ಮರಾಠಿಯಾದರೂ ಕನ್ನಡ ನನಗೆ ಚೆನ್ನಾಗಿಯೇ ಬರುತ್ತೆ, ಯಮುನಾಗೆ ಗೌತಮಿ ಜಾಧವ್ ಖಡಕ್ ಉತ್ತರ..!

ಕಿನಾರೆ ಚಿತ್ರದ ಮೂಲಕ ನಾಯಕಿಯಾದವರು ಗೌತಮಿ ಜಾಧವ್. ಆ ನಂತರ ಸತ್ಯ ಧಾರಾವಾಹಿ ಇವರನ್ನು ಕರುನಾಡಿಗೆ ಪರಿಚಯಿಸಿತು. ಹೆಸರು-ಕೀರ್ತಿಯನ್ನು ತಂದು ಕೊಟ್ಟಿತು. ಇಂಥಾ ಗೌತಮಿ ಜಾಧವನ್ ಬಿಗ್ ಬಾಸ್ ಮನೆಯಲ್ಲಿದ್ದಾಗ ಇದೇ ಬಿಗ್ ಬಾಸ್‌ ಮನೆಯಿಂದ ಮೊದಲ ವಾರದಲ್ಲೇ ಹೊರ ಬಂದ ಯಮುನಾ ಶ್ರೀನಿಧಿ ಆರೋಪವನ್ನು ಮಾಡಿದ್ದರು. ಗೌತಮಿ ಜಾಧವ್‌ಗೆ ಕನ್ನಡಾಭಿಮಾನ ಇಲ್ಲ ಎಂದು ಹೇಳಿದ್ದರು.

ಈ ವರ್ಷದ ಆರಂಭದಲ್ಲಿ ಬಾಸ್ ಟಿವಿ ಯೂಟ್ಯೂಬ್‌ ಚಾನೆಲ್‌ಗೆ ನೀಡಿದ್ದ ಸಂದರ್ಶನದಲ್ಲಿ ಮಾತನಾಡಿದ್ದ ಯಮುನಾ, ಗೌತಮಿಗೆ ಕನ್ನಡ ಓದಲು ಬರೆಯಲು ಬರಲ್ಲ. 12 ವರ್ಷಗಳಿಂದ ಕರ್ನಾಟಕದಲ್ಲಿ ಇದ್ದರೂ ಕನ್ನಡ ಕಲಿಯುವ ಪ್ರಯತ್ನ ಮಾಡಿಲ್ಲ. ನಾಡಗೀತೆ ಹಾಡುವುದಕ್ಕೂ ಬರದೇ ರಾಜ್ಯೋತ್ಸವದ ದಿನ ಸುಮ್ಮನಿದ್ದರು ಎಂದು ಹೇಳಿದ್ದರು.

Is Gouthami Jadav eliminated from Bigg Boss Kannada unable to read Kannada Here s what she said

ಮುಂದುವರೆದು ರಾಜ್ಯೋತ್ಸವದ ದಿನ ಬಿಗ್‌ಬಾಸ್ ಮನೆಯಲ್ಲಿ ಆಚರಣೆ ಜೋರಾಗಿತ್ತು. ಎಲ್ಲರೂ ನಾಡಗೀತೆ ಹಾಡಿದರು. ಕೆಲವರು ಗಟ್ಟಿ ಧ್ವನಿಯಲ್ಲಿ ಹಾಡಿದರು. ಗೌತಮಿ ಮಾತ್ರ ಹಾಡದೇ ಬಾಯಿಮುಚ್ಚಿಕೊಂಡಿದ್ದರು. ಬೇರೆ ದೇಶದ ಗೀತೆಯಾಗಿದ್ದರೆ ನಾವು ಹಾಡುವುದಿಲ್ಲ, ಅದೇ ರೀತಿ ಗೌತಮಿ ಮಾಡಿದ್ದಾರೆ. ಗೌತಮಿ ಮರಾಠಿ ಮೂಲದವರಂತೆ, ಪರವಾಗಿಲ್ಲ, ಆದರೆ ಕಲಿಯಬಹುದಿತ್ತಲ್ಲ ಎಂದು ಪ್ರಶ್ನೆಯನ್ನು ಮಾಡಿದ್ದ ಯಮುನಾ ಶ್ರೀನಿಧಿ ಕನ್ನಡ ನೆಲ ಬೇಕು, ಜಲ ಬೇಕು, ಅವಕಾಶಗಳು ಬೇಕು. ಆದರೆ ನಮ್ಮ ನಾಡಗೀತೆ ಗೊತ್ತಿಲ್ವಾ? ಬರದಿದ್ದರೆ ಕಲಿಯಲು ಎಷ್ಟು ದಿನ ಬೇಕು? ಎಂದು ಕಿಡಿ ಕಾರಿದ್ದರು.

ವಿದೇಶದಲ್ಲಿರುವ ಕನ್ನಡಿಗರು ಕನ್ನಡ ಬರೆದು ಓದುತ್ತಾರೆ, ನಾಡಗೀತೆ ಹಾಡುತ್ತಾರೆ. ನಾನು ಅಮೆರಿಕಾದಲ್ಲಿ ಕನ್ನಡ ಸಂಘದ ಅಧ್ಯಕ್ಷೆ ಆಗಿದ್ದಕ್ಕೆ ಹೇಳ್ತಿದ್ದೀನಿ. ಅಲ್ಲಿನ ಮಕ್ಕಳು ನಾಡಗೀತೆ ಹಾಡುತ್ತಾರೆ. ಆದರೆ 12 ವರ್ಷಗಳಿಂದ ಇದ್ದರೂ ಗೌತಮಿಗೆ ಕನ್ನಡ ಓದಲು ಬರಲ್ಲ, ಒಂದು ದಿನವೂ ಟಾಸ್ಕ್ ಬಗ್ಗೆ ಓದಲಿಲ್ಲ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಯುಮನಾ ಅವರ ಈ ಆರೋಪಕ್ಕೆ ಗೌತಮಿ ಜಾಧವ್ ಈಗ ಉತ್ತರವನ್ನು ನೀಡಿದ್ದಾರೆ.

ಟಿವಿ9 ಕನ್ನಡಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಗೌತಮಿ ನನಗೆ ಕನ್ನಡ ಓದೋಕೆ ಬರಲ್ಲ ಅಂತೇನು ಇಲ್ಲ, ನಾನು ಹತ್ತನೇ ತರಗತಿಯವರೆಗೆ ಕನ್ನಡ ಓದಿದ್ದೀನಿ ಎಂದಿದ್ದಾರೆ. ಇನ್ನು ಈ ಹಿಂದೆ ನಾನು ಮಾಡಿದ್ದು ಕೂಡ ಕನ್ನಡ ಧಾರಾವಾಹಿಯೇ ಅಲ್ಲಿ ಸ್ಕ್ರಿಪ್ಟ್ ಓದಿಯೇ ನಾನು ಡೈಲಾಗ್ ಹೇಳಲು ಸಾಧ್ಯ ಎಂದಿರುವ ಗೌತಮಿ ಇವತ್ತಿನವರೆಗೆ ಅನೇಕರು ಬಂದು ನೀವು ಚೆಂದ ಮಾತಾಡ್ತೀರಾ ಅಂತ ನನ್ನ ಹೊಗಳಿದ್ದಾರೆ ಎಂದಿದ್ದಾರೆ.

ಮರಾಠಿ ಎನ್ನುವುದು ನಿಜಾ ನಮ್ಮ ಮನೆಯಲ್ಲಿ ನಮ್ಮ ತಂದೆ ಮರಾಠಿಯವರಾದ ಕಾರಣ ನಾವು ಮರಾಠಿ ಮಾತನಾಡ್ತೀವಿ ಹಾಗಂಥ ಕನ್ನಡ ನನಗೆ ಬರಲ್ಲ ಅಂತ ಅಲ್ಲ ಎಂದು ಹೇಳಿರುವ ಗೌತಮಿ ಬಿಗ್ ಬಾಸ್ ಮನೆಯಲ್ಲಿ ನಾನು ಟಾಸ್ಕ್ ಬುಕ್‌ ಓದದೇ ಬೇರೆಯವರಿಗೆ ಕೊಟ್ಟಿದ್ದು ನನಗೆ ಕನ್ನಡ ಬರಲ್ಲ ಅಂತ ಅಲ್ಲ ನಾವು ಓದುವಾಗ ನಮ್ಮಿಂದ ತಪ್ಪಾಗಬಾರದು ಅಲ್ಲಿರುವ ಹದಿನೈದು ಹದಿನಾರು ಜನರ ಸಮಯ ವ್ಯರ್ಥವಾಗಬಾರದು ಎಂಬ ಉದ್ದೇಶದಿಂದ ಮಾತ್ರ ನೀಡಿದ್ದು ಎಂದು ಹೇಳಿದ್ದಾರೆ.

ನಾವು ಓದಿದ್ದು ಬೇರೆಯವರಿಗೆ ಅರ್ಥ ಆಗಬೇಕು ನಾವು ತಪ್ಪು ಓದಿ ಅವರಿಗೆ ಇನ್ನೇನೋ ಅರ್ಥ ಆಗುವುದು ಬೇಡ ಎಂದು ಹಾಗೇ ಮಾಡಿದ್ದು ಆ ಮಾತು ಯಾಕೆ ಬಂತು ಎನ್ನುವುದೇ ನನಗೆ ಅರ್ಥವಾಗುತ್ತಿಲ್ಲ ಎಂದಿರುವ ಗೌತಮಿ ಈ ಬಗ್ಗೆ ನಾನು ಆ ಮನೆಯಲ್ಲಿದ್ದಾಗ ಯೋಚನೆಯನ್ನು ಮಾಡಿರಲಿಲ್ಲ ಎಂದಿದ್ದಾರೆ. ಈಗ ಕನ್ನಡ ಓದಲು ಕೊಟ್ಟರು ನಾನು ಚೆಂದ ಮಾಡಿಯೇ ಓದ್ತೀನಿ ಆದರೆ ನನಗೆ ಅದಕ್ಕೆ ನನಗೆ ಸ್ವಲ್ಪ ಸಮಯ ಹಿಡಿಯುತ್ತೆ ಎಂದು ಹೇಳಿದ್ದಾರೆ. ನನಗಿಂತ ಚೆನ್ನಾಗಿ ಓದೋರು ಅಲ್ಲಿದ್ದರು ಎಂಬ ಕಾರಣಕ್ಕೆ ನಾನು ಅವರಿಗೆ ಕೊಟ್ಟೆ ಹೊರತು ನನಗೆ ಕನ್ನಡ ಓದೋಕೆ ಬರಲ್ಲ ಅಂತ ಅಲ್ಲ ನನಗೆ ಕನ್ನಡ ಓದೋಕೆ ಬರುತ್ತೆ , ಕನ್ನಡ ಓದಿದೀನಿ, ಕನ್ನಡದಲ್ಲೇ ವರ್ಕ್ ಮಾಡ್ತಿದ್ದೀನಿ, ಇವತ್ತಿನವರೆಗೆ ಕಲರ್ಸ್ ಕನ್ನಡದಲ್ಲೇ ಇದ್ದವಳು ಈ ಹಿಂದೆ ಕನ್ನಡ ಸೀರಿಯಲ್ ಮಾಡಿದೀನಿ ಚೆಂದ ಓದ್ತೀನಿ ಅವರಿಗೆ ನನ್ನ ಬಗ್ಗೆ ಗೊತ್ತಿರಲಿಲ್ಲ ಅನ್ಸುತ್ತೆ ಎಂದು ಹೇಳಿದ್ದಾರೆ. ಸ್ಪಷ್ಟೀಕರಣ ನೀಡಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X