದ್ದಾನೆ. ಲಕ್ಷ್ಮೀ ಕಾಲಿಗೆ ಗಾಯವಾಗಿ ನಡೆಯಲು ಆಗಿಲ್ಲ. ಅದಕ್ಕೆ ಉಂಗುರ ಹುಡುಕುವ ಶಾಸ್ತ್ರಕ್ಕೆ ಹೊತ್ತಿಕೊಂಡೆ ಬಂದಿದ್ದಾನೆ. ಇದನ್ನು ನೋಡಿದ ಮನೆಯವರಿಗೆಲ್ಲಾ ಖುಷಿಯಾದರೆ, ಕಾವೇರಿಗೆ ಕೋಪ ಹೆಚ್ಚಾಗಿತ್ತು.

ಲಕ್ಷ್ಮೀಗೆ ಕಾಟ ಕೊಡುವವರು ಯಾರು..?
ಕಾವೇರಿ ಏನು ಎಂಬುದು ಸುಪ್ರೀತಾಗಿಂತ ಬೇರೆ ಯಾರಿಗೂ ಗೊತ್ತಿರುವುದಕ್ಕೆ ಸಾಧ್ಯವಿಲ್ಲ. ಅದಕ್ಕೆ ಸುಪ್ರೀತಾ ಏನೇ ಅಂದರೂ ಕಾವೇರಿ ಸುಮ್ಮನೆ ಆಗಿ ಬಿಡುತ್ತಾಳೆ. ಕುಸುಮಾಗೆ ತಂಗಿಯ ಬಗ್ಗೆ ಮೇಲ್ನೋಟಕ್ಕೆ ಅಷ್ಟೇ ಗೊತ್ತಿದೆ. ವೈಷ್ಣವ್, ಕೀರ್ತಿಯನ್ನು ಮದುವೆಯಾಗಲಿ ಎಂದು ಸುಪ್ರೀತಾ ಬಯಸಿದ್ದಳು. ಪ್ಲ್ಯಾನ್ ಕೂಡ ಮಾಡಿದ್ದಳು. ಆದ್ರೆ ಅದು ಆಗಲಿಲ್ಲ. ಈಗ ಮನೆಗೆ ಬಂದಿರುವ ಲಕ್ಷ್ಮೀಗೆ ಹೆಜ್ಜೆ ಹೆಜ್ಜೆಗೂ ಕಾಟ ಕೊಡಲು ಶುರು ಮಾಡಿದ್ದಾಳೆ ಸುಪ್ರೀತಾ. ಅದಕ್ಕಿಂತ ಹೆಚ್ಚಾಗಿ ಕಾವೇರಿಗೂ ಇದನ್ನೆಲ್ಲಾ ಸಹಿಸಲು ಆಗುತ್ತಿಲ್ಲ.

ವೈಷ್ಣವ್ ಡಿಸ್ಟರ್ಬ್ ಮಾಡಲು ಸುಪ್ರೀತಾ ಪ್ಲ್ಯಾನ್
ವೈಷ್ಣವ್ ಮತ್ತು ಕೀರ್ತಿ ಲವ್ ಬರ್ಡ್ಸ್ ಆಗಿದ್ದವರು. ಸುಪ್ರೀತಾ ಮತ್ತು ವಿಧಿ ಇಷ್ಟಪಡುವಂತ ಸೊಸೆ ಹಾಗೂ ಅತ್ತಿಗೆ. ಆದರೆ ವಿಧಿ ಬದಲಾಗಿದೆ. ಕೀರ್ತಿ ದೂರವಾಗಿ ಲಕ್ಷ್ಮೀ ಎಂಟ್ರಿ ಕೊಟ್ಟಿದ್ದಾಳೆ. ಹೇಗಾದರೂ ಮಾಡಿ ಈಗಲೂ ಕೀರ್ತಿಯನ್ನು ವಾಪಾಸ್ ಬರುವಂತೆ ಮಾಡಬೇಕೆಂದು ಸುಪ್ರೀತಾ ಪ್ಲ್ಯಾನ್ ರೆಡಿ ಮಾಡುತ್ತಿದ್ದಾಳೆ. ಅದು ವೈಷ್ಣವ್ ನ ಡಿಸ್ಟರ್ಬ್ ಮಾಡ್ತಾ ಇದೆ.

ವೈಷ್ಣವ್‌ಗೆ ಕಾಡುತ್ತಿದೆ ಕೀರ್ತಿ ನೆನಪುಗಳು
ಲಕ್ಷ್ಮೀ ಮತ್ತು ವೈಷ್ಣವ್ ಗೆ ಇಂದು ಸ್ಪೆಷಲ್ ದಿನ. ಅದೊಂದು ಶಾಸ್ತ್ರವಷ್ಟೇ. ಇಬ್ಬರು ಮಾತನಾಡುತ್ತಾ ಬರುವಾಗ ಮನೆಯವರು ಈ ಶಾಸ್ತ್ರ ಮಾಡಿದ್ದಕ್ಕೆ ನೀವೂ ಏನು ಅಂದುಕೊಳ್ಳಬೇಡಿ. ಅವರಿಗೆ ಗೊತ್ತಿಲ್ಲ. ನಮ್ಮಿಬ್ಬರ ನಡುವೆ ಇರುವ ಬಾಂಧವ್ಯ ಎಂದು ವೈಷ್ಣವ್ ಲಕ್ಷ್ಮೀ ಬಳಿ ಹೇಳಿ ಕರೆದುಕೊಂಡು ರೂಮಿಗೆ ಬಂದಿದ್ದಾನೆ. ಆದರೆ ಸುಪ್ರೀತಾ ಮಾಡಿರುವ ಅವಾಂತರ ವೈಷ್ಣವ್ ತಲೆ ಗಿರಗಿರ ಎಂದಿದೆ. ಕೀರ್ತಿ ಇಷ್ಟಪಟ್ಟ ರೀತಿಯೇ ರೂಮು ರೆಡಿಯಾಗಿದೆ. ಎಂಟ್ರಿಯಾದಾಗ ಗುಲಾಬಿ ದಳ ಬಿದ್ದಿದೆ, ರೂಮಿನ ತುಂಬಾ ಲಕ್ಷ್ಮೀ ವೈಷ್ಣವ್ ಫೋಟೋ ನೇತಾಡುತ್ತಿದೆ, ಕ್ಯಾಂಡಲ್ ಗಳ ಬೆಳಕು, ಇಷ್ಟವಾದ ಚಾಕಲೇಟ್. ಎಲ್ಲವನ್ನು ನೋಡಿ ದಂಗಾಗಿ ನಿಂತಿದ್ದಾನೆ ವೈಷ್ಣವ್.


Click it and Unblock the Notifications











