'ಬಿಗ್ ಬಾಸ್‌' ಮನೆಗೆ ಹೋಗಲು ರೆಡಿಯಾದ 'ಸೂರ್ಯವಂಶ' ಚಿತ್ರದ ಪದ್ಮಾ ಅಲಿಯಾಸ್ ಇಶಾ ಕೊಪ್ಪಿಕರ್...!

ಮತ್ತೊಬ್ಬರ ಖಾಸಗೀ ಬದುಕಿನ ಮೇಲಿರೋ ಮನುಷ್ಯ ಸಹಜ ಕ್ಯೂರಿಯಾಸಿಟಿಯನ್ನೇ ಬಂಡವಾಳ ಮಾಡಿಕೊಂಡ ಬಿಗ್ ಬಾಸ್ ಕಾರ್ಯಕ್ರಮವನ್ನ ಜನ ಬೈದುಕೊಂಡೂ ನೋಡುತ್ತಾರೆ. ನೋಡುತ್ತಲೇ ಬೈಯುತ್ತಾರೆ. ಇಂಥಾ ಕಾರ್ಯಕ್ರಮ ಈಗ ಕೇವಲ ಕನ್ನಡದಲ್ಲಿ ಮಾತ್ರ ಅಲ್ಲ ಬೇರೆ ಬೇರೆ ಭಾಷೆಗಳಲ್ಲಿ ಕೂಡ ಮತ್ತೊಮ್ಮೆ ಶುರುವಾಗಲಿದೆ. ಎಲ್ಲೆಡೆ ತೆರೆ ಮರೆಯಲ್ಲಿ ತಯಾರಿಗಳು ಕೂಡ ಆರಂಭವಾಗಿವೆ. ಕನ್ನಡ, ತೆಲುಗು, ತಮಿಳು, ಹಿಂದಿಯ ಬಿಗ್ ಬಾಸ್ ಮನೆಗಳಿಗೆ ತೆರಳಲಿರುವ ಸೆಲೆಬ್ರಿಟಿಗಳು ಯಾರು ಎನ್ನುವ ಚರ್ಚೆ ಕೂಡ ಶುರುವಾಗಿದೆ. ಆ ಪೈಕಿ ಇಶಾ ಕೊಪ್ಪಿಕರ್ ಹೆಸರು ಸದ್ಯ ಸಿಕ್ಕಾಪಟ್ಟೆ ಚಾಲ್ತಿಯಲ್ಲಿದೆ.

ಹೌದು. ತೆಲುಗು ಚಿತ್ರದ ಮೂಲಕ ಚಿತ್ರರಂಗವನ್ನ ಪ್ರವೇಶಿಸಿ, ಆ ನಂತರ ಸೂರ್ಯವಂಶ ಸಿನಿಮಾದಿಂದ ಕನ್ನಡಿಗರ ಹೃದಯ ಗೆದ್ದು, ಕರುನಾಡಿನೆಲ್ಲೆಡೆ 'ಪದ್ಮಾ' ಎಂದೇ ಫೇಮಸ್‌ ಆದ ಇಶಾ ಕೊಪ್ಪಿಕರ್ ಸದ್ಯ ಹಿಂದಿಯಲ್ಲಿ ಪ್ರಸಾರವಾಗಲಿರುವ ಬಿಗ್ ಬಾಸ್‌ ನಲ್ಲಿ ಭಾಗಿಯಾಗಲಿದ್ದಾರೆ ಎನ್ನುವ ಮಾತು ಸದ್ಯಕ್ಕೆ ಕೇಳಿ ಬರುತ್ತಿದೆ.

Is Isha Koppikar officially confirmed as a contestant for Bigg Boss 18 hosted by Salman Khan

ಇನ್ನೂ.. ಮೊನ್ನೆಯಷ್ಟೇ ಮುಕ್ತಾಯವಾದ ಬಿಗ್ ಬಾಸ್ ಓಟಿಟಿ ಸೀಸನ್ 3ಕ್ಕೆ ತುಂಬಾನೇ ನಿರಸವಾದ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅದಕ್ಕೆ ಕಾರಣ ಕಾರ್ಯಕ್ರಮದ ನಿರೂಪಕರಲ್ಲಾದ ಬದಲಾವಣೆ. ಸಲ್ಮಾನ್ ಖಾನ್ ಬದಲು ಕಾರ್ಯಕ್ರಮದ ಜವಾಬ್ಧಾರಿಯನ್ನು ಅನಿಲ್ ಕಪೂರ್‌ ಅವರಿಗೆ ನೀಡಿದ್ದರಿಂದ ಬಿಗ್ ಬಾಸ್ ಇಮೇಜ್ ಡ್ಯಾಮೇಜ್ ಆಗಿತ್ತು.

ಈ ಕಾರಣಕ್ಕೆ ಈ ಬಾರಿ ಎಚ್ಚೆತುಕೊಂಡಿರುವ ವಾಹಿನಿ ಬಿಗ್ ಬಾಸ್ ಸೀಸನ್ 18ರ ಉಸ್ತುವಾರಿಯನ್ನು ಸಲ್ಮಾನ್ ಖಾನ್ ಅವರಿಗೆ ವಹಿಸಿದೆ. ಚಿರಪರಿಚಿತ ಮುಖಗಳಿಗೆ ಮನೆಯಲ್ಲಿ ಮಣೆ ಹಾಕುವ ಪ್ಲ್ಯಾನ್ ಮಾಡಿಕೊಂಡಿದೆ. ಇದರ ಜೊತೆಯಲ್ಲಿ ಪ್ರತಿ ವರ್ಷದಂತೆ ಚಿತ್ರ ವಿಚಿತ್ರ ಆಸಾಮಿಗಳು ಈ ಸಲ ಕೂಡ ಮನೆಯಲ್ಲಿ ಇದ್ದೇ ಇರಲಿದ್ದಾರೆ. ಆ ಪೈಕಿ ಸದ್ಯಕ್ಕೆ ಇಶಾ ಕೊಪ್ಪಿಕರ್ ಅವರ ಹೆಸರು ವ್ಯಾಪಕವಾಗಿ ಕೇಳಿ ಬರುತ್ತಿದ್ದು ಖುದ್ದು ಇಶಾ ಕೊಪ್ಪಿಕರ್ ಸಂದರ್ಶನವೊಂದರಲ್ಲಿ ಈ ವಿಚಾರವನ್ನು ಒಪ್ಪಿಕೊಂಡಿದ್ದಾರೆ ಎಂದು ಹಲವಡೆ ವರದಿಯಾಗಿದೆ.

is-isha-koppikar-officially-confirmed-as-a-contestant-for-bigg-boss-18-hosted-by-salman-khan


ಇಶಾ ಕೊಪ್ಪಿಕರ್ ಅವರನ್ನು ಹೊರತು ಪಡಿಸಿ ಪುರಾತನ ಕಾಲದ ಮತ್ತೊಬ್ಬ ನಾಯಕಿ ಸಮೀರಾ ರೆಡ್ಡಿ ಅವರ ಹೆಸರು ಕೂಡ ಪ್ರಸ್ತಾಪವಾಗುತ್ತಿದೆ. ಬಿಗ್ ಬಾಸ್ ಮನೆಗೆ ಇಶಾ ಜೊತೆ ಸಮೀರಾ ಕೂಡ ಹೋಗುವುದು ಖಚಿತವೆನ್ನುವ ಭವಿಷ್ಯವಾಣಿ ಮುಂಬೈನಲ್ಲಿ ಕೇಳಿ ಬರುತ್ತಿದೆ. ಇನ್ನೂ ಸಾಮಾಜಿಕ ಜಾಲತಾಣದ ಮೂಲಕವೇ ರಾತ್ರೋ ರಾತ್ರಿ ಜಗದ್ವಿಖ್ಯಾತಿಯನ್ನು ಗಳಿಸಿದ ಡಾಲಿ ಚಾಯವಾಲಾ ಕೂಡ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ.

ಉಳಿದಂತೆ ಹಿಂದಿಯಲ್ಲಿ ಸಲ್ಮಾನ್ ಖಾನ್ ನಿರೂಪಣೆಯಲ್ಲಿ ಬಿಗ್ ಬಾಸ್ ಸೀಸನ್ 18 ಅಕ್ಟೋಬರ್ 5ರಿಂದ ಶುರುವಾಗಲಿದೆ. ಇನ್ನೂ ತೆಲುಗಿನಲ್ಲಿ ಅಕ್ಕಿನೇನಿ ನಾಗಾರ್ಜುನ ಸಾರಥ್ಯದಲ್ಲಿ ಬಿಗ್ ಬಾಸ್ ಸೀಸನ್ 08ಕ್ಕೆ ಈ ಸೆಪ್ಟೆಂಬರ್‌ನಲ್ಲಿ ಚಾಲನೆ ಸಿಗಲಿದೆ. ಕನ್ನಡದಲ್ಲಿ ಕೂಡ ಬಿಗ್ ಬಾಸ್ ಸೀಸನ್ 11 ಶೀಘ್ರದಲ್ಲಿಯೇ ಆರಂಭವಾಗಲಿದೆ. ಆದರೆ, ಕನ್ನಡದಲ್ಲಿ ಈ ಬಾರಿ ಸುದೀಪ್ ನಿರೂಪಣೆ ಮಾಡುತ್ತಾರಾ ಎಂಬ ಪ್ರಶ್ನೆ ಸದ್ಯಕ್ಕೆ ಹಲವರನ್ನು ಕಾಡುತ್ತಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X