ಮುಂದಿನ ತಿಂಗಳು ಅನುಶ್ರೀ ಮದುವೆನಾ? ಹುಡುಗನನ್ನು ಫಿಕ್ಸ್ ಮಾಡಿದ್ಯಾರು?

By ಎಸ್ ಸುಮಂತ್

ಕಾಲ ಎಷ್ಟೇ ಬದಲಾಗಲಿ.. ಜನ ಬದಲಾಗಲ್ಲ.. ಪ್ರಶ್ನೆ ಕೇಳೋದನ್ನ ನಿಲ್ಲಿಸಲ್ಲ. ಮದುವೆ ಆಗಿಲ್ಲದವರಿಗೆ ಮದುವೆ ಯಾವಾಗ..? ಮಕ್ಕಳು ಆಗಿಲ್ಲ ಅಂದ್ರೆ ಗುಡ್ ನ್ಯೂಸ್ ಯಾವಾಗ ಅಂತ? ಇಂತಹ ಪ್ರಶ್ನೆ ಕೇಳಿ ಕೇಳಿ ರೋಸಿ ಹೋದಾಗ ಕೇಳುಗರ ಮನಶಾಂತಿಗಾಗಿ ಹಲವರು ಮುಂದಿನ ವರ್ಷ ನನ್ನ ಮದುವೆ ಗ್ಯಾರಂಟಿ ಎಂಬ ಮಾತನ್ನ ಹೇಳುತ್ತಾರೆ. ಈಗ ಆಂಕರ್ ಅನುಶ್ರೀ ಮಾಡಿದ್ದು ಅದನ್ನೇ.

ಅನುಶ್ರೀ ಕನ್ನಡದ ಟಾಪ್ ಆಂಕರ್.‌ ಜೀ ಕನ್ನಡದ ರಿಯಾಲಿಟಿ ಶೋಗಳ ಪರ್ಫೆಕ್ಟ್ ನಿರೂಪಕಿ. ಕಾರ್ಯಕ್ರಮ ಅದ್ಬುತವಾಗಿ, ನೋಡುಗರಿಗೂ ಖುಷಿ ಕೊಡುವಂತೆ ನಡೆಸಿ ಕೊಡುತ್ತಾರೆ. ಅವರ ನಗು ಮುಖ, ಹಳ್ಳಿಯಿಂದ ಬಂದ, ನಾಚಿಕೆ, ಭಯದ ಸ್ವಭಾವ ಇರುವ ಸ್ಪರ್ಧಿಗಳೇ ಬಂದ್ರು, ಅದು ಸ್ಪರ್ಧೆ ಎನಿಸದಷ್ಟು ಕಂಫರ್ಟ್ ಝೋನ್ ಕ್ರಿಯೇಟ್ ಮಾಡಿ ಕೊಡ್ತಾರೆ ಅನುಶ್ರೀ. ಇದೀಗ ಅವರ ಮದುವೆಯನ್ನ ಟ್ರೋಲರ್ಸ್‌ ಗುತ್ತಿಗೆ ತೆಗೆದುಕೊಂಡಿದ್ದು, ಮತ್ತೊಮ್ಮೆ ಮದುವೆ ಮಾಡಿದ್ದಾರೆ.

Is Anchor Anushree Getting Married To Director Raj b shtetty Fact Check Behind The Viral News

ಚಿಕ್ಕಣ್ಣ ಜೊತೆಗೆ ಅನುಶ್ರೀ ಮದುವೆ

ಅನುಶ್ರೀ ತಮ್ಮ ವೃತ್ತಿಯಲ್ಲಿ ಅಂದ್ರೆ ನಿರೂಪಣೆಯ ವೃತ್ತಿಯಲ್ಲಿ ಖ್ಯಾತಿ ಪಡೆಯುತ್ತಿದ್ದ ಸಮಯದಲ್ಲಿ ಒಂದಷ್ಟು ಟ್ರೋಲ್ ಆಗಿತ್ತು. ಚಿಕ್ಕಣ್ಣ ಹಾಗೂ ಅನುಶ್ರೀ ಮದುವೆ ಆಗ್ತಾ ಇದಾರೆ ಅಂತ. ಈ ಬಗ್ಗೆ ವೇದಿಕೆ ಮೇಲೆ ಒಮ್ಮೆ ಅನುಶ್ರೀ ಮಾತನಾಡಿದ್ದರು. ಚಿಕ್ಕಣ್ಣ ಇರುವಾಗಲೇ ಹೇಳಿಕೊಂಡು ನಕ್ಕಿದ್ದರು. ಒಂದು ಸಲ ಅಲ್ಲ ಚಿಕ್ಕಣ್ಣನಿಗೂ ಅನುಶ್ರೀಗೂ ಟ್ರೋಲರ್ಸ್ ಬಹಳಷ್ಟು ಬಾರಿ ಮದುವೆ ಮಾಡಿದ್ದಾರೆ.

ರಾಜ್ ಬಿ ಶೆಟ್ಟಿ ಜೊತೆಗೆ ಮದುವೆ!

ಚಿಕ್ಕಣ್ಣ ಆದ್ಮೇಲೆ ಈಗ ರಾಜ್ ಬಿ ಶೆಟ್ಟಿ ಜೊತೆಗೆ ಅನುಶ್ರೀ ಹೆಸರನ್ನ ತಳುಕು ಹಾಕುತ್ತಿದ್ದಾರೆ. ಅನುಶ್ರೀ ಮದುವೆಯಾಗುತ್ತಿರುವ ಹುಡುಗ ಬೇರೆ ಯಾರೂ ಅಲ್ಲ ಅದು ರಾಜ್ ಬಿ ಶೆಟ್ಟಿ ಎಂದು ಟ್ರೋಲ್ ಮಾಡ್ತಾ ಇದಾರೆ. ಅನುಶ್ರೀ ಹಾಗೂ ರಾಜ್ ಬಿ ಶೆಟ್ಟಿ ಆತ್ಮೀಯರೆ. ಒಂದೇ ಊರಿನ ಕಡೆಯವರು. ಜೊತೆಗೆ ರಾಜ್ ಬಿ ಶೆಟ್ಟಿಯವರನ್ನ ನನ್ನ ಆಧ್ಯಾತ್ಮದ ಗುರು ಎಂದೇ ಅನುಶ್ರೀ ಕರೆಯುತ್ತಾರೆ. ಆದರೆ ಟ್ರೋಲರ್ಸ್ ಈಗ ಅವರಿಬ್ಬರಿಗೂ ಮದುವೆ ಮಾಡಿಸಲು ಹೊರಟಿದ್ದಾರೆ.

ಫ್ಯಾಮಿಲಿ, ಫ್ರೆಂಡ್ಸ್ ಜೊತೆಗೆ ಭೇಟಿ

ಮಹಾಕುಂಭಮೇಳಕ್ಕೆ ದೇಶದಾದ್ಯಂತ ಜನ ತಾ.. ಮುಂದು, ನಾ.. ಮುಂದು ಅಂತ ಹೋಗ್ತಾನೇ ಇದಾರೆ. ಯಾಕಂದ್ರೆ‌ ಇನ್ನೊಂದು ಮಹಾಕುಂಭಮೇಳ ನೋಡುವುದಕ್ಕೆ ಈಗಿನ ಪೀಳಿಗೆಯ ಯಾರೂ ಇರೋದಿಲ್ಲ. ಇನ್ನು 144 ವರ್ಷ ಆದ್ಮೇಲೆ ಬರುವಂತದ್ದು. ಅನುಶ್ರೀ ಫ್ಯಾಮಿಲಿ, ಫ್ರೆಂಡ್ಸ್ ಜೊತೆಗೆ ಹೋಗಿದ್ರು. ಅದರಲ್ಲಿ ರಾಜ್ ಬಿ ಶೆಟ್ಟಿ ಹಾಗೂ ಕಿರಣ್ ರಾಜ್ ಕೂಡ ಇದ್ದರು. ಅದೇ ಫೋಟೋಗಳನ್ನು ತೋರಿಸಿ ಟ್ರೋಲ್ ಮಾಡುವುದಕ್ಕೆ ಶುರು ಮಾಡಿದ್ದಾರೆ.

Is Anchor Anushree Getting Married To Director Raj b shtetty Fact Check Behind The Viral News

ಮದುವೆ ಆಗ್ತಿಲ್ವಾ ಅನುಶ್ರೀ?

ಈ ವರ್ಷ ಅಂದ್ರೆ ಮಾರ್ಚ್ 17 ಅಪ್ಪು ಹುಟ್ಟು ಹಬ್ಬದ ದಿನ ಅನುಶ್ರೀ ಮದುವೆ ಬಗ್ಗೆ ಅನೌನ್ಸ್ ಮಾಡುತ್ತೇನೆ ಎಂದಿದ್ದರು. ವೇದಿಕೆ ಮೇಲೆ ಅವರೇ ಹೇಳಿದ್ದರು. ಆದರೆ ಮೂಲಗಳ ಪ್ರಕಾರ ಇದೆಲ್ಲ ಸುಳ್ಳು ಎನ್ನಲಾಗ್ತಾ ಇದೆ. ಅಂದ್ರೆ ಮಾರ್ಚ್ ತಿಂಗಳಲ್ಲಿ ಯಾವುದೇ ಅನೌನ್ಸ್ ಮಾಡಲ್ಲ, ಯಾರೊಟ್ಟಿಗೂ ಮುದುವೆ ನಿಶ್ಚಯ ಆಗಿಲ್ಲ ಎಂದು ಆಪ್ತ ಮೂಲಗಳು ತಿಳಿಸಿವೆ. ಯಾವುದೇ ಪೋಸ್ಟ್‌ಗಾಗಲೀ, ಸಿಕ್ಕಾಗ, ನಿಂತಾಗ, ಕುಂತಾಗ ಅನುಶ್ರೀ ನಿಮ್ಮ ಮದುವೆ ಯಾವಾಗ ಅಂತ ಕೇಳಿದ್ರೆ ಈ ಹಿಂಸೆ ತಡೆದುಕೊಳ್ಳೋದಕ್ಕೆ ಆಗದೆ ಮಾರ್ಚ್‌ನಲ್ಲಿ ಮದುವೆ ಎಂದು ಸುಳ್ಳು ಹೇಳಿದ್ದರು ಎನ್ನಲಾಗಿದೆ.

More from Filmibeat

English summary
Anchor Anushree to marry Kannada film director? why Marriage Rumours spread
Read more about: tv anushree raj b shetty
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X