ಸದ್ದಿಲ್ಲದೇ ನಡೆಯಿತಾ ಬಿಗ್ ಬಾಸ್ ಜೋಡಿಯ ನಿಶ್ಚಿತಾರ್ಥ ಸಮಾರಂಭ ? ವೈರಲ್ ಫೋಟೊ ಅಸಲಿಯತ್ತೇನು ?

ಬೆಳ್ಳಿತೆರೆ ಇರಲಿ.. ಕಿರುತೆರೆ ಇರಲಿ.. ಹಾಗಂತೆ -ಹೀಗಂತೆ ಎಂಬ ಸುದ್ದಿಗಳಿಗೆ ಇಲ್ಲಿ ಬರ ಇಲ್ಲ. ಒಂದು ಸಣ್ಣ ಕಿಡಿ ಇಲ್ಲಿ ಕ್ಷಣಾರ್ಧದಲ್ಲಿ ಕಾಡ್ಗಿಚ್ಚಿನಂತೆ ಹಬ್ಬುತ್ತೆ. ಇಡೀ ಸೋಶಿಯಲ್ ಮೀಡಿಯಾವನ್ನು ಆವರಿಸಿಕೊಳ್ಳುತ್ತೆ. ಇಲ್ಲಿ ಹಲವರ ವೃತ್ತಿ ಜೀವನ ಮತ್ತು ವೈಯಕ್ತಿಕ ಬದುಕು ಕೆಲ ಒಮ್ಮೆ ಮಸುಕು ಮಸುಕಾಗಿಯೇ ಕಾಣಿಸುತ್ತೆ. ಈ ಸೆಲೆಬ್ರೆಟಿಗಳು ಹಂಚಿಕೊಳ್ಳುವ ಪ್ರತಿಯೊಂದು ಪೋಸ್ಟ್.. ಪ್ರತಿಯೊಂದು ಫೋಟೊ.. ಹಿಂದೆ ಕೂಡ ಒಂದೊಂದು ಕಥೆ ಇರುತ್ತೆ.

ಇನ್ನೂ ಈ ತಾರೆಯರು ಕೂಡ ಕಡಿಮೆ ಇಲ್ಲ. ಅಭಿಮಾನಿಗಳಲ್ಲಿ, ತಮ್ಮ ಹಿಂಬಾಲಕರಲ್ಲಿ.. ಕುತೂಹಲ ಹೇಗೆ ಕೆರಳಿಸಬೇಕು.. ಸದಾ ಸುದ್ದಿಯಲ್ಲಿ ಹೇಗೆ ಇರಬೇಕು ಎನ್ನುವ ಕಲೆ ಇವರಿಗೆ ಚೆನ್ನಾಗಿಯೇ ಕರಗತವಾಗಿರುತ್ತೆ. ಉದಾಹರಣೆಗೆ ಈಶಾ ಸಿಂಗ್ ಮತ್ತು ಅವಿನಾಶ್ ಮಿಶ್ರಾ ಅವರನ್ನೇ ತೆಗೆದುಕೊಳ್ಳಿ.

Is It Official Avinash Mishra amp amp Eisha Singh Flaunt The Ring Bigg Boss 18 Fans Predict Engagement

ಹೌದು, ಈಶಾ ಸಿಂಗ್ ಮತ್ತು ಅವಿನಾಶ್ ಮಿಶ್ರಾ. ಹಿಂದಿ ಕಿರುತೆರೆಯ ಜೋಡಿ ಹಕ್ಕಿ. ''ಇಷ್ಕ್ ಸುಭಾನ್ ಅಲ್ಲಾ''.. ''ಏಕ್ ಥಾ ರಾಜಾ ಏಕ್ ಥಿ ರಾಣಿ''.. ''ಸಿರ್ಫ್ ತುಮ್''.. ಧಾರಾವಾಹಿಗಳಲ್ಲಿ ಮಿಂಚಿರುವ ಈಶಾ ಸಿಂಗ್ ರತ್ನಪಾಠಕ್ ಶಾ ಜೊತೆ ''ಧಕ್ ಧಕ್'' ಎಂಬ ಸಿನಿಮಾವನ್ನು ಕೂಡ ಮಾಡಿದ್ದಾರೆ.

ಇನ್ನು ಅವಿನಾಶ್ ಮಿಶ್ರಾ ''ಯೇ ರಿಶ್ತೇ ಹೈ ಪ್ಯಾರ್ ಕೆ''.. ''ಇಷ್ಕ್‌ಬಾಜ್''.. ''ತಿತ್ಲಿ''.. ''ನಾಥ್ - ಝೆವರ್ ಯಾ ಜಂಜೀರ್''.. ಹೀಗೆ ಹಲವು ಸೀರಿಯಲ್‌ಗಳ ಮೂಲಕ ಜನ ಮನ ಗೆದ್ದಿದ್ದಾರೆ.

ಇಂಥಾ ಈಶಾ ಸಿಂಗ್ ಮತ್ತು ಅವಿನಾಶ್ ಮಿಶ್ರಾ ಹಿಂದಿಯ ''ಬಿಗ್ ಬಾಸ್'' 18ನೇ ಸೀಸನ್‌ನಲ್ಲಿ ಭಾಗವಹಿಸಿದ್ದರು. ಅವಿನಾಶ್ ಮಿಶ್ರಾ ಮನೆಯಲ್ಲಿ ನೂರಕ್ಕೂ ಅಧಿಕ ದಿನ ಇದ್ದರು. ಈಶಾ ಸಿಂಗ್‌ ಕೂಡ ಫಿನಾಲೆಯ ಹಂತದವರೆಗೆ ಹೋಗಿದ್ದರು.

ಹೀಗೆ ''ಬಿಗ್ ಬಾಸ್'' ಮನೆಯಲ್ಲಿ ಬಂಧಿಯಾದ ಇಬ್ಬರು ಮನೆಯ ಟಾಸ್ಕ್ ನಿರ್ವಹಿಸುತ್ತಾ ಹಾಗೇ ಪ್ರೇಮದ ಬಲೆಯಲ್ಲಿ ಸಿಲುಕಿದರು. ಮನೆಯಿಂದ ಹೊರ ಬಂದ ನಂತರವೂ ಹಲವು ಕಡೆ ಜೊತೆಯಾಗಿ ಕಾಣಿಸಿಕೊಂಡರು. ಇಬ್ಬರ ನಡಾವಳಿಯನ್ನು ನೋಡಿ ಹಲವರು ಇಬ್ಬರದ್ದು ಸೀರಿಯಸ್ ಲವ್ ಎಂದು ಕೂಡ ಮಾತನಾಡಿಕೊಂಡಿದ್ದರು. ಇವರ ಸಂಬಂಧದ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡಿದ್ದರು.

Is It Official Avinash Mishra amp amp Eisha Singh Flaunt The Ring Bigg Boss 18 Fans Predict Engagement

ಹೀಗಿರುವಾಗ ಇದೀಗ ಇಬ್ಬರು ತಮ್ಮ ಸಂಬಂಧಕ್ಕೆ ಮದುವೆಯ ಮುದ್ರೆಯನ್ನು ಅಧಿಕೃತವಾಗಿ ಒತ್ತಲು ಸಿದ್ಧರಾದಂತೆ ಇದೆ. ಇದಕ್ಕೆ ಕೈಗನ್ನಡಿ ಎಂಬಂತೆ ತಮ್ಮ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಇಬ್ಬರು, ಕೈ ಹಿಡಿದು ಕುಂತ ಫೋಟೊವನ್ನು ಹಂಚಿಕೊಂಡಿದ್ದಾರೆ. ಹೀಗೆ ಹಂಚಿಕೊಳ್ಳಲಾದ ಫೋಟೊಗಳಲ್ಲಿ ಇಬ್ಬರ ಮುಖ ಇಲ್ಲ. ಆದರೆ.. ಇವರ ಕೈಯಲ್ಲಿರುವ ಉಂಗುರ ಸದ್ಯ ಹಲವರ ಕಣ್ಣು ಕುಕ್ಕುತ್ತಿದೆ.

ಹೀಗಾಗಿಯೇ ಅವಿನಾಶ್ ಮಿಶ್ರಾ ಮತ್ತು ಈಶಾ ಸಿಂಗ್ ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದು, ಸೋಶಿಯಲ್ ಮೀಡಿಯಾ ಮೂಲಕ ಹಲವರು ಈಗಾಗಲೇ ಇಬ್ಬರಿಗೂ ಶುಭಾಶಯವನ್ನು ಕೂಡ ತಿಳಿಸಿದ್ದಾರೆ.

ತಮ್ಮ ಸಂಬಂಧದ ಕುರಿತು ಜನ ಮಾತನಾಡುತ್ತಿದ್ದರೂ, ನಿಶ್ಚಿತಾರ್ಥದ ಸುದ್ದಿ ಊರಲ್ಲೆಲ್ಲಾ ಹಬ್ಬಿದ್ದರೂ ಈಶಾ ಸಿಂಗ್ ಅವರಾಗಲಿ ಅವಿನಾಶ್ ಮಿಶ್ರಾ ಅವರಾಗಲಿ ಈ ಸುದ್ದಿಗೆ ಪ್ರತಿಕ್ರಿಯೆಯನ್ನು ನೀಡಿಲ್ಲ. ಉಂಗುರದ ರಹಸ್ಯವನ್ನು ಕೂಡ ಹೇಳಿಲ್ಲ.

ಇಬ್ಬರ ಈ ನಡೆಯ ಮೇಲೆ ಹೀಗಾಗಿ ಹಲವರಲ್ಲಿ ಅನುಮಾನವೂ ಇದ್ದು ಇದೆಲ್ಲವೂ ಪಬ್ಲಿಸಿಟಿ ಗಿಮಿಕ್ ಅಷ್ಟೇ ಎನ್ನುವ ಅಭಿಪ್ರಾಯವನ್ನು ಕೂಡ ಕೆಲವರು ವ್ಯಕ್ತಪಡಿಸುತ್ತಿದ್ದಾರೆ. ಈ ಗೊಂದಲಕ್ಕೆ ತೆರೆ ಎಳೆಯುವಂತೆ ಇಬ್ಬರಲ್ಲಿಯೂ ಹಲವರು ಮನವಿಯನ್ನು ಕೂಡ ಮಾಡಿಕೊಳ್ಳುತ್ತಿದ್ದಾರೆ. ನಿಜಕ್ಕೂ ಈಶಾ ಸಿಂಗ್ ಮತ್ತು ಅವಿನಾಶ್ ಮಿಶ್ರಾ ಸದ್ದಿಲ್ಲದೇ ನಿಶ್ಚಿತಾರ್ಥ ಮಾಡ್ಕೊಂಡಿದ್ದಾರಾ..? ಅಧಿಕೃತವಾದ ಉತ್ತರ ಶೀಘ್ರದಲ್ಲಿಯೇ ಸಿಗುವ ನಿರೀಕ್ಷೆ ಇದೆ.

Is It Official Avinash Mishra amp amp Eisha Singh Flaunt The Ring Bigg Boss 18 Fans Predict Engagement

More from Filmibeat

English summary
Did Avinash Mishra and Eisha Singh just get engaged? Eisha Singh flaunts a stunning ring in a new viral photo with her Bigg Boss 18 co-star. Fans are convinced it’s official! Click to see the photo that has everyone talking about the "AviSha" Roka.
Read more about: ಟಿವಿ biggboss rumours
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X