'ಬಿಗ್ ಬಾಸ್ ಕನ್ನಡ 2' ತಮಾಷೇನೇ ಇರಲಿಲ್ಲ ಸ್ವಾಮಿ!

By ಉದಯರವಿ

ಎಲ್ಲಾ ರಿಯಾಲಿಟಿ ಶೋಗಳ ತಂದೆ ಎಂದೇ ಬಿಂಬಿತವಾಗಿರುವ 'ಬಿಗ್ ಬಾಸ್' ಕನ್ನಡಿಗರ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆಯಾ? ಕಳೆದ ಹದಿನಾಲ್ಕು ವಾರಗಳ ಕಾಲ ನಿರಂತರವಾಗಿ ಪ್ರಸಾರವಾದ ಈ ಶೋ ಬಗ್ಗೆ ವೀಕ್ಷಕರು ಏನಂತಾರೆ?

ಪ್ರತಿಯೊಂದು ರಿಯಾಲಿಟಿ ಶೋಗಳಿಗೂ ಪರ ವಿರೋಧ ಇದ್ದೇ ಇರುತ್ತದೆ. ಆದರೆ ಬಿಗ್ ಬಾಸ್ ವಿಚಾರದಲ್ಲಿ ವಿರೋಧವೇ ಹೆಚ್ಚು ಎನ್ನಬಹುದು. ಮೊದಲ ಸೀಸನ್ ಗೆ ಹೋಲಿಸಿದರೆ ಎರಡನೇ ಸೀಸನ್ ಅಷ್ಟು ಮನರಂಜನಾತ್ಮಕವಾಗಿ ಮೂಡಿಬರಲಿಲ್ಲ ಎಂಬುದು ಒಕ್ಕೊರಲಿನ ಅಭಿಪ್ರಾಯ.

"ತಮಾಷೇನೇ ಅಲ್ಲ" ಎಂಬ ಟ್ಯಾಗ್ ಲೈನ್ ಜೊತೆಗೆ ಆರಂಭವಾದ 'ಸೀಸನ್ 2' ಬಗ್ಗೆ ತಮಾಷೇನೇ ಇರಲಿಲ್ಲ ಎಂದು ಹೇಳುವವರಿಗೂ ಬರವಿಲ್ಲ. ಏಕೆಂದರೆ ಬಿಗ್ ಬಾಸ್ ಮನೆಯಲ್ಲಿದ್ದ ಸ್ಪರ್ಧಿಗಳು ಹೆಚ್ಚಾಗಿ ತುಟಿಯನ್ನೇ ಬಿಚ್ಚುತ್ತಿರಲಿಲ್ಲ.

ಕೆಲವರ ನಿರಾಶ್ರಿತರ ತಾಣವಾಗಿದ್ದ ಬಿಗ್ ಬಾಸ್

ಕೆಲವರ ನಿರಾಶ್ರಿತರ ತಾಣವಾಗಿದ್ದ ಬಿಗ್ ಬಾಸ್

ಏನು ಮಾತನಾಡಿದರೆ ಇನ್ನೇನಾಗುತ್ತದೋ ಎಂಬಂತೆ ಇರುತ್ತಿದ್ದರು. ಇದ್ದವರಲ್ಲಿ ಗುರುಪ್ರಸಾದ್, ಅಕುಲ್ ಬಾಲಾಜಿ, ನೀತೂ, ಆದಿ ಲೋಕೇಶ್ ಅವರು ಮಾತ್ರ ಸ್ವಲ್ಪ ಆಕ್ಟೀವ್ ಆಗಿರುತ್ತಿದ್ದರು. ಉಳಿದಂತೆ ಇದು ಕೆಲವರಿಗೆ ನಿರಾಶ್ರಿತರ ತಾಣದಂತೆ ಆಗಿತ್ತು.

ಸುದೀಪ್ ನಿರೂಪಣೆ ಬಗ್ಗೆಯೂ ಅಪಸ್ವರ

ಸುದೀಪ್ ನಿರೂಪಣೆ ಬಗ್ಗೆಯೂ ಅಪಸ್ವರ

ಇನ್ನೊಂದು ವಿಚಾರ ಎಂದರೆ ಸುದೀಪ್ ಅವರ ನಿರೂಪಣೆ ಬಗ್ಗೆಯೂ ಕೆಲವು ಅಪಸ್ವರಗಳು ಕೇಳಿಬಂದಿವೆ. ಸುದೀಪ್ ಅವರು ಒಳ್ಳೆಯ ನಟನಿರಬಹುದು ಆದರೆ ಸಲ್ಮಾನ್ ಖಾನ್ ಅವರಷ್ಟು ಹಾಸ್ಯಪ್ರಜ್ಞೆ ಅವರಲ್ಲಿ ಇರಲಿಲ್ಲ ಎಂದು ವೀಕ್ಷಕರು ಹೇಳಿದ್ದಾರೆ.

ಮನೆಯಲ್ಲಿ ಇದ್ದೂ ಇಲ್ಲದಂತಿದ್ದವರು

ಮನೆಯಲ್ಲಿ ಇದ್ದೂ ಇಲ್ಲದಂತಿದ್ದವರು

ಅದರಲ್ಲೂ ಶಕೀಲಾ, ದೀಪಿಕಾ ಕಾಮಯ್ಯ, ಲಯೇಂದ್ರ, ಮಯೂರ್ ಪಟೇಲ್, ಅನಿತಾ ಭಟ್, ರೋಹಿತ್, ಹರ್ಷಿಕಾ ಪೂಣಚ್ಚ ಮನೆಗೆ ಬಂದದ್ದೂ ಗೊತ್ತಾಗಲಿಲ್ಲ. ಅವರು ಅಲ್ಲಿಂದ ಹೋಗಿದ್ದು ಗೊತ್ತಾಗಲಿಲ್ಲ. ಆರಂಭದಲ್ಲಿ ಆಕ್ಟೀವ್ ಆಗಿದ್ದ ಸೃಜನ್ ಕೊನೆಕೊನೆಗೆ ಮೌನಕ್ಕೆ ಶರಣಾದರು.

ಮೆಚ್ಚಬೇಕಾದ ಒಂದೇ ಒಂದು ಅಂಶ

ಮೆಚ್ಚಬೇಕಾದ ಒಂದೇ ಒಂದು ಅಂಶ

ಈ ಬಾರಿಯ ಸೀಸನ್ ಬಗ್ಗೆ ಮೆಚ್ಚಬೇಕಾದ ಒಂದೇ ಒಂದು ಅಂಶ ಎಂದರೆ ಅಕುಲ್ ಬಾಲಾಜಿಗೆ ಅವರನ್ನು ಆಯ್ಕೆ ಮಾಡಿದ್ದು. ಸೀಸನ್ ಒಂದರಲ್ಲಿ ಸೃಜನ್ ತರಹವೇ ಅಂತರ್ಮುಖಿಯಾಗಿದ್ದ ವಿಜಯ್ ರಾಘವೇಂದ್ರ ಅವರನ್ನು ಆಯ್ಕೆ ಮಾಡಿದ್ದರು. ಆದರೆ ಈ ಬಾರಿ ಸುವರ್ಣ ವಾಹಿನಿ ಒಬ್ಬ ರಿಯಲ್ ಎಂಟರ್ ಟೈನರ್ ಆದ ಅಕುಲ್ ಅವರನ್ನು ಆಯ್ಕೆ ಮಾಡಿದೆ. ಇದೊಂದೇ ಸಮಾಧಾನಕರ ಸಂಗತಿ.

ನೀವೇನಂತೀರಿ? ನಿಮ್ಮ ಮುಕ್ತ ಅಭಿಪ್ರಾಯಕ್ಕೆ ಸ್ವಾಗತ

ನೀವೇನಂತೀರಿ? ನಿಮ್ಮ ಮುಕ್ತ ಅಭಿಪ್ರಾಯಕ್ಕೆ ಸ್ವಾಗತ

ಅಕುಲ್ ಅವರ ತಾಯ್ನುಡಿ ತೆಲುಗು ಆಗಿದ್ದರೂ ಕನ್ನಡ ಕಲಿತು ಈ ಶೋನಲ್ಲಿ ರಂಜಿಸಿದ್ದು ಅವರ ಸಾಧನೆ ಎನ್ನಬಹುದು. ಬಿಗ್ ಬಾಸ್ ಪಟ್ಟಕ್ಕೆ ನಿಜಕ್ಕೂ ಅರ್ಹ ಸ್ಪರ್ಧಿಯನ್ನೇ ಆಯ್ಕೆ ಮಾಡಲಾಗಿದೆ. ನೀವೇನಂತೀರಿ? ನಿಮ್ಮ ಮುಕ್ತ ಅಭಿಪ್ರಾಯಕ್ಕೆ ಸ್ವಾಗತ.

More from Filmibeat

English summary
Is Bigg Boss Kannada 2 really wins viewers heart? The viewers says, "Finally boring season ended...thanks to guru for keeping few episodes joy full during u r stay in house..." Bla Bla Bla.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X