ಸದ್ದಿಲ್ಲದೇ ಮದುವೆಯಾದ ಬಿಗ್ ಬಾಸ್ ಸ್ಫರ್ಧಿ ? ಫೋಟೊ ವೈರಲ್

ಮದುವೆ ಎನ್ನುವುದು ಜೀವನದ ಅತೀ ಮಹತ್ವದ ಘಟ್ಟ. ಇಲ್ಲಿ ಎರಡು ಜೀವಗಳು ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಕುಗ್ಗದೇ ಜೀವನಪೂರ್ತಿ, ಒಬ್ಬರಿಗೊಬ್ಬರು ಬೆನ್ನೆಲುಬಾಗಿ ಜೊತೆಯಾಗಿ ಇರಬೇಕಾದಂತಹ ಒಂದು ಬಂಧನ. ಅದಕ್ಕೇ ಹಿರಿಯರು ಹೇಳಿರುವುದು, ಮದುವೆ ಅನ್ನುವುದು ಒಂದೆರಡು ದಿನದ ಆಟವಲ್ಲ, ಇದು ಜೀವನ ಪೂರ್ತಿಯಾಗಿ ಸಂಗಾತಿ ಜತೆಗೆ ಬಾಳುತ್ತೇವೆ ಎನ್ನುವುದನ್ನು ಅಧಿಕೃತವಾಗಿ ಘೋಷಿಸುವಂತಹ ಸುಸಂದರ್ಭ.

ಈ ಸಂದರ್ಭವನ್ನು ಅನೇಕರು ಸಂಭ್ರಮದಿಂದ ಆಚರಿಸುತ್ತಾರೆ. ಅದರಲ್ಲಿಯೂ ಸೆಲೆಬ್ರಿಟಿಗಳ ಮದುವೆ ಅಂದರೆ ಕಣ್ಣು ಕುಕ್ಕುವಂತೆ ಇರುತ್ತೆ. ಅದ್ದೂರಿತನ ತುಂಬಿರುತ್ತೆ. ಆದರೆ ಇದಕ್ಕೆ ಅಪವಾದ ಎನ್ನುವಂತೆ ಅಲ್ಲೊಬ್ಬರು ಇಲ್ಲೊಬ್ಬರು ಸರಳ ಮದುವೆಯಾಗುತ್ತಾರೆ.

Secret Marriage Bigg Boss 19 Star Nehal Chudasama Breaks The Internet With Red Bridal Pics

ಇನ್ನು ಕೆಲವರು ಯಾವ ಸುಳಿವನ್ನು ನೀಡದೇ ಸದ್ದಿಲ್ಲದೇ ಸಪ್ತಪದಿಯನ್ನು ತುಳಿಯುತ್ತಾರೆ. ಈ ಸಾಲಿನಲ್ಲಿ ನೇಹಾಲ್ ಚುಡಾಸಮಾ ಕೂಡ ಸೇರಿಕೊಂಡಿದ್ದಾರಾ..? ಗೊತ್ತಿಲ್ಲ. ಆದರೆ ಸದ್ಯಕ್ಕಂತೂ ಇವರು ಸದ್ದಿಲ್ಲದೇ ಮದುವೆಯಾಗಿದ್ಧಾರೆ ಎನ್ನುವ ಸುದ್ದಿಯಂತೂ ಹಬ್ಬಿದೆ.

ಹೌದು, ನೇಹಾಲ್ ಚುಡಾಸಮಾ.. ''ಮಿಸ್ ದಿವಾ ಯುನಿವರ್ಸ್‌'' ಕಿರೀಟವನ್ನು 2018ರಲ್ಲಿ ಮುಡಿಗೇರಿಸಿಕೊಂಡ ಚೆಲುವೆ. ಅದೇ ವರ್ಷ ಬ್ಯಾಂಕಾಕ್‌ನಲ್ಲಿ ನಡೆದ ''ಮಿಸ್ ಯುನಿವರ್ಸ್''ನಲ್ಲಿ ಕೂಡ ಭಾರತವನ್ನು ಪ್ರತಿನಿಧಿಸಿದ್ದ ನೇಹಾಲ್, ಮಾಡೆಲ್ ಕೂಡ ಹೌದು. ಫಿಟ್ನೆಸ್ ಕನ್ಸ್‌ಲ್ಟೆಂಟ್ ಕೂಡ ಹೌದು.ಇಷ್ಟೇ ಅಲ್ಲ ನಿರೂಪಕಿ ಕೂಡ ಹೌದು.

ಅಕ್ಷಯ್ ಕುಮಾರ್ ಅಭಿನಯದ ''ದಿ ಹಾಲಿಡೇ'' ಚಿತ್ರದಲ್ಲಿ ಕೂಡ ಅಭಿನಯಿಸಿರುವ ನೇಹಾಲ್, '' ತು ಜಖ್ಮಿ ಹೈ'' .. ''ಬಡೀ ಹೀರೋಯಿನ್ ಬನ್ತೀ ಹೈ''.. ''ಲೈಲಾ ಮಜ್ನು''.. ಚಿತ್ರಗಳಲ್ಲಿ ಕೂಡ ಆಕ್ಟ್ ಮಾಡಿದ್ದಾರೆ.

ಇನ್ನು ಕಳೆದ ವರ್ಷ ಹಿಂದಿ ''ಬಿಗ್ ಬಾಸ್‌''ನ 19ನೇ ಸೀಸನ್‌ನಲ್ಲಿ ಕೂಡ ಭಾಗವಹಿಸಿದ್ದ ನೇಹಾಲ್, 14ನೇ ಸ್ಥಾನಕ್ಕೆ ತೃಪ್ತಿ ಪಟ್ಟರು. ಇಂಥಾ ನೇಹಾಲ್ ಸದ್ಯ ಸದ್ದು ಗದ್ದಲ ಇಲ್ಲದೇ ಮದುವೆಯಾಗಿದ್ದಾರೆ ಎನ್ನುವ ಸುದ್ದಿ ಸದ್ಯ ಹಬ್ಬಿದೆ.

Secret Marriage Bigg Boss 19 Star Nehal Chudasama Breaks The Internet With Red Bridal Pics

ಇದಕ್ಕೆ ಪೂರಕವಾಗಿ ವಧುವಿನಂತೆ ನೇಹಾಲ್ ಕಂಗೊಳಿಸುತ್ತಿರುವ ಕೆಲ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ವೈರಲ್ ಆದ ಈ ಫೋಟೊಗಳಲ್ಲಿ ನೇಹಾಲ್ ಕೆಂಪು ಬಣ್ಣದ ಉಡುಪು ಧರಿಸಿದ್ದಾರೆ. ತಮ್ಮ ಕಾಸ್ಟೂಮ್‌ಗೆ ಮ್ಯಾಚ್ ಆಗುವಂತೆ ಕುತ್ತಿಗೆಗೆ ಕುಂದನ್ ನೆಕ್ಲೇಸ್ ಹಾಕಿಕೊಂಡಿದ್ದಾರೆ. ಕಿವಿಯೋಲೆ ಹಾಕಿಕೊಂಡು ಸಾಂಪ್ರದಾಯಿಕ ಶೈಲಿಯಲ್ಲಿ ಮಿಂಚಿದ್ದಾರೆ.

ಇನ್ನು ಕೂದಲನ್ನು ನೀಟಾಗಿ ಕಟ್ಟಿ ಬ್ರೈಡಲ್ ಬನ್ ಮಾಡಿಕೊಂಡಿದ್ದು, ಕಣ್ಣುಗಳಿಗೆ ಸ್ಮೋಕಿ ಕಣ್ಣಿನ ಮೇಕಪ್ ಹಾಗೂ ನ್ಯೂಡ್ ಲಿಪ್‌ಸ್ಟಿಕ್ ಬಳಸಿದ್ದಾರೆ ನೇಹಾಲ್.

ನೇಹಾಲ್ ಅವರ ಈ ಫೋಟೊಗಳನ್ನು ಕಂಡು ಇವರ ಅಭಿಮಾನಿಗಳು ಅಚ್ಚರಿಗೊಂಡಿದ್ದು, ಸದ್ದಿಲ್ಲದೇ ಮದುವೆಯಾದರಾ ಹೇಗೆ ಎಂಬ ಪ್ರಶ್ನೆಯನ್ನು ಮಾಡುತ್ತಿದ್ದಾರೆ, ಇನ್ನು, ತಮ್ಮ ಈ ಫೋಟೊಗಳಿಗೆ ನಾನಿನ್ನೂ ಜೀರ್ಣಿಸಿಕೊಳ್ಳುತ್ತಿದ್ದೇನೆ ಎಂದು ನೇಹಾಲ್ ಬರೆದುಕೊಂಡಿದ್ದಾರೆ.

ಇದರಿಂದ ಇವರ ಅಭಿಮಾನಿಗಳ ಗೊಂದಲ ಇನ್ನೂ ಹೆಚ್ಚಾಗಿದೆ. ಇದು ಸಾಲದೆಂಬಂತೆ ಚಿತ್ರರಂಗದ ಪ್ರಮುಖ ಸೆಲೆಬ್ರಿಟಿಗಳು, ಸಹ-ಕಲಾವಿದರು ಮತ್ತು ''ಬಿಗ್ ಬಾಸ್'' 19ನೇ ಸೀಸನ್‌ನ ಸ್ಫರ್ಧಿಗಳು ನೇಹಾಲ್ ಅವರಿಗೆ ಶುಭಾಶಯವನ್ನು ಕೂಡ ಕೋರಿದ್ದಾರೆ.

ಹೀಗಾಗಿ ವೆರಿಫೈಡ್ ಬ್ಲೂ-ಟಿಕ್ ಖಾತೆಗಳಿಂದ ಬರುತ್ತಿರುವ ಈ ಸಾಲು ಸಾಲು ಶುಭಾಶಯಗಳನ್ನು ನೋಡಿದ ಅಭಿಮಾನಿಗಳು, ಇದು ಯಾವುದೇ ಪ್ರಚಾರದ ಗಿಮಿಕ್ ಅಲ್ಲ, ನೇಹಾಲ್ ನಿಜವಾಗಿಯೂ ಅತ್ಯಂತ ಆಪ್ತರ ಸಮ್ಮುಖದಲ್ಲಿ ಸೀಕ್ರೆಟ್ ಆಗಿ ಮದುವೆ ಮಾಡಿಕೊಂಡಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಕದ್ದು ಮುಚ್ಚಿ ಮದುವೆಯಾಗುವ ಅವಶ್ಯಕತೆಯಾದರೂ ಏನಿತ್ತು ಎಂದು ಚರ್ಚೆ ಮಾಡುತ್ತಿದ್ಧಾರೆ. ನಿಜಾಂಶವೇನು..? ಖುದ್ದು ನೇಹಾಲ್ ಚುಡಾಸಮಾ ಅವರೇ ಅಭಿಮಾನಿಗಳಲ್ಲಿ ಕಾಡುತ್ತಿರುವ ಪ್ರಶ್ನೆಗಳಿಗೆ ಉತ್ತರ ನೀಡಬೇಕಿದೆ. ನಿಜಕ್ಕೂ ಮದುವೆಯಾದರಾ ಅಥವಾ ಇದ್ಯಾವದಾದರೂ ಜಾಹೀರಾತಿನ ಫೋಟೊಶೂಟಾ ಎನ್ನುವುದಕ್ಕೂ ಉತ್ತರ ಸಿಗಬೇಕಿದೆ.

English summary
Bigg Boss 19 star Nehal Chudasama sparks massive wedding rumors. See the viral bridal lehenga pictures, celeb reactions, and details on her mystery groom here!
Read more about: marriage biggboss ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X